ಕಲಬುರಗಿ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ವೃತ್ತಿಪರತೆ ಹೆಚ್ಚಿಸಲು ರಾಜ್ಯದ ಪೊಲೀಸರಿಗೆ ವಿದೇಶದಲ್ಲಿ ತರಬೇತಿ: ಗೃಹ ಸಚಿವ ಬೊಮ್ಮಾಯಿ

By ಕಲಬುರಗಿ ಪ್ರತಿನಿಧಿ
|
Google Oneindia Kannada News

ಕಲಬುರಗಿ, ಸೆಪ್ಟೆಂಬರ್ 23: ರಾಜ್ಯದ ಪೊಲೀಸರಿಗೆ ಫಾರೆನ್ಸಿಕ್, ಭದ್ರತೆ, ಸಂಚಾರ ನಿರ್ವಹಣೆಯಲ್ಲಿ ವೃತ್ತಿಪರತೆ ಹೆಚ್ಚಿಸಲು ಅಮೆರಿಕ, ಸ್ಕಾಟ್ಲೆಂಡ್ ಸೇರಿ ವಿದೇಶದಲ್ಲಿ ತರಬೇತಿ ಕೊಡಿಸುವ ಬಗ್ಗೆ ಚಿಂತನೆ ನಡೆದಿರುವುದಾಗಿ ಗೃಹ ಸಚಿವ ಬಸವರಾಜ್ ಬೊಮ್ಮಾಯಿ ತಿಳಿಸಿದ್ದಾರೆ.

'ಯಾರಿಗೂ ಒಲ್ಲದ' ಗೃಹಸಚಿವ ಸ್ಥಾನದಲ್ಲಿರುವ ಬಸವರಾಜ್ ಬೊಮ್ಮಾಯಿ ಸಂದರ್ಶನ'ಯಾರಿಗೂ ಒಲ್ಲದ' ಗೃಹಸಚಿವ ಸ್ಥಾನದಲ್ಲಿರುವ ಬಸವರಾಜ್ ಬೊಮ್ಮಾಯಿ ಸಂದರ್ಶನ

ಈ ಕುರಿತು ಕಲಬುರಗಿಯಲ್ಲಿ ಪಿಎಸ್ಐ, ಆರ್‌ಎಸ್ಐ ಪ್ರಶಿಕ್ಷಣಾರ್ಥಿಗಳ ನಿರ್ಗಮನ ಪಥಸಂಚಲನ ಕಾರ್ಯಕ್ರಮದಲ್ಲಿ ಮಾತನಾಡಿ, "ಸೈಬರ್ ಕ್ರೈಂ ಹೆಚ್ಚುತ್ತಿರುವ ಹಿನ್ನೆಲೆ ತರಬೇತಿ ಅವಧಿಯಲ್ಲಿ ಪೊಲೀಸರಿಗೆ ಇ-ಲರ್ನಿಂಗ್, ಇ-ಪೊಲೀಸಿಂಗ್ ತರಬೇತಿ ನೀಡಲು ಕ್ರಮ ಕೈಗೊಳ್ಳುತ್ತೇವೆ. ಅಪರಾಧ ಪ್ರಕರಣಗಳಲ್ಲಿ ತಂತ್ರಜ್ಞಾನ ಬಳಸಿ ನೊಂದವರಿಗೆ ಶೀಘ್ರ ನ್ಯಾಯ ದೊರಕಿಸಿಕೊಡಲಾಗುವುದು" ಎಂದು ಹೇಳಿದರು.

Basavaraj Bommai To Provide Training Abroad For State Police To Enhance Professionalism

ಡಿಕೆಶಿ ಬಂಧನ ರಾಜಕೀಯ ಪ್ರೇರಿತ ಎನ್ನುವುದೇ ರಾಜಕೀಯ : ಬೊಮ್ಮಾಯಿಡಿಕೆಶಿ ಬಂಧನ ರಾಜಕೀಯ ಪ್ರೇರಿತ ಎನ್ನುವುದೇ ರಾಜಕೀಯ : ಬೊಮ್ಮಾಯಿ

ಇದೇ ವೇಳೆ, ಇನ್ನೆರಡು ವರ್ಷದಲ್ಲಿ 16,000 ಪೊಲೀಸರ ನೇಮಕ ಮಾಡಿಕೊಳ್ಳಲಾಗುವುದು, ಕಲಬುರಗಿ ಸೇರಿದಂತೆ ರಾಜ್ಯದ 14 ಪೊಲೀಸ್ ತರಬೇತಿ ಶಾಲೆಗಳನ್ನು ಮೇಲ್ದರ್ಜೆಗೆ ಏರಿಸಲಾಗುವುದು ಎಂದೂ ತಿಳಿಸಿದರು.

English summary
Home Minister Basavaraj Bommai has said there are plans of giving training to the state police abroad to enhance their professionalism in forensic, security and traffic management.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X