ಕಲಬುರಗಿ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಉಪಚುನಾವಣೆ ಸಂದರ್ಭದಲ್ಲಿ ಕಾಂಗ್ರೆಸ್ ನಾಯಕರಿಗೆ ಕೋಲಿ ಸಮುದಾಯ ನೆನೆಪಾಗಿದೆ: ಬಾಬುರಾವ್ ಚಿಂಚನಸೂರ

|
Google Oneindia Kannada News

Recommended Video

ಮಲ್ಲಿಕಾರ್ಜುನ ಖರ್ಗೆ ಹಾಗು ಸಿದ್ದರಾಮಯ್ಯ ವಿರುದ್ಧ ವಾಗ್ದಾಳಿ ನಡೆಸಿದ ಬಿಜೆಪಿ ನಾಯಕ | Oneindia Kannada

ಚಿಂಚೋಳಿ ಮೇ 13 2019: ಕಳೆದ 50 ವರ್ಷಗಳಿಂದ ನೆನೆಪಾಗದ ಕೋಲಿ ಸಮುದಾಯ ಈಗ ಖರ್ಗೆ ಅವರಿಗೆ ನೆನೆಪಾಗಿದ್ದು, ನರೇಂದ್ರ ಮೋದಿ ಅವರು ಕೋಲಿ ಸಮುದಾಯಕ್ಕೆ ಎಸ್ ಟಿ ಗೆ ಸೇರಿಸುವ ಭರವಸೆ ನೀಡಿದ ನಂತರ ಕಾಂಗ್ರೆಸ್ ಪಕ್ಷದ ನಾಯಕರಿಗೆ ಜ್ಞಾನೋದಯವಾಗಿದೆ ಎಂದು ಮಾಜಿ ಸಚಿವ ಬಾಬುರಾವ್ ಚಿಂಚನಸೂರ್ ವಾಗ್ದಾಳಿ ನಡೆಸಿದ್ದಾರೆ.

ಲೋಕಸಭಾ ಚುನಾವಣೆ 2019 : ವಿಶೇಷ ಪುಟ | ಗ್ಯಾಲರಿ

ಚಿಂಚೋಳಿಯಲ್ಲಿಂದು ಮಾಧ್ಯಮ ಪ್ರತಿನಿಧಿಗಳಿಂದಿಗೆ ಮಾತನಾಡಿದ ಅವರು, ಸಿದ್ದರಾಮಯ್ಯ, ಮಲ್ಲಿಕಾರ್ಜುನ ಖರ್ಗೆ ವಿರುದ್ದ ವಾಗ್ದಾಳಿ ನಡೆಸಿದರು. ರಾಹುಲ್ ಗಾಂಧಿ ಪ್ರಧಾನಿಯಾಗುವ ತಿರುಕನ ಕನಸನ್ನು ಕಾಣುತ್ತಿದ್ದಾರೆ. ಅವರು ಪ್ರಧಾನಿಯಾದ್ರೆ ಕೋಲಿ ಸಮಾಜವನ್ನು ಎಸ್.ಟಿ ಗೆ ಸೇರಿಸುತ್ತೇವೆ ಎಂದು ಖರ್ಗೆ ಸಿದ್ದರಾಮಯ್ಯ ಹೇಳುತ್ತಿದ್ದಾರೆ. ಎರಡು ವರ್ಷಗಳ ಕಾಲ ನಾನು ಕೋಲಿ ಸಮುದಾಯವನ್ನು ಎಸ್ ಟಿ ಗೆ ಸೇರಿಸಿ ಎಂದು ಪ್ರತಿಭಟನೆ, ಧರಣಿ ಸತ್ಯಾಗ್ರಹ ಹಾಗೂ ಉರುಳು ಸೇವೆಯನ್ನು ಮಾಡಿದ್ದೇನೆ.

ಮೇ 23ರ ನಂತರ ಕಾಂಗ್ರೆಸ್ 4 ಹೋಳು: ಬಾಬುರಾವ್ ಚಿಂಚನಸೂರ್ಮೇ 23ರ ನಂತರ ಕಾಂಗ್ರೆಸ್ 4 ಹೋಳು: ಬಾಬುರಾವ್ ಚಿಂಚನಸೂರ್

ಆಗ ಕಾಂಗ್ರೆಸ್ ನಾಯಕರು ಯಾವುದೇ ಚಕಾರವೆತ್ತಲ್ಲಿಲ್ಲ. 50 ವರ್ಷಗಳಿಂದ ರಾಜಕೀಯದಲ್ಲಿ ಹಲವಾರು ಹುದ್ದೆಗಳನ್ನು ನಿಭಾಯಿಸುತ್ತಿರುವ ಮಲ್ಲಿಕಾರ್ಜುನ ಖರ್ಗೆ ಅವರಿಗೆ ಯುಪಿಎ ಸರಕಾರದ ಅವಧಿಯಲ್ಲಿ ಈ ಬಗ್ಗೆ ಚಿಂತಿಸಬೇಕು ಎನ್ನುವ ಪರಿಜ್ಞಾನ ಇರಲಿಲ್ಲ. ಈಗ ಚಿಂಚೋಳಿ ಉಪಚುನಾವಣೆ ಬಂದಿರುವ ಸಂಧರ್ಭದಲ್ಲಿ ಅವರಿಗೆ ಜ್ಞಾನೋದಯವಾಗಿದೆ. ಆದರೆ, ಈಗಾಗಲೇ ಈ ಫೈಲ್ ಪ್ರಧಾನಿ ನರೇಂದ್ರ ಮೋದಿ ಅವರ ಹತ್ತಿರವಿದ್ದು, ಅವರೇ ಕೋಲಿ ಸಮುದಾಯವನ್ನು ಎಸ್ ಟಿ ಸಮುದಾಯಕ್ಕೆ ಸೇರ್ಪಡೆ ಮಾಡಲಿದ್ದಾರೆ ಎಂದರು.

Baburao Chinchansur blames Congress for neglecting Koli Community

ಕೋಲಿ ಸಮಾಜದ ಹಕ್ಕನ್ನು ಕಿತ್ತುಕೊಂಡು ಮಗನ ಮಂತ್ರಿ ಮಾಡಿದ್ದಾರೆ. ಸತತವಾಗಿ ಎರಡು ವರ್ಷ ಸತ್ಯಾಗ್ರ ಮಾಡಿದ್ದೇನೆ. ಬೆಂಗಳೂರು ಹಾಗೂ ಕಲಬುರಗಿಯಲ್ಲಿ ಉರುಳು ಸೇವೆ ಮಾಡಿದ್ದೇನೆ. ಆಗ ಖರ್ಗೆ ಮತ್ತು ಸಿದ್ದರಾಮಯ್ಯ ಸೌಜನ್ಯಕ್ಕೂ ಮಾತನಾಡಲಿಲ್ಲಾ. ಖರ್ಗೆ ಮನಸ್ಸು ಮಾಡಿದ್ದರೆ ಎರಡು ನಿಮಿಷದಲ್ಲಿ ಮಾಡಬಹುದಾಗಿದ್ದ ಕೆಲಸ ಇದು ಎಂದು ಹರಿಹಾಯ್ದರು.

ಕೋಲಿ ಸಮುದಾಯವನ್ನು ಎಸ್ ಟಿ ಗೆ ಸೇರಿಸುವಂತೆ ಈಗಾಗಲೇ ಪ್ರಧಾನಿ ಮೋದಿ ಅವರಿಗೆ ಮನವಿ ಮಾಡಿದ್ದೇವೆ. ನನಗೆ ಖರ್ಗೆ ಅವರ ಬಗ್ಗೆ ಗೌರವ ಇದೆ, ಆದರೆ, ಕೆಳ ಮಟ್ಟದಲ್ಲಿ ಮಾತನಾಡುವುದು ಸರಿಯಲ್ಲ ಎಂದರು. ಮೇ 23 ರಂದು ರಾಜ್ಯ ರಾಜಕಾರಣದಲ್ಲಿ ಅಲ್ಲೋಲ ಕಲ್ಲೋಲವಾಗಲಿದೆ. ಹಾಲಿಗಳೆಲ್ಲಾ ಮಾಜಿಗಳಾಗಲಿದ್ದಾರೆ. ಬಿಜೆಪಿ ಸಂವಿಧಾನದ ವಿರೋಧಿಯಲ್ಲ. ಮತದಾರರಿಗೆ ಸುಳ್ಳು ಹೇಳುತ್ತಿದ್ದಾರೆ ಕಾಂಗ್ರೆಸ್ ಪಕ್ಷದ ನಾಯಕರು. ಅನಂತಕುಮಾರ್ ಹೆಗಡೆ ಬಾಯಿಜಾರಿ ಸಂವಿಧಾನ ವಿರೋಧಿ ಮಾತನಾಡಿದ್ದು, ಅದಕ್ಕೆ ಅವರೇ ಕ್ಷಮೆ ಕೇಳಿದ್ದಾರೆ.

ಮಲ್ಲಿಕಾರ್ಜುನ ಖರ್ಗೆ ಅವರು ಮೋದಿ ಬಗ್ಗೆ ನೀಡಿರುವ ಹೇಳಿಕೆಗೆ ಪ್ರತಿಕ್ರಿಯಿಸಿದ ಅವರು, ಈ ರೀತಿ ಮಾತನಾಡುವುದು ಸರಿಯಲ್ಲ. ತಾನು ತನ್ನ ಮಗ ಅಭಿವೃದ್ದಿ ಹೊಂದೋದೆ ಖರ್ಗೆ ಗುರಿ. ಎಲ್ಲಾ ಸಮುದಾಯದ ಜನರನ್ನು ತುಳಿದ್ದಿದ್ದಾರೆ. ಕೋಲಿ ಸಮಾಜದ ಚೌಕಿದಾರ ನಾನು. ಕೋಲಿ ಸಮಾಜವನ್ನು ಎಸ್ ಟಿ ಗೆ ಸೇರಿಸಿ ಸಾಯುತ್ತೇನೆ. ಮೇ 15 ರಂದು ಚಿಂಚೋಳಿಯಲ್ಲಿ ಯಡಿಯೂರಪ್ಪ ನೇತೃತ್ವದಲ್ಲಿ ಬೃಹತ್ ಕೋಲಿ ಸಮಾವೇಶವನ್ನು ಆಯೋಜಿಸಿದ್ದೇವೆ ಎಂದರು.

English summary
Former Minister Baburao Chinchansur alleged Congress is remembering Koli community only during Elections.PM Modi has made all effort to bring Koli community to ST category. Baburao was campaigning for Dr Avinash Jadhav in Chincholi.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X