ಕಲಬುರಗಿ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

'ದಲಿತ ಎಂಬ ಕಾರಣಕ್ಕೆ ಸಿಎಂ ಪದವಿಗೇರಲು ಇಷ್ಟವಿಲ್ಲ'

By Mahesh
|
Google Oneindia Kannada News

ಬೆಂಗಳೂರು, ಮೇ 13: ಕರ್ನಾಟಕ ವಿಧಾನಸಭೆ ಚುನಾವಣೆ 2018ರ ಫಲಿತಾಂಶ ಹೊರ ಬರುವುದಕ್ಕೂ ಮುನ್ನವೇ ಮುಖ್ಯಮಂತ್ರಿ ಯಾರು ಎಂಬ ಚರ್ಚೆ ಜೋರಾಗಿ ನಡೆದಿದೆ.

ನಿನ್ನೆ ತನಕ 'ನಾನೇ ಮುಂದಿನ ಸಿಎಂ' ಎನ್ನುತ್ತಿದ್ದ ಸಿದ್ದರಾಮಯ್ಯ ಅವರು ಈಗ ಈ ಬಗ್ಗೆ ಹೈಕಮಾಂಡ್ ನಿರ್ಧರಿಸಲಿದೆ, ದಲಿತರಿಗೆ ಸಿಎಂ ಪಟ್ಟ ಕೊಡಬೇಕು ಎಂದು ಕಾರ್ಯಕರ್ತರು ಬಯಸಿದರೆ, ನಾನು ಅಡ್ಡಿಪಡಿಸುವುದಿಲ್ಲ ಎಂದಿದ್ದಾರೆ.

ದಲಿತ ಖರ್ಗೆಯನ್ನು ಮುಖ್ಯಮಂತ್ರಿ ಮಾಡಲಿಲ್ಲ ಎಂದ ಮೋದಿಗೆ ಖರ್ಗೆ ಉತ್ತರದಲಿತ ಖರ್ಗೆಯನ್ನು ಮುಖ್ಯಮಂತ್ರಿ ಮಾಡಲಿಲ್ಲ ಎಂದ ಮೋದಿಗೆ ಖರ್ಗೆ ಉತ್ತರ

ಇದಾದ ಬಳಿಕ ಸಿಎಂ ಸ್ಥಾನಕ್ಕೇರುವ ಸಾಧ್ಯತೆಯಿರುವ ಕಾಂಗ್ರೆಸ್ಸಿನ ದಲಿತ ನಾಯಕರತ್ತ ಮಾಧ್ಯಮಗಳ ಮೈಕ್ ತಿರುಗಿದೆ. ವಿವಾಹದ ವಾರ್ಷಿಕೋತ್ಸವ(50ನೇ)ದ ಚಿನ್ನದ ಹಬ್ಬದ ಸಂಭ್ರಮದಲ್ಲಿದ್ದ ಹಿರಿಯ ನಾಯಕ ಖರ್ಗೆ ಅವರು ಈ ಪ್ರಶ್ನೆಗೆ ಉತ್ತರಿಸಿದ್ದಾರೆ.

Assembly Elections 2018 : Mallikarjun Kharge on Dalit should become Karnataka CM

ದಲಿತರೊಬ್ಬರು ಸಿಎಂ ಆಗುವುದಾದರೆ ನನ್ನದೇನೂ ಆಕ್ಷೇಪವಿಲ್ಲ ಎಂಬ ಸಿದ್ದರಾಮಯ್ಯ ಅವರ ಹೇಳಿಕೆ ಬೆನ್ನಲ್ಲೇ, ಕಾಂಗ್ರೆಸ್​ನಲ್ಲಿ ದಲಿತ ಕೋಟಾದಡಿ ಮುಖ್ಯಮಂತ್ರಿ ಸ್ಥಾನಕ್ಕೇರುವ ಸಾಧ್ಯತೆ ಇರುವ ಮಲ್ಲಿಕಾರ್ಜುನ ಖರ್ಗೆ ಅವರು ಬಗ್ಗೆ ಪ್ರತಿಕ್ರಿಯೆ ನೀಡಿ, ದಲಿತ ನಾಯಕ ಎಂದು ಸಿಎಂ ಸ್ಥಾನ ನೀಡುವುದು ಬೇಡ ಎಂದು ಅವರು ಹೇಳಿದ್ದಾರೆ.

ತ್ರಿಶಂಕು ಫಲಿತಾಂಶ : ಮಲ್ಲಿಕಾರ್ಜುನ ಖರ್ಗೆ ಬಾಯಿಗೆ ಲಡ್ಡು?
ಕಲಬುರಗಿಯಲ್ಲಿ ಈ ಬಗ್ಗೆ ಮಾತನಾಡಿರುವ ಅವರು, "ಕಾಂಗ್ರೆಸ್​ನ ಹಿರಿಯ ನಾಯಕ ಎಂದು ಸಿಎಂ ಪದವಿ ಕೊಟ್ಟರೆ ಕೊಡಲಿ. ಇಲ್ಲವಾದರೆ, ಕಾಂಗ್ರೆಸ್ ನಿಷ್ಟಾವಂತ ಕಾರ್ಯಕರ್ತ ಎಂದು ಪರಿಗಣಿಸಿ ಹುದ್ದೆ ಕೊಟ್ಟರೆ ಕೊಡಲಿ. ಆದರೆ, ದಲಿತರಿಗೆ ಸಿಎಂ ಕುರ್ಚಿ ಅನ್ನೋ ಚರ್ಚೆ ಬೇಡ. ನಾನು ಯಾವತ್ತು ದಲಿತ ಸಿಎಂ ಎಂದು ಅರ್ಜಿ ಹಾಕಿಲ್ಲ, ಹಾಕುವುದೂ ಇಲ್ಲ,ಈ ಬಾರಿ ಕಾಂಗ್ರೆಸ್​ ಬಹುಮತ ಗಳಿಸಿ, ಸರ್ಕಾರ ರಚನೆ ಮಾಡಲಿದೆ" ಎಂದು ಹೇಳಿದ್ದಾರೆ.

English summary
Karnataka Assembly Elections 2018 : Senior Congress leader Mallikarjun Kharge reacted to 'Dalit should become Karnataka CM ' demand and said, I doesn't want the post just because he is Dalit.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X