ಕಲಬುರಗಿ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಇದು ಪ್ರತಿಯೊಬ್ಬರ ಕರುಳು ಹಿಂಡುವ ಕರುಣಾಜನಕ ಸ್ಟೋರಿ

|
Google Oneindia Kannada News

ಕಲಬುರಗಿ, ಮೇ 28: ನಾಲ್ಕನೇ ಹಂತದ ಲಾಕ್ ಡೌನ್ ಜಾರಿಗೆ ಬಂದು ಹಲವು ನಿಯಮಗಳು ಸಡಿಲಗೊಂಡರೂ, ವಲಸೆ ಕಾರ್ಮಿಕರ ಸಂಕಷ್ಟ, ನೋವು, ಯಾತನೆ ಮಾತ್ರ ಕಡಿಮೆಯಾಗಿಲ್ಲ.

ಲಾಕ್ ಡೌನ್ ನಿಂದಾಗಿ ದಿನಗೂಲಿ ಕಾರ್ಮಿಕರ ಜೀವನೋಪಾಯಕ್ಕೆ ಭಾರಿ ಹೊಡೆತ ಬಿದ್ದಿದ್ದು, ಬೇರೆ ವಿಧಿ ಇಲ್ಲದೆ ಕಾರ್ಮಿಕರು ತಮ್ಮ ತಮ್ಮ ಸ್ವಗ್ರಾಮಗಳಿಗೆ ತೆರಳುತ್ತಿದ್ದಾರೆ. ರಾಯಚೂರಿನ ಮಾನ್ವಿಯಲ್ಲಿರುವ ಕಾರ್ಮಿಕರದ್ದೂ ಇದೇ ದುಃಸ್ಥಿತಿ.

ಎಂಥಾ ನಿರ್ಲಕ್ಷ್ಯ: ಕ್ವಾರಂಟೈನ್ ನಲ್ಲಿರುವ ವಲಸೆ ಕಾರ್ಮಿಕರಿಗಿಲ್ಲ ಕೋವಿಡ್-19 ಪರೀಕ್ಷೆ.!ಎಂಥಾ ನಿರ್ಲಕ್ಷ್ಯ: ಕ್ವಾರಂಟೈನ್ ನಲ್ಲಿರುವ ವಲಸೆ ಕಾರ್ಮಿಕರಿಗಿಲ್ಲ ಕೋವಿಡ್-19 ಪರೀಕ್ಷೆ.!

ಕೈಯಲ್ಲಿ ಕಾಸಿಲ್ಲದೆ, ಸಾರಿಗೆ ವ್ಯವಸ್ಥೆ ಇಲ್ಲದೆ, ತಿನ್ನಲು ಆಹಾರವೂ ಇಲ್ಲದ ಸುಮಾರು 50 ಕಾರ್ಮಿಕರು ನಡೆದುಕೊಂಡೇ ಮಹಾರಾಷ್ಟ್ರಕ್ಕೆ ತೆರಳುತ್ತಿದ್ದಾರೆ. ಪುಟ್ಟ ಪುಟ್ಟ ಕಂದಮ್ಮಗಳನ್ನ ತೋಳಲ್ಲಿ ಹೊತ್ತುಕೊಂಡು ರಣಬಿಸಿಲಿನಲ್ಲಿ ಗೂಡು ಸೇರಲು ಹೊರಟಿದ್ದಾರೆ ವಲಸೆ ಕಾರ್ಮಿಕರು.

 Around 50 Migrant Workers from Raichur are travelling to Maharashtra on foot

ಹೈರಾಣಾಗಿರುವ ಕಾರ್ಮಿಕರು ಕಲಬುರಗಿ ಜಿಲ್ಲೆಯ ಅಫ್ಜಲಪುರ ತಾಲೂಕಿನ ಬಳೂರಗಿ ಗ್ರಾಮದ ಬಳಿ ಅನ್ನ-ನೀರು ಇಲ್ಲದೆ ಒದ್ದಾಡುತ್ತಿದ್ದಾರೆ. ಉರಿಬಿಸಿಲಿನಲ್ಲೇ ರಸ್ತೆ ಮೇಲೆ ಮಕ್ಕಳನ್ನು ಮಲಗಿಸಿದ್ದಾರೆ.

'ಶ್ರಮಿಕ'ರ ಮನಕಲಕುವ ಘಟನೆ: ಹಾಲು ತರುವಷ್ಟರಲ್ಲಿ ಕೊನೆಯುಸಿರೆಳೆದ ಕಂದಮ್ಮ'ಶ್ರಮಿಕ'ರ ಮನಕಲಕುವ ಘಟನೆ: ಹಾಲು ತರುವಷ್ಟರಲ್ಲಿ ಕೊನೆಯುಸಿರೆಳೆದ ಕಂದಮ್ಮ

ಬಸವಳಿದಿರುವ ಕಾರ್ಮಿಕರ ಸಹಾಯಕ್ಕೆ ಯಾರೂ ಬಾರದೇ ಇರುವುದೇ ದುರಂತ.!

English summary
Around 50 Migrant Workers from Raichur are travelling to Maharashtra on foot without water and food.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X