ಕಲಬುರಗಿ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಕಲಬುರಗಿಯಲ್ಲಿ ವೆಂಟಿಲೇಟರ್ ಸೌಲಭ್ಯವಿಲ್ಲದೇ ಮತ್ತೊಬ್ಬ ರೋಗಿ ಸಾವು

By ಕಲಬುರಗಿ ಪ್ರತಿನಿಧಿ
|
Google Oneindia Kannada News

ಕಲಬುರಗಿ, ಜುಲೈ 25: ವೆಂಟಿಲೇಟರ್ ಸೌಲಭ್ಯ ಸಿಗದೇ ಮತ್ತೊಬ್ಬ ರೋಗಿ ಸಾವನ್ನಪ್ಪಿರುವ ಘಟನೆ ಕಲಬುರಗಿಯಲ್ಲಿ ಇಂದು ನಡೆದಿದೆ. ಸೂಕ್ತ ಸಮಯಕ್ಕೆ ವೆಂಟಿಲೇಟರ್ ಸಿಗದ ಕಾರಣ 47 ವರ್ಷದ ವ್ಯಕ್ತಿಯೊಬ್ಬರು ಸಾವನ್ನಪ್ಪಿದ ಘಟನೆ ನಡೆದಿದೆ.

Recommended Video

ಚೀನಾ ವಿರುದ್ಧ ಹೋರಾಟದಲ್ಲಿ ಹುತಾತ್ಮರಾದ ಯೋಧನ ಕುಟುಂಬದ ನೆರವಿಗೆ ನಿಂತ ಸರ್ಕಾರ | Oneindia Kannada

ಚಿತ್ತಾಪುರ ತಾಲೂಕಿನ ವಾಡಿ ಪಟ್ಟಣ ನಿವಾಸಿ ಮುಸ್ತಫಾ ಮೃತ ದುರ್ದೈವಿ. ಮುಸ್ತಫಾ ಅವರು ಮೂತ್ರ ಸಮಸ್ಯೆಯಿಂದ ಜಿಲ್ಲಾಸ್ಪತ್ರೆಗೆ ದಾಖಲಾಗಿದ್ದರು. ಆ ಸಮಯ ಅವರಿಗೆ ಕೊರೊನಾ ವೈರಸ್ ಪರೀಕ್ಷೆ ನಡೆಸಲಾಗಿದ್ದು, ಕೊರೊನಾ ವರದಿ ಸಹ ನೆಗೆಟಿವ್ ಬಂದಿತ್ತು.

Another Person Dies Without Ventilator Facility In Kalaburagi


ಆದರೆ ಇಂದು ಬೆಳಿಗ್ಗೆ ಅವರು ತೀವ್ರ ಅಸ್ವಸ್ಥಗೊಂಡಿದ್ದರು. ಪರಿಸ್ಥಿತಿ ಹದಗೆಟ್ಟಿದ್ದು, ವೆಂಟಿಲೇಟರ್ ಅವಶ್ಯಕತೆ ಎದುರಾಗಿತ್ತು. ಆದರೆ ಕಲಬುರಗಿಯಲ್ಲಿ ಎಲ್ಲೂ ವೆಂಟಿಲೇಟರ್ ಸೌಲಭ್ಯ ಸಿಗಲಿಲ್ಲ. ವೆಂಟಿಲೇಟರ್ ಗಾಗಿ ಆಸ್ಪತ್ರೆಯಿಂದ ಆಸ್ಪತ್ರೆಗೆ ಅಲೆದಾಡುತ್ತಿರುವಾಗಲೇ ಮುಸ್ತಫಾ ಅವರು ಪ್ರಾಣಬಿಟ್ಟಿದ್ದಾರೆ.

18 ಆಸ್ಪತ್ರೆ ಸುತ್ತಿದರೂ ಚಿಕಿತ್ಸೆ ಇಲ್ಲ, ಕೊರೊನಾ ಪರಿಸ್ಥಿತಿಗೆ ಸಿಲುಕಿ ವ್ಯಕ್ತಿ ಸಾವು18 ಆಸ್ಪತ್ರೆ ಸುತ್ತಿದರೂ ಚಿಕಿತ್ಸೆ ಇಲ್ಲ, ಕೊರೊನಾ ಪರಿಸ್ಥಿತಿಗೆ ಸಿಲುಕಿ ವ್ಯಕ್ತಿ ಸಾವು

ಜಿಲ್ಲೆಯಲ್ಲಿ ವೆಂಟಿಲೇಟರ್ ಕೊರತೆ ತೀವ್ರಗೊಳ್ಳುತ್ತಿದ್ದು, ವಾರದಲ್ಲಿ ವೆಂಟಿಲೇಟರ್ ಸಿಗದೇ ಸಂಭವಿಸಿದ ಮೂರನೇ ಸಾವು ಇದಾಗಿದೆ. ಇನ್ನಾದರೂ ಸರ್ಕಾರ ಎಚ್ಚೆತ್ತುಕೊಂಡು ಅಗತ್ಯ ಸೌಲಭ್ಯವನ್ನು ಒದಗಿಸಿಕೊಡಬೇಕಾಗಿದೆ.

English summary
Another patient dies without ventilator facility in kalaburagi today. This is the third death case in a week due to lack of ventilator in district
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X