ಕಲಬುರಗಿ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಕಲಬುರಗಿ-ಬೆಂಗಳೂರು ನಡುವೆ ಮೇ 28ರಿಂದ ಅಲಯನ್ಸ್‌ ಏರ್ ಹಾರಾಟ

|
Google Oneindia Kannada News

ಕಲಬುರಗಿ, ಮೇ 27 : ಲಾಕ್ ಡೌನ್ ಪರಿಣಾಮ ಕಳೆದ ಎರಡು ತಿಂಗಳಿನಿಂದ ದೇಶಿಯ ವಿಮಾನ ಸೇವೆ ರದ್ದುಗೊಂಡಿತ್ತು. ಇದರಿಂದಾಗಿ ಅಲಯನ್ಸ್ ಏರ್ ಬೆಂಗಳೂರು- ಕಲಬುರಗಿ ನಡುವಿನ ಹಾರಾಟವನ್ನು ಸ್ಥಗಿತಗೊಳಿಸಿತ್ತು.

"ಮೇ 28ರ ಗುರುವಾರದಿಂದ ಬೆಂಗಳೂರು-ಕಲಬುರಗಿ ನಡುವೆ ಅಲಯನ್ಸ್ ಏರ್ ವಿಮಾನಗಳು ಹಾರಾಟ ನಡೆಸಲಿವೆ" ಎಂದು ವಿಮಾನ ನಿಲ್ದಾಣದ ನಿರ್ದೇಶಕ ಜ್ಞಾನೇಶ್ವರ ರಾವ್ ಹೇಳಿದ್ದಾರೆ. ವಿಮಾನದ ವೇಳಾಪಟ್ಟಿಯನ್ನು ಸಹ ಬಿಡುಗಡೆ ಮಾಡಲಾಗಿದೆ.

ಕಲಬುರಗಿ-ಬೆಂಗಳೂರು ವಿಮಾನ ಸೇವೆ ಪುನರಾರಂಭಕಲಬುರಗಿ-ಬೆಂಗಳೂರು ವಿಮಾನ ಸೇವೆ ಪುನರಾರಂಭ

Alliance Air To Resume Flight Services From May 28

ಅಲಯನ್ಸ್ ಏರ್ ವಿಮಾನ ಮೇ 28, 30 ಮತ್ತು 31ರಂದು ಬೆಳಗ್ಗೆ 11.45ಕ್ಕೆ ಕಲಬುರಗಿ ವಿಮಾನ ನಿಲ್ದಾಣಕ್ಕೆ ಆಗಮಿಸಲಿದೆ. ಮಧ್ಯಾಹ್ನ 12.25ಕ್ಕೆ ಬೆಂಗಳೂರಿಗೆ ಹೊರಡಲಿದೆ. ಜೂನ್ 1ರಿಂದ ಹೊಸ ವೇಳಾಪಟ್ಟಿಯಂತೆ ವಿಮಾನ ಹಾರಾಟ ನಡೆಸಲಿದೆ.

ಕಲಬುರಗಿ; ಕೆಲಸ ಖಾಲಿ ಇದೆ, ಜೂ.4ರೊಳಗೆ ಅರ್ಜಿ ಹಾಕಿ ಕಲಬುರಗಿ; ಕೆಲಸ ಖಾಲಿ ಇದೆ, ಜೂ.4ರೊಳಗೆ ಅರ್ಜಿ ಹಾಕಿ

ಜೂನ್ 1ರಿಂದ ವೇಳಾಪಟ್ಟಿ : ಅಲಯನ್ಸ್ ಏರ್ ವಿಮಾನ ಜೂನ್ 1ರಿಂದ ಸೋಮವಾರ ಮತ್ತು ಮಂಗಳವಾರ ಕಲಬುರಗಿ ವಿಮಾನ ನಿಲ್ದಾಣಕ್ಕೆ ಬೆಳಗ್ಗೆ 8.45ಕ್ಕೆ ಆಗಮಿಸಲಿದೆ. 9.25ಕ್ಕೆ ವಾಪಸ್ ಬೆಂಗಳೂರಿನತ್ತ ಪ್ರಯಾಣ ಬೆಳೆಸಲಿದೆ.

ಸಾವಿನ ಸಂಖ್ಯೆಯಲ್ಲಿ ಬೆಂಗಳೂರಿಗೆ ಪೈಪೋಟಿ ನೀಡುತ್ತಿದೆ ಕಲಬುರಗಿ ಸಾವಿನ ಸಂಖ್ಯೆಯಲ್ಲಿ ಬೆಂಗಳೂರಿಗೆ ಪೈಪೋಟಿ ನೀಡುತ್ತಿದೆ ಕಲಬುರಗಿ

ಬುಧವಾರರಿಂದ ಭಾನುವಾರದ ತನಕ ಬೆಳಗ್ಗೆ 11.45ಕ್ಕೆ ಕಲಬುರಗಿಗೆ ಆಗಮಿಸಲಿದ್ದು, ಮಧ್ಯಾಹ್ನ 12.25ಕ್ಕೆ ಬೆಂಗಳೂರಿಗೆ ವಾಪಸ್ ಆಗಲಿದೆ ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.

ಮೇ 25ರ ಸೋಮವಾರದಿಂದ ದೇಶಿಯ ವಿಮಾನ ಸೇವೆ ಆರಂಭವಾಗಿದೆ. ಬೆಂಗಳೂರು-ಕಲಬುರಗಿ ನಡುವೆ ಸ್ಟಾರ್ ಏರ್ ಸಂಸ್ಥೆಯ ವಿಮಾನ ಹಾರಾಟ ನಡೆಸುತ್ತಿದೆ. ಈಗ ಅಲಯನ್ಸ್ ಏರ್ ಹಾರಾಟ ಆರಂಭವಾಗಲಿದೆ.

ವಿಮಾನದಲ್ಲಿ ಸಂಚಾರ ನಡೆಸುವ ಎಲ್ಲಾ ಪ್ರಯಾಣಿಕರಿಗೆ ಥರ್ಮಲ್ ಸ್ಕ್ರೀನಿಂಗ್ ಮಾಡಲಾಗುತ್ತಿದೆ. ಪ್ರತಿ ಪ್ರಯಾಣಿಕರಿಂದ ಆರೋಗ್ಯದ ಬಗ್ಗೆ ಸ್ವಯಂ ದೃಢೀಕರಣ ಪಡೆದುಕೊಳ್ಳಲಾಗುತ್ತಿದೆ. ಎಲ್ಲರೂ ಆರೋಗ್ಯ ಸೇತು ಅಪ್ಲಿಕೇಶನ್ ಡೌನ್ ಲೋಡ್ ಮಾಡಿಕೊಂಡಿರುವುದು ಕಡ್ಡಾಯವಾಗಿದೆ.

English summary
From May 28, 2020 Alliance Air to resume flight services between Bengaluru and Kalaburagi. Flight service stopped due to lock down.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X