ಕಲಬುರಗಿ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಮೈಸೂರು-ಕಲಬುರಗಿ ನಡುವೆ ಅಲಯನ್ಸ್ ಏರ್ ಹಾರಾಟ

|
Google Oneindia Kannada News

ಕಲಬುರಗಿ, ನವೆಂಬರ್ 27 : ಕಲಬುರಗಿಗೆ ಮೈಸೂರಿನಿಂದ ಪ್ರಯಾಣಿಸುವ ಜನರಿಗೆ ಸಿಹಿ ಸುದ್ದಿ ಸಿಕ್ಕಿದೆ. ಅಲಯನ್ಸ್ ಏರ್ ಉಭಯ ನಗರಗಳ ನಡುವೆ ವಿಮಾನ ಸೇವೆಯನ್ನು ಆರಂಭಿಸಲಿದೆ. ನವೆಂಬರ್ 22ರಂದು ಕಲಬುರಗಿ ವಿಮಾನ ನಿಲ್ದಾಣ ಲೋಕಾರ್ಪಣೆಗೊಂಡಿದೆ.

ಉಡಾನ್ ಯೋಜನೆಯಡಿ ಮೈಸೂರು-ಕಲಬುರಗಿ ನಡುವೆ ವಿಮಾನ ಸೇವೆಯನ್ನು ಆರಂಭಿಸಲಾಗುತ್ತಿದೆ. ಮೈಸೂರು-ಕೊಚ್ಚಿ ನಡುವೆ ಸಂಚಾರ ನಡೆಸುತ್ತಿದ್ದ ವಿಮಾನವನ್ನು ಅಲಯನ್ಸ್ ಏರ್ ರದ್ದುಗೊಳಿಸಿದ್ದು, ಅದೇ ವಿಮಾನ ಕಲಬುರಗಿಗೆ ಹಾರಲಿದೆ.

ಕಲಬುರಗಿ; ವಿಮಾನ ನಿಲ್ದಾಣಕ್ಕೆ ಚಾಲನೆ ಕೊಟ್ಟ ಯಡಿಯೂರಪ್ಪಕಲಬುರಗಿ; ವಿಮಾನ ನಿಲ್ದಾಣಕ್ಕೆ ಚಾಲನೆ ಕೊಟ್ಟ ಯಡಿಯೂರಪ್ಪ

ಎಐ 9893 ವಿಮಾನ ಕೊಚ್ಚಿ-ಮೈಸೂರು ನಡುವೆ ಹಾರಾಟ ನಡೆಸುತ್ತಿತ್ತು. ಆದರೆ, ಕೊಚ್ಚಿ ವಿಮಾನ ನಿಲ್ದಾಣದ ರನ್ ವೇ ಕಾಮಗಾರಿ ಹಿನ್ನಲೆಯಲ್ಲಿ ಬೆಳಗಿನ ವಿಮಾನ ಹಾರಾಟವನ್ನು ಸ್ಥಗಿತಗೊಳಿಸಲಾಗಿದೆ. ಆದ್ದರಿಂದ, ಈ ವಿಮಾನ ಕಲಬುರಗಿಗೆ ಹಾರಾಟ ನಡೆಸಲಿದೆ.

ನ. 22ರಿಂದ ಕಲಬುರಗಿ-ಬೆಂಗಳೂರು ವಿಮಾನ, ವೇಳಾಪಟ್ಟಿ ನ. 22ರಿಂದ ಕಲಬುರಗಿ-ಬೆಂಗಳೂರು ವಿಮಾನ, ವೇಳಾಪಟ್ಟಿ

Alliance Air To Connect Mysuru Kalaburagi

ಸ್ಟಾರ್ ಏರ್ ಬೆಂಗಳೂರು-ಕಲಬುರಗಿ ನಡುವೆ ವಿಮಾನ ಸೇವೆಯನ್ನು ಆರಂಭಿಸಿದೆ. ಭಾನುವಾರ, ಸೋಮವಾರ ಮತ್ತು ಶುಕ್ರವಾರ ವಿಮಾನ ಉಭಯ ನಗರಗಳ ನಡುವೆ ಹಾರಲಿದ್ದು, 2850 ರೂ. ದರ ನಿಗದಿ ಮಾಡಲಾಗಿದೆ.

ಕೆಂಪೇಗೌಡ ಏರ್‌ಪೋರ್ಟ್‌ನಿಂದ 6 ನಗರಗಳಿಗೆ ನೇರ ವಿಮಾನ ಸೇವೆ ಕೆಂಪೇಗೌಡ ಏರ್‌ಪೋರ್ಟ್‌ನಿಂದ 6 ನಗರಗಳಿಗೆ ನೇರ ವಿಮಾನ ಸೇವೆ

ಸ್ಟಾರ್ ಏರ್ ಕಲಬುರಗಿ-ತಿರುಪತಿ ನಡುವೆ ಶೀಘ್ರದಲ್ಲಿಯೇ ವಿಮಾನ ಸೇವೆಯನ್ನು ಆರಂಭಿಸಲು ತೀರ್ಮಾನಿಸಿದೆ. ಕಲಬುರಗಿಗೆ ಬೇರೆ-ಬೇರೆ ನಗರಗಳಿಂದ ಉಡಾನ್ ಯೋಜನೆಯಡಿ ವಿಮಾನ ಸೇವೆ ಶೀಘ್ರದಲ್ಲಿಯೇ ದೊರೆಯಲಿದೆ.

742.23 ಎಕರೆ ಪ್ರದೇಶದಲ್ಲಿ ಕಲಬುರಗಿ ವಿಮಾನ ನಿಲ್ದಾಣವನ್ನು ನಿರ್ಮಾಣ ಮಾಡಲಾಗಿದೆ. ಏರ್ ಬಸ್‌ನಂತಹ ದೊಡ್ಡ ವಿಮಾನಗಳು ಸಹ ಬಂದಿಳಿಯಲು ಅನುಕೂಲವಾಗುವಂತೆ ರನ್ ವೇ ನಿರ್ಮಾಣ ಮಾಡಲಾಗಿದೆ.

English summary
Alliance Air will operate Mysuru-Kalaburagi flights under the Ude Desh Ka Aam project. Kalaburagi airport inaugurated on November 22, 2019.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X