ಕಲಬುರಗಿ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಕಲಬುರಗಿಯಲ್ಲಿ ವೈಮಾನಿಕ ತರಬೇತಿ ಶಾಲೆಗೆ ಎಎಐ ಒಪ್ಪಿಗೆ

|
Google Oneindia Kannada News

ಕಲಬುರಗಿ ಜೂ.30: ಕೇಂದ್ರ ವಿಮಾನ ನಿಲ್ದಾಣ ಪ್ರಾಧಿಕಾರವು (ಎಎಐ) ಕಲಬುರಗಿಯಲ್ಲಿ ವೈಮಾನಿಕ ತರಬೇತಿ ಶಾಲೆಗೆ ಒಪ್ಪಿಗೆ ನೀಡಿರುವುದಾಗಿ ತಿಳಿಸಿದೆ. ಇದರಿಂದ ಉತ್ತರ ಕರ್ನಾಟಕ, ಕಲ್ಯಾಣ ಕರ್ನಾಟಕ ಭಾಗದ ಯುವಕರು/ಯುವತಿಯರು ಇನ್ನು ಮುಂದೆ ಕಲಬುರಗಿಯಲ್ಲಿಯೇ ಪೈಲೆಟ್ ತರಬೇತಿ ಪಡೆಯಬಹುದಾಗಿದೆ.

ಈ ಕುರಿತು ಗುರುವಾರ ಕಲಬುರಗಿ ವಿಮಾನ ನಿಲ್ದಾಣ ನಿರ್ದೇಶಕರು ಕೂ ಮಾಡಿ ಮಾಹಿತಿ ಹಂಚಿಕೊಂಡಿದ್ದಾರೆ. ಬೆಂಗಳೂರು, ಬೆಳಗಾವಿ ಮತ್ತು ಹುಬ್ಬಳ್ಳಿ ನಂತರ ಇದೀಗ ಕಲಬರಗಿಯ ವಿಮಾನ ನಿಲ್ದಾಣದಲ್ಲಿ ಕೇಂದ್ರ ವಿಮಾನ ನಿಲ್ದಾಣ ಪ್ರಾಧಿಕಾರವು ವೈಮಾನಿಕ ತರಬೇತಿ ಶಾಲೆ (ಪೈಲೆಟ್ ಟ್ರೈನಿಂಗ್) ತೆರೆಯಲು ಅನುಮತಿ ನೀಡಿದೆ ಎಂದು ಮೂಲಗಳು ತಿಳಿಸಿವೆ.

ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ: 14 ವರ್ಷದಲ್ಲಿ 25 ಕೋಟಿ ಪ್ರಯಾಣಿಕರುಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ: 14 ವರ್ಷದಲ್ಲಿ 25 ಕೋಟಿ ಪ್ರಯಾಣಿಕರು

ಕೇಂದ್ರ ವಿಮಾನ ನಿಲ್ದಾಣ ಪ್ರಾಧಿಕಾರವು ಕಲಬುರಗಿಯಲ್ಲಿ ಪೈಲೆಂಟ್ ತರಬೇತಿ ಪೂರಕ ಸೌಲಭ್ಯ ಒದಗಿಸಿದೆ. ಈಗಾಗಲೆ ಹೈದರಾಬಾದ್ ಮೂಲದ ಏಷ್ಯಾ ಫೆಸಿಪಿಕ್ ಫ್ಲೈಟ್ ಟ್ರೈನಿಂಗ್ ಅಕಾಡೆಮಿ ಮತ್ತು 100 ಬರ್ಡ್ ಫ್ಲೈಟ್ ಟ್ರೈನಿಂಗ್ ಅಕಾಡೆಮಿಗೆ ಅಗತ್ಯವಿರುವ ಭೂಮಿ ಮತ್ತು ಮೂಲ ಸೌಕರ್ಯಗಳು ಪ್ರಾಧಿಕಾರ ಒದಗಿಸಿದೆ.

ಈ ಎಲ್ಲ ಕಾರಣಗಳಿಂದ ಉತ್ತರ ಕರ್ನಾಟಕ ಹಾಗೂ ಕಲ್ಯಾಣ ಕರ್ನಾಟಕ ಭಾಗದ ಯುವಕ-ಯುವತಿಯರು ಇನ್ನು ಮುಂದೆ ವೈಮಾನಿಕ ತರಬೇತಿ ಪಡೆಯಲು ಮುಂಬೈ, ಹೈದರಾಬಾದ್, ಬೆಂಗಳೂರು ನಗರಕ್ಕೆ ಹೋಗುವುದು ತಪ್ಪಲಿದೆ. ಅವರೆಲ್ಲರು ಕಲಬುರಗಿಯಲ್ಲೇ ಅಕಾಡೆಮಿಗಳಿಂದ ವೈಮಾನಿಕ ತರಬೇತಿ ಪಡೆಯಲು ಅನುಕೂಲವಾಗಿದೆ. ಎಎಐ ಈ ನಿರ್ಧಾರ ಸ್ವಾಗತಿಸಿರುವ ಕಲಬುರಗಿ ಜನತೆ ಸಂತಸ ವ್ಯಕ್ತಪಡಿಸಿದ್ದಾರೆ.

100ಪ್ರತಿಭಾನ್ವಿತರಿಗೆ ಅವಕಾಶ:

ಕಲಬುರಗಿ ವಿಮಾನ ನಿಲ್ದಾಣದಲ್ಲಿ ವೈಮಾನಿಕ ತರಬೇತಿ ಸಂಸ್ಥೆಗಳು (ಅಕಾಡೆಮಿ) ಆಗಮಿಸಿವೆ. ಈ ಸಂಸ್ಥೆಗಳ ಪ್ರತಿನಿಧಿಗಳಿಂದ ಇಲ್ಲಿನ ಸ್ಥಳೀಯ ಪ್ರತಿಭೆಗಳಿಗೆ ಉತ್ತಮ ಅವಕಾಶ ಸಿಗಲಿದೆ. ಒಟ್ಟು ಸುಮಾರು 100 ಪ್ರತಿಭಾನ್ವಿತರು ಕಲಬುರಗಿಯಲ್ಲಿ ವೈಮಾನಿಕ ತರಬೇತಿ ಪಡೆಯಲು ಅವಕಾಶ ಕಲ್ಪಿಸಲಾಗಿದೆ. ಎಎಐ ನ ಈ ನಿರ್ಧಾರವು ಕಲ್ಯಾಣ ಕರ್ನಾಟಕ ಭಾಗದ ಸಾಮಾಜಿಕ, ಆರ್ಥಿಕ ಅಭಿವೃದ್ಧಿಯ ಮೇಲೆ ಸಕಾರಾತ್ಮಕ ಪರಿಣಾಮ ಬೀರಲಿದೆ' ಎಂದು ನಿರ್ದೇಶಕರು ಮಾಹಿತಿ ಹಂಚಿಕೊಂಡಿದ್ದಾರೆ.

ವೈಮಾನಿಕ ಶಾಲಾರಂಭಕ್ಕೆ ಪ್ರಸ್ತಾವನೆ ಸಲ್ಲಿಕೆ

ವೈಮಾನಿಕ ಶಾಲಾರಂಭಕ್ಕೆ ಪ್ರಸ್ತಾವನೆ ಸಲ್ಲಿಕೆ

ಕಳೆದ ವರ್ಷ ರಾಜ್ಯದಲ್ಲಿ 5 ಶಾಲೆಗಳನ್ನು ಆರಂಭಿಸಲು ತೀರ್ಮಾನಿಸಲಾಗಿತ್ತು. ಈ ಕುರಿತು ಕೇಂದ್ರ ವಿಮಾನ ನಿಲ್ದಾಣ ಪ್ರಾಧಿಕಾರಕ್ಕೆ ಪ್ರಸ್ತಾವನೆ ಸಲ್ಲಿಕೆ ಮಾಡಲಾಗಿತ್ತು. ಮೊದಲು ಬೆಂಗಳೂರಿನ ಜಕ್ಕೂರಿನಲ್ಲಿ ಮಾತ್ರ ವೈಮಾನಿಕ ತರಬೇತಿ ಶಾಲೆ ಆರಂಭವಾಗಿತ್ತು. ನಂತರ ಹುಬ್ಬಳಿ, ಬೆಳಗಾವಿ ಮತ್ತು ಈಗ ಕಲಬುರಗಿ ವಿಮಾನ ನಿಲ್ದಾಣಗಳಲ್ಲಿಯೂ ತರಬೇತಿ ಶಾಲೆ ಆರಂಭವಾಗುತ್ತಿದೆ. ಇದರಿಂದಾಗಿ ರಾಜ್ಯದ ಯುಕವರು ಇಲ್ಲಿಯೇ ತರಬೇತಿ ಪಡೆಯಬಹುದಾಗಿದೆ.

3 ವರ್ಷ ಪೂರೈಸಲಿರುವ ಕಲಬುರಗಿ ವಿಮಾನ ನಿಲ್ದಾಣ:

3 ವರ್ಷ ಪೂರೈಸಲಿರುವ ಕಲಬುರಗಿ ವಿಮಾನ ನಿಲ್ದಾಣ:

2019ರ ನವೆಂಬರ್ 22ರಂದು ರಾಜ್ಯದ ಅಂದಿನ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ಕಲಬುರಗಿ ವಿಮಾನ ನಿಲ್ದಾಣಕ್ಕೆ ಚಾಲನೆ ನೀಡಿದ್ದರು. ಬೆಂಗಳೂರಿನಿಂದ ಕಲಬುರಗಿಗೆ ಸ್ಟಾರ್ ಏರ್ ಸಂಸ್ಥೆಯ ವಿಮಾನದಲ್ಲಿ ಕಲಬುರಗಿಗೆ ಬರುವ ಮೂಲಕ ಚಾಲನೆ ನೀಡಲಾಗಿತ್ತು. 2008ರಲ್ಲಿ ವಿಮಾನ ನಿಲ್ದಾಣ ಸ್ಥಾಪನೆಗೆ ಅಡಿಗಲ್ಲು ಹಾಕಲಾಗಿತ್ತು. ಇದೀಗ ಕಲಬುರಗಿ ವಿಮಾಣ ನಿಲ್ದಾಣಕ್ಕೆ ಮುಂದಿನ ನವೆಂಬರ್ ಗೆ ಮೂರು ವರ್ಷ ಪೂರ್ಣಗೊಳ್ಳಲಿದೆ. ಈ ಹೊತ್ತಿನಲ್ಲಿವೈಮಾನಿಕ ತರಬೇತಿ ಶಾಲೆ ಆರಂಭಕ್ಕೆ ಎಎಐ ಅಧಿಕ ಮುದ್ರೆ ಒತ್ತಿದೆ.

ನಿರೀಕ್ಷೆಯಂತೆ ನಿಲ್ದಾಣ, ವೈಮಾನಿಕ ಶಾಲೆ

ನಿರೀಕ್ಷೆಯಂತೆ ನಿಲ್ದಾಣ, ವೈಮಾನಿಕ ಶಾಲೆ

ಕಲ್ಯಾಣ ಕರ್ನಾಟಕ ವಿಭಾಗೀಯ ಕೇಂದ್ರ ಕಲಬುರಗಿಯಲ್ಲಿ ವಿಮಾನ ನಿಲ್ದಾಣ ಸ್ಥಾಪಿಸುವಂತೆ 1980ರಿಂದಲೇ ಕೂಗು ಕೇಳಿ ಬಂದಿತ್ತು. ಅದೆಲ್ಲವು ಅಂದುಕೊಂಡಂತೆ ಆದ ನಂತರ ಕಲಬುರಗಿ ಸೇರಿದಂತೆ ರಾಜ್ಯದಲ್ಲಿ ಐದು ಕಡೆ ವೈಮಾನಿಕ ತರಬೇತಿ ಶಾಲೆ ತೆರೆಯಲು ತೀರ್ಮಾನಿಸಲಾಗಿತ್ತು. ಅದರಂತೆ ಉತ್ತರ ಕರ್ನಾಟಕ ಭಾಗದ ಯುವಕರಿಗೂ ಅನುಕೂಲವಾಗುಂತೆ ಪೈಲೆಟ್ ತರಬೇತಿ ಆರಂಭವಾಗುತ್ತಿದೆ ಎಂದು ತಿಳಿದು ಬಂದಿದೆ.

Recommended Video

HD Revanna ನವರು R Ashok ಹೇಳಿಕೆ ವಿರುದ್ಧ ತಿರುಗೇಟು ನೀಡಿದ್ದಾರೆ | Oneindia Kannada

English summary
Hyderabad-based Asia Pacific Flight Training (APFT) setting up training institute at Kalaburagi Airport. Now Airport Authority of India Approves Pilot Training at Kalaburagi Airport. Know more
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X