ಕಲಬುರಗಿ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಯೂಟ್ಯೂಬ್ ಚಾನೆಲ್ ಹೊಂದಿದ್ದೀರಾ? ಕಲಬುರಗಿ ಪೊಲೀಸರ ಪ್ರಕಟಣೆ ಗಮನಿಸಿ

|
Google Oneindia Kannada News

ಕಲಬುರಗಿ, ನವೆಂಬರ್ 22: ನೀವು ಯೂಟ್ಯೂಬ್ ಚಾನೆಲ್ ಹೊಂದಿದ್ದೀರಾ? ವರದಿಕೆ ಮಾಡಿ ಚಾನೆಲ್ ಅಲ್ಲಿ ಸುದ್ದಿ ಭಿತ್ತರಿಸುತ್ತಿದ್ದೀರಾ? ಹಾಗಾದರೆ ಕಲಬುರಗಿ ಪೊಲೀಸರು ನೀಡಿರುವ ಪ್ರಕಟಣೆಯನ್ನು ನೀವು ಗಮನಿಸಲೇ ಬೇಕು.

ಇತ್ತೀಚೆಗಷ್ಟೆ ಕಲಬುರಗಿ ನಗರ ಪೊಲೀಸ್ ಆಯುಕ್ತರು ಪ್ರಕಟಣೆಯೊಂದನ್ನು ಹೊರಡಿಸಿದ್ದು, ವರದಿಗಾರಿಕೆ ಮಾಡಿ ಯೂಟ್ಯೂಬ್ ಮೂಲಕ ಅದನ್ನು ಭಿತ್ತರಿಸುವ ವರದಿಗಾರರಿಗೆ ಯೂಟ್ಯೂಬ್ ಚಾನೆಲ್ ಮಾಲೀಕರ ವಿರುದ್ಧ ಕ್ರಮಕೈಗೊಳ್ಳುವ ಎಚ್ಚರಿಕೆ ನೀಡಲಾಗಿದೆ.

ನಕಲಿ ಪತ್ರಕರ್ತರು ಮತ್ತು ಯೂಟ್ಯೂಬ್ ಚಾನೆಲ್‌ ಗಳವರ ಹಾವಳಿ ಜಿಲ್ಲೆಯಲ್ಲಿ ಹೆಚ್ಚಾಗಿದೆ ಎಂದು ಪ್ರಕಟಣೆಯಲ್ಲಿ ಆತಂಕ ವ್ಯಕ್ತಪಡಿಸಿರುವ ಪೊಲೀಸ್ ಆಯುಕ್ತರು. ಇವರುಗಳ ವಿರುದ್ಧ ಕ್ರಮಕೈಗೊಳ್ಳುವುದಾಗಿ ಹೇಳಿದ್ದಾರೆ.

Action Against Youtube Chanels: Kalburgi Police Commissioner

ಯೂಟ್ಯೂಬ್ ಚಾನೆಲ್ ಮೂಲಕ ವರದಿ ಭಿತ್ತರಿಸುವುವರ ವಿರುದ್ಧವೂ ಕ್ರಮ ಕೈಗೊಳ್ಳಲಾಗುವುದು ಎಂದು ಪ್ರಕಟಣೆಯಲ್ಲಿ ಹೇಳಲಾಗಿದೆ. 'ನಕಲಿ ಪತ್ರಕರ್ತರು ಮತ್ತು ಯೂಟ್ಯೂಬ್ ಚಾನೆಲ್‌' ಎಂದು ಪ್ರತ್ಯೇಕಿಸಿಯೇ ಆಯುಕ್ತರು ಪ್ರಕಟಣೆ ಹೊರಿಡಿಸಿದ್ದಾರೆ.

ರಾಜಕಾರಣಿಗಳ ಸುದ್ದಿಗೋಷ್ಠಿಗಳಲ್ಲಿ, ಸಮಾರಂಭಗಳಲ್ಲಿ ಯಾವುದೋ ಚಾನೆಲ್ ಲೋಗೋ ಹಿಡಿದು ತಾವು ಯೂಟ್ಯೂಬ್ ಚಾನೆಲ್‌ ನವರೆಂದು ಹೇಳಿಕೊಂಡು ಹಣ ವಸೂಲಿ ಮಾಡುತ್ತಿರುವ ವಿಷಯ ಗಮನ ಬಂದಿದ್ದು, ಈ ಬಗ್ಗೆ ಕ್ರಮಕೈಗೊಳ್ಳಲಾಗುವುದು ಎಂದು ಆಯುಕ್ತರು ತಿಳಿಸಿದ್ದಾರೆ.

ಸುದ್ದಿ ವಾಹಿನಿಗಳಲ್ಲಿ ಬರದೇ ಇರುವುದು ನಮ್ಮ ಚಾನೆಲ್‌ನಲ್ಲಿ ಬರುತ್ತದೆ ಎಂದು ಹೇಳಿ ಕೆಲವು ಯೂಟ್ಯೂಬ್ ಚಾನೆಲ್‌ನವರು ಹಣ ಪಡೆಯುತ್ತಿದ್ದಾರೆ ಎಂದು ಆಯುಕ್ತರು ಪ್ರಕಟಣೆಯಲ್ಲಿ ಹೇಳಿದ್ದಾರೆ.

ಸಂಬಂಧಪಟ್ಟ ಇಲಾಖೆಯಿಂದ ಮಾನ್ಯತೆ ಪಡೆಯದೇ ತಮ್ಮಷ್ಟಕ್ಕೆ ತಾವೇ ಪತ್ರಕರ್ತರು ಎಂದು ಹೇಳಿಕೊಂಡು ರಾಜಕಾರಣಿಗಳಿಂದ, ಅಧಿಕಾರಿಗಳಿಂದ ಹಣ ವಸೂಲಿ ಮಾಡುತ್ತಿರುವ ನಕಲಿ ಪತ್ರಕರ್ತರನ್ನು ಇಲಾಖೆಯು ಗುರುತಿಸಿದ್ದು ಇಂಥಹವರ ವಿರುದ್ಧ ಕ್ರಮ ಕೈಗೊಳ್ಳಲಾಗುವುದು ಎಂದು ಆಯುಕ್ತರು ಹೇಳಿದ್ದಾರೆ.

ಇಷ್ಟೇ ಅಲ್ಲದೆ ಗಾಡಿಗಳ ಮೇಲೆ 'ಪ್ರೆಸ್' ಎಂದು ಹಾಕಿಕೊಂಡು ಓಡಾಡುತ್ತಿರುವುದರ ವಿರುದ್ಧವೂ ಕ್ರಮ ಜರುಗಿಸಲಾಗುವುದು ಎಂದು ಆಯುಕ್ತರು ಪ್ರಕಟಣೆಯಲ್ಲಿ ಹೇಳಿದ್ದಾರೆ

English summary
Kalburgi police commissioner said they will take action against youtube channels who reporting political events.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X