ಕಲಬುರಗಿ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಕಲಬುರಗಿ ಬಸ್‌ ಅಪಘಾತ: 7 ಮಂದಿ ಸಜೀವ ದಹನ ಶಂಕೆ

|
Google Oneindia Kannada News

ಕಲಬುರಗಿ, ಜೂನ್ 3 : ಕಮಲಾಪುರ ಹೊರವಯಲದಲ್ಲಿ ಗೂಡ್ಸ್ ವಾಹನ ಮತ್ತು ಖಾಸಗಿ ಸ್ಲೀಪರ್‌ ಬಸ್ ನಡುವೆ ಭೀಕರ ಅಪಘಾತ ಸಂಭವಿಸಿದೆ. ಡಿಕ್ಕಿಯ ರಬಸಕ್ಕೆ ಬಸ್ ಪಲ್ಟಿ ಹೊಡೆದು ಬೆಂಕಿ ಹೊತ್ತಿಕೊಂಡಿದ್ದು, ಏಳು ಮಂದಿ ಸಜೀವ ದಹನಗೊಂಡಿರುವ ಶಂಕೆ ವ್ಯಕ್ತವಾಗುತ್ತಿದೆ.

ಬೀದರ್‌ -ಶ್ರೀರಂಗ ಪಟ್ಟಣ ಹೆದ್ದಾರಿ ಕಮಾಲಪುರ ಹೊರ ವಲಯದಲ್ಲಿ ಈ ಘಟನೆ ಸಂಭವಿಸಿದೆ. ಗೋಬಾ ಮೂಲದ ಆರೆಂಜ್ ಕಂಪನಿಗೆ ಸೇರಿದ ಸ್ಲೀಪರ್‌ ಬಸ್‌ನಲ್ಲಿ 35 ಮಂದಿ ಪ್ರಯಾಣಿಸುತ್ತಿದ್ದರು ಎಂದು ಅಂದಾಜಿಸಲಾಗಿದ್ದು, ಹಲವರು ಗಾಯಗೊಂಡಿದ್ದಾರೆ. ಗಾಯಾಳುಗಳನ್ನು ಆಸ್ಪತ್ರೆಗೆ ಸೇರಿಸಲಾಗಿದೆ..

Breaking: ಕಲಬುರಗಿ ಬಸ್‌ ಅಪಘಾತ: ಹಲವರು ಸಜೀವ ದಹನ ಶಂಕೆBreaking: ಕಲಬುರಗಿ ಬಸ್‌ ಅಪಘಾತ: ಹಲವರು ಸಜೀವ ದಹನ ಶಂಕೆ

ಬಸ್ ಗೋವಾದಿಂದ ಕಲಬುರಗಿ ಮಾರ್ಗವಾಗಿ ಹೈದರಾಬಾದ್ ಗೆ ಹೋಗುತ್ತಿತ್ತು. ಗೂಡ್ಸ್ ವಾಹನ ಕಲಬುರಗಿ ಕಡೆಗೆ ಬರುತ್ತಿತ್ತು. ಕಮಲಾಪುರದಿಂದ ಹುಮನಾಬಾದ ಕಡೆಗೆ ಹೋಗುವ 2 ಕಿಮೀ ದೂರದಲ್ಲಿ ಮೊದಲು ಗೂಡ್ಸ್ ಲಾರಿ ಮತ್ತು ಬಸ್ ಡಿಕ್ಕಿಯಾದ ನಂತರ ಬಸ್ ಸ್ವಲ್ಪ ದೂರ ಹೋಗಿ ಹೆದ್ದಾರಿಯಲ್ಲಿನ ಸೇತುವೆಗೆ ಡಿಕ್ಕಿ ಹೊಡೆದು ತಗ್ಗಿನಲ್ಲಿ ಉರುಳಿ ಬಿದ್ದಿದೆ. ನಂತರ ದಿಢೀರ್‌ ಬೆಂಕಿ ಹೊತ್ತಿಕೊಂಡಿದೆ ಎಂದು ಪೊಲೀಸರು ತಿಳಿಸಿದ್ದಾರೆ.

7 People Killed in Kalaburagi bus accident

7 ಮಂದಿ ಮೃತ
ಸದ್ಯ ಏಳು ಮಂದಿ ಮೃತಪಟ್ಟಿದ್ದು, ಮೃತರೆಲ್ಲರೂ ಹೈದರಾಬಾದ್‌ ಮೂಲದವರು ಎಂಬ ಮಾಹಿತಿಯಿದೆ. ಎಲ್ಲರ ದೇಹಗಳು ಸಂಪೂರ್ಣ ಸುಟ್ಟು ಕರಕಲಾಗಿರುವುದರಿಂದ ಗುರುತಿಸಲು ಅಸಾಧ್ಯವಾದ ಸ್ಥಿತಿ ನಿರ್ಮಾಣವಾಗಿದೆ. ಅಪಘಾತ ಅತ್ಯಂತ ಭೀಕರವಾಗಿತ್ತು. ಇಂತಹ ಘಟನೆ ನಾವು ನೋಡಿಲ್ಲ ಎಂದು ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ.

ಪ್ರಯಾಣಿಕರಲ್ಲಿ 2-3 ಕುಟುಂಬಕ್ಕೆ ಸೇರಿದ ಹಲವರಿದ್ದರೆಂದು ತಿಳಿದುಬಂದಿದ್ದು, ಪಾರಾಗಿರುವವರರು ತಮ್ಮವರು ಬೆಂಕಿಯಲ್ಲಿ ಉರಿಯುತ್ತಿರುವುದನ್ನು ನೋಡಲಾರದೆ ಕಣ್ಣೀರಿಡುತ್ತಿದ್ದಾರೆ. ನಾಲ್ಕು ವರ್ಷದ ಮಗುವಿನ ಹುಟ್ಟುಹಬ್ಬದ ಪ್ರಯುಕ್ತ ಇವರೆಲ್ಲಾ ಗೋವಾಕ್ಕೆ ಪ್ರವಾಸ ತೆರಳಿದ್ದರು ಎಂದು ತಿಳಿದುಬಂದಿದೆ.

7 People Killed in Kalaburagi bus accident

AR_02_5472 ನಂಬರಿನ ಈ ಬಸ್‌ ಅರುಣಾಚಲ್ ಪಾಸಿಂಗ್ ಇರುವ ಬಸ್‌ ಆಗಿದ್ದು, 2023 ಅಕ್ಟೋಬರ್‌ವರೆಗೆ ಫಿಟ್ನೆಸ್‌ ಸರ್ಟಿಫಿಕೆಸ್‌ ಹೊಂದಿದೆ, 2022 ಅಕ್ಟೋಬರ್‌ವರೆಗೆ ಇನ್ಸುರೆನ್ಸ್ ಭದ್ರತೆಯಿದೆ. 30.9.2023ರವರೆಗೆ ಆಲ್‌ ಇಂಡಿಯಾ ಪರ್ಮಿಟ್‌ ಹೊಂದಿದೆ ಎಂದು ತೆಲಂಗಾಣ ಸಚಿವರಿಂದ ಕಲಬುರಗಿ ಪೊಲೀಸರು ಮಾಹಿತಿ ಪಡೆದಿದ್ದಾರೆ.

ನಿದ್ರೆಯಲ್ಲಿದ್ದರಿಂದ ಬೆಂಕಿಗಾಹುತಿ:
ಅಪಘಾತ ಸಂಭವಿಸಿ ಬೆಂಕಿ ಹೊತ್ತಿಕೊಂಡ ವೇಳೆ ಒಳಗಿದ್ದ ಪ್ರಯಾಣಿಕರು ನಿದ್ರೆಯ ಮಂಪರಿನಲ್ಲಿದ್ದ ಕಾರಣ ಹೊರ ಬರಲಾಗದೆ ಬೆಂಕಿಗೆ ಆಹುತಿಯಾಗಿದ್ದಾರೆ. ಕೆಲವರು ಹರಸಾಹಸ ಮಾಡಿ ಗಾಜನ್ನು ಒಡೆದು ಹೊರ ಬಂದು ಪ್ರಾಣ ಉಳಿಸಿಕೊಂಡಿದ್ದಾರೆ. ರಕ್ಷಣಾ ಕಾರ್ಯ ಮುಂದುವರಿದಿದ್ದು ಗಾಯಗೊಂಡವರನ್ನು ಆಸ್ಪತ್ರೆಗೆ ಸಾಗಿಸಲಾಗಿದೆ.

7 People Killed in Kalaburagi bus accident

ಬಸ್ಸಿನಲ್ಲಿದ್ದ 35 ಪ್ರಯಾಣಿಕರಿದ್ದರು. ಅವರಲ್ಲಿ ಏಳು ಮಂದಿ ಸಾವನ್ನಪ್ಪಿರುವ ಶಂಕೆ ಇದೆ. ಗಾಯಾಳುಗಳ ಸಂಖ್ಯೆ ಹೆಚ್ಚಿರುವುದರಿಂದ ಸಾವಿನ ಸಂಖ್ಯೆ ಇನ್ನೂ ಏರುವ ಸಾಧ್ಯತೆ ಇದೆ. ಬಸ್ಸಿನಲ್ಲಿ ಸಿಲುಕಿದವರ ಸಂಖ್ಯೆ ಇನ್ನೂ ಹೆಚ್ಚಾಗಬಹುದು ಎಂಬ ಹೇಳಲಾಗುತ್ತಿದೆ. ಗೂಡ್ಸ್‌ ವಾಹನದ ಸವಾರನ ಎರಡು ಕಾಲುಗಳು ಕಟ್‌ ಆಗಿವೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ . ಘಟನಾ ಸ್ಥಳಕ್ಕೆ ಎಸ್‌ಪಿ ಇಶಾ ಪಂತ್, ಹೆಚ್ಚುವರಿ ಎಸ್‌ಪಿ ಪ್ರಸನ್ನ ದೇಸಾಯಿ ದೌಡಾಯಿಸಿ ರಕ್ಷಣಾ ಕಾರ್ಯದ ಉಸ್ತುವಾರಿ ನೋಡಿಕೊಳ್ಳುತ್ತಿದ್ದಾರೆ‌. ಕಮಲಾಪುರ ಪೊಲೀಸರು ಸ್ಥಳದಲ್ಲಿದ್ದು, ಸ್ಥಳೀಯರು ರಕ್ಷಣಾ ಕೆಲಸಕ್ಕೆ ಕೈಜೋಡಿಸಿದ್ದಾರೆ‌.

(ಒನ್ಇಂಡಿಯಾ ಸುದ್ದಿ)

Recommended Video

ದಕ್ಷಿಣ ಆಫ್ರಿಕಾ ವಿರುದ್ಧ ಭಾರತದ ಓಪನರ್ ಸ್ಥಾನ ಯಾರಿಗೆ? ದ್ರಾವಿಡ್ & ರಾಹುಲ್ ಗೆ ಟೆನ್ಶನ್ | OneIndia Kannada

English summary
Seven people were killed following an Bus accident in Kamalapura, Kalaburagi district. The bus was carrying 35 passengers from Goa to Hyderabad.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X