ಕಲಬುರಗಿ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಗುಲ್ಬರ್ಗ ಲೋಕಸಭಾ ಕ್ಷೇತ್ರದಲ್ಲಿ ಶೇ 60.88ರಷ್ಟು ಮತದಾನ

|
Google Oneindia Kannada News

ಕಲಬುರಗಿ, ಏಪ್ರಿಲ್ 24 : ಗುಲ್ಬರ್ಗ (ಮೀಸಲು) ಲೋಕಸಭಾ ಕ್ಷೇತ್ರಕ್ಕೆ ಏಪ್ರಿಲ್ 23ರಂದು ಮತದಾನ ನಡೆಯಿತು. ಚುನಾವಣೆಯಲ್ಲಿ ಒಟ್ಟು 11,84,241 ಜನರು ಮತದಾನ ಮಾಡಿದ್ದು, ಶೇ 60.88ರಷ್ಟು ಮತದಾನವಾಗಿದೆ.

ಲೋಕಸಭೆ ಚುನಾವಣೆ ವಿಶೇಷ ಪುಟ

ಜಿಲ್ಲಾ ಚುನಾವಣಾಧಿಕಾರಿ ಆರ್.ವೆಂಕಟೇಶ ಕುಮಾರ್ ಅವರು ಈ ಕುರಿತು ಮಾಹಿತಿ ನೀಡಿದ್ದಾರೆ. 'ಚುನಾವಣೆಯಲ್ಲಿ 6,09,411 ಪುರುಷರು, 5,74,824 ಮಹಿಳೆಯರು ಹಾಗೂ 6 ಇತರೆ ಮತದಾರರು ಸೇರಿದಂತೆ ಒಟ್ಟು 11,84,241 ಮತದಾರರು ಮತ ಚಲಾಯಿಸಿದ್ದಾರೆ' ಎಂದರು.

ವಿರೋಧಿಗಳ ಹುನ್ನಾರ ಯಶಸ್ವಿ ಆಗೋದಿಲ್ಲ:ಮಲ್ಲಿಕಾರ್ಜುನ ಖರ್ಗೆವಿರೋಧಿಗಳ ಹುನ್ನಾರ ಯಶಸ್ವಿ ಆಗೋದಿಲ್ಲ:ಮಲ್ಲಿಕಾರ್ಜುನ ಖರ್ಗೆ

ಗುಲ್ಬರ್ಗ ಲೋಕಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿ ಅಫಜಲಪುರ, ಜೇವರ್ಗಿ, ಗುರುಮಿಠಕಲ್, ಚಿತ್ತಾಪುರ, ಸೇಡಂ, ಗುಲ್ಬರ್ಗ ಗ್ರಾಮೀಣ, ಗುಲ್ಬರ್ಗ ದಕ್ಷಿಣ ಹಾಗೂ ಗುಲ್ಬರ್ಗ ಉತ್ತರ ವಿಧಾನಸಭಾ ಕ್ಷೇತ್ರಗಳಿವೆ.

ಚಿಂಚೋಳಿ, ಕುಂದಗೋಳ ಉಪ ಚುನಾವಣೆಯತ್ತ ಎಲ್ಲರ ಚಿತ್ತಚಿಂಚೋಳಿ, ಕುಂದಗೋಳ ಉಪ ಚುನಾವಣೆಯತ್ತ ಎಲ್ಲರ ಚಿತ್ತ

60 percent polling in Gulbarga lok sabha seat

ಬಿಜೆಪಿಯಿಂದ ಡಾ.ಉಮೇಶ್ ಜಾಧವ್, ಕಾಂಗ್ರೆಸ್-ಜೆಡಿಎಸ್ ಅಭ್ಯರ್ಥಿಯಾಗಿ ಮಲ್ಲಿಕಾರ್ಜುನ ಖರ್ಗೆ ಕಣದಲ್ಲಿದ್ದಾರೆ. ಮೇ 23ರಂದು ಚುನಾವಣಾ ಫಲಿತಾಂಶವನ್ನು ಪ್ರಕಟಿಸಲಾಗುತ್ತದೆ.

ಚಿಂಚೋಳಿ ಉಪ ಚುನಾವಣೆ : ಬಿಜೆಪಿಯಿಂದ ಅಚ್ಚರಿಯ ಅಭ್ಯರ್ಥಿಚಿಂಚೋಳಿ ಉಪ ಚುನಾವಣೆ : ಬಿಜೆಪಿಯಿಂದ ಅಚ್ಚರಿಯ ಅಭ್ಯರ್ಥಿ

ಅಫಜಲಪುರ ವಿಧಾನಸಭಾ ಕ್ಷೇತ್ರದಲ್ಲಿ ಒಟ್ಟಾರೆ ಶೇ. 62.54 ರಷ್ಟು, ಜೇವರ್ಗಿ ಕ್ಷೇತ್ರದಲ್ಲಿ ಶೇ. 61.87 ರಷ್ಟು, ಗುರುಮಿಠಕಲ್ ಕ್ಷೇತ್ರದಲ್ಲಿ ಶೇ.60.26 ರಷ್ಟು ಮತದಾನವಾಗಿದೆ.

ಚಿತ್ತಾಪುರ (ಎಸ್‍ಸಿ) ಕ್ಷೇತ್ರದಲ್ಲಿ ಶೇ. 61.15 ರಷ್ಟು, ಸೇಡಂ ಕ್ಷೇತ್ರದಲ್ಲಿ ಶೇ. 68.33 ರಷ್ಟು, ಗುಲ್ಬರ್ಗ ಬರ್ಗಾ ಗ್ರಾಮೀಣ (ಎಸ್‍ಸಿ) ಕ್ಷೇತ್ರದಲ್ಲಿ ಒಟ್ಟಾರೆ ಶೇ. 60.82 ರಷ್ಟು ಮತದಾನವಾಗಿದೆ. ಗುಲ್ಬರ್ಗ ದಕ್ಷಿಣ ಕ್ಷೇತ್ರದಲ್ಲಿ ಶೇ. 57.04 ರಷ್ಟು, ಗುಲ್ಬರ್ಗ ಉತ್ತರದಲ್ಲಿ ಶೇ. 56.89 ರಷ್ಟು ಮತದಾನವಾಗಿದೆ.

English summary
60.88 percent polling in Gulbarga lok sabha seat. Elections held on April 23, 2019. Election counting on May 23.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X