ಕಲಬುರಗಿ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಗುಲ್ಬರ್ಗ ಕ್ಷೇತ್ರದಲ್ಲಿ ಜಾಧವ್ ಹೆಸರಿನ ನಾಲ್ವರು ಚುನಾವಣಾ ಕಣದಲ್ಲಿ!

|
Google Oneindia Kannada News

ಕಲಬುರಗಿ, ಏಪ್ರಿಲ್ 7 : ಮಂಡ್ಯದಲ್ಲಿ ಸುಮಲತಾ ಹೆಸರಿನ ಮೂವರು ಲೋಕಸಭಾ ಚುನಾವಣೆ ಕಣದಲ್ಲಿರುವುದು ಸುದ್ದಿಯಾಗಿತ್ತು. ಈಗ ಗುಲ್ಬರ್ಗ ಕ್ಷೇತ್ರದಲ್ಲಿ ಜಾಧವ್ ಹೆಸರಿನ ನಾಲ್ವರು ಕಣದಲ್ಲಿದ್ದಾರೆ. ಏಪ್ರಿಲ್ 23ರಂದು ಚುನಾವಣೆ ನಡೆಯಲಿದೆ.

ಗುಲ್ಬರ್ಗ (ಕಲಬುರಗಿ) ಲೋಕಸಭಾ ಕ್ಷೇತ್ರದ ಚುನಾವಣೆ ಹಲವು ಕಾರಣಗಳಿಂದಾಗಿ ಗಮನ ಸೆಳೆದಿದೆ. ಕಾಂಗ್ರೆಸ್ ಹಿರಿಯ ನಾಯಕ ಮಲ್ಲಿಕಾರ್ಜುನ ಖರ್ಗೆ ಅವರು ಪ್ರತಿನಿಧಿಸುವ ಕ್ಷೇತವಿದು. ಖರ್ಗೆ ಸೋಲಿಸಲು ಬಿಜೆಪಿ ಹಲವು ತಂತ್ರಗಳನ್ನು ಮಾಡುತ್ತಿದೆ.

ವಯನಾಡಿನಲ್ಲಿ ರಾಹುಲ್ vs ರಾಹುಲ್ vs ರಾಹುಲ್ ಗಾಂಧಿವಯನಾಡಿನಲ್ಲಿ ರಾಹುಲ್ vs ರಾಹುಲ್ vs ರಾಹುಲ್ ಗಾಂಧಿ

ಬಿಜೆಪಿಯಿಂದ ಡಾ.ಉಮೇಶ್ ಜಾಧವ್ ಕಣದಲ್ಲಿದ್ದಾರೆ. ಚಿಂಚೋಳಿ ಕ್ಷೇತ್ರದ ಕಾಂಗ್ರೆಸ್ ಶಾಸಕರಾಗಿದ್ದ ಡಾ.ಉಮೇಶ್ ಜಾಧವ್ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿ ಬಿಜೆಪಿ ಸೇರಿ, ಮಲ್ಲಿಕಾರ್ಜುನ ಖರ್ಗೆ ಅವರ ಎದುರಾಳಿಯಾಗಿದ್ದಾರೆ.

ಮಂಡ್ಯದಲ್ಲಿ ದಳಪತಿಗಳಿಂದ ಸುಮಲತಾರನ್ನು ಮಣಿಸಲು ತಂತ್ರ..!ಮಂಡ್ಯದಲ್ಲಿ ದಳಪತಿಗಳಿಂದ ಸುಮಲತಾರನ್ನು ಮಣಿಸಲು ತಂತ್ರ..!

ಗುಲ್ಬರ್ಗ ಕ್ಷೇತ್ರದ ಚುನಾವಣೆಗೆ ನಾಮಪತ್ರ ಸಲ್ಲಿಕೆ ಕಾರ್ಯ ಈಗಾಗಲೇ ಮುಕ್ತಾಯಗೊಂಡಿದೆ. ಜಾಧವ್ ಹೆಸರಿನ ನಾಲ್ವರು ಕಣದಲ್ಲಿದ್ದಾರೆ. ಸೋಮವಾರ ನಾಮಪತ್ರ ವಾಪಸ್ ಪಡೆಯಲು ಕೊನೆಯ ದಿನವಾಗಿದ್ದು, ಜೆಡಿಎಸ್‌ನಿಂದ ವಿಠಲ ಜಾಧವ್ ಎನ್ನುವವರು ನಾಮಪತ್ರ ಸಲ್ಲಿಸಿರುವುದು ಕುತೂಹಲಕ್ಕೆ ಕಾರಣವಾಗಿದೆ. ಏಪ್ರಿಲ್ 23ರಂದು ಮತದಾನ ನಡೆಯಲಿದೆ......

ಗುಲ್ಬರ್ಗ ಕ್ಷೇತ್ರದ ಚುನಾವಣಾ ಪುಟ

ಗುಲ್ಬರ್ಗ ಕ್ಷೇತ್ರದ ಚುನಾವಣಾ ಕಣ

ಗುಲ್ಬರ್ಗ ಕ್ಷೇತ್ರದ ಚುನಾವಣಾ ಕಣ

ಗುಲ್ಬರ್ಗ ಕ್ಷೇತ್ರದ ಲೋಕಸಭಾ ಚುನಾವಣೆಯಲ್ಲಿ ಜಾಧವ್ ಹೆಸರಿನ ನಾಲ್ವರು ಕಣದಲ್ಲಿದ್ದಾರೆ.
* ಡಾ.ಉಮೇಶ್ ಜಾಧವ್ - ಬಿಜೆಪಿ
* ಶಂಕರ ಜಾಧವ್ - ಭಾರತೀಯ ಪೀಪಲ್ಸ್ ಪಾರ್ಟಿ
* ವಿಠಲ ಜಾಧವ್ - ಜೆಡಿಎಸ್
* ವಿಜಯ ಜಾಧವ್ - ಸರ್ವ ಜನತಾ ಪಕ್ಷ

ಬಂಜಾರಾ ಸಮುದಾಯದ ಮತ

ಬಂಜಾರಾ ಸಮುದಾಯದ ಮತ

ಗುಲ್ಬರ್ಗ ಕ್ಷೇತ್ರದಲ್ಲಿ ಬಂಜಾರಾ ಸಮುದಾಯದ ಮತಗಳು ನಿರ್ಣಾಯಕವಾಗಿವೆ. ಆದ್ದರಿಂದ, ಮತಗಳನ್ನು ವಿಭಜನೆ ಮಾಡುವ ಉದ್ದೇಶದಿಂದ ಈ ರೀತಿ ಅಭ್ಯರ್ಥಿಗಳು ನಾಮಪತ್ರ ಸಲ್ಲಿಸಿರಬಹುದು ಎಂದು ಅಂದಾಜಿಸಲಾಗಿದೆ.

ಭಾರತೀಯ ಪೀಪಲ್ಸ್ ಪಾರ್ಟಿಯ ಶಂಕರ ಜಾಧವ್ ಅವರು 2009, 2014ರ ಚುನಾವಣೆಯಲ್ಲಿಯೂ ಸ್ಪರ್ಧಿಸಿ ಸೋಲು ಕಂಡಿದ್ದರು. ವಿಜಯ ಜಾಧವ್ ಮೊದಲ ಬಾರಿಗೆ ಕಣಕ್ಕಿಳಿದಿದ್ದಾರೆ.

ಕಾಂಗ್ರೆಸ್ ಭದ್ರಕೋಟೆ

ಕಾಂಗ್ರೆಸ್ ಭದ್ರಕೋಟೆ

ಲೋಕಸಭಾ ಕಾಂಗ್ರೆಸ್ ನಾಯಕ ಮಲ್ಲಿಕಾರ್ಜುನ ಖರ್ಗೆ ಅವರ ಕ್ಷೇತ್ರ ಗುಲ್ಬರ್ಗ. ಕಾಂಗ್ರೆಸ್ ಭದ್ರಕೋಟೆಯಾಗಿರುವ ಕ್ಷೇತ್ರದಲ್ಲಿ ಖರ್ಗೆ ಎರಡು ಬಾರಿ ಜಯಗಳಿಸಿದ್ದು, 3ನೇ ಬಾರಿಗೆ ಅದೃಷ್ಟ ಪರೀಕ್ಷೆಗೆ ಇಳಿದಿದ್ದಾರೆ. ಈ ಚುನಾವಣೆಯಲ್ಲಿ ಖರ್ಗೆ ಸೋಲಿಸಬೇಕು ಎಂದು ಬಿಜೆಪಿ ತಂತ್ರ ರೂಪಿಸಿದೆ. ಡಾ.ಉಮೇಶ್ ಜಾಧವ್ ಬಿಜೆಪಿ ಅಭ್ಯರ್ಥಿ.

ನರೇಂದ್ರ ಮೋದಿ ಸಮಾವೇಶ

ನರೇಂದ್ರ ಮೋದಿ ಸಮಾವೇಶ

ಚಿಂಚೋಳಿ ಕ್ಷೇತ್ರದ ಕಾಂಗ್ರೆಸ್ ಶಾಸಕರಾಗಿದ್ದ ಡಾ.ಉಮೇಶ್ ಜಾಧವ್ ಅವರು ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿ ಬಿಜೆಪಿ ಸೇರಿ, ಮಲ್ಲಿಕಾರ್ಜುನ ಖರ್ಗೆ ಅವರ ಎದುರಾಳಿಯಾಗಿದ್ದಾರೆ. ನರೇಂದ್ರ ಮೋದಿ ಅವರು ಕಲಬುರಗಿಯಲ್ಲಿ ಸಮಾವೇಶ ಉದ್ದೇಶಿಸಿ ಮಾತನಾಡಿ, ಈಗಾಗಲೇ ಪ್ರಚಾರ ಮಾಡಿದ್ದಾರೆ.

English summary
Umesh Jadhav BJP candidate for Gulbarga lok sabha seat. Shankar Jadhav, Vittal Jadhav, Vijay Jadav also in the election fray. Mallikarjun Kharge Congress and JD(S) candidate. Election will be held on April 23.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X