ಕಲಬುರಗಿ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಮಲ್ಲಿಕಾರ್ಜುನ ಖರ್ಗೆ ಸೋಲಿಸಲು ಒಂದಾದ ಮೂವರು ನಾಯಕರು!

|
Google Oneindia Kannada News

Recommended Video

ಮಲ್ಲಿಕಾರ್ಜುನ ಖರ್ಗೆನ ಸೋಲಿಸಲು ಒಂದಾದ ಮೂವರು ಬಿಜೆಪಿ ನಾಯಕರು | Oneindia Kannada

ಕಲಬುರಗಿ, ಫೆಬ್ರವರಿ 19 : ಹಿರಿಯ ಕಾಂಗ್ರೆಸ್ ನಾಯಕ ಮಲ್ಲಿಕಾರ್ಜುನ ಖರ್ಗೆ ಅವರನ್ನು ಸೋಲಿಸಲು ಬಿಜೆಪಿಯ ಮೂವರು ನಾಯಕರು ಒಂದಾಗಿದ್ದಾರೆ. ಈ ಬಾರಿ ಗುಲ್ಬರ್ಗಾ ಕ್ಷೇತ್ರದ ಚುನಾವಣೆ ಹಲವು ಕಾರಣಗಳಿಗೆ ಕುತೂಹಲ ಮೂಡಿಸಿದೆ.

ಗುಲ್ಬರ್ಗಾ (ಕಲಬುರಗಿ) ಕ್ಷೇತ್ರದಿಂದ ಎರಡು ಬಾರಿ ಗೆಲುವು ಸಾಧಿಸಿರುವ ಮಲ್ಲಿಕಾರ್ಜುನ ಖರ್ಗೆ ಅವರು ಈ ಬಾರಿಯ ಚುನಾವಣೆಯಲ್ಲಿ ಗೆದ್ದು ಹ್ಯಾಟ್ರಿಕ್ ಬಾರಿಸುವ ಉತ್ಸಾಹದಲ್ಲಿದ್ದಾರೆ. ಬಿಜೆಪಿ ನಾಯಕರು ಅವರನ್ನು ಸೋಲಿಸಿ ಕಾಂಗ್ರೆಸ್‌ಗೆ ರಾಷ್ಟ್ರ ಮಟ್ಟದಲ್ಲಿ ಮುಜುಗರ ಉಂಟು ಮಾಡಬೇಕು ಎಂದು ತಂತ್ರ ರೂಪಿಸುತ್ತಿದ್ದಾರೆ.

ಖರ್ಗೆ ಸೋಲಿಸಲು ಕಾಂಗ್ರೆಸ್ ಶಾಸಕನನ್ನು ಕಣಕ್ಕಿಳಿಸಲಿದೆ ಬಿಜೆಪಿ?ಖರ್ಗೆ ಸೋಲಿಸಲು ಕಾಂಗ್ರೆಸ್ ಶಾಸಕನನ್ನು ಕಣಕ್ಕಿಳಿಸಲಿದೆ ಬಿಜೆಪಿ?

ಎರಡು ಬಾರಿ ಲೋಕಸಭೆ, 9 ಬಾರಿ ವಿಧಾನಸಭೆ ಚುನಾವಣೆಯಲ್ಲಿ ಜಯಗಳಿಸಿರುವ ಮಲ್ಲಿಕಾರ್ಜುನ ಖರ್ಗೆ ಅವರು ಸೋಲಿಲ್ಲದ ಸರದಾರ ಎಂದು ಖ್ಯಾತಿ ಪಡೆದಿದ್ದಾರೆ. ಈ ಬಾರಿಯ ಚುನಾವಣೆಯಲ್ಲಿ ಅವರನ್ನು ಕಟ್ಟಿ ಹಾಕಬೇಕು ಎಂಬುದು ಬಿಜೆಪಿಯ ಗುರಿ.

ಇಬ್ಬರು ಕಾಂಗ್ರೆಸ್ ಹಿರಿಯ ನಾಯಕರನ್ನು ಸೋಲಿಸಲು ಬಿಜೆಪಿ ಪಣ!ಇಬ್ಬರು ಕಾಂಗ್ರೆಸ್ ಹಿರಿಯ ನಾಯಕರನ್ನು ಸೋಲಿಸಲು ಬಿಜೆಪಿ ಪಣ!

ಮಲ್ಲಿಕಾರ್ಜುನ ಖರ್ಗೆ ಅವರ ವಿರುದ್ಧ ಬಿಜೆಪಿ ಅಭ್ಯರ್ಥಿ ಯಾರು? ಎಂಬುದು ಇನ್ನೂ ಖಚಿತವಾಗಿಲ್ಲ. ಚಿಂಚೋಳಿ ಕ್ಷೇತ್ರದ ಕಾಂಗ್ರೆಸ್ ಶಾಸಕ ಡಾ.ಉಮೇಶ್ ಜಾಧವ್, ಕರ್ನಾಟಕ ಸರ್ಕಾರದ ನಿವೃತ್ತ ಮುಖ್ಯ ಕಾರ್ಯದರ್ಶಿ ಕೆ.ರತ್ನಪ್ರಭಾ ಅವರ ಹೆಸರುಗಳು ಕೇಳಿಬರುತ್ತಿವೆ...

ಖರ್ಗೆ ವಿರುದ್ಧ ಸ್ಪರ್ಧೆ : ಡಾ.ಉಮೇಶ್ ಜಾಧವ್ ಹೇಳಿದ್ದೇನು?ಖರ್ಗೆ ವಿರುದ್ಧ ಸ್ಪರ್ಧೆ : ಡಾ.ಉಮೇಶ್ ಜಾಧವ್ ಹೇಳಿದ್ದೇನು?

ಡಾ.ಉಮೇಶ್ ಜಾಧವ್

ಡಾ.ಉಮೇಶ್ ಜಾಧವ್

ಚಿಂಚೋಳಿ ಕ್ಷೇತ್ರದ ಕಾಂಗ್ರೆಸ್ ಶಾಸಕ ಡಾ.ಉಮೇಶ್ ಜಾಧವ್ ಅವರು ಬಿಜೆಪಿ ಸೇರುವ ಸಾಧ್ಯತೆ ಇದೆ. ಈಗಾಗಲೇ ಅವರು ಕಾಂಗ್ರೆಸ್ ಪಕ್ಷದ ಚಟುವಟಿಕೆಯಿಂದ ದೂರವಾಗಿದ್ದಾರೆ. ಮಾರ್ಚ್ 1ರಂದು ಕಲಬುರಗಿಯಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರ ಸಮಾವೇಶವಿದ್ದು, ಅಂದು ಅಧಿಕೃತವಾಗಿ ಅವರು ಪಕ್ಷ ಸೇರುವ ಸಾಧ್ಯತೆ ಇದೆ.

ಬಾಬೂರಾವ್ ಚಿಂಚನಸೂರು

ಬಾಬೂರಾವ್ ಚಿಂಚನಸೂರು

2013ರ ಚುನಾವಣೆಯಲ್ಲಿ ಕಾಂಗ್ರೆಸ್‌ ಪಕ್ಷದಿಂದ ಗೆದ್ದು ಸಚಿವರೂ ಆಗಿದ್ದ ಬಾಬೂರಾವ್ ಚಿಂಚನಸೂರು ಅವರು 2018ರ ಚುನಾವಣೆ ಸೋಲಿನ ಬಳಿಕ ಬಿಜೆಪಿ ಸೇರಿದ್ದಾರೆ. ಕಾಂಗ್ರೆಸ್‌ನಲ್ಲಿ ಯಾವತ್ತೂ ಕೋಲಿ ಮತ್ತು ಗಂಗಾಮತ ಹಾಗೂ ಬೆಸ್ತ ಜನಾಂಗವನ್ನು ಗುರುತಿಸಿಲ್ಲ ಎಂದು ಆರೋಪ ಮಾಡಿದ್ದ ಅವರು ಬಿಜೆಪಿ ಸೇರಿದ್ದರು.

ಮಾಲೀಕಯ್ಯ ಗುತ್ತೇದಾರ್

ಮಾಲೀಕಯ್ಯ ಗುತ್ತೇದಾರ್

ಹೈದರಾಬಾದ್ ಕರ್ನಾಟಕ ಭಾಗದ ಪ್ರಭಾವಿ ನಾಯಕ ಮತ್ತು ಅಫಜಲಪುರ ಕ್ಷೇತ್ರದ ಮಾಜಿ ಶಾಸಕ ಮಾಲೀಕಯ್ಯ ಗುತ್ತೇದಾರ್ ಅವರು ಬಿಜೆಪಿ ಸೇರಿದ್ದಾರೆ. ಮಲ್ಲಿಕಾರ್ಜುನ ಖರ್ಗೆ ಅವರ ನಡೆಯಿಂದ ಬೇಸತ್ತು ಅವರು ಬಿಜೆಪಿ ಸೇರಿದ್ದಾರೆ.

ಪುತ್ರ ವ್ಯಾಮೋಹದಿಂದ ಸೋಲು

ಪುತ್ರ ವ್ಯಾಮೋಹದಿಂದ ಸೋಲು

'ಮಲ್ಲಿಕಾರ್ಜುನ ಖರ್ಗೆ ಅವರ ಪುತ್ರ ವ್ಯಾಮೋಹವೇ ಅವರ ಸೋಲಿಗೆ ಕಾರಣವಾಗಲಿದೆ. ಖರ್ಗೆ ಸೋಲಿನಲ್ಲಿ ಪ್ರಿಯಾಂಕ್ ಖರ್ಗೆ ಕಾಣಿಕೆ ದೊಡ್ಡದು. ಸೋಲಿಲ್ಲದ ಸರದಾರ ಈ ಬಾರಿ ಸೋಲುವುದು ಖಚಿತ' ಎಂದು ಮಾಲೀಕಯ್ಯ ಗುತ್ತೇದಾರ್ ಹೇಳಿದ್ದಾರೆ.

ಜೆಡಿಎಸ್ ಬೆಂಬಲ

ಜೆಡಿಎಸ್ ಬೆಂಬಲ

ಕರ್ನಾಟಕದಲ್ಲಿ ಕಾಂಗ್ರೆಸ್-ಜೆಡಿಎಸ್ ಒಟ್ಟಾಗಿ ಲೋಕಸಭಾ ಚನಾವಣೆಯನ್ನು ಎದುರಿಸಲಿವೆ. ಗುಲ್ಪರ್ಗಾ ಕ್ಷೇತ್ರದಲ್ಲಿ ಬಿಜೆಪಿ ಯಾವುದೇ ತಂತ್ರಗಳನ್ನು ಮಾಡಿದರೂ ಜೆಡಿಎಸ್‌ನ ಬೆಂಬಲ ಮಲ್ಲಿಕಾರ್ಜುನ ಖರ್ಗೆ ಅವರಿಗೆ ಸಿಗಲಿದೆ. ಆದ್ದರಿಂದ, ಅವರನ್ನು ಸೋಲಿಸುವುದು ಅಷ್ಟು ಸುಲಭದ ಮಾತಲ್ಲ.

English summary
3 BJP leaders Dr.Umesh Jadhav, Babu Rao Chinchansur and Malikayya Guttedar join hands to defeat Mallikarjun Kharge in 2019 Lok Sabha Elections. Dr.Umesh Jadhav in Congress he may join BJP soon.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X