• search
  • Live TV
ಕಲಬುರಗಿ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ವಿಡಿಯೋ: ಗಂಡೋರಿ‌ ನಾಲಾ ಆಣೆಕಟ್ಟಿನಿಂದ 20000 ಕ್ಯುಸೆಕ್ ನೀರು

|

ಕಲಬುರಗಿ, ಸೆ.17: ಚಿಂಚೋಳಿ ತಾಲೂಕಿನಲ್ಲಿ ವ್ಯಾಪಕ ಮಳೆಯಾಗುತ್ತಿರುವ ಪರಿಣಾಮ ಜಲಾಶಯಕ್ಕೆ ನೀರಿನ ಒಳಹರಿವು ಹೆಚ್ಚಿದ್ದು, ಗುರುವಾರ ದಂದು ಮುಂಜಾಗ್ರತಾ ಕ್ರಮವಾಗಿ ಗಂಡೋರಿ‌ ನಾಲಾ ಆಣೆಕಟ್ಟಿನ ಕೋಡಿ ಮುಖಾಂತರ 20000 ಕ್ಯುಸೆಕ್ ನೀರು ನಾಲಾಗೆ ಹರಿಸಲಾಗಿದೆ ಎಂದು ಕೆ.ಎನ್.ಎನ್.ಎಲ್. ಕಲಬುರಗಿ ವಿಭಾಗ-1ರ ಕಾರ್ಯಪಾಲಕ ಅಭಿಯಂತ ಸೂರ್ಯಕಾಂತ ಮಾಲೆ ತಿಳಿಸಿದ್ದಾರೆ.

ಆದರಿಂದ ನಾಲಾ ಕೆಳಪಾತ್ರದಲ್ಲಿ ಬರುವ ಗ್ರಾಮಗಳ ಸಾರ್ವಜನಿಕರು ನಾಲಾ ದಡಕ್ಕೆ ಹೋಗದಂತೆ ಮತ್ತು ಜಾನುವಾರುಗಳನ್ನು ಬಿಡದಂತೆ ಎಚ್ಚರಿಕೆ ವಹಿಸಬೇಕು. ನಾಲಾದಲ್ಲಿ ಈಜಬಾರದು ಎಂದು ಪ್ರದೇಶದ ರೈತರಲ್ಲಿ ಅವರು ಮನವಿ ಮಾಡಿಕೊಂಡಿದ್ದಾರೆ.

ಕಲಬುರಗಿಯಲ್ಲಿ ಭಾರೀ ಮಳೆ; ಕಾಗಿಣಾ ಸೇತುವೆ ಸಂಪೂರ್ಣ ಮುಳುಗಡೆ

ಮುಂದಿನ ದಿನದಲ್ಲಿ ಜಲಾನಯನ ಪ್ರದೇಶದಲ್ಲಿ ಹೆಚ್ಚಿನ ಮಳೆ ಬರುವ ಸಾಧ್ಯತೆ ಇದ್ದು, ಆಗ ನೀರಿನ ಒಳಹರಿವು ಇನ್ನು ಹೆಚ್ಚಲಿದೆ. ಹೀಗೆ ಹೆಚ್ಚಿಗೆ ಬಂದ ನೀರನ್ನು ನಾಲಾಗೆ ಬಿಡಲಾಗುತ್ತದೆ. ಸಣ್ಣ ನೀರಾವರಿ ಸೇರಿದಂತೆ ವಿವಿಧ ಇಲಾಖೆಗಳ ಅಧಿಕಾರಿಗಳು ನಾಲಾ ಸಮೀಪದ ಸರ್ಕಾರದ ಆಸ್ತಿಗಳನ್ನು ಸುರಕ್ಷಿತವಾಗಿ ಇಟ್ಟುಕೊಳ್ಳುವಂತೆ ಕೋರಿದ್ದಾರೆ.

ಕಲಬುರಗಿ, ಬೀದರ್ ಜಿಲ್ಲೆ ಮಳೆ ಅಬ್ಬರ, ಜಲಾಶಯ ವರದಿ

ನದಿ ಅಕ್ಕಪಕ್ಕದ ರೈತರು/ಸಾರ್ವಜನಿಕರು ತಮ್ಮ ಆಸ್ತಿ ಪಾಸ್ತಿಗಳನ್ನು ಹಾಗೂ ನದಿಯ ಪಾತ್ರದಲ್ಲಿರುವ ಸಣ್ಣ ನೀರಾವರಿ ಮತ್ತು ಇನ್ನಿತರ ಯಾವುದೆ ಇಲಾಖೆಗಳಿಗೆ ಸಂಬಂಧಪಟ್ಟ ಆಸ್ತಿಗಳಿದ್ದಲ್ಲಿ ಮುಂಜಾಗ್ರತೆಯಾಗಿ ಸುರಕ್ಷಿತವಾಗಿಟ್ಟುಕೊಳ್ಳಬೇಕೆಂದು ತಿಳಿಸಿದ್ದಾರೆ.(ಮಾಹಿತಿ ಕೃಪೆ: ವಾರ್ತಾ ಇಲಾಖೆ)

English summary
20000 Cusecs of Water released from Gandori Canal, Chincholi Taluk today. Kalaburagi District is receiving heavy rainfall this month.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X