ಕಲಬುರಗಿ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಕಲಬುರಗಿ; ಸನ್ನಡತೆ ಆಧಾರದ ಮೇಲೆ 18 ಬಂದಿಗಳು ಬಿಡುಗಡೆ

|
Google Oneindia Kannada News

ಕಲಬುರಗಿ, ಮಾರ್ಚ್ 12; ಕಲಬುರಗಿ ಕಾರಾಗೃಹದಲ್ಲಿ 14 ವರ್ಷಗಳ ಕಾಲ ಶಿಕ್ಷೆ ಅನುಭವಿಸಿದ ಒಟ್ಟು 18 ಜನ ಬಂದಿಗಳನ್ನು ಸನ್ನಡತೆ ಆಧಾರದ ಮೇಲೆ ಬಿಡುಗಡೆ ಮಾಡಲಾಗಿದೆ. ಕರ್ನಾಟಕ ಸರ್ಕಾರ ಒಟ್ಟು 125 ಜೀವಾವಧಿ ಶಿಕ್ಷಾ ಬಂಧಿಗಳನ್ನು ಸನ್ನಡತೆ ಆಧಾರದ ಮೇಲೆ ಬಿಡುಗಡೆ ಮಾಡಲು ಆದೇಶ ನೀಡಿದೆ.

ವಿವಿಧ ಅಪರಾಧ ಪ್ರಕರಣಗಳಲ್ಲಿ ಜೀವಾವಧಿ ಶಿಕ್ಷೆಗೆ ಗುರಿಯಾಗಿ ಕಲಬುರಗಿ ಕಾರಾಗೃಹದಲ್ಲಿ 14 ವರ್ಷಗಳ ಕಾಲ ಶಿಕ್ಷೆ ಅನುಭವಿಸಿದ 17 ಪುರುಷ ಹಾಗೂ ಓರ್ವ ಮಹಿಳಾ ಬಂದಿ ಸೇರಿದಂತೆ ಒಟ್ಟು 18 ಜನ ಬಂದಿಗಳನ್ನು ಸನ್ನಡತೆ ಆಧಾರದ ಮೇಲೆ ಶುಕ್ರವಾರ ಬಿಡುಗಡೆ ಮಾಡಲಾಗಿದೆ.

 ಜೈಲು ಲಂಚ ಪ್ರಕರಣ: ವಿಶೇಷ ನ್ಯಾಯಾಲಯಕ್ಕೆ ಶಶಿಕಲಾ ನಟರಾಜನ್ ಮತ್ತು ಇಳವರಸಿ ಹಾಜರು ಜೈಲು ಲಂಚ ಪ್ರಕರಣ: ವಿಶೇಷ ನ್ಯಾಯಾಲಯಕ್ಕೆ ಶಶಿಕಲಾ ನಟರಾಜನ್ ಮತ್ತು ಇಳವರಸಿ ಹಾಜರು

ಕಲಬುರಗಿ ಕೇಂದ್ರ ಕಾರಾಗೃಹದಲ್ಲಿ ನಡೆದ ಕಾರ್ಯಕ್ರಮದಲ್ಲಿ ಕಲಬುರಗಿ ಪ್ರಧಾನ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಧೀಶ ಕೆ. ಸುಬ್ರಮಣ್ಯ ಬಂದಿಗಳಿಗೆ ಬಿಡುಗಡೆ ಪತ್ರ ನೀಡಿ ಶುಭ ಕೋರಿದರು. ಈ ಸಂದರ್ಭದಲ್ಲಿ ಕೇಂದ್ರ ಕಾರಾಗೃಹದ ಮುಖ್ಯ ಅಧೀಕ್ಷಕ ಪಿ. ಎಸ್. ರಮೇಶ, ಕಲಬುರಗಿ ಸಿ. ಜೆ. ಎಂ. ಬಾಳಪ್ಪ ಜರುಗು ಸೇರಿದಂತೆ ಸಿಬ್ಬಂದಿಗಳು ಉಪಸ್ಥಿತರಿದ್ದರು.

5 ಲಕ್ಷ ಲಂಚ ಸ್ವೀಕರಿಸುವಾಗ ಸಿಕ್ಕಿಬಿದಿದ್ದ ವಾಣಿಜ್ಯ ತೆರಿಗೆ ಅಧಿಕಾರಿಗೆ ಜೈಲು ಶಿಕ್ಷೆ ಕಾಯಂ..!5 ಲಕ್ಷ ಲಂಚ ಸ್ವೀಕರಿಸುವಾಗ ಸಿಕ್ಕಿಬಿದಿದ್ದ ವಾಣಿಜ್ಯ ತೆರಿಗೆ ಅಧಿಕಾರಿಗೆ ಜೈಲು ಶಿಕ್ಷೆ ಕಾಯಂ..!

18 Prisoners Release From Jail For Good Conduct

ಜೈಲಿನಿಂದ ಪಳನಿ, ಭೀಮನಗೌಡ, ರಾಚಪ್ಪ, ಜಗನ್ನಾಥ, ಶಂಕ್ರಾನಾಯ್ಕ, ಸುರೇಶ, ಹನುಮಂತ, ಸಯ್ಯದ್ ಜಮೀರ್, ನಾಮದೇವ, ರವಿ, ಮಲ್ಲಪ್ಪ, ಹಣಮಂತ, ಚಂದ್ರಯ್ಯ, ಬಸವರಾಜ, ಸಂತೋಷ, ಮೆಹೆಬೂಬ್ ಅಲಿ, ಮಹಾದೇವಿ, ರಾಜೇಂದ್ರ ಬಿಡುಗಡೆಗೊಂಡರು.

ಆಕ್ಸಿಡೆಂಟ್ ಕೇಸ್: 12 ವರ್ಷದ ಬಳಿಕ ಜೈಲು ಸೇರಿದ ಅಪರಾಧಿ! ಆಕ್ಸಿಡೆಂಟ್ ಕೇಸ್: 12 ವರ್ಷದ ಬಳಿಕ ಜೈಲು ಸೇರಿದ ಅಪರಾಧಿ!

125 ಬಂದಿಗಳ ಬಿಡುಗಡೆಗೆ ಆದೇಶ; ಕರ್ನಾಟಕ ಸರ್ಕಾರ ರಾಜ್ಯದ ವಿವಿಧ ಜೈಲುಗಳಲ್ಲಿರುವ 125 ಜೀವಾವಧಿ ಶಿಕ್ಷಾ ಬಂಧಿಗಳನ್ನು ಸನ್ನಡತೆ ಆಧಾರದ ಮೇಲೆ ಬಿಡುಗಡೆ ಮಾಡಿ ಆದೇಶಿಸಿದೆ. ಈ ಕುರಿತು ವಿಧಾನಸಭೆ ಕಲಾಪದಲ್ಲಿ ಗೃಹ ಸಚಿವ ಆರಗ ಜ್ಞಾನೇಂದ್ರ ಮಾಹಿತಿ ನೀಡಿದ್ದಾರೆ.

ಕರ್ನಾಟಕ ಸರ್ಕಾರದ ಆದೇಶ ಸಂಖ್ಯೆ ಹೆಚ್‌ಡಿ 67 ಪಿಆರ್‌ಎ 2021 ದಿನಾಂಕ 17/82021ರಲ್ಲಿ ಒಟ್ಟು 12 ಜೀವಾವಧಿ ಶಿಕ್ಷಾ ಬಂಧಿಗಳನ್ನು ಸನ್ನಡತೆ ಆಧಾರದ ಮೇಲೆ ಬಿಡುಗಡೆ ಮಾಡಿ ಆದೇಶಿಸಲಾಗಿದೆ.

21/4/2020ರಲ್ಲಿನ ಮಾರ್ಗಸೂಚಿ ಅನ್ವಯ ಹಾಗೂ ಘನತೆವೆತ್ತ ರಾಜ್ಯಪಾಲರ ನಿರ್ದೇಶನದ ಅನುಸಾರ ಸರ್ವೋಚ್ಚ ನ್ಯಾಯಾಲಯವು ಕ್ರಿಮಿನಲ್ ಅಫೀಲ್ ಸಂಖ್ಯೆ 722/2021ರಲ್ಲಿ 3/8/2021ರಂದು ನೀಡಿರುವ ಆದೇಶದಂತೆ ಬಾಕಿ ಉಳಿದಿರುವ 89 ಜೀವಾವಧಿ ಶಿಕ್ಷಾ ಬಂದಿಗಳ ಪ್ರಕರಣಗಳನ್ನು ಹಾಗೂ ಜುಲೈ 2021ರ ಮಾಹೆಯಲ್ಲಿ ಜರುಗಿದ ಸ್ಥಾಯಿ ಸಲಹಾ ಮಂಡಳಿ ಸಭೆಗಳಲ್ಲಿ ಶಿಫಾರಸುಗೊಂಡಿರುವ ಪ್ರಕರಣಗಳು ಸೇರಿದಂತೆ ಎಲ್ಲಾ ಪ್ರಕರಣಗಳನ್ನು ಪರಿಗಣಿಸಿ ಬಿಡುಗಡೆಗೆ ಆದೇಶಿಸಲಾಗಿದೆ.

ಒಟ್ಟು ಅರ್ಹ ಪ್ರಕರಣದ 166 ಜೀವಾವಧಿ ಶಿಕ್ಷಾ ಬಂದಿಗಳ ಪ್ರಕರಣಗಳನ್ನು ಸನ್ನಡತೆ ಆಧಾರದ ಮೇಲೆ ಉಳಿದ ಶಿಕ್ಷಾ ಅವಧಿಯನ್ನು ಮಾಫಿ ನೀಡುವುದರ ಮೂಲಕ ಅವಧಿ ಪೂರ್ಣ ಬಿಡುಗಡೆ ಮಾಡಲು ಸಚಿವ ಸಂಪುಟದ ಮುಂದೆ ಮಂಡಿಸಿ ತದನಂತರ ರಾಜ್ಯಪಾಲರ ಅನುಮೋದನೆಗೆ ಸಲ್ಲಿಸಲಾಗಿತ್ತು.

2/3/2022ರಂದು ರಾಜ್ಯಪಾಲರು ಒಟ್ಟು 161 ಜೀವಾವಧಿ ಶಿಕ್ಷಾ ಬಂದಿಗಳ ಪ್ರಕರಣಗಳನ್ನು ಸನ್ನಡತೆ ಆಧಾರದ ಮೇಲೆ ಉಳಿದ ಶಿಕ್ಷಾ ಅವಧಿಯನ್ನು ಮಾಫಿ ನೀಡುವುದರ ಮೂಲಕ ಅವಧಿಪೂರ್ವ ಬಿಡುಗಡೆ ಮಾಡಲು ಅನುಮೋದಿಸಿದ್ದರು. ಇದರ ಅನ್ವಯ ಒಟ್ಟು 161 ಜೀವಾವಧಿ ಶಿಕ್ಷಾ ಬಂದಿಗಳನ್ನು ಸನ್ನಡತೆ ಆಧಾರದ ಮೇಲೆ ಬಿಡುಗಡೆಗೊಳಿಸಿ ಆದೇಶಿಸಲಾಗಿದೆ.

ಕೈದಿಗಳಿಗೆ ಅಕ್ಷರಾಭ್ಯಾಸ; ಕಲಬುರಗಿ ಕೇಂದ್ರ ಕಾರಾಗೃಹದಲ್ಲಿ ಅನಕ್ಷರಸ್ಥ ಬಂದಿಗಳಿಗೆ ಸಾಕ್ಷರತಾ ಕಾರ್ಯಕ್ರಮದಡಿ ಕಲಬುರಗಿ ಜಿಲ್ಲಾ ಲೋಕಶಿಕ್ಷಣ ಸಮಿತಿಯಿಂದ 'ಕಲಬುರಗಿ ನಾಡು ಸಾಕ್ಷರ ನಾಡು' ಕಾರ್ಯಕ್ರಮದಡಿ ಅಕ್ಷರಾಭ್ಯಾಸ ಮಾಡಿಸಲಾಗುತ್ತಿದೆ. ಬಂದಿಗಳಿಗೆ ಇತ್ತೀಚೆಗೆ ಕಲಿತ ಅಕ್ಷರಗಳ ಕುರಿತು ಮೌಲ್ಯಮಾಪನ ಮಾಡಲಾಗಿದೆ.

ವಿವಿಧ ಅಪರಾಧ ವೆಸಗಿ ಶಿಕ್ಷೆ ಅನುಭವಿಸುತ್ತಿರುವ ಬಂದಿಗಳಲ್ಲಿ 250 ಜನ ಅನಕ್ಷರಸ್ಥ ಬಂದಿಗಳನ್ನು ಗುರುತಿಸಿ (20 ಮಹಿಳಾ ಮತ್ತು 230 ಜನ ಪುರುಷ) ಅವರನ್ನು ಕಾರಾಗೃಹದಲ್ಲಿದ್ದ ಅಕ್ಷರಸ್ಥ ಬಂದಿಗಳನ್ನು ಸ್ವಯಂ ಸೇವಕ ಬೋಧಕರನ್ನಾಗಿ ನಿಯೋಜಿಸಿ ತರಬೇತಿ ನೀಡಲಾಗಿದೆ. ಒಟ್ಟು 6 ತಿಂಗಳ ಕಾಲ ಬಂದಿಗಳಿಗೆ ಅಕ್ಷರ ಜ್ಞಾನ ಕಲಿಸಲಾಗಿದ್ದು, ಮೌಲ್ಯ ಮಾಪನ ಮಾಡಲಾಗಿದೆ.

English summary
From Kalaburagi jail 18 prisoners released who have completed 14 years of jail term. Govt ordered to release 166 prisoners, lodged in different jails in the state for good conduct.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X