ಕಲಬುರಗಿ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಕ್ವಾರಂಟೈನ್‌ ಕೇಂದ್ರದಲ್ಲಿ ಮಗುವಿಗೆ ಜನ್ಮ ನೀಡಿದ ಕಲಬುರಗಿಯ ಅಪ್ರಾಪ್ತ ಬಾಲಕಿ

|
Google Oneindia Kannada News

ಕಲಬುರಗಿ, ಮೇ 27: ಕಲಬುರಗಿ ಜಲ್ಲೆಯ ಕ್ವಾರಂಟೈನ್‌ ಕೇಂದ್ರವೊಂದಲ್ಲಿ 16 ವರ್ಷದ ಅಪ್ರಾಪ್ತ ಬಾಲಕಿ ಮಗುವಿಗೆ ಜನ್ಮ ನೀಡಿದ್ದಾರೆ.

Recommended Video

ಮಹಾರಾಷ್ಟ್ರದಿಂದ ತೆಲಂಗಾಣಕ್ಕೆ ನಡೆದು ಹೋಗುತ್ತಿದ್ದ ಕಾರ್ಮಿಕರಿಗೆ ನೆರವಾದ ಕಲಬುರ್ಗಿ ಕನ್ನಡಿಗರು | Kalburgi

ಸದ್ಯ, ಕಲಬುರಗಿ ಶಹಬಾದ್ ಸಮುದಾಯ ಆಸ್ಪತ್ರೆಯಲ್ಲಿ ಬಾಲಕಿಗೆ ಚಿಕಿತ್ಸೆ ನೀಡಲಾಗುತ್ತಿದೆ. ಬಾಲಕಿ ಗಂಡು ಮಗುವಿಗೆ ಜನ್ಮ ನೀಡಿದ್ದು, ತಾಯಿ ಮತ್ತು ಮಗು ಆರೋಗ್ಯವಾಗಿದ್ದಾರೆ ಎಂದು ಶಹಬಾದ್ ತಹಶೀಲ್ದಾರ್ ಸುರೇಶ್ ವರ್ಮಾ ತಿಳಿಸಿದ್ದಾರೆ.

ಕಲಬುರಗಿ; ಕೆಲಸ ಖಾಲಿ ಇದೆ, ಜೂ.4ರೊಳಗೆ ಅರ್ಜಿ ಹಾಕಿಕಲಬುರಗಿ; ಕೆಲಸ ಖಾಲಿ ಇದೆ, ಜೂ.4ರೊಳಗೆ ಅರ್ಜಿ ಹಾಕಿ

ಕೆಲ ದಿನಗಳ ಹಿಂದೆ ತನ್ನ ಪೋ‍ಷಕರ ಜೊತೆಗೆ ಬಾಲಕಿ ಮಹಾರಾಷ್ಟ್ರದ ಕೊಲ್ಹಾಪುರ ಜಿಲ್ಲೆಯ ಸೋಮನಹಳ್ಳಿ ಗ್ರಾಮದಿಂದ ಕಲಬುರಗಿಗೆ ಬಂದಿದ್ದರು. ಅಂತರರಾಜ್ಯ ಪ್ರಯಾಣ ಆಗಿರುವ ಕಾರಣ, ಅದರಲ್ಲಿಯೂ ಮಹಾರಾಷ್ಟ್ರದಿಂದ ಬಂದ ಕಾರಣ ಇವರನ್ನು ಕ್ವಾರೈಂಟೈನ್‌ನಲ್ಲಿ ಇಡಲಾಗಿತ್ತು.

16 Year Old Minor Girl Gave Birth To A Baby Boy In Kalaburagi Quarantine Centre

ಶಹಾಬಾದ್ ಪಟ್ಟಣದ ಕ್ವಾರಂಟೈನ್ ಕೇಂದ್ರದಲ್ಲಿದ್ದ ಬಾಲಕಿಗೆ ನಿನ್ನೆ ಬೆಳಗ್ಗೆ ಹೆರಿಗೆ ನೋವು ಕಾಣಿಸಿಕೊಂಡಿತು. ನಂತರ ಬಾಲಕಿ ಗಂಡು ಮಗುವಿಗೆ ಜನ್ಮ ನೀಡಿದ್ದಾರೆ. ಕ್ವಾರಂಟೈನ್ ಕೇಂದ್ರದಲ್ಲಿದ್ದ ಇತರ ಮಹಿಳೆಯರು ಅವರ ಸಹಾಯಕ್ಕೆ ಬಂದಿದ್ದು, ಹೆರಿಗೆ ಮಾಡಿಸಲು ಸಹಾಯ ಮಾಡಿದ್ದಾರೆ.

ಅಂದಹಾಗೆ, ಕಲಬುರಗಿಯಲ್ಲಿ ಈವರೆಗೆ 185 ಕೊರೊನಾ ಪಾಸಿಟಿವ್ ಪ್ರಕರಣಗಳು ಕಂಡು ಬಂದಿವೆ. ಇಂದು 28 ಹೊಸ ಪ್ರಕರಣಗಳು ಪತ್ತೆಯಾಗಿವೆ. 7 ಮಂದಿ ಕೊರೊನಾ ವೈರಸ್‌ನಿಂದ ಮರಣ ಹೊಂದಿದ್ದಾರೆ.

English summary
A 16-year-old minor girl gave birth to a baby boy in shahabad quarantine centre, Kalaburagi.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X