ಕಲಬುರಗಿ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಕಲಬುರಗಿ : 133 ಗ್ರಾಮಗಳಲ್ಲಿ ಕುಡಿಯುವ ನೀರಿನ ಕೊರತೆ

|
Google Oneindia Kannada News

ಕಲಬುರಗಿ, ಮೇ 05 : ಕಲಬುರಗಿ ಜಿಲ್ಲೆಯಲ್ಲಿ ತೀವ್ರ ಬರದಿಂದಾಗಿ ಕುಡಿಯುವ ನೀರಿನ ಸಮಸ್ಯೆ ಎದುರಾಗಿದೆ. ನೀರಿನ ಸಮಸ್ಯೆ ಇರುವ 133 ಗ್ರಾಮಗಳಿಗೆ 140 ಟ್ಯಾಂಕರ್ ಮೂಲಕ ಪ್ರತಿನಿತ್ಯ ನೀರನ್ನು ಸರಬರಾಜು ಮಾಡಲಾಗುತ್ತಿದೆ.

ಟ್ಯಾಂಕರ್ ಮೂಲಕ ನೀರು ಸರಬರಾಜು ಮಾಡುವುದು ತಾತ್ಕಾಲಿಕ ವ್ಯವಸ್ಥೆಯಾಗಿದೆ. ಇಂತಹ ಕ್ಲಿಷ್ಟಕರ ಗ್ರಾಮಗಳಲ್ಲಿ ಜನರಿಗೆ ಕುಡಿಯುವ ನೀರು ಒದಗಿಸಲು ಟ್ಯಾಂಕರ್ ಬದಲಾಗಿ ಪರ್ಯಾಯವಾಗಿ ಜಲಮೂಲ ಪತ್ತೆ ಹಚ್ಚಬೇಕು ಎಂದು ಜಿಲ್ಲಾಧಿಕಾರಿ ಆರ್.ವೆಂಕಟೇಶ್ ಕುಮಾರ್ ಸೂಚನೆ ನೀಡಿದ್ದಾರೆ.

ಬರ : ಕರ್ನಾಟಕದ 1,112 ಹಳ್ಳಿಗೆ ಟ್ಯಾಂಕರ್ ನೀರು ಆಧಾರಬರ : ಕರ್ನಾಟಕದ 1,112 ಹಳ್ಳಿಗೆ ಟ್ಯಾಂಕರ್ ನೀರು ಆಧಾರ

ಜಿಲ್ಲಾಧಿಕಾರಿಗಳು ಬರ ಪರಿಹಾರ ಕಾಮಗಾರಿಗಳ ಪ್ರಗತಿ ಪರಿಶೀಲನೆ ನಡೆಸಿದರು. ಕಳೆದ 2-3 ತಿಂಗಳಿಂದ ಜಿಲ್ಲೆಯ ಹಲವು ಸಮಸ್ಯಾತ್ಮಕ ಗ್ರಾಮಗಳಿಗೆ ಟ್ಯಾಂಕರ್ ಮೂಲಕ ನೀರು ಸರಬರಾಜು ಮಾಡಲಾಗುತ್ತಿದೆ. ಟ್ಯಾಂಕರ್ ನೀರು ಪೂರೈಸುವ ಗ್ರಾಮದಲ್ಲಿ ಜಲಮೂಲ ಪತ್ತೆ ಹಚ್ಚಿ ಹೊಸದಾಗಿ ಕೊಳವೆ ಬಾವಿ ಕೊರೆಯಿರಿ ಎಂದರು.

ಮೈಸೂರು : ಜೂನ್ ತನಕ ಹೊಸ ನೀರಿನ ಸಂಪರ್ಕವಿಲ್ಲಮೈಸೂರು : ಜೂನ್ ತನಕ ಹೊಸ ನೀರಿನ ಸಂಪರ್ಕವಿಲ್ಲ

133 villages facing drinking water crises

ರಾಷ್ಟ್ರೀಯ ವಿಪ್ಪತ್ತು ಕಾಯ್ದೆಯಡಿ ಗ್ರಾಮದ ಅಕ್ಕಪಕ್ಕದ ಖಾಸಗಿ ಜಮೀನಿನಲ್ಲಿರುವ ತೆರೆದ ಬಾವಿ, ಬೋರವೆಲ್ ಜಲಮೂಲಗಳಿದ್ದಲ್ಲಿ ಅದನ್ನು ಸರ್ಕಾರದ ವಶಕ್ಕೆ ಪಡೆದು ಸಾರ್ವಜನಿಕರಿಗೆ ಕುಡಿಯುವ ನೀರು ಪೂರೈಸಬೇಕು ಎಂದು ಅಧಿಕಾರಿಗಳಿಗೆ ಸೂಚನೆ ನೀಡಿದರು.

ಜಿಲ್ಲೆಯ ಎಲ್ಲಾ ತಾಲೂಕುಗಳು ಬರಗಾಲ ಪೀಡಿತ ಪ್ರದೇಶವೆಂದು ಘೋಷನೆಯಾಗಿರುವ ಹಿನ್ನೆಲೆಯಲ್ಲಿ ತುರ್ತಾಗಿ ಕಾಮಗಾರಿಗಳನ್ನು ಕೈಗೊಳ್ಳಲು ಟಾಸ್ಕ್ ಫೋರ್ಸ್ ಸಮಿತಿಗಳು ಅನುಮೋದನೆ ನೀಡಿದ್ದು, ಅದರಂತೆ ಕುಡಿಯುವ ನೀರಿನ ಯೋಜನೆಗಳನ್ನು ಮಿಷನ್ ಮೋಡ್‍ನಲ್ಲಿ ತ್ವರಿತವಾಗಿ ಅನುಷ್ಠಾನಕ್ಕೆ ತರುವ ಮೂಲಕ ಕುಡಿಯುವ ನೀರಿನ ಸಮಸ್ಯೆಗಳಿಗೆ ಪರಿಹಾರ ಒದಗಿಸಬೇಕು ಎಂದರು.

ಬೆಂಗಳೂರಲ್ಲಿ ಹೊಸದಾಗಿ ಬೋರ್‌ವೆಲ್ ಕೊರೆಯುವ ಹಾಗಿಲ್ಲಬೆಂಗಳೂರಲ್ಲಿ ಹೊಸದಾಗಿ ಬೋರ್‌ವೆಲ್ ಕೊರೆಯುವ ಹಾಗಿಲ್ಲ

ನಗರ ಪಟ್ಟಣಗಳಲ್ಲಿ ನೀರಿನ ಸಮಸ್ಯೆಯಿಲ್ಲ : ಜಿಲ್ಲೆಯ ನಗರ, ಪಟ್ಟಣ ವಾಸಿಗಳಿಗೆ ಕುಡಿಯುವ ನೀರು ಸರಬರಾಜು ಮಾಡಲು ಯಾವುದೇ ತೊಂದರೆಯಿಲ್ಲ, ಆದರೆ ಜಲಮಂಡಳಿಯವರು ಸ್ವಚ್ಛ ಕುಡಿಯುವ ನೀರು ಸರಬರಾಜಿಗೆ ಗಮನಹರಿಸಬೇಕು ಎಂದು ಹೇಳಿದರು.

ಇನ್ನು ಪಟ್ಟಣ ಪ್ರದೇಶದಲ್ಲಿ ಖಾಸಗಿ ಹೋಟೆಲ್, ಉದ್ಯಮಿದಾರರು ನೀರಿನ ನಲ್ಲಿಗಳಿಗೆ ಮೋಟಾರ್ ಹಚ್ಚಿ ಹೆಚ್ಚಿನ ನೀರು ಪಡೆಯುತ್ತಾರೆಂಬ ದೂರು ಸಾಕಷ್ಠು ಬರುತ್ತಿದ್ದು, ಈ ಬಗ್ಗೆ ಸ್ಥಳೀಯ ಸಂಸ್ಥೆಗಳು ಮತ್ತು ಜಲಮಂಡಳಿಯವರು ಕಡಿವಾಣ ಹಾಕಬೇಕು ಎಂದು ಸೂಚನೆ ನೀಡಿದರು.

ಪಶು ಸಂಗೋಪನಾ ಇಲಾಖೆಯ ಉಪನಿರ್ದೇಶಕರು ಮಾತನಾಡಿ ಜಿಲ್ಲೆಯಲ್ಲಿ 14 ಮೇವು ಬ್ಯಾಂಕ್ ಸ್ಥಾಪಿಸಲಾಗಿದ್ದು, ರೈತರು ಇಲ್ಲಿಂದ ಹಸುಗಳಿಗೆ ಮೇವು ಪಡೆಯುತ್ತಿದ್ದಾರೆ. 10 ವಾರಗಳಿಗೆ ಬೇಕಾಗುವಷ್ಟು 44 ಮೆಟ್ರಿಕ್ ಟನ್ ಮೇವು ಲಭ್ಯವಿದ್ದು, ಜಿಲ್ಲೆಯಲ್ಲಿ ಮೇವಿಗೆ ಸಂಬಂಧಿಸಿದಂತೆ ಯಾವುದೇ ಸಮಸ್ಯೆಗಳಿಲ್ಲ ಎಂದು ಸಭೆಗೆ ಮಾಹಿತಿ ನೀಡಿದರು.

English summary
133 villages of Kalaburagi district facing drinking water crises due to drought. Water supplying through tanker, all taluks of the district announced as drought hit.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X