ಕಲಬುರಗಿ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಶ್ರಮಿಕ್ ರೈಲಿನಲ್ಲಿ ಕಲಬುರಗಿಗೆ ವಾಪಸ್ ಆದ 1251 ಕಾರ್ಮಿಕರು

|
Google Oneindia Kannada News

ಕಲಬುರಗಿ, ಮೇ 13 : ಕರ್ನಾಟಕದ ವಿವಿಧ ಜಿಲ್ಲೆಗಳಿಂದ ಶ್ರಮಿಕ್ ವಿಶೇಷ ರೈಲಿನಲ್ಲಿ ವಲಸೆ ಕಾರ್ಮಿಕರು ತವರು ರಾಜ್ಯಕ್ಕೆ ವಾಪಸ್ ಆಗುತ್ತಿದ್ದಾರೆ. ಮುಂಬೈನಿಂದ 1251 ಜನರು ಕಲಬುರಗಿಗೆ ಆಗಮಿಸಿದ್ದಾರೆ. ಬುಧವಾರ ಮತ್ತೊಂದು ರೈಲು ಆಗಮಿಸಲಿದೆ.

ಮುಂಬೈನ ಥಾಣೆಯಿಂದ ವಿಶೇಷ ಶ್ರಮಿಕ್ ರೈಲು ಕಲಬುರಗಿಗೆ ಆಗಮಿಸಿದೆ. ರೈಲಿನಲ್ಲಿ ಆಗಮಿಸಿದ ಎಲ್ಲರ ಥರ್ಮಲ್ ಸ್ಕ್ಯಾನಿಂಗ್ ಪರೀಕ್ಷೆ ನಡೆಸಿ ಸರ್ಕಾರದಿಂದ ನಿಗದಿ ಮಾಡಿರುವ ಕ್ವಾರಂಟೈನ್‌ ಕೇಂದ್ರಗಳಿಗೆ ಕಳುಹಿಸಿಕೊಡಲಾಗಿದೆ. ಎಲ್ಲರಿಗೂ ಕ್ವಾರಂಟೈನ್ ಕಡ್ಡಾಯವಾಗಿದೆ.

ವಲಸೆ ಕಾರ್ಮಿಕರಿಗೆ ಸಿಹಿ ಸುದ್ದಿ; ಶ್ರಮಿಕ್ ರೈಲಿನ ಮಾರ್ಗಸೂಚಿ ಬದಲಾವಣೆ ವಲಸೆ ಕಾರ್ಮಿಕರಿಗೆ ಸಿಹಿ ಸುದ್ದಿ; ಶ್ರಮಿಕ್ ರೈಲಿನ ಮಾರ್ಗಸೂಚಿ ಬದಲಾವಣೆ

ಕಲಬುರಗಿ ಜಿಲ್ಲಾಧಿಕಾರಿ ಬಿ. ಶರತ್ ಈ ಕುರಿತು ಮಾಹಿತಿ ನೀಡಿದ್ದಾರೆ. "ಮುಂಬೈನಿಂದ ಆಗಮಿಸಿದವರಲ್ಲಿ ಕಲಬುರಗಿ, ಯಾದಗಿರಿ ಹಾಗೂ ವಿಜಯಪುರ ಜಿಲ್ಲೆಯವರು ಇದ್ದಾರೆ. ಹೊರ ರಾಜ್ಯದಿಂದ ಜಿಲ್ಲೆಗೆ ಯಾರೇ ಬಂದರೂ ಕ್ವಾರಂಟೈನ್‌ನಲ್ಲಿರುವುದು ಕಡ್ಡಾಯ" ಎಂದು ಹೇಳಿದರು.

ಕರ್ನಾಟಕ; ಒಂದೇ ದಿನ ಹೊರಟ 6 ಶ್ರಮಿಕ್ ರೈಲು, ವಲಸಿಗರು ತವರಿಗೆ ಕರ್ನಾಟಕ; ಒಂದೇ ದಿನ ಹೊರಟ 6 ಶ್ರಮಿಕ್ ರೈಲು, ವಲಸಿಗರು ತವರಿಗೆ

ಬೇರೆ ರಾಜ್ಯಗಳಿಂದ ಕಲಬುರಗಿ ಜಿಲ್ಲೆಗೆ ಆಗಮಿಸಲು ಸೇವಾಸಿಂಧು ಮೂಲಕ 7,700 ಜನರು ನೋಂದಣಿ ಮಾಡಿಕೊಂಡಿದ್ದಾರೆ. 1251 ಜನರು ಇದುವರೆಗೂ ಆಗಮಿಸಿದ್ದು, ಬುಧವಾರ ಮುಂಬೈನಿಂದ ಮತ್ತೊಂದು ರೈಲು ಕಲಬುರಗಿಗೆ ಆಗಮಿಸಲಿದೆ ಎಂದು ಜಿಲ್ಲಾಧಿಕಾರಿಗಳು ಹೇಳಿದ್ದಾರೆ.

ಶ್ರಮಿಕ್ ವಿಶೇಷ ರೈಲಿನ ದರ; ರೈಲ್ವೆ ಇಲಾಖೆಯ ಸ್ಪಷ್ಟನೆ ಶ್ರಮಿಕ್ ವಿಶೇಷ ರೈಲಿನ ದರ; ರೈಲ್ವೆ ಇಲಾಖೆಯ ಸ್ಪಷ್ಟನೆ

ಕಲಬುರಗಿಗೆ ಆಗಮಿಸಿದವರ ವಿವರ

ಕಲಬುರಗಿಗೆ ಆಗಮಿಸಿದವರ ವಿವರ

ಮುಂಬೈನ ಥಾಣೆಯಿಂದ ಶ್ರಮಿಕ್ ವಿಶೇಷ ರೈಲಿನಲ್ಲಿ 1,251 ವಲಸೆ ಕಾರ್ಮಿಕರು ಆಗಮಿಸಿದ್ದಾರೆ. ಇವರು ಕಲಬುರಗಿ, ಯಾದಗಿರಿ ಹಾಗೂ ವಿಜಾಪುರ ಜಿಲ್ಲೆಯವರು. ಚಿತ್ತಾಪೂರ ತಾಲೂಕಿನ 676, ಕಮಲಾಪೂರ ತಾಲೂಕಿನ 26, ಸೇಡಂ ಮತ್ತು ಶಹಾಬಾದ್‍ನ ತಲಾ 6 ಮಂದಿ, ಕಲಬುರಗಿ ತಾಲೂಕಿನ ಒಬ್ಬರು ಸೇರಿದ್ದಾರೆ.

ಎಲ್ಲರಿಗೂ ಆರೋಗ್ಯ ತಪಾಸಣೆ

ಎಲ್ಲರಿಗೂ ಆರೋಗ್ಯ ತಪಾಸಣೆ

ಕಲಬುರಗಿಗೆ ಆಗಮಿಸುತ್ತಿದ್ದಂತೆ ಎಲ್ಲರನ್ನೂ ಸಾಲಿನಲ್ಲಿ ನಿಲ್ಲಿಸಿ ಥರ್ಮಲ್ ಸ್ಕ್ಯಾನಿಂಗ್ ಮಾಡಲಾಗಿದೆ. ಈಶಾನ್ಯ ಕರ್ನಾಟಕ ರಾಜ್ಯ ಸಾರಿಗೆ ಸಂಸ್ಥೆ ಬಸ್‌ಗಳ ಮೂಲಕ ಎಲ್ಲರನ್ನೂ ಆಯಾ ತಾಲೂಕಿನಲ್ಲಿ ತೆರೆಯಲಾಗಿರುವ ಕ್ವಾರಾಂಟೈನ್ ಕೇಂದ್ರಗಳಿಗೆ ಕಳುಹಿಸಲಾಗಿದೆ. ಹೊರ ರಾಜ್ಯದಿಂದ ಯಾರೇ ಬಂದರೂ ಕ್ವಾರಾಂಟೈನ್‌ನಲ್ಲಿರುವುದು ಕಡ್ಡಾಯವಾಗಿದೆ.

ವಲಸಿಗರಿಗೆ ಊಟದ ವ್ಯವಸ್ಥೆ

ವಲಸಿಗರಿಗೆ ಊಟದ ವ್ಯವಸ್ಥೆ

ಮುಂಬೈನಿಂದ ಆಗಮಿಸಿದವರಿಗೆ ಜಿಲ್ಲಾಡಳಿತದ ವತಿಯಿಂದ ಆಹಾರ ವ್ಯವಸ್ಥೆಯನ್ನು ಮಾಡಲಾಗಿದೆ. ಎಲ್ಲರಿಗೂ ಊಟ, ಒಂದು ಲೀಟರ್ ನೀರಿನ ಬಾಟಲ್, ಮಜ್ಜಿಗೆ, ಬಿಸ್ಕತ್, ಗ್ಲುಕೋಸ್-ಡಿ ಮುಂತಾದವುಗಳನ್ನು ಪೂರೈಕೆ ಮಾಡಲಾಗಿದೆ. ಕಡ್ಡಾಯವಾಗಿ ಆರೋಗ್ಯ ತಪಾಸಣೆ ಮಾಡಲಾಗಿದೆ.

7700 ಜನರ ನೋಂದಣಿ

7700 ಜನರ ನೋಂದಣಿ

ಕಲಬುರಗಿ ಜಿಲ್ಲೆಗೆ ಬೇರೆ ರಾಜ್ಯಗಳಿಂದ ಆಗಮಿಸಲು ಸೇವಾಸಿಂಧು ಮೂಲಕ 7,700 ಜನರು ನೋಂದಣಿ ಮಾಡಿಕೊಂಡಿದ್ದಾರೆ. ಬುಧವಾರ ಇನ್ನೊಂದು ಶ್ರಮಿಕ್ ವಿಶೇಷ ರೈಲು ಮುಂಬೈನಿಂದ ಆಗಮಿಸಲಿದೆ. ಎಲ್ಲರನ್ನೂ ಕ್ವಾರಂಟೈನ್ ಮಾಡಲು ಅಗತ್ಯ ವ್ಯವಸ್ಥೆಗಳನ್ನು ಜಿಲ್ಲಾಡಳಿತ ಮಾಡಿದೆ.

English summary
From Mumbai 1251 migrant workers arrived to Kalaburagi by Shramik train. 7700 people registered to return Kalaburagi. One more train will come to district on May 13.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X