ಕಲಬುರಗಿ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಗುಲ್ಬರ್ಗ ಕ್ಷೇತ್ರದ ಚುನಾವಣಾ ಕಣ ಅಂತಿಮ, 12 ಅಭ್ಯರ್ಥಿಗಳು

|
Google Oneindia Kannada News

ಕಲಬುರಗಿ, ಏಪ್ರಿಲ್ 08 : ಗುಲ್ಬರ್ಗಾ ಲೋಕಸಭಾ ಮೀಸಲು ಕ್ಷೇತ್ರದ ಚುನಾವಣಾ ಕಣ ಅಂತಿಮಗೊಂಡಿದೆ. ಒಟ್ಟು 12 ಅಭ್ಯರ್ಥಿಗಳು ಕಣದಲ್ಲಿದ್ದಾರೆ. ಬಿಜೆಪಿಯ ಉಮೇಶ್ ಜಾಧವ್ ಸೇರಿದಂತೆ ಜಾಧವ್ ಹೆಸರಿನ ಮೂವರು ಅಭ್ಯರ್ಥಿಗಳಿದ್ದಾರೆ.

ಲೋಕಸಭಾ ಚುನಾವಣೆ 2019 : ವಿಶೇಷ ಪುಟ | ಗ್ಯಾಲರಿ

ನಾಮಪತ್ರಗಳನ್ನು ವಾಪಸ್ ಪಡೆಯಲು ಸೋಮವಾರ ಅಂತಿಮ ದಿನವಾಗಿತ್ತು. 7 ಅಭ್ಯರ್ಥಿಗಳು ನಾಮಪತ್ರಗಳನ್ನು ವಾಪಸ್ ಪಡೆದರು. ಅಂತಿಮವಾಗಿ ಒಟ್ಟು 12 ಅಭ್ಯರ್ಥಿಗಳು ಚುನಾವಣೆಯ ಸ್ಪರ್ಧಾ ಕಣದಲ್ಲಿ ಉಳಿದಿದ್ದಾರೆ.

ಗುಲ್ಬರ್ಗ ಕ್ಷೇತ್ರದಲ್ಲಿ ಜಾಧವ್ ಹೆಸರಿನ ನಾಲ್ವರು ಚುನಾವಣಾ ಕಣದಲ್ಲಿ!ಗುಲ್ಬರ್ಗ ಕ್ಷೇತ್ರದಲ್ಲಿ ಜಾಧವ್ ಹೆಸರಿನ ನಾಲ್ವರು ಚುನಾವಣಾ ಕಣದಲ್ಲಿ!

ಪ್ರಮುಖ ಅಭ್ಯರ್ಥಿಗಳು : ಉಮೇಶ ಗೋಪಾಲದೇವ ಜಾಧವ (ಬಿಜೆಪಿ), ಮಲ್ಲಿಕಾರ್ಜುನ ಮಾಪಣ್ಣ ಖರ್ಗೆ (ಕಾಂಗ್ರೆಸ್), ವಾಸುದೇವರಾವ ಭೀಮರಾವ (ಬಿಎಸ್‌ಪಿ), ದತ್ತಪ್ಪ ಕೃಷ್ಣಪ್ಪ (ರಾಷ್ಟ್ರೀಯ ಸಮಾಜ ಪಕ್ಷ), ಲಂಬಾಣಿ ಮಹೇಶ ಈಶ್ವರ ನಾಯಕ (ಉತ್ತಮ ಪ್ರಜಾಕೀಯ ಪಕ್ಷ).

12 candidates in Gulbarga loksabha seat election fray

ವಿಜಯ ಗೋವಿಂದ ಜಾಧವ (ಸರ್ವ ಜನತಾ ಪಕ್ಷ), ಶರಣಬಸಪ್ಪ ಮಲ್ಲಿಕಾಜಪ್ಪ (ಎಸ್‍ಯುಸಿಐ(ಸಿ)), 09 ಶಂಕರ ಲಿಂಬಾಜಿ (ಭಾರತೀಯ ಪೀಪಲ್ಸ್ ಪಕ್ಷ), ಜಿ. ತಿಮ್ಮಾರಾಜು ಗಂಗಪ್ಪ (ಪಕ್ಷೇತರ) ಡಾ. ಎಂ.ಪಿ. ದಾರಕೇಶ್ವರಯ್ಯಾ (ಪಕ್ಷೇತರ).

ಗುಲ್ಬರ್ಗ ಕ್ಷೇತ್ರದ ಚುನಾವಣಾ ಕಣ

ನಾಮಪತ್ರ ವಾಪಸ್ : ಚುನಾವಣೆಯಲ್ಲಿ ಜಾಧವ್ ಹೆಸರಿನ ನಾಲ್ವರು ನಾಮಪತ್ರಗಳನ್ನು ಸಲ್ಲಿಸಿದ್ದರು. ಇವರಲ್ಲಿ ಡಾ.ಉಮೇಶ್ ಜಾಧವ್ (ಬಿಜೆಪಿ), ವಿಜಯ ಜಾಧವ್ (ಸರ್ವ ಜನತಾ ಪಕ್ಷ) ಅವರು ಕಣದಲ್ಲಿ ಉಳಿದಿದ್ದಾರೆ.

ಏಪ್ರಿಲ್ 23ರಂದು ಗುಲ್ಬರ್ಗ ಕ್ಷೇತ್ರದ ಚುನಾವಣೆ ನಡೆಯಲಿದ್ದು. ಮೇ 23ರಂದು ಚುನಾವಣಾ ಫಲಿತಾಂಶ ಪ್ರಕಟವಾಗಲಿದೆ. ಮಲ್ಲಿಕಾರ್ಜುನ ಖರ್ಗೆ ಮತ್ತು ಡಾ.ಉಮೇಶ್ ಜಾಧವ್ ನಡುವೆ ನೇರ ಹಣಾಹಣಿ ನಿರೀಕ್ಷೆ ಮಾಡಲಾಗಿದೆ.

English summary
Gulbarga lok sabha election candidates final. Umesh Jadhav from BJP and Mallikarjun Kharge from Congress and 10 others candidates in fray.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X