ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಸರಿಯಾಗಿ ಕೇಳಿ, ಯೋಗಿ ಆದಿತ್ಯನಾಥ ಭಜರಂಗಿಯನ್ನು 'ದಲಿತ' ಅಂದಿಲ್ಲ!

|
Google Oneindia Kannada News

Recommended Video

ಸರಿಯಾಗಿ ಕೇಳಿ, ಯೋಗಿ ಆದಿತ್ಯನಾಥ ಭಜರಂಗಿಯನ್ನು 'ದಲಿತ' ಅಂದಿಲ್ಲ! | Oneindia Kannada

ಜೈಪುರ, ನವೆಂಬರ್ 29 : ಭಜರಂಗಬಲಿಯನ್ನು ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರು 'ದಲಿತ' ಎಂದಿದ್ದಾರೆ ಎಂದು ಹಲವೆಡೆ ಆಕ್ರೋಶ ವ್ಯಕ್ತವಾಗುತ್ತಿದೆ. ಇದಕ್ಕಾಗಿ ನೋಟೀಸನ್ನು ಕೂಡ ನೀಡಲಾಗಿದೆ. ಆದರೆ, ಯೋಗಿಯವರು ನಿಜಕ್ಕೂ ಹನುಮಾನ್ ನನ್ನು ದಲಿತನೆಂದು ಕರೆದರೆ?

ಜೈಪುರದಲ್ಲಿ ಅಳ್ವಾರ್ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿ ರಾಮ್ ಕಿಶನ್ ಪರವಾಗಿ ಅವರು ಪ್ರಚಾರ ಮಾಡುತ್ತಿದ್ದಾಗ, ಯೋಗಿ ಆದಿತ್ಯನಾಥ್ ಅವರು ಆಡಿರುವ ಮಾತುಗಳನ್ನು ಕೂಲಂಕಷವಾಗಿ ಪರಿಶೀಲಿಸಿದಾಗ ಮತ್ತು ಸರಿಯಾಗಿ ಅರ್ಥೈಸಿಕೊಂಡಾಗ ಭಜರಂಗಬಲಿಯನ್ನು ಅವರು 'ದಲಿತ'ನೆಂದು ಕರೆದಿಲ್ಲ ಎಂಬುದು ಸ್ಪಷ್ಟವಾಗುತ್ತದೆ.

ರಾಮ ಮಂದಿರ ನಿರ್ಮಾಣದ ಮಾತುಕತೆಯೇ ಎಲ್ಲೆಡೆ ನಡೆಯುತ್ತಿರುವಾಗ, ಭಜರಂಗಿಯ ಭಕ್ತರಾಗಿರುವ ಯೋಗಿ ಆದಿತ್ಯನಾಥ್ ಅವರು ಆಡಿರುವ ಮಾತುಗಳು ಮತ್ತು ಒಂದು ಸಣ್ಣ ವಿರಾಮದ ನಂತರ ಆಡಿರುವ ಮಾತುಗಳ ಸರಪಳಿಯಿಂದಾಗಿ ಅರ್ಥ ಅನರ್ಥವಾಗಿದೆ ಅಥವಾ ಅರ್ಥೈಸುವಿಕೆಯಲ್ಲಿ ಎಡವಟ್ಟಾಗಿದೆ.

ಭಗವಂತ ಹನುಮನಿಗೆ 'ಜಾತಿ ಪ್ರಮಾಣಪತ್ರ' ನೀಡಿದ ಯೋಗಿಗೆ 'ಮಹಾಮಂಗಳಾರತಿ'!ಭಗವಂತ ಹನುಮನಿಗೆ 'ಜಾತಿ ಪ್ರಮಾಣಪತ್ರ' ನೀಡಿದ ಯೋಗಿಗೆ 'ಮಹಾಮಂಗಳಾರತಿ'!

ರಾಜಸ್ಥಾನದಲ್ಲಿ ಡಿಸೆಂಬರ್ 7ರಂದು ವಿಧಾನಸಭೆ ಚುನಾವಣೆ ನಡೆಯಲಿದ್ದು, ಡಿಸೆಂಬರ್ 11ರಂದು ಫಲಿತಾಂಶ ಹೊರಬೀಳಲಿದೆ. ಇಂಥ ಸಂದರ್ಭದಲ್ಲಿಯೇ ಆಡಳಿತಾರೂಢ ಭಾರತೀಯ ಜನತಾ ಪಕ್ಷವನ್ನು ಹಣಿಯುವ ಉದ್ದೇಶದಿಂದ ಯೋಗಿ ಆದಿತ್ಯನಾಥ್ ಅವರು ಆಡಿರುವ ಮಾತುಗಳಿಗೆ ಬಣ್ಣ ಬಳಿದು ವಿವಿಧ ಅರ್ಥ ಕಲ್ಪಿಸಲಾಗುತ್ತಿದೆ. ಆದರೆ, ಅದು ಸತ್ಯವಲ್ಲ.

ಯೋಗಿ ಆದಿತ್ಯನಾಥ ಅವರು ಆಡಿರುವ ಮಾತುಗಳು

ಯೋಗಿ ಆದಿತ್ಯನಾಥ ಅವರು ಆಡಿರುವ ಮಾತುಗಳು

"ಭಜರಂಗಿ ನಮ್ಮ ಭಾರತೀಯ ಪರಂಪರೆಯಲ್ಲಿ ಅವರು ಎಂಥಾ ಲೋಕ ದೇವತೆಯಾಗಿದ್ದಾರೆ ಎಂದರೆ, ಅವರು ಸ್ವಯಂ ವನವಾಸಿ ಇದ್ದಾರೆ, ನಿರ್ವಾಸಿ ಇದ್ದಾರೆ (ಕಾಡಿನಲ್ಲಿ ವಾಸಿಸುತ್ತಾರೆ, ಅವರಿಗೆ ಇರು ಯಾವ ಮನೆಯೂ ಇಲ್ಲ)... (ಸಣ್ಣ ವಿರಾಮದ ನಂತರ)... (ನಮ್ಮಲ್ಲಿ) ದಲಿತರಿದ್ದಾರೆ, ವಂಚಿತರಿದ್ದಾರೆ... ಭಾರತದೆಲ್ಲೆಡೆ, ಉತ್ತರದಿಂದ ದಕ್ಷಿಣದವರೆಗೆ, ಪೂರ್ವದಿಂದ ಪಶ್ಚಿದವರೆಗೆ ಎಲ್ಲರನ್ನೂ ಜೋಡಿಸುವಂಥ ಕಾರ್ಯವನ್ನು ಭಜರಂಗಿ ಮಾಡುತ್ತಾರೆ. ಆದ್ದರಿಂದ ಭಜರಂಗಬಲಿಯ ಸಂಕಲ್ಪ ಮಾಡಬೇಕು."

ಅಯೋಧ್ಯೆಯಲ್ಲಿ 221 ಮೀಟರ್ ಎತ್ತರದ ರಾಮನ ಕಂಚಿನ ಪ್ರತಿಮೆ ಸ್ಥಾಪನೆ ಅಯೋಧ್ಯೆಯಲ್ಲಿ 221 ಮೀಟರ್ ಎತ್ತರದ ರಾಮನ ಕಂಚಿನ ಪ್ರತಿಮೆ ಸ್ಥಾಪನೆ

ಸಣ್ಣ ವಿರಾಮದ ನಂತರ ಆಡಿರುವ ಮಾತುಗಳು

ಸಣ್ಣ ವಿರಾಮದ ನಂತರ ಆಡಿರುವ ಮಾತುಗಳು

ಇದು ಯೋಗಿ ಆದಿತ್ಯನಾಥ ಅವರ ಮಾತಿನ ತಾತ್ಪರ್ಯ. ಆ ಸಣ್ಣ ವಿರಾಮವನ್ನೂ ಗ್ರಹಿಸದೆ ಅವರ ಮಾತನ್ನು ವ್ಯಾಖ್ಯಾನಿಸಿದ್ದರಿಂದ ಅನರ್ಥವಾಗಿದೆ, ಅವರು ಹನುಮಾನ್ ನನ್ನು ದಲಿತನೆಂದು ಕರೆದಿದ್ದಾರೆ ಎಂದು ವಿವಾದದ ಬಿರುಗಾಳಿ ಎದ್ದಿದೆ. ಇಲ್ಲಿ ದೇವರಿಗೆ ಜಾತಿಯನ್ನು ಅಂಟಿಸಿದ್ದಕ್ಕೆ ಅವರು ಕ್ಷಮೆ ಕೇಳಬೇಕು ಎಂದು ಆಗ್ರಹಿಸಲಾಗುತ್ತಿದೆ. ಲೀಗಲ್ ನೋಟೀಸನ್ನೂ ಕಳುಹಿಸಲಾಗಿದೆ. ಆದರೆ, ಈ ಜನರಿಗೆ ಯೋಗಿ ಆದಿತ್ಯನಾಥ ಅವರ ಮಾತಿನ ತಾತ್ಪರ್ಯ ತಿಳಿಸುವವರಾದರೂ ಯಾರು?

ಕಾಂಗ್ರೆಸ್ ವಿಸರ್ಜಿಸಿ, ಗಾಂಧೀಜಿ ಬಯಕೆ ಈಡೇರಿಸಿ : ಯೋಗಿ ಆದಿತ್ಯನಾಥ್ ಕಾಂಗ್ರೆಸ್ ವಿಸರ್ಜಿಸಿ, ಗಾಂಧೀಜಿ ಬಯಕೆ ಈಡೇರಿಸಿ : ಯೋಗಿ ಆದಿತ್ಯನಾಥ್

ಭಕ್ತರ ನಡುವೆ ಭಜರಂಗಿ ತಾರತಮ್ಯ ಮಾಡುವುದಿಲ್ಲ

ಭಕ್ತರ ನಡುವೆ ಭಜರಂಗಿ ತಾರತಮ್ಯ ಮಾಡುವುದಿಲ್ಲ

ಭಜರಂಗಬಲಿಯು ತನ್ನ ಭಕ್ತರ ನಡುವೆ ಯಾವುದೇ ತಾರತಮ್ಯ ಮಾಡುವುದಿಲ್ಲ. ದಲಿತರು ವಂಚಿತರನ್ನು ಒಂದೇ ರೀತಿ ನೋಡುತ್ತಾರೆ ಎಂದಿದ್ದಾರೆ. ಹೀಗೆ ಮಾತನಾಡುತ್ತ, ನಾವು ನಮ್ಮ ದೇಶ ರಾಮರಾಜ್ಯ ಆಗುವವರೆಗೆ ವಿರಮಿಸುವುದಿಲ್ಲ. ಚುನಾವಣೆಯ ದಿನ ಎಲ್ಲ ಮತದಾರರು, ಎಲ್ಲ ಕಾರ್ಯಕರ್ತರು ತಮ್ಮ ಜೊತೆಗೆ ಇನ್ನೂ ಐದು ಮತದಾರರನ್ನು ಕರೆದುಕೊಂಡು ಬರಬೇಕು ಮತ್ತು ಭಾರತೀಯ ಜನತಾ ಪಕ್ಷದ ಚಿಹ್ನೆಗೆ ಮತ ಹಾಕುವಂತೆ ತಯಾರು ಮಾಡಬೇಕು ಎಂದು ಅವರು ಆಗ್ರಹಿಸಿದ್ದಾರೆ.

ಪ್ರಿಯಾಂಕ್ ಖರ್ಗೆ ಅವರು ಹೀಗೆ ಹೇಳಬಹುದಾ?

ಪ್ರಿಯಾಂಕ್ ಖರ್ಗೆ ಅವರು ಹೀಗೆ ಹೇಳಬಹುದಾ?

ಯೋಗಿ ಅವರಾಡಿದ ಮಾತನ್ನೇ ನೆಪ ಮಾಡಿಕೊಂಡು, ಸರಿಯಾಗಿ ಅರ್ಥವನ್ನೂ ಮಾಡಿಕೊಳ್ಳದೆ, ಯೋಗಿಯ ವಿರುದ್ಧ ವಿರೋಧ ಪಕ್ಷದವರು ಮುಗಿಬಿದ್ದಿದ್ದಾರೆ. ಕರ್ನಾಟಕದ ಸಮಾಜ ಕಲ್ಯಾಣ ಸಚಿವರಾದ ಪ್ರಿಯಾಂಕ್ ಖರ್ಗೆ ಅವರು ಕೂಡ, "ಭಾರತದ ಅತೀದೊಡ್ಡ ರಾಜ್ಯದ ಮುಖ್ಯಮಂತ್ರಿ ಅಭಿವೃದ್ಧಿಯ ಬಗ್ಗೆ ಮಾತನಾಡಿದ್ದು ಎಂದೂ ಕೇಳಿಲ್ಲ. ಅವರು ಒಬ್ಬ ತಮ್ಮ ಗುರುಗಳಷ್ಟೇ ಅಪಾಯಕಾರಿ. ಯೋಗಿ ಆದಿತ್ಯನಾಥ ಅವರು ಹನುಮಾನ್ ನನ್ನು ಬುಡಕಟ್ಟು ದಲಿತ ಎಂದಿದ್ದಾರೆ, ಕೇವಲ ರಾವಣ ಭಕ್ತರು ಮಾತ್ರ ಕಾಂಗ್ರೆಸ್ಸಿಗೆ ಮತ ಹಾಕುತ್ತಾರೆ" ಎಂದು ಟೀಕಾಪ್ರಹಾರ ಮಾಡಿದ್ದಾರೆ. ಆದರೆ, ಖರ್ಗೆ ಅವರು ಆ ವಿಡಿಯೋವನ್ನು ನೋಡಿದ್ದರೆ ಈ ರೀತಿ ಕಾಮೆಂಟ್ ಮಾಡುತ್ತಿರಲಿಲ್ಲ.

English summary
Uttar Pradesh chief minister Yogi Adityanath did not really say Bajrangi or Hanuman a dalit. If you listen to his speech properly and understand clearly, Yogi Adityanath meant differently. He said there are dalits, deprived in India, Bajrangi unites them all.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X