ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ರಾಜಸ್ಥಾನದಲ್ಲಿ ಮನೆ ಮುಂದೆ ಉಗುಳಿದ್ದು ಮುಸ್ಲಿಂ ಮಹಿಳೆಯರಲ್ಲ, ಮತ್ಯಾರು?

|
Google Oneindia Kannada News

ಜೈಪುರ, ಏಪ್ರಿಲ್ 17: ಕಳೆದ ನಾಲ್ಕು ದಿನಗಳ ಹಿಂದೆ ರಾಜಸ್ಥಾನದ ಕೋಟ ನಗರದಲ್ಲಿ ಘಟನೆಯೊಂದು ನಡೆದಿತ್ತು. ಕೆಲವು ಮಹಿಳೆಯರು ಮನೆಗಳ ಮುಂದೆ ಉಗುಳುತ್ತಿರುವ ದೃಶ್ಯಗಳು ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿತ್ತು. ಕವರ್‌ನಲ್ಲಿ ಉಗುಳಿ, ಅದನ್ನು ಮನೆಗಳ ಮುಂದೆ ಬಿಸಾಡಿ ಹೋಗುತ್ತಿರುವ ದೃಶ್ಯ ಸೆರೆಯಾಗಿತ್ತು.

ಕೊರೊನಾ ವೈರಸ್ ಹರಡುತ್ತಿರುವ ಈ ಸಮಯದಲ್ಲಿ ಆ ಮಹಿಳೆಯರು ಮಾಡಿದ ಕೆಲಸ ನಿಜಕ್ಕೂ ಆತಂಕ ಸೃಷ್ಟಿಸಿತ್ತು. ಬಳಿಕ ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ದೊಡ್ಡ ಸದ್ದು ಮಾಡಿತು. ಅದು ಎಷ್ಟರ ಮಟ್ಟಿಗೆ ಅಂದ್ರೆ ಈ ವಿಡಿಯೋ ಕೋಮುವಾದಕ್ಕೆ ಸಿಲುಕೊಂಡಿತು.

ಸೋಶಿಯಲ್ ಮೀಡಿಯಾದಲ್ಲಿ ಕೆಲವರು ಈ ವಿಡಿಯೋ ಶೇರ್ ಮಾಡಿ, ಮುಸ್ಲಿಂ ಮಹಿಳೆಯರು ಉದ್ದೇಶಪೂರ್ವಕವಾಗಿ ಕೊರೊನಾ ಸೋಂಕು ಹರಡಿಸುತ್ತಿದ್ದಾರೆ. ಅದಕ್ಕಾಗಿ ಮನೆಗಳ ಮುಂದೆ ಉಗುಳುತ್ತಿದ್ದಾರೆ ಎಂದು ಆರೋಪಿಸಿದರು.

Women Were Spitting Inside Houses In Rajasthan They Are Not Muslim

ಸಿಸಿಟಿವಿ ಆಧರಿಸಿದ ಪೊಲೀಸರು ಈ ಪ್ರಕರಣವನ್ನು ಬಹಳ ಗಂಭೀರವಾಗಿ ಪರಿಗಣಿಸಿದರು. ನಂತರ, ಸಿಸಿಟಿವಿಯಲ್ಲಿ ಸೆರೆಯಾಗಿದ್ದ ಐದು ಜನರ ಮಹಿಳೆಯರನ್ನು ಪೊಲೀಸರು ಬಂಧಿಸಿ ವಿಚಾರಣೆ ನಡೆಸಿದ್ದಾರೆ. ವಿಚಾರಣೆ ವೇಳೆ ಅವರು ಮುಸ್ಲಿಂ ಮಹಿಳೆಯರು ಅಲ್ಲ ಎನ್ನುವುದು ತಿಳಿದುಬಂದಿದೆ. ಈ ಮೂಲಕ ಮುಸ್ಲಿಂ ಮಹಿಳೆಯರು ಎಂದು ವಿಡಿಯೋ ಶೇರ್ ಮಾಡಿದ್ದವರಿಗೆ ಮುಖಭಂಗವಾಗಿದೆ.

ಪ್ರಾಥಮಿಕ ವರದಿ ಪ್ರಕಾರ, ಈ ಮಹಿಳೆಯರು ಬವಾರಿ ಸಮುದಾಯದವರಾಗಿದ್ದು, ಭಿಕ್ಷೆ ಕೊಟ್ಟಿಲ್ಲ ಎಂಬ ಕಾರಣಕ್ಕೆ ಆ ರೀತಿ ಮನೆ ಮುಂದೆ ಉಗುಳಿದ್ದಾರೆ ಎಂದು ಮಾಹಿತಿ ನೀಡಿದ್ದಾರೆ. ಕುನ್ಹರಿಯ ಬಾಪು ಕಚ್ಚಿ ಬಸ್ತಿ ನಿವಾಸಿಗಳಾದ ಮಾಲಾ ಬವಾರಿ (30), ಅನರಿಯಾ ಬವಾರಿ (65), ದುಲಾರಿ ಬವಾರಿ (35), ಆಶಾ ಬವಾರಿ (35) ಮತ್ತು ಚಂದಾ ಬವರಿ (20) ಎಂದು ಗುರುತಿಸಲಾಗಿದೆ.

ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಈ ಐದು ಮಹಿಳೆಯವರನ್ನು 14 ದಿನಗಳ ನ್ಯಾಯಾಂಗ ಬಂಧನಕ್ಕೆ ನೀಡುವಂತೆ ನ್ಯಾಯಾಲಯ ಆದೇಶಿಸಿದೆ.

English summary
Women were spitting inside houses in rajasthan they are not muslim. all are Bawari community people.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X