ಮಹಿಳೆ ಮೇಲೆ ಗ್ಯಾಂಗ್ರೇಪ್, ಆನ್ಲೈನ್ನಲ್ಲಿ ವಿಡಿಯೋ ಅಪ್ಲೋಡ್
ಜೈಪುರ, ಸೆಪ್ಟೆಂಬರ್ 19: ರಾಜಸ್ಥಾನದಲ್ಲಿ ಮಹಿಳೆ ಮೇಲೆ ಸಾಮೂಹಿಕ ಅತ್ಯಾಚಾರ ನಡೆಸಿ ಬಳಿಕ ವಿಡಿಯೋವನ್ನು ಆನ್ಲೈನ್ನಲ್ಲಿ ಹರಿಬಿಟ್ಟಿರುವ ಘಟನೆ ನಡೆದಿದೆ.
ಆರು ಮಂದಿಯಿಂದ 45 ವರ್ಷದ ಮಹಿಳೆ ಮೇಲೆ ಅತ್ಯಾಚಾರ ಆಳ್ವಾರದಲ್ಲಿ ನಡೆದಿದೆ.ಅದನ್ನು ಚಿತ್ರೀಕರಿಸಿಕೊಂಡು ಆನ್ಲೈನ್ನಲ್ಲಿ ಅಪ್ಲೋಡ್ ಮಾಡಲಾಗಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.
ಆಘಾತಕಾರಿ ಘಟನೆ: ಟಿ.ವಿ. ಚಾನೆಲ್ ಉದ್ಯೋಗಿಗಳಿಂದ ಬಾಲಕಿ ಮೇಲೆ ಸಾಮೂಹಿಕ ಅತ್ಯಾಚಾರ
ಸೆಪ್ಟೆಂಬರ್ 17 ರಂದು ದೂರು ದಾಖಲಾಗಿದೆ. ಮಹಿಳೆಯು ಯಾವುದೋ ಕೆಲಸಕ್ಕೆಂದು ಹೋಗಿ ಮನೆಗೆ ಬರುವಾಗ ಈ ಘಟನೆ ನಡೆದಿದೆ. ಆಕೆಯನ್ನು ಆರು ಮಂದಿ ಎಳೆದುಕೊಂಡು ಹೋಗಿ ಅತ್ಯಾಚಾರ ನಡೆಸಿ, ವಿಡಿಯೋ ಮಾಡಿದ್ದರು.
ಓರ್ವ ಆಕೆಯ ಮೇಲೆ ಅತ್ಯಾಚಾರವೆಸಗಿದ್ದ ಉಳಿದ ಐವರು ಲೈಂಗಿಕ ಕಿರುಕುಳ ನೀಡಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.
ಆಕೆ ತಕ್ಷಣ ಮನೆಗೆ ತೆರಳಿ ಪತಿಗೆ ವಿಷಯ ತಿಳಿಸಿ, ದೂರು ದಾಖಲಿಸಿದ್ದರು. ಆರು ಮಂದಿಯಲ್ಲಿ ಇಬ್ಬರನ್ನು ಬಂಧಿಸಲಾಗಿದೆ. ಉಳಿದ ಆರೋಪಿಗಳಿಗಾಗಿ ಪೊಲೀಸರು ಬಲೆ ಬೀಸಿದ್ದಾರೆ.