ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ವೈರಲ್ ವಿಡಿಯೋ: ಹೆಣ್ಣು ಹುಲಿಗಾಗಿ ಕಾದಾಡಿದ ಹುಲಿ ಹೆಬ್ಬುಲಿ

|
Google Oneindia Kannada News

ಜೈಪುರ, ಅಕ್ಟೋಬರ್ 17: ರಾಜಸ್ಥಾನದ ರಣ್ ಥಂಬರ್ ರಾಷ್ಟ್ರೀಯ ಉದ್ಯಾನವನದಲ್ಲಿ ಹೆಣ್ಣು ಹುಲಿಗಾಗಿ ಎರಡು ಹುಲಿಗಳು ಕಾದಾಟದ ವಿಡಿಯೋ ಸಕತ್ ವೈರಲ್ ಆಗುತ್ತಿದೆ.

ಭಾರತೀಯ ಅರಣ್ಯ ಸೇವೆ ಅಧಿಕಾರಿ ಪ್ರವೀಣ್ ಕಸ್ವಾನ್ ಅವರು ಟ್ವೀಟ್ ಮಾಡಿರುವ ಈ ವಿಡಿಯೋದಲ್ಲಿ ಎರಡು ಹುಲಿಗಳನ್ನು ಟಿ57 ಹಾಗೂ ಟಿ58 ಎಂದು ಹೆಸರಿಸಿದ್ದಾರೆ. ಈ ಎರಡು ಹುಲಿಗಳು ಅತಿ ಉಗ್ರವಾಗಿ, ಕ್ರೂರವಾಗಿ ಕಾಳಗ ನಡೆಸಿದವು. ಟಿ39 ಎಂದು ಹೆಣ್ಣು ಹುಲಿಯನ್ನು ಹೆಸರಿಸಿದ್ದಾರೆ.

ಇಬ್ಬರನ್ನು ಬಲಿ ಪಡೆದಿದ್ದ ನರಭಕ್ಷಕ ಹುಲಿ ಕೊನೆಗೂ ಸೆರೆಇಬ್ಬರನ್ನು ಬಲಿ ಪಡೆದಿದ್ದ ನರಭಕ್ಷಕ ಹುಲಿ ಕೊನೆಗೂ ಸೆರೆ

ವಾಲಿ- ಸುಗ್ರೀವರ ಕಾಳಗ ನೆನಪಿಸುವ ಈ ಸೋದರ ಹುಲಿಗಳ ಕಾದಾಟದಲ್ಲಿ ಟಿ57 ಅಂತಿಮವಾಗಿ ಗೆಲುವು ಸಾಧಿಸಿದೆ. ಅದೃಷ್ಟವಶಾತ್ ಟಿ57 ಹಾಗೂ ಟಿ58 ಎರಡು ಕೂಡಾ ಭೀಕರ ಕಿತ್ತಾಟದ ನಂತರವೂ ಗಾಯಗೊಂಡು ಬದುಕುಳಿದಿವೆ ಎಂದು ಮತ್ತೊಂದು ಟ್ವೀಟ್ ಮಾಡಿದ್ದಾರೆ.

WATCH: Two male tigers fight it out in Ranthambore over a tigress

ಈ ಸಮಯಕ್ಕೆ ಸರಿ ಸುಮಾರು 762 ಬಾರಿ ರೀ ಟ್ವೀಟ್ ಆಗಿದ್ದು, 2.5K ಬಾರಿ ಲೈಕ್ಸ್ ಪಡೆದುಕೊಂಡಿದೆ. ಅನೇಕ ಮಂದಿ ಕಾಮೆಂಟ್ ಮಾಡಿದ್ದಾರೆ. ವಿಡಿಯೋ ಟ್ವೀಟ್ ಗೆ ಕಾಮೆಂಟ್ ಮಾಡಿರುವ ಪ್ರವೀಣ್ ಅವರು ಈ ವಿಡಿಯೋವನ್ನು ಹನ್ಸ್ ರಾಜ್ ಗುರ್ಜಾರ್ ಅವರು ಚಿತ್ರೀಕರಿಸಿದರು. ಸುಮಾರು 16 ಮಂದಿ ಈ ಭೀಕರ ಕಾಳಗ ವೀಕ್ಷಿಸಿದ್ದಾರೆ ಎಂದಿದ್ದಾರೆ.

ಟ್ವಿಟ್ಟರಲ್ಲಿ ಹುಲಿ, ಹುಲಿ, ಹೆಬ್ಬುಲಿ, ದೈತ್ಯಬೆಕ್ಕಿಗೊಂದು ದಿನಟ್ವಿಟ್ಟರಲ್ಲಿ ಹುಲಿ, ಹುಲಿ, ಹೆಬ್ಬುಲಿ, ದೈತ್ಯಬೆಕ್ಕಿಗೊಂದು ದಿನ

ಹೆಣ್ಣು ಹುಲಿಗಾಗಿ ಕಾದಾಟವಲ್ಲ?: "ಮಾಧ್ಯಮಗಳಲ್ಲಿ ಈ ವಿಡಿಯೋ ಬಗ್ಗೆ ಅನೇಕ ಊಹಾಪೋಹ ಸುದ್ದಿ ಹರಡುತ್ತಿದೆ. ನಾನು ಈ ಕಾಳಗ ನಡೆದಾಗ ಅಲ್ಲೇ ಇದ್ದೆ ಟಿ39 ಗಾಗಿ ನಡೆದ ಕಾದಾಟವಲ್ಲ, ಮಲಗಿದ್ದ ಹುಲಿಯೊಂದರ ಮೇಲೆ ಮತ್ತೊಂದು ಸುಮ್ಮನೆ ಎರಗಿ ಕಿತ್ತಾಡಿಕೊಂಡಿವೆ ಅಷ್ಟೇ ಎಂದು ಹರ್ಷ ಎಂಬುವರು ಸ್ಪಷ್ಟನೆ ಕೊಟ್ಟಿದ್ದಾರೆ. ಈ ಬಗ್ಗೆ ಚರ್ಚೆಯನ್ನು ಪ್ರವೀಣ್ ಅವರ ಟ್ವೀಟ್ ಪೋಸ್ಟ್ ನಲ್ಲಿ ನೋಡಬಹುದು.

English summary
A fierce fight between two tigers at Rajasthan's Ranthambore National Park has gone viral online, giving you a sneak peek of the big cats wrestling match would look like.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X