• search
  • Live TV
ಜೈಪುರ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ವಿಡಿಯೋ: ಶಾಲಾ ಪ್ರಾಂಶುಪಾಲರನ್ನು ಥಳಿಸಿದ ಪತ್ನಿ: ಭದ್ರತೆಗೆ ಕೋರ್ಟ್ ಆದೇಶ

|
Google Oneindia Kannada News

ಅಲ್ವಾರ್ ಮೇ 26: ರಾಜಸ್ಥಾನದ ಸರ್ಕಾರಿ ಶಾಲೆಯ ಪ್ರಾಂಶುಪಾಲರೊಬ್ಬರು ಪತ್ನಿಯಿಂದ ಥಳಿಸಲ್ಪಟ್ಟು ಭದ್ರತೆಗೆ ಕೋರ್ಟ್ ಮೊರೆ ಹೋದ ಅಪರೂಪದ ಘಟನೆ ನಡೆದಿದೆ. ತಮ್ಮ ಪತ್ನಿ ಮೇಲೆ ಕೌಟುಂಬಿಕ ದೌರ್ಜನ್ಯದ ಆರೋಪ ಹೊರಿಸಿದ ಸರ್ಕಾರಿ ಶಾಲೆಯ ಪ್ರಾಂಶುಪಾಲರ ಮನವಿಯಂತೆ ಅವರ ಭದ್ರತೆಗೆ ಕೋರ್ಟ್ ಆದೇಶ ನೀಡಿದೆ.

ಪತ್ನಿ ತಮಗೆ ಥಳಿಸಿದ ವಿಡಿಯೋಗಳೊಂದಿಗೆ ಪ್ರಾಂಶುಪಾಲರು ಸ್ಥಳೀಯ ನ್ಯಾಯಾಲಯವನ್ನು ಸಂಪರ್ಕಿಸಿದ್ದರಿಂದ ಅವರಿಗೆ ಭದ್ರತೆ ನೀಡಲಾಗಿದೆ. ಜೊತೆಗೆ ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಭಾರೀ ವೈರಲ್ ಆಗಿದೆ. ಅಂದಹಾಗೆ ವಿಡಿಯೋದಲ್ಲಿ ಕಾಣಿಡಿಕೊಂಡ ಪ್ರಾಂಶುಪಾಲರ ಹೆಸರು ಅಜಿತ್ ಯಾದವ್ ಇವರ ಪತ್ನಿ ಸುಮನ್ ಯಾದವ್ ಎನ್ನಲಾಗಿದೆ.

ವಿಡಿಯೋ: ತನ್ನ ಫೋಟೋ ಕ್ಲಿಕ್ಕಿಸಲು ಯತ್ನಿಸಿದ ಬಾಲಕಿಗೆ ಕಪಾಳಮೋಕ್ಷ ಮಾಡಿದ ಆನೆ ವಿಡಿಯೋ: ತನ್ನ ಫೋಟೋ ಕ್ಲಿಕ್ಕಿಸಲು ಯತ್ನಿಸಿದ ಬಾಲಕಿಗೆ ಕಪಾಳಮೋಕ್ಷ ಮಾಡಿದ ಆನೆ

ವಿಡಿಯೊದಲ್ಲಿ, ಹರಿಯಾಣದ ಖಾರ್ಕರ ಸರ್ಕಾರಿ ಶಾಲೆಯ ಪ್ರಾಂಶುಪಾಲರಾದ ಅಜಿತ್ ಯಾದವ್ ಅವರನ್ನು ಅವರ ಪತ್ನಿ ಸುಮನ್ ಯಾದವ್ ಬೆನ್ನಟ್ಟಿ ಥಳಿಸಿದ್ದಾರೆ. ಮಹಿಳೆಯು ಮನೆಯಲ್ಲಿದ್ದ ಕ್ರಿಕೆಟ್ ಬ್ಯಾಟ್, ಕಬ್ಬಿಣದ ಪ್ಯಾನ್ ಮತ್ತು ಇತರ ಆಯುಧಗಳಿಂದ ಅವರನ್ನು ಹೊಡೆಯುತ್ತಿರುವುದು ಸಿಸಿಟಿವಿಯಲ್ಲಿ ಸೆರೆಯಾಗಿದೆ. ಈ ಬಗ್ಗೆ ತನಿಖೆ ನಡೆಸಿ ರಕ್ಷಣೆ ನೀಡುವಂತೆ ನ್ಯಾಯಾಲಯ ಪೊಲೀಸರಿಗೆ ಸೂಚಿಸಿದೆ.

ಹರಿಯಾಣದ ಸೋನಿಪತ್‌ನವರಾದ ಯಾದವ್ ಅವರ ಪತ್ನಿ ಸುಮನ್ ಯಾದವ್ ಅವರು ತಮ್ಮ ಚಿಕ್ಕ ಮಗನ ಮುಂದೆ ತನ್ನ ಪತಿಯನ್ನು ಥಳಿಸುತ್ತಿರುವುದನ್ನು ವಿಡಿಯೊ ತೋರಿಸುತ್ತದೆ. ಕಳೆದ ಒಂದು ವರ್ಷದಲ್ಲಿ ಹಲ್ಲೆಯ ಘಟನೆಗಳು ಹೆಚ್ಚಿವೆ ಎಂದು ಯಾದವ್ ಆರೋಪಿಸಿದ್ದಾರೆ. ನಂತರ ಸಾಕ್ಷ್ಯ ಸಂಗ್ರಹಿಸಲು ಮನೆಯಲ್ಲಿ ಸಿಸಿಟಿವಿ ಕ್ಯಾಮೆರಾ ಅಳವಡಿಸಿದ್ದರು ಎನ್ನಲಾಗಿದೆ.

ಏಳು ವರ್ಷಗಳ ಹಿಂದೆ ದಂಪತಿ ವಿವಾಹವಾಗಿದ್ದರು. ಇವರದ್ದು ಪ್ರೇಮವಿವಾಹವಾಗಿದೆ. ಆದರೆ ನಾನು ಯಾವತ್ತೂ ಸುಮನ್‌ನನ್ನು ಹೊಡೆದಿಲ್ಲ ಎಂದು ಯಾದವ್ ಹೇಳುತ್ತಾರೆ.

(ಒನ್ಇಂಡಿಯಾ ಸುದ್ದಿ)

English summary
Rajasthan government school principal Ajit Yadav was beaten by his wife Suman Yadav in a rare incident in which a court was asked to provide security.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X