ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ವಿಡಿಯೋ: ಪೊಲೀಸರಿಗೆ ಬೆದರಿಕೆ ಹಾಕಿದ ಕಾಂಗ್ರೆಸ್ ಶಾಸಕಿ!

|
Google Oneindia Kannada News

ಜೈಪುರ, ಅಕ್ಟೋಬರ್ 19: ಕುಡಿದು ಕಾರು ಚಲಾಯಿಸಿದ ಆರೋಪದ ಮೇಲೆ ಬಂಧಿಯಾಗಿರುವ ಸೋದರಳಿಯನ್ನು ಬಿಡುಗಡೆ ಮಾಡುವಂತೆ ಪೋಲಿಸ್ ಠಾಣೆಯಲ್ಲಿ ಕಾಂಗ್ರೆಸ್ ಶಾಸಕಿ ಪತಿಯೊಡನೆ ಧರಣಿ ಮಾಡಿದ್ದಾಳೆ. ಈ ಸಂದರ್ಭದಲ್ಲಿ ಬಿಡುಗಡೆ ಮಾಡುವಂತೆ ಪೊಲೀಸರಿಗೆ ಬೆದರಿಕೆ ಸಹ ಹಾಕಲಾಗಿದೆ.

ರಾಜಸ್ಥಾನದ ಕಾಂಗ್ರೆಸ್ ಶಾಸಕಿ ಮೀನಾ ಕುನ್ವಾರ್ ಮತ್ತು ಆಕೆಯ ಪತಿ ಉಮೈದ್ ಸಿಂಗ್ ಸೋದರಳಿಯನನ್ನು ಪೊಲೀಸರು ಬಂಧಿಸಿದ್ದದ್ದರು. ಕುಡಿದು ವಾಹನ ಚಾಲನೆ ಮಾಡಿ ಪ್ರಕರಣದಲ್ಲಿ ಬಂಧಿಸಿ ಜೋಧ್‌ಪುರದ ಶೇರ್‌ಗಢದ ಪೊಲೀಸ್ ಠಾಣೆಗೆ ಕರೆ ತಂದಿದ್ದರು.

ಮಕ್ಕಳು ಆಗಾಗ ಕುಡಿಯುವುದು ಮತ್ತು ತಪ್ಪುಗಳನ್ನು ಮಾಡುವುದು ಸಹಜ ಎಂದು ಪೊಲೀಸರೊಂದಿಗೆ ವಾದ ಮಾಡಿದ್ದಾರೆ. ಬಂಧನದಲ್ಲಿರುವ ಆತನನ್ನು ಬಿಡುಗಡೆ ಮಾಡಬೇಕು ಎಂದು ಪಟ್ಟು ಹಿಡಿದರು. ಪೊಲೀಸ್ ಠಾಣೆಯ ನೆಲದ ಮೇಲೆ ಕುಳಿತು ಪ್ರತಿಭಟನೆ ನಡೆಸಿದರು.

Video: Rajasthana Congress Legislator Threatens Police

ಬಂಧಿನದಲ್ಲಿರುವ ಸಂಬಂಧಿ ಬಿಡಗುಡೆ ಮಾಡಬೇಕು ಎಂದು ಪೋಲಿಸರನ್ನು ಒತ್ತಾಯಿಸಿದ್ದಾರೆ. ಶಾಸಕಿ ಮತ್ತು ಆಕೆಯ ಪತಿ ಪೊಲೀಸರೊಂದಿಗೆ ಈ ಸಂದರ್ಭದಲ್ಲಿ ಜಗಳವಾಡಿ, ಬೆದರಿಕೆ ಹಾಕಿದ್ದಾರೆ. ಈ ವಿಡಿಯೋ ಎಲ್ಲೆಡೆ ಹರಿದಾಡುತ್ತಿದೆ.

ಆದರೆ ಶಾಸಕಿ ತನ್ನ ಸೋದರಳಿಯನನ್ನು ಬಿಡುಗಡೆ ಮಾಡುವಂತೆ ತಾನು ಪೊಲೀಸರಿಗೆ ಮನವಿ ಮಾಡಿದ್ದಾಗಿ ಹೇಳಿದ್ದಾರೆ. ಎಂಎಲ್ಎ ಮತ್ತು ಆಕೆಯ ಪತಿ ಇಬ್ಬರೂ "ಎಲ್ಲಾ ಮಕ್ಕಳು ಕೆಲವೊಮ್ಮೆ ಕುಡಿಯುತ್ತಾರೆ. ಆತನನ್ನು ಬಿಡುಗಡೆ ಮಾಡುವಂತೆ ನಾನು ನಿಮಗೆ ಮನವಿ ಮಾಡಿದ್ದೆ. ನಾನು ಅದನ್ನು ನನ್ನ ಫೋನಿನಲ್ಲಿ ರೆಕಾರ್ಡ್ ಮಾಡಿದ್ದೇನೆ "ಎಂದು ಶಾಸಕರು ತಿಳಿಸಿದ್ದಾರೆ.

ಶಾಸಕಿಮತ್ತು ಪತಿ ಪೊಲೀಸರಿಗೆ ಎಚ್ಚರಿಕೆ ನೀಡಿದಾಗ ಪೋಲಿಸ್ ಅಧಿಕಾರಿಯೊಬ್ಬ ಇಡೀ ವಾದದ ವೀಡಿಯೊವನ್ನು ಚಿತ್ರೀಕರಿಸುವುದನ್ನು ಶಾಸಕಿ ನೋಡುತ್ತಾರೆ. ವಿಡಿಯೋದಲ್ಲಿ ಪೊಲೀಸ್ ಅಧಿಕಾರಿ ದಂಪತಿಗಳಿಗೆ ಶಾಂತ ರೀತಿಯಿಂದ ವರ್ತಿಸಲು ಹೇಳುತ್ತಿರುವುದನ್ನು ಕಾಣಬಹುದು. ಆದರೆ ಇದಕ್ಕೆ ಆಕ್ಷೇಪ ವ್ಯಕ್ತಪಡಿಸಿದ್ದು ವಿಡಿಯೋದಲ್ಲಿ ದಾಖಲಾಗಿದೆ.

ಶಾಸಕಿಯ ಪತಿ ಉಮೈದ್ ಸಿಂಗ್ ಸಿಬ್ಬಂದಿಗೆ ಬೆದರಿಕೆ ಹಾಕಿದ್ದಾರೆ. "ನಿನ್ನೆಯಷ್ಟೇ ಈ ಠಾಣೆಯ ಕೆಲ ಅಧಿಕಾರಿಗಳನ್ನು ಅಮಾನತುಗೊಳಿಸಲಾಗಿದೆ. ನೀವು ಅದನ್ನು ಮರೆತಿದ್ದೀರಾ? " ಎಂದು ಪ್ರಶ್ನೆ ಹಾಕಿದ್ದಾರೆ. ಶಾಸಕರ ಸೋದರಳಿಯನ ಕಾರನ್ನು ಪೊಲೀಸರು ವಶಪಡಿಸಿಕೊಂಡಿದ್ದಕ್ಕೆ ಕೋಪಗೊಂಡ ಶಾಸಕಿ ಅದನ್ನು ತಾನೇ ತೆಗೆದುಕೊಂಡು ಬಂಧನದಿಂದ ಬಿಡುಗಡೆ ಮಾಡಿದಳು. ಅಂತಿಮವಾಗಿ, ಡಿಸಿಪಿ ಮಧ್ಯಸ್ಥಿಕೆಯ ನಂತರ ವಾಹನವನ್ನು ಬಿಡುಗಡೆ ಮಾಡಲಾಯಿತು.

ಭಾನುವಾರ ರಾತ್ರಿ ಈ ಘಟನೆ ನಡೆದಿದ್ದರೂ, ವಿಡಿಯೋ ಈಗ ವೈರಲ್ ಆಗುತ್ತಿದೆ. ಇದರಿಂದ ಪಕ್ಷಕ್ಕೆ ಭಾರೀ ಮುಜುಗರ ಉಂಟಾಗಿದೆ.

English summary
A Rajasthan Congress women MLA and her husband protest against police personnel to release her nephew who was caught for drunken drive case.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X