ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಜೋಧ್‌ಪುರದಲ್ಲಿ ನಾಯಿಯನ್ನು ಕಾರಿಗೆ ಕಟ್ಟಿ ಎಳೆದೊಯ್ದ ವೈದ್ಯ: ವಿರುದ್ಧ ಪ್ರಕರಣ ದಾಖಲು

|
Google Oneindia Kannada News

ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿರುವ ವಿಡಿಯೋವೊಂದು ಕಾರಿಗೆ ಸರಪಳಿಯಲ್ಲಿ ಕಟ್ಟಿದ ನಾಯಿಯನ್ನು ಚಾಲಕ ಎಳೆದುಕೊಂಡು ಹೋಗುತ್ತಿರುವ ದೃಶ್ಯ ಕಂಡು ಬಂದಿದೆ. ಸಾಮಾಜಿಕ ಮಾಧ್ಯಮದಲ್ಲಿ ವಿಡಿಯೊವನ್ನು ಪೋಸ್ಟ್ ಮಾಡಿದ ಬಳಕೆದಾರರು ಇದನ್ನು ಭಾನುವಾರ ರಾಜಸ್ಥಾನದ ಜೋಧ್‌ಪುರದಲ್ಲಿ ಚಿತ್ರೀಕರಿಸಲಾಗಿದೆ ಮತ್ತು ಚಾಲಕ ವೈದ್ಯರಾಗಿದ್ದಾರೆ ಎಂದು ಹೇಳಿದ್ದಾರೆ. ವ್ಯಕ್ತಿ ಕಾರನ್ನು ಓಡಿಸುತ್ತಿರುವುದು, ಹಿಂಬದಿಯಲ್ಲಿ ನಾಯಿ ತನ್ನ ಪ್ರಾಣವನ್ನು ಉಳಿಸಿಕೊಳ್ಳಲು ಹೆಣಗಾಡುತ್ತಿರುವುದನ್ನು ವಿಡಿಯೊ ತೋರಿಸುತ್ತದೆ. ಪ್ರಾಣಿ ಹಿಂಸೆಯ ಈ ಕ್ಲಿಪ್ ಸಾಮಾಜಿಕ ಮಾಧ್ಯಮ ಬಳಕೆದಾರರನ್ನು ಕೆರಳಿಸಿದೆ. ಜೊತೆಗೆ ವೈದ್ಯರಿಗೆ ಕಠಿಣ ಶಿಕ್ಷೆಗೆ ಒತ್ತಾಯಿಸುತ್ತಿದ್ದಾರೆ.

ಕಾರನ್ನು ಹಿಂಬಾಲಿಸಿಕೊಂಡು ಬಂದ ವಾಹನ ಸವಾರನೊಬ್ಬರು ಈ ವಿಡಿಯೋ ಚಿತ್ರೀಕರಣ ಮಾಡಿದ್ದಾರೆ. ಬೈಕ್‌ನಲ್ಲಿ ಬಂದ ವ್ಯಕ್ತಿಯೊಬ್ಬ ತನ್ನ ವಾಹನವನ್ನು ಕಾರಿನ ಮುಂದೆ ನಿಲ್ಲಿಸಿ ಚಾಲಕನನ್ನು ಬಲವಂತವಾಗಿ ನಾಯಿಯನ್ನು ಎಳೆದುಕೊಂಡು ಹೋಗುವುದನ್ನು ತಡೆಹಿಡಿದಿದ್ದಾನೆ.

ಈ ಘಟನೆಯು ಜನನಿಬಿಡ ರಸ್ತೆಯಲ್ಲಿ ಸಂಭವಿಸಿದೆ. ಅಲ್ಲಿ ಹಲವಾರು ವಾಹನಗಳು ಸಹ ಕಾಣಬಹುದಾಗಿದೆ. ಉದ್ದನೆಯ ಹಗ್ಗದಿಂದ ನಾಯಿಯ ಕುತ್ತಿಗೆಯನ್ನು ಕಟ್ಟಿ ಆ ಹಗ್ಗವನ್ನು ಕಾರಿಗೆ ಕಟ್ಟಲಾಗಿದೆ. ಕಾರು ಒಂದು ಬದಿಯಿಂದ ಇನ್ನೊಂದು ಬದಿಗೆ ಅಪಾಯಕಾರಿಯಾಗಿ ಚಲಿಸುತ್ತಿದ್ದರೆ ನಾಯಿ ಓಡಲು ಸಾಧ್ಯವಾಗದೇ ಇದ್ದರು ವಾಹನದ ಹಿಂದೆ ಓಡುತ್ತಿದೆ. ನಾಯಿ ವಾಹನದ ವೇಗಕ್ಕೆ ಸಮಯನಾಗಿ ಓಡಲು ಸಾಧ್ಯವಾಗದೇ ಇದ್ದರೂ ಕಷ್ಟಪಟ್ಟು ಓಡುತ್ತಿರುವುದನ್ನು ಕಾಣಬಹುದು. ಒಂದು ವೇಲೆ ನಾಯಿ ಓಡದೇ ನಿಂತರೆ ಅದರ ಪ್ರಾಣ ಕಾರಿನಿಂದಲೇ ಹೋಗುತ್ತದೆ.

ಸ್ಥಳೀಯರು ವಾಹನದ ಸುತ್ತ ಜಮಾಯಿಸಿ ನಾಯಿಯ ಸರಪಳಿ ಬಿಚ್ಚಿದರು. ಅವರಲ್ಲಿ ಕೆಲವರು ಎನ್‌ಜಿಒಗೆ ಮಾಹಿತಿ ನೀಡಿದ ಪ್ರಕಾರ ಅವರು ನಾಯಿಯನ್ನು ಆಸ್ಪತ್ರೆಗೆ ಕರೆದೊಯ್ದಿರುವುದಾಗಿ ಹೇಳಿಕೊಂಡಿದ್ದಾರೆ. ಎನ್ಜಿಒ ಡಾಗ್ ಹೋಮ್ ಫೌಂಡೇಶನ್ ಪೋಸ್ಟ್ ಮಾಡಿದ ಟ್ವೀಟ್ ಪ್ರಕಾರ, ವೈದ್ಯರ ಹೆಸರು ರಜನೀಶ್ ಗಾಲ್ವಾ ಎಂದು ತಿಳಿದುಬಂದಿದೆ. ಬೀದಿನಾಯಿಯನ್ನು ತನ್ನ ಮನೆಯಿಂದ ದೂರ ಸಾಗಿಸಲು ವೈದ್ಯ ಹೂಡಿದ ಅಮಾನವೀಯ ಕೃತ್ಯವಿದು ಎಂದು ಸ್ಥಳೀಯ ಮಾಧ್ಯಮಗಳು ಉಲ್ಲೇಖಿಸಿವೆ.

Video: Doctor tied a dog to a moving car in Jodhpur

"ಡಾ. ರಜನೀಶ್ ಗ್ವಾಲಾ ನಾಯಿಯನ್ನು ನಡೆಸಿಕೊಂಡ ಬಗೆಗೆ ನಾಯಿಯ ಕಾಲುಗಳಿಗೆ ಗಾಯವಾಗಿದೆ ಜೊತೆಗೆ ಬಹು ಮೂಳೆಗಳ ಮುರಿತವಾಗಿವೆ. ಈ ಘಟನೆಯು ಶಾಸ್ತ್ರಿನಗರ ಜೋಧ್‌ಪುರದಲ್ಲಿ ನಡೆದಿದೆ. ದಯವಿಟ್ಟು ಈ ವಿಡಿಯೊವನ್ನು ಹಂಚಿಕೊಳ್ಳಿ. ಇಂತಹವರ ವಿರುದ್ಧ ಜೋಧ್‌ಪುರ ಸಿಪಿ ಕ್ರಮ ಕೈಗೊಳ್ಳಬೇಕು. ಜೊತೆಗೆ ಅವರ ಪರವಾನಗಿಯನ್ನು ರದ್ದುಗೊಳಿಸಬೇಕು" ಎಂದು ಆಘಾತಕಾರಿ ವಿಡಿಯೊವನ್ನು ಹೊಂದಿರುವ ಎನ್‌ಜಿಒ ಟ್ವೀಟ್‌ನಲ್ಲಿ ಬರೆದಿದೆ.

ವಿಡಿಯೋ ವೈರಲ್ ಬಳಿಕ ಪ್ರಾಣಿ ಹಿಂಸೆ ಕಾಯ್ದೆಯಡಿ ತನ್ನ ದೂರಿನ ಮೇರೆಗೆ ಪೊಲೀಸರು ದಾಖಲಿಸಿದ ಎಫ್‌ಐಆರ್‌ನ ಪ್ರತಿಯನ್ನು ಎನ್‌ಜಿಒ ಪೋಸ್ಟ್ ಮಾಡಿದೆ. ಈ ವಿಡಿಯೋ ಶೇರ್ ಆದಾಗಿನಿಂದ ಟ್ವಿಟರ್ ಬಳಕೆದಾರರು ಆಕ್ರೋಶ ಹೊರಹಾಕಿದ್ದಾರೆ.

"ಈ ವೈದ್ಯ ಇಷ್ಟೂ ಕರುಣೆಯಿಲ್ಲದ, ನಾಚಿಕೆಗೇಡಿನವನಾಗಿದ್ದಾನೆ" ಎಂದು ಬಳಕೆದಾರರು ಬರೆದಿದ್ದಾರೆ. ಇತರರು ವೈದ್ಯರನ್ನು "ಹೃದಯಹೀನ" ಎಂದು ಕರೆದರೆ ಮತ್ತು ಕೆಲವರು ಅವನ ಪರವಾನಗಿಯನ್ನು ರದ್ದುಗೊಳಿಸುವಂತೆ ರಾಜ್ಯ ಸರ್ಕಾರವನ್ನು ಕೇಳಿದ್ದಾರೆ.

English summary
A video of a dog tied to a moving car in Rajasthan's Jodhpur has gone viral. A case has been registered against Dr Rajneesh Gwala for torturing the dog.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X