• search
 • Live TV
ಜೈಪುರ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಸೋತರೆ ಆಳಿಗೊಂದು ಕಲ್ಲು: ಮುಳುವಾದ ವಸುಂಧರಾ ರಾಜೇ ಒರಟುತನ

|
   ಸೋತರೆ ಆಳಿಗೊಂದು ಕಲ್ಲು..! | Oneindia Kannada

   ರಾಜಸ್ಥಾನದ ಅಸೆಂಬ್ಲಿ ಚುನಾವಣೆಯಲ್ಲಿ ಬಿಜೆಪಿ ಮುಗ್ಗರಿಸಿದೆ. 2013ರ ಚುನಾವಣೆಗೆ ಹೋಲಿಸಿದರೆ ಅದು ಬರೋಬ್ಬರಿ 90ಸ್ಥಾನವನ್ನು ಕಳೆದುಕೊಂಡಿದೆ. ಸೋತ ಮೇಲೆ ಆಳಿಗೊಂದು ಕಲ್ಲು ಎನ್ನುವ ಮಾತಿನಂತೆ, ಪಕ್ಷ ಸೋತಿದ್ದು ತಮ್ಮದೇ ಮುಖ್ಯಮಂತ್ರಿಯಿಂದ ಎಂದು ಕಾರ್ಯಕರ್ತರು ದೂರುತ್ತಿದ್ದಾರೆ.

   ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್ ಶಾ ಮತ್ತು ವಸುಂಧರಾ ನಡುವೆ ರಾಜಕೀಯ ಸಂಬಂಧ ಹಳಸಿತ್ತು ಎನ್ನುವುದು ಎಲ್ಲರಿಗೂ ಗೊತ್ತಿರುವ ವಿಚಾರ. ಟಿಕೆಟ್ ಹಂಚಿಕೆಯಲ್ಲಿ ಇಬ್ಬರ ನಡುವೆ ಮನಸ್ತಾಪ/ಶೀತಲ ಸಮರ ಯಾವ ಮಟ್ಟಕ್ಕೆ ಹೋಗಿತ್ತು, ಅಂದರೆ ಕೊನೆಯ ಕ್ಷಣದಲ್ಲಿ ಪ್ರಧಾನಿ ಮೋದಿಯೇ ಮಧ್ಯಪ್ರವೇಶಿಸಬೇಕಾಯಿತು.

   ರಾಜಸ್ಥಾನದಲ್ಲಿ ಆಡಳಿತ ವಿರೋಧಿ ಅಲೆ ಇರುವುದು ಅತ್ಯಂತ ಸ್ಪಷ್ಟವಾಗಿದ್ದರೂ, ಕೊನೆಯ ಹಂತದಲ್ಲಾದರೂ ವಸುಂಧರಾ ಅದಕ್ಕೆ ಪ್ಯಾಚ್ ಅಪ್ ಮಾಡುವ ಕೆಲಸ ಮಾಡುವುದನ್ನು ಬಿಟ್ಟು, ನಿರ್ಲ್ಯಕ್ಷ ಧೋರಣೆ ತಾಳಿದ್ದೇ, ಪಕ್ಷ ಸೋಲಲು ಕಾರಣ ಎನ್ನುವುದು ಕಾರ್ಯಕರ್ತರ ಮತ್ತು ಹಲವು ಮುಖಂಡರ ಅಭಿಪ್ರಾಯ.

   ರಾಜಸ್ಥಾನ ಮುಖ್ಯಮಂತ್ರಿ ಸ್ಥಾನಕ್ಕೆ ವಸುಂಧರಾ ರಾಜೆ ರಾಜೀನಾಮೆ

   ಕೊನೆಯ ಹಂತದ ಪ್ರಚಾರದ ವೇಳೆ ಪ್ರಧಾನಿ ಮೋದಿ ಮತ್ತು ಅಮಿತ್ ಶಾ ಬಿರುಸಿನ ಪ್ರಚಾರ ನಡೆಸದೇ ಹೋಗಿದ್ದಲ್ಲಿ, ಪಕ್ಷ ಇನ್ನಷ್ಟು ಹೀನಾಯವಾಗಿ ಸೋಲು ಅನುಭವಿಸುತ್ತಿತ್ತು ಎನ್ನುವುದು ರಾಜಕೀಯ ಪಂಡಿತರ ಅಭಿಪ್ರಾಯ. 2013ರ ಅಸೆಂಬ್ಲಿ ಚುನಾವಣೆಯಲ್ಲಿ ಕಾಂಗ್ರೆಸ್ ಸೋತಂತೆ, ನಾವು ಸೋತಿಲ್ಲ ಎನ್ನುವುದಷ್ಟೇ ಸದ್ಯ ಬಿಜೆಪಿ ನಾಯಕರುಗಳಿಗೆ ಇರುವ ಸಮಾಧಾನದ ಅಂಶ.

   ಆದರೆ, ಕಾಂಗ್ರೆಸ್ ಪಕ್ಷ ಹಿಂದಿನ ಸೋಲಿನಿಂದ ಪಾಠವನ್ನು ಕಲಿತಂತೆ, ರಾಹುಲ್ ಗಾಂಧಿ, ಅಶೋಕ್ ಗೆಹ್ಲೋಟ್ ಮತ್ತು ಸಚಿನ್ ಪೈಲಟ್ ನೇತೃತ್ವದಲ್ಲಿ ವ್ಯವಸ್ಥಿತ ಪ್ರಚಾರ ನಡೆಸಿ, ಬಿಜೆಪಿಗೆ ಮಣ್ಣುಮುಕ್ಕಿಸುವಲ್ಲಿ ಯಶಸ್ವಿಯಾದರು.

   ಶಿವರಾಜ್ ಸಿಂಗ್ ಚೌಹಾಣ್ ಮತ್ತು ವಸುಂಧರಾ ರಾಜೇ

   ಶಿವರಾಜ್ ಸಿಂಗ್ ಚೌಹಾಣ್ ಮತ್ತು ವಸುಂಧರಾ ರಾಜೇ

   ಐದು ರಾಜ್ಯಗಳ ಅಸೆಂಬ್ಲಿ ಚುನಾವಣೆಯ ವೇಳೆ, ಜನಸಾಮಾನ್ಯರ ಮತ್ತು ಮುಖಂಡರ ಜೊತೆ ಬೆರೆಯುವ ವಿಚಾರದಲ್ಲಿ, ರಾಜಸ್ಥಾನದ ಬಿಜೆಪಿ ಕಾರ್ಯಕರ್ತರು, ನಾಯಕರು, ಶಿವರಾಜ್ ಸಿಂಗ್ ಚೌಹಾಣ್ ಮತ್ತು ವಸುಂಧರಾ ರಾಜೇ ನಡುವಿರುವ ವ್ಯತಾಸದ ಬಗ್ಗೆಯೂ ಚರ್ಚೆ ನಡೆಸುತ್ತಿದ್ದರು. ಮಧ್ಯಪ್ರದೇಶದಲ್ಲಿಂದು ಬಿಜೆಪಿ ಕಠಿಣ ಸವಾಲು ನೀಡಿ ಸೋತಿದ್ದರೂ, ಶಿವರಾಜ್ ಸಿಂಗ್ ಜನಪ್ರಿಯ ಮುಖ್ಯಮಂತ್ರಿಯಾಗಿದ್ದರು.

   ಲೋಕಸಭೆ ಚುನಾವಣೆಯಲ್ಲೂ ಬಿಜೆಪಿಗೆ ಭಾರೀ ಆಘಾತ?!

   ಮಹಾರಾಣಿಯಂತೆ ವರ್ತಿಸುವ ವಸುಂಧರಾ

   ಮಹಾರಾಣಿಯಂತೆ ವರ್ತಿಸುವ ವಸುಂಧರಾ

   ರಾಜಸ್ಥಾನ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿಯ ಸೋಲಿನ ಹಿಂದಿನ ಪ್ರಮುಖ ಕಾರಣಗಳಲ್ಲಿ ವಸುಂಧರಾ ರಾಜೇ ಅವರ ನಡವಳಿಕೆಯೂ ಒಂದು. ಮಹಾರಾಣಿಯಂತೆ ವರ್ತಿಸುವ ರೀತಿಯ ಬಗ್ಗೆ, ಹಲವು ದೂರುಗಳು ಬಿಜೆಪಿ ವರಿಷ್ಠರಿಗೆ ಮತ್ತು ಪ್ರಧಾನಿಗೆ ಹೋಗಿದ್ದರೂ, ಇವರ ನಡವಳಿಕೆಯಲ್ಲಿ ಯಾವುದೇ ಬದಲಾವಣೆಯಾಗಲಿಲ್ಲ.

   ರಾಜಸ್ಥಾನ ಚುನಾವಣೆ : ಪಕ್ಷೇತರ ಅಭ್ಯರ್ಥಿ ವಿರುದ್ಧ ಸೋತ ಸಚಿವ!

   ಕಾರ್ಯಕರ್ತರ ಕಷ್ಟಗಳಿಗೆ ವಸುಂಧರಾ ಸ್ಪಂದಿಸುತ್ತಿರಲಿಲ್ಲ

   ಕಾರ್ಯಕರ್ತರ ಕಷ್ಟಗಳಿಗೆ ವಸುಂಧರಾ ಸ್ಪಂದಿಸುತ್ತಿರಲಿಲ್ಲ

   ಬರೀ ಜನಸಾಮಾನ್ಯರು, ಕಾರ್ಯಕರ್ತರು ಮಾತ್ರ ಯಾಕೆ ಬಿಜೆಪಿಯ ಪ್ರಮುಖ ಮುಖಂಡರು ಮತ್ತು ಸಚಿವರುಗಳಿಗೆಯೇ ವಸುಂಧರಾ ರಾಜೇ ಕಚೇರಿ/ಮನೆ ಪ್ರವೇಶ ಸುಲಭವಾಗಿ ಸಿಗುತ್ತಿರಲಿಲ್ಲ. ಪಕ್ಷಕ್ಕಾಗಿ ದುಡಿಯುತ್ತಿರುವ ಕಾರ್ಯಕರ್ತರ ಕಷ್ಟಗಳಿಗೆ ವಸುಂಧರಾ ಸ್ಪಂದಿಸುತ್ತಿರಲಿಲ್ಲ ಎನ್ನುವ ಆಪಾದನೆಯೂ ಅವರ ಮೇಲಿತ್ತು.

   ಅಶೋಕ್ ಗೆಹ್ಲೋಟ್ ಮತ್ತು ಸಚಿನ್ ಪೈಲಟ್

   ಅಶೋಕ್ ಗೆಹ್ಲೋಟ್ ಮತ್ತು ಸಚಿನ್ ಪೈಲಟ್

   ಕಾಂಗ್ರೆಸ್ ನಲ್ಲಿ ಮುಖ್ಯಮಂತ್ರಿ ಯಾರಾಗಬೇಕು ಎನ್ನುವ ವಿಚಾರದಲ್ಲಿ ಅಶೋಕ್ ಗೆಹ್ಲೋಟ್ ಮತ್ತು ಸಚಿನ್ ಪೈಲಟ್ ನಡುವೆ ಮುಸುಕಿನ ಗುದ್ದಾಟ ನಡೆಯುತ್ತಿದ್ದರೂ, ಅದು ನಾಲ್ಕು ಗೋಡೆಯಿಂದ ಆಚೆ ಹೋಗದಂತೆ ನೋಡಿಕೊಳ್ಳುವಲ್ಲಿ ಕಾಂಗ್ರೆಸ್ ಯಶಸ್ವಿಯಾಗಿತ್ತು. ಇಬ್ಬರೂ, ಬಹಿರಂಗವಾಗಿ ಒಗ್ಗಟ್ಟು ಪ್ರದರ್ಶಿಸಿದರು.

   ಅಸೆಂಬ್ಲಿ ಸೋಲಿನ ಪಾಠ

   ಅಸೆಂಬ್ಲಿ ಸೋಲಿನ ಪಾಠ

   ವಸುಂಧರಾ ರಾಜೇ, ಅಸೆಂಬ್ಲಿ ಸೋಲಿನ ಪಾಠವನ್ನು ಕಲಿಯದೇ ಇದ್ದರೆ, ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಪಕ್ಷಕ್ಕೆ ಇನ್ನಷ್ಟು ಹಿನ್ನಡೆಯಾಗಲಿದೆ ಎನ್ನುವ ಮಾತನ್ನು ಬಿಜೆಪಿಯ ಮುಖಂಡರು, ಅತ್ಯಂತ ಸ್ಪಷ್ಟವಾಗಿ ಅಮಿತ್ ಶಾ ಮತ್ತು ಮೋದಿಯವರಿಗೆ ಮುಟ್ಟಿಸಿದ್ದಾರೆ ಎನ್ನುವ ಮಾಹಿಯಿದೆ. ಒಟ್ಟಿನಲ್ಲಿ, ರಾಜಸ್ಥಾನದಲ್ಲಿ ಬಿಜೆಪಿ ಸೋಲಲು, ವಸುಂಧರಾ ಒರಟುತನವೂ ಪ್ರಮುಖ ಕಾರಣ ಎಂದೇ ವ್ಯಾಖ್ಯಾನಿಸಲಾಗುತ್ತಿದೆ.

   English summary
   Vasundhara Raje’s personal traits are believed to be one of the main reasons behind the BJP’s defeat in Rajasthan assembly election. Her image of behaving like a Maharani’ and being inaccessible did not go along well with the voters.
   ತಾಜಾ ಸುದ್ದಿ ತಕ್ಷಣ ಪಡೆಯಿರಿ
   Enable
   x
   Notification Settings X
   Time Settings
   Done
   Clear Notification X
   Do you want to clear all the notifications from your inbox?
   Settings X