ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ರಾಜಸ್ಥಾನದ ಸೀಕರ್‌ನಲ್ಲಿ ದೊಡ್ಡ ಪ್ರಮಾಣದ ಯುರೇನಿಯಂ ನಿಕ್ಷೇಪ ಪತ್ತೆ; ನ್ಯೂಕ್ಲಿಯಾರ್ ಪವರ್‌ಗೆ ಇದೇ ಶಕ್ತಿ

|
Google Oneindia Kannada News

ಜೈಪುರ್, ಜೂನ್ 28: ಭೂಮಿಯಲ್ಲಿ ಅತಿ ವಿರಳವಾಗಿ ಲಭ್ಯವಾಗಿರುವ ಖನಿಜಗಳಲ್ಲಿ ಒಂದೆನಿಸಿರುವ ಯುರೇನಿಯಮ್‌ನ ದೊಡ್ಡ ನಿಕ್ಷೇಪಗಳು ರಾಜಸ್ಥಾನದ ಸೀಕರ್ ಜಿಲ್ಲೆಯಲ್ಲಿ ಪತ್ತೆಯಾಗಿವೆ. ಇತ್ತೀಚೆಗಷ್ಟೇ ಆಂಧ್ರಪ್ರದೇಶ ಮತ್ತು ಜಾರ್ಖಂಡ್ ರಾಜ್ಯಗಳಲ್ಲೂ ಯುರೇನಿಯಂ ನಿಕ್ಷೇಪಗಳು ಸಿಕ್ಕಿದ್ದವು.

ಈ ಬೆಳವಣಿಗೆಯು ಬಾರತದ ಪರಮಾಣು ಶಕ್ತಿ ಯೋಜನೆಗೆ ಇನ್ನಷ್ಟು ಪುಷ್ಟಿ ಕೊಡುವ ನಿರೀಕ್ಷೆ ಇದೆ. ರಾಜಸ್ಥಾನದ ಸೀಕರ್ ಜಿಲ್ಲೆಯ ಖಂಡೆಲಾ ಪಟ್ಟಣದ ರೋಹಿಲ್ ಎಂಬಲ್ಲಿ ಯುರೇನಿಯಂ ಗಣಿಗಾರಿಕೆ ಶೀಘ್ರದಲ್ಲೇ ಆರಂಭವಾಗುವ ನಿರೀಕ್ಷೆ ಇದೆ. ಯುರೇನಿಯಂ ಅದಿರು ಗಣಿಗಾರಿಕೆಗೆ ಪರವಾನಗಿ ನೀಡಲು ಯುರೇನಿಯಂ ಕಾರ್ಪೊರೇಷನ್ ಆಫ್ ಇಂಡಿಯಾ ಸಂಸ್ಥೆಗೆ ರಾಜಸ್ಥಾನ ಸರಕಾರ ಲೆಟರ್ ಆಫ್ ಇಂಟೆಂಟ್ (ಎಲ್‌ಒಐ) ಹೊರಡಿಸಿದೆ.

Video: ಉಕ್ರೇನ್‌ನ ಶಾಪಿಂಗ್ ಮಾಲ್‌ಗೆ ಅಪ್ಪಳಿಸಿದ್ದು ಹೇಗೆ ಕ್ಷಿಪಣಿ?Video: ಉಕ್ರೇನ್‌ನ ಶಾಪಿಂಗ್ ಮಾಲ್‌ಗೆ ಅಪ್ಪಳಿಸಿದ್ದು ಹೇಗೆ ಕ್ಷಿಪಣಿ?

ಭಾರತೀಯ ಯುರೇನಿಯಂ ನಿಗಮವು ಯುರೇನಿಯಂ ಗಣಿಗಾರಿಕೆಯಲ್ಲಿ ಸದ್ಯ ಮೂರು ಸಾವಿರ ಕೋಟಿ ರೂ ಹೂಡಿಕೆ ಮಾಡುವ ಯೋಜನೆಯಲ್ಲಿದೆ. ಒಂದು ವೇಳೆ ಗಣಿಗಾರಿಕೆ ಆರಂಭವಾದರೆ ಮೂರು ಸಾವಿರ ಮಂದಿಗೆ ನೇರ ಮತ್ತು ಪರೋಕ್ಷ ಉದ್ಯೋಗಗಳು ಸಿಗುವ ನಿರೀಕ್ಷೆ ಇದೆ.

 ಯುರೇನಿಯಂ ಯಾಕೆ ಮುಖ್ಯ?

ಯುರೇನಿಯಂ ಯಾಕೆ ಮುಖ್ಯ?

ಯುರೇನಿಯಂ ನಮ್ಮ ಭೂಮಿಯಲ್ಲಿ ಬಹಳ ಅಪರೂಪವಾಗಿ ಲಭ್ಯ ಇರುವ ಖನಿಜವಾಗಿದೆ. ಇದರಲ್ಲಿರುವ ಪರಮಾಣು ಗುಣಗಳಿಂದಾಗಿ ಪರಮಾಣು ವಿದ್ಯುತ್ ಉತ್ಪಾದನೆ ಮತ್ತು ಪರಮಾಣು ಶಸ್ತ್ರಾಸ್ತ್ರ, ಅಣು ಬಾಂಬ್ ಇತ್ಯಾದಿ ತಯಾರಿಕೆಗೆ ಸಹಾಯವಾಗುತ್ತದೆ.

ಇದಕ್ಕೆ ಮಾತ್ರವಲ್ಲ, ಔಷಧ, ಫೋಟೋಗ್ರಫಿ ಇತ್ಯಾದಿಗಳಿಗೂ ಯುರೇನಿಯಮ್ ಬಳಕೆಯಾಗುತ್ತದೆ.

ವ್ಲಾದಿಮಿರ್ ಪುಟಿನ್ ಕಣ್ಣು ಮಂಜು, ಅವರು ಬದುಕೋದು ಮೂರೇ ವರ್ಷವಾ?ವ್ಲಾದಿಮಿರ್ ಪುಟಿನ್ ಕಣ್ಣು ಮಂಜು, ಅವರು ಬದುಕೋದು ಮೂರೇ ವರ್ಷವಾ?

 ರಾಜಸ್ಥಾನದಲ್ಲಿ ಸಿಕ್ಕಿರುವುದು ಎಷ್ಟು?

ರಾಜಸ್ಥಾನದಲ್ಲಿ ಸಿಕ್ಕಿರುವುದು ಎಷ್ಟು?

ರಾಜಸ್ಥಾನದ ಸೀಕರ್ ಜಿಲ್ಲೆಯ ಖಂಡೆಲಾ ನಗರದ ರೋಹಿಲ್‌ನಲ್ಲಿ 1086 ಹೆಕ್ಟೇರ್ ಪ್ರದೇಶದಲ್ಲಿ ಯುರೇನಿಯಂ ನಿಕ್ಷೇಪಗಳು ಪತ್ತೆಯಾಗಿವೆ ಎಂದು ಈ ರಾಜ್ಯದ ಗಣಿ ಮತ್ತು ಪೆಟ್ರೋಲಿಯಂ ಇಲಾಖೆಯ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಡಾ. ಸುಬೋಧ್ ಅಗರ್ವಾಲ್ ಮಾಹಿತಿ ನೀಡಿದ್ದಾರೆ.

ಈ ಪ್ರದೇಶದಲ್ಲಿ ಸುಮಾರು 1.2 ಕೋಟಿ ಟನ್‌ಗಳಷ್ಟು ಪ್ರಮಾಣದಲ್ಲಿ ಯುರೇನಿಯಂ ನಿಕ್ಷೇಪಗಳು ಇರಬಹುದು ಎಂದು ಸದ್ಯಕ್ಕೆ ಅಂದಾಜು ಮಾಡಲಾಗಿದೆ. ಯುರೇನಿಯಂ ಕಾರ್ಪೊರೇಷನ್ ಆಫ್ ಇಂಡಿಯಾ ಸಂಸ್ಥೆ ಇದರ ಗಣಿಗಾರಿಕೆ ನಡೆಸಲಿದೆ.

 ಅಣುಬಾಂಬ್ ತಯಾರಿಕೆಗೆ ಎಷ್ಟು ಬೇಕು ಯುರೇನಿಯಂ?

ಅಣುಬಾಂಬ್ ತಯಾರಿಕೆಗೆ ಎಷ್ಟು ಬೇಕು ಯುರೇನಿಯಂ?

ಒಂದು ಸಾಮಾನ್ಯ ಪರಮಾಣು ಬಾಂಬ್ ತಯಾರಿಸಲು 15 ಕಿಲೋ ಯುರೇನಿಯಮ್ ಅಗತ್ಯ ಎಂದು ಹೇಳಲಾಗುತ್ತದೆ. ಸದ್ಯದ ಸ್ಥಿತಿಯಲ್ಲಿ ಪರಮಾಣು ಶಕ್ತಿ ಉತ್ಪಾದನೆಗೆ ಅಂದರೆ ನ್ಯೂಕ್ಲಿಯಾರ್ ವಿದ್ಯುತ್ ಉತ್ಪಾದನೆಯಲ್ಲಿ ಇದು ಬಹಳ ಉಪಯುಕ್ತವಾಗಿದೆ.

ಒಂದು ಗ್ರಾಂ ಯುರೇನಿಯಂನಿಂದ ಒಂದು ಮೆಗಾವ್ಯಾಟ್ ವಿದ್ಯುತ್ ಶಕ್ತಿ ಸಿಗುತ್ತದೆ. ಇದು 3 ಟನ್ ಕಲ್ಲಿದ್ದಲು ಅಥವಾ ೬೦೦ ಗ್ಯಾಲನ್ ಇಂಧನಕ್ಕೆ ಸಮ ಎಂದು ಹೆಳಲಾಗುತ್ತದೆ. ಆದರೆ, ಪರಮಾಣು ಸ್ಥಾವರಗಳು ಯಾವತ್ತಿದ್ದರೂ ಅಪಾಯಕಾರಿಯಾಗಿ ಪರಿಣಮಿಸಬಹುದು ಎಂಬ ಭಯದಲ್ಲಿ ವಿಶ್ವಾದ್ಯಂತ ಇದರ ಬಳಕೆ ಕಡಿಮೆಯಾಗುತ್ತಿದೆ. ಹಲವು ಕಡೆ ಸ್ಥಾವರಗಳಲ್ಲಿ ಸೋರಿಕೆಯಾದ ಘಟನೆಗಳು ನಡೆದಿವೆ. ಸುರಕ್ಷತೆಯ ವಿಚಾರವನ್ನು ಹೊರತುಪಡಿಸಿದರೆ ಪರಮಾಣು ಸ್ಥಾವರಗಳು ಬಹಳ ಕಡಿಮೆ ಬೆಲೆಗೆ ವಿದ್ಯುತ್ ಉತ್ಪಾದನೆ ಮಾಡಲು ಸಹಾಯವಾಗುತ್ತವೆ. ಈ ಪರಮಾಣು ಸ್ಥಾವರಗಳ ಪ್ರಮುಖ ವಸ್ತು ಯುರೇನಿಯಂ ಆಗಿದೆ.

 ಭಾರತದಲ್ಲಿ ಎಲ್ಲೆಲ್ಲಿ ಸಿಗುತ್ತದೆ ಯುರೇನಿಯಂ?

ಭಾರತದಲ್ಲಿ ಎಲ್ಲೆಲ್ಲಿ ಸಿಗುತ್ತದೆ ಯುರೇನಿಯಂ?

ಭಾರತದಲ್ಲಿ ಇತ್ತೀಚೆಗಷ್ಟೇ ಜಾರ್ಖಂಡ್ ಮತ್ತು ಆಂಧ್ರಪದೇಶಗಳಲ್ಲಿ ಯುರೇನಿಯಂ ನಿಕ್ಷೇಪಗಳು ಸಿಕ್ಕಿವೆ. ಜಾರ್ಂಡ್‌ನ ಸಿಂಘಭುಮ್ ಜಿಲ್ಲೆಯಲ್ಲಿ ಹಲವು ಕಡೆ ಯುರೇನಿಯಂ ಗಣಿಗಾರಿಕೆ ನಡೆಸಲಾಗುತ್ತಿದೆ. ಆಂಧ್ರದ ಕಡಪ ಜಿಲ್ಲೆಯಲ್ಲಿ ಹತ್ತು ವರ್ಷಗಳ ಹಿಂದೆ 1.5 ಲಕ್ಷ ಟನ್‌ಗಳಷ್ಟು ಯುರೇನಿಯಂ ನಿಕ್ಷೇಪಗಳು ಸಿಕ್ಕಿದ್ದವು. ಇತ್ತೀಚೆಗೆ ಮತ್ತೊಂದು ಕಡೆಯೂ ಈ ಅಪರೂಪದ ಖನಿಜ ಪತ್ತೆಯಾಗಿದೆ.

ಇವೆಲ್ಲಕ್ಕಿಂತ ರಾಜಸ್ಥಾನ ಸೀಕರ್ ಜಿಲ್ಲೆಯಲ್ಲಿ ಸಿಕ್ಕಿರುವ ಯುರೇನಿಯಂ ನಿಕ್ಷೇಪಗಳು ಅಗಾಧವಾದುವು. ಭಾರತದಲ್ಲಿ ಜಡಸ್ಥಿತಿಯಲ್ಲಿರುವ ಪರಮಾಣು ವಿದ್ಯುತ್ ಸ್ಥಾವರಗಳಿಗೆ ಈ ಯುರೇನಿಯಂ ಶಕ್ತಿ ಒದಗಿಸುವ ಸಾಧ್ಯತೆ ಇದೆ.

 ಬೇರೆ ದೇಶಗಳಲ್ಲಿ ಎಲ್ಲಿ ಸಿಗುತ್ತೆ ಯುರೇನಿಯಂ?

ಬೇರೆ ದೇಶಗಳಲ್ಲಿ ಎಲ್ಲಿ ಸಿಗುತ್ತೆ ಯುರೇನಿಯಂ?

ಕಜಕಸ್ತಾನ್ ದೇಶದಲ್ಲಿ ಅತಿ ಹೆಚ್ಚು ಯುರೇನಿಯಮ್ ಖನಿಜ ಸಂಗ್ರಹ ಇದೆ ಎನ್ನಲಾಗುತ್ತದೆ. ಕೆನಡಾ ಮತ್ತು ಆಸ್ಟ್ರೇಲಿಯಾದಲ್ಲೂ ಸಾಕಷ್ಟು ಯುರೇನಿಯಂ ನಿಕ್ಷೇಪಗಳು ಸಿಕ್ಕಿವೆ. ಅಮೆರಿಕ, ರಷ್ಯಾ, ಉಕ್ರೇನ್, ಉಜ್ಬೆಕಿಸ್ತಾನ್ ದೇಶಗಳಲ್ಲದೇ ಆಫ್ರಿಕಾದ ನೈಜರ್ ಮತ್ತು ನಮೀಬಿಯಾ ದೇಶಗಳಲ್ಲೂ ಕೆಲವಿಷ್ಟು ಯುರೇನಿಯಂ ಸಂಗ್ರಹ ಇದೆ. ಈಗ ಭಾರತವೂ ಈ ಪಟ್ಟಿಗೆ ಬಂದಿದೆ. ಜಗತ್ತಿನಲ್ಲಿ ಅತಿಹೆಚ್ಚು ಯುರೇನಿಯಂ ನಿಕ್ಷೇಪಗಳಿರುವ ಪ್ರದೇಶಗಳ ಸಾಲಿಗೆ ರಾಜಸ್ಥಾನ ಕೂಡ ಸೇರುತ್ತದೆ ಎನ್ನುತ್ತಾರೆ ತಜ್ಞರು.

(ಒನ್ಇಂಡಿಯಾ ಸುದ್ದಿ)

Recommended Video

ಯಾರು ಇಲ್ಲದಿದ್ದರೂ ನಗುಮುಖದಲ್ಲಿ ನಮಸ್ಕಾರ ಮಾಡುತ್ತಿರುವ ರಾಜಕಾರಣಿ! | *Politics | OneIndia Kannada

English summary
Huge deposits of rare material Uranium has found in Sikar district of Rajasthan district. initial estimates say 11 million tonnes of uranium reserves likely in this area.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X