ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಸಚಿನ್ ಪೈಲಟ್ ಮುಂದಿಟ್ಟ ಬೇಡಿಕೆಗೆ ರಾಹುಲ್, ಸೋನಿಯಾ ಗಾಂಧಿ ಬೇಸ್ತು!

|
Google Oneindia Kannada News

ಜೈಪುರ, ಜುಲೈ 18: ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್ ವಿರುದ್ದ ಬಂಡಾಯ ಸಾರಿರುವ ಸಚಿನ್ ಪೈಲಟ್ ಮತ್ತು ಅವರ ಬಣದ ಹದಿನೆಂಟು ಶಾಸಕರು, ಅನರ್ಹತೆಯ ಭೀತಿಯಿಂದ ಮಂಗಳವಾರದವರೆಗೆ (ಜು 21) ಬಚಾವ್ ಆಗಿದ್ದಾರೆ.

ಸಿಎಂ ವಿರುದ್ದ ಬಂಡಾಯ ಸಾರಿ, ಡಿಸಿಎಂ ಮತ್ತು ಪ್ರದೇಶ ಕಾಂಗ್ರೆಸ್ ಅಧ್ಯಕ್ಷ ಸ್ಥಾನ ಕಳೆದುಕೊಂಡ ನಂತರ, ಸಚಿನ್ ಪೈಲಟ್, ಹೈಕಮಾಂಡ್ ಸೇರಿ, ಕಾಂಗ್ರೆಸ್ಸಿನ ಯಾವ ನಾಯಕರ ಸಂಪರ್ಕಕಕ್ಕೂ ಸಿಕ್ಕಿರಲಿಲ್ಲ.

ಆದರೆ, ಮಾಜಿ ವಿತ್ತ ಸಚಿವ ಪಿ.ಚಿದಂಬರಂ, ಪೈಲಟ್ ಜೊತೆ, ದೂರವಾಣಿಯಲ್ಲಿ ಮಾತುಕತೆ ನಡೆಸಿ, ಕೆಲವೊಂದು ಸಲಹೆಗಳನ್ನು ನೀಡಿದ್ದರು ಎಂದು ವರದಿಯಾಗಿತ್ತು. ಇದರ ಜೊತೆಗೆ, ಎಐಸಿಸಿ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕ ಗಾಂಧಿ ವಾಧ್ರಾ, ಪೈಲಟ್ ಜೊತೆ ಸತತ ಸಂಪರ್ಕದಲ್ಲಿದ್ದಾರೆ.

ರಾಜಸ್ಥಾನದಲ್ಲಿ ಗೆಹ್ಲೋಟ್ ಬೆನ್ನಿಗೆ ನಿಂತ ವಸುಂಧರಾ ರಾಜೇ: ಬಿಜೆಪಿ ಸರಕಾರ ರಚನೆಯ ಮಹತ್ವಾಕಾಂಕ್ಷೆಗೆ ತಣ್ಣೀರು?ರಾಜಸ್ಥಾನದಲ್ಲಿ ಗೆಹ್ಲೋಟ್ ಬೆನ್ನಿಗೆ ನಿಂತ ವಸುಂಧರಾ ರಾಜೇ: ಬಿಜೆಪಿ ಸರಕಾರ ರಚನೆಯ ಮಹತ್ವಾಕಾಂಕ್ಷೆಗೆ ತಣ್ಣೀರು?

ತನ್ನ ಬೇಡಿಕೆಯನ್ನು ಈಡೇರಿಸುವ ಬಗ್ಗೆ ಸಾರ್ವಜನಿಕವಾಗಿ ಹೇಳಿಕೆಯನ್ನು ನೀಡಿದರೆ ಮಾತ್ರ, ಸೋನಿಯಾ ಮತ್ತು ರಾಹುಲ್ ಗಾಂಧಿಯನ್ನು ಭೇಟಿಯಾಗುತ್ತೇನೆ ಎಂದು ಸಚಿನ್ ಪೈಲಟ್, ಪ್ರಿಯಾಂಕ ಜೊತೆಗಿನ ಮಾತುಕತೆಯಲ್ಲಿ ಹೇಳಿದ್ದಾರೆಂದು ವರದಿಯಾಗಿದೆ.

ರಾಜಸ್ಥಾನ ಪೊಲೀಸರ ದಾಳಿ

ರಾಜಸ್ಥಾನ ಪೊಲೀಸರ ದಾಳಿ

ರಾಜಸ್ಥಾನದ ರಾಜಕೀಯದಲ್ಲಿ ಶುಕ್ರವಾರ (ಜು 17) ಹೈಡ್ರಾಮವೇ ನಡೆದಿತ್ತು. ಕಾಂಗ್ರೆಸ್ ಶಾಸಕರನ್ನು ಖರೀದಿಸುವ ಸಂಬಂಧ, ಬಿಜೆಪಿ ಮುಖಂಡರು ಚರ್ಚಿಸಿದ್ದಾರೆಂದು ಹೇಳಲಾಗುತ್ತಿರುವ ಆಡಿಯೋ ಟೇಪ್ ಬಹಿರಂಗಗೊಂಡಿತ್ತು. ಇದರ ಬೆನ್ನಲ್ಲೇ ಕಾಂಗ್ರೆಸ್ ದೂರು ಸಲ್ಲಿಸಿದ್ದರಿಂದ, ಬಿಜೆಪಿ ಮುಖಂಡರ ವಿರುದ್ದ ಎಫ್ಐಆರ್ ದಾಖಲಾಗಿತ್ತು. ಪೈಲಟ್ ಬಣದವರು ವಾಸ್ತವ್ಯ ಹೂಡಿರುವ ರೆಸಾರ್ಟ್ ಮೇಲೆ ರಾಜಸ್ಥಾನ ಪೊಲೀಸರು ದಾಳಿ ನಡೆಸಿ, ವಿಚಾರಣೆ ನಡೆಸಿದ್ದರು.

ಪ್ರಿಯಾಂಕ ಗಾಂಧಿ, ಸಚಿನ್ ಪೈಲಟ್ ಅವರ ಜೊತೆ ದೂರವಾಣಿ ಸಂಪರ್ಕದಲ್ಲಿ

ಪ್ರಿಯಾಂಕ ಗಾಂಧಿ, ಸಚಿನ್ ಪೈಲಟ್ ಅವರ ಜೊತೆ ದೂರವಾಣಿ ಸಂಪರ್ಕದಲ್ಲಿ

ಮಂಗಳವಾರ ಮತ್ತು ಬುಧವಾರ, ಸತತವಾಗಿ, ಪ್ರಿಯಾಂಕ ಗಾಂಧಿ, ಸಚಿನ್ ಪೈಲಟ್ ಅವರ ಜೊತೆ ದೂರವಾಣಿ ಸಂಪರ್ಕದಲ್ಲಿದ್ದಾರೆ. ತನ್ನ ನಿಲುವನ್ನು ಅತ್ಯಂತ ಸ್ಪಷ್ಟವಾಗಿ ಹೇಳಿರುವ, ನನ್ನ ಬೇಡಿಕೆ ಈಡೇರಿದರೆ ಮಾತ್ರ, ಹೈಕಮಾಂಡ್ ಭೇಟಿ ಮಾಡುವೆ ಎಂದು ಪೈಲಟ್ ಹೇಳಿದ್ದಾರೆ. ಸಚಿನ್ ಪೈಲಟ್ ಬಗ್ಗೆ ಸಾಫ್ಟ್ ಕಾರ್ನರ್ ಹೊಂದಿರುವ ಸೋನಿಯಾ ಮತ್ತು ರಾಹುಲ್ ಗಾಂಧಿ, ಪೈಲಟ್ ನಿರ್ಧಾರದಿಂದ ವಿಚಲಿತರಾಗಿದ್ದಾರೆ ಎಂದು ಹೇಳಲಾಗುತ್ತಿದೆ.

'ಕಾಂಗ್ರೆಸ್ ವೆಂಟಿಲೇಟರ್‌ನಲ್ಲಿದೆ, ಪ್ಲಾಸ್ಮಾ, ಲಸಿಕೆಯಿಂದಲೂ ಉಳಿಸೋಕಾಗಲ್ಲ''ಕಾಂಗ್ರೆಸ್ ವೆಂಟಿಲೇಟರ್‌ನಲ್ಲಿದೆ, ಪ್ಲಾಸ್ಮಾ, ಲಸಿಕೆಯಿಂದಲೂ ಉಳಿಸೋಕಾಗಲ್ಲ'

ಒಂದು ವರ್ಷದೊಳಗೆ ನನ್ನನ್ನು ರಾಜಸ್ಥಾನದ ಮುಖ್ಯಮಂತ್ರಿಯನ್ನಾಗಿ ಮಾಡಬೇಕು

ಒಂದು ವರ್ಷದೊಳಗೆ ನನ್ನನ್ನು ರಾಜಸ್ಥಾನದ ಮುಖ್ಯಮಂತ್ರಿಯನ್ನಾಗಿ ಮಾಡಬೇಕು

ಮೂಲಗಳ ಪ್ರಕಾರ, ಇನ್ನು ಒಂದು ವರ್ಷದೊಳಗೆ ನನ್ನನ್ನು ರಾಜಸ್ಥಾನದ ಮುಖ್ಯಮಂತ್ರಿಯನ್ನಾಗಿ ಮಾಡಬೇಕು. ಸಾರ್ವಜನಿಕವಾಗಿ, ಹೈಕಮಾಂಡ್ ಈ ಬಗ್ಗೆ ಘೋಷಣೆ ಮಾಡಿದರೆ ಮಾತ್ರ ನಾನು, ರಾಹುಲ್ ಗಾಂಧಿಯನ್ನು ಭೇಟಿಯಾಗುವೆ ಎಂದು ಸಚಿನ್ ಪೈಲಟ್ ಹೇಳಿದ್ದಾರೆಂದು ವರದಿಯಾಗಿದೆ.

ಸಚಿನ್ ಪೈಲಟ್ ಮುಂದಿಟ್ಟ ಬೇಡಿಕೆಗೆ ಅಡಕತ್ತರಿಯಲ್ಲಿ ರಾಹುಲ್, ಸೋನಿಯಾ ಗಾಂಧಿ

ಸಚಿನ್ ಪೈಲಟ್ ಮುಂದಿಟ್ಟ ಬೇಡಿಕೆಗೆ ಅಡಕತ್ತರಿಯಲ್ಲಿ ರಾಹುಲ್, ಸೋನಿಯಾ ಗಾಂಧಿ

ಅಶೋಕ್ ಗೆಹ್ಲೋಟ್ ಕೂಡಾ ನಿಷ್ಟಾವಂತ ಕಾಂಗ್ರೆಸ್ ಎನ್ನುವುದು ಒಂದು ಕಡೆ, ಇನ್ನೊಂದೆಡೆ, ಸದ್ಯದ ಮಟ್ಟಿಗೆ ಗೆಹ್ಲೋಟ್ ಗೆ ಹೆಚ್ಚಿನ ಶಾಸಕರ ಬೆಂಬಲವಿದೆ. ಸಚಿನ್ ಪೈಲಟ್ ಡಿಮಾಂಡ್ ಗೆ ಒಪ್ಪಿದರೆ, ಇನ್ನೊಂದು ಬಣ ಬಂಡಾಯ ಏಳುವ ಸಾಧ್ಯತೆ ದಟ್ಟವಾಗಿರುವುದರಿಂದ, ಸೋನಿಯಾ ಮತ್ತು ರಾಹುಲ್ ಗಾಂಧಿ ಅಡಕತ್ತರಿಯಲ್ಲಿ ಸಿಲುಕಿದ್ದಾರೆ.

English summary
Unless They Ready To Accept My Demand, Will Not Meet High Command: Sachin Pilot,
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X