India
 • search
 • Live TV
ಜೈಪುರ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಉದಯ್‌ಪುರ ಘಟನೆ: ವಿವೇಕ್ ಅಗ್ನಿಹೋತ್ರಿ, ಕಂಗನಾ ರಣಾವತ್ ಆಕ್ರೋಶ

|
Google Oneindia Kannada News

ಉದಯ್‌ಪುರ, ಜೂ. 29: ರಾಜಸ್ಥಾನದ ಉದಯಪುರ ಜಿಲ್ಲೆಯಲ್ಲಿ ಮಂಗಳವಾರ (ಜೂ. 28) ದರ್ಜಿ ಕನ್ಹಯ್ಯಾ ಲಾಲ್ ಅವರನ್ನು ಬರ್ಬರವಾಗಿ ಹತ್ಯೆ ಮಾಡಲಾಗಿದೆ. ಈ ಘಟನೆ ನಡೆದ ಬಳಿಕ ಇಲ್ಲಿ ಪರಿಸ್ಥಿತಿ ತುಂಬಾ ಉದ್ವಿಗ್ನವಾಗಿದೆ. ಈ ಪರಿಸ್ಥಿತಿಯಿಂದಾಗಿ ರಾಜಸ್ಥಾನ ಸರ್ಕಾರವು ಉದಯಪುರ ಸೇರಿದಂತೆ ಇಡೀ ರಾಜ್ಯದಲ್ಲಿ ಒಂದು ತಿಂಗಳ ಕಾಲ ಸೆಕ್ಷನ್ 144 ವಿಧಿಸಿದೆ. ಅಲ್ಲದೆ, 24 ಗಂಟೆಗಳ ಕಾಲ ಇಂಟರ್ನೆಟ್ ಸೇವೆಯನ್ನು ಸ್ಥಗಿತಗೊಳಿಸಲಾಗಿದೆ. ಅದೇ ಸಮಯದಲ್ಲಿ, ಈ ಘಟನೆಯನ್ನು ಬಾಲಿವುಡ್ ಸೆಲೆಬ್ರಿಟಿಗಳು ಕೂಡ ತಮ್ಮ ಆಕ್ರೋಶವನ್ನು ವ್ಯಕ್ತಪಡಿಸಿದ್ದಾರೆ.

ಉದಯಪುರದಲ್ಲಿ ಟೇಲರ್ ಬರ್ಬರ ಹತ್ಯೆಯ ಘಟನೆ ಬೆಳಕಿಗೆ ಬಂದ ನಂತರ ಬಾಲಿವುಡ್ ನಟಿ ಕಂಗನಾ ರಣಾವತ್ ಸಿಡಿದೆದ್ದಿದ್ದಾರೆ. ಇನ್ಸ್ಟಾಗ್ರಾಮ್ ಮೂಲಕ ತಮ್ಮ ಆಕ್ರೋಶವನ್ನು ವ್ಯಕ್ತಪಡಿಸಿದ್ದಾರೆ. ಕಂಗನಾ ರಣಾವತ್ ಇನ್‌ಸ್ಟಾಗ್ರಾಮ್ ನಲ್ಲಿ, 'ನೂಪುರ್ ಶರ್ಮಾ ಅವರನ್ನು ಬೆಂಬಲಿಸಿದ್ದಕ್ಕಾಗಿ ಇಂದು ಉದಯಪುರದಲ್ಲಿ ವ್ಯಕ್ತಿಯ ಬರ್ಬರವಾಗಿ ಹತ್ಯೆ ಮಾಡಲಾಗಿದೆ. ಹತ್ಯೆಯ ಈ ವಿಡಿಯೋವನ್ನು ಹಂಚಿಕೊಂಡಿದ್ದಾರೆ. ಹಂತಕರು ಬಲವಂತವಾಗಿ ಅಮಾಯಕನ ಅಂಗಡಿಯನ್ನು ಪ್ರವೇಶಿಸಿದರು ಮತ್ತು ಸರ್ ತಾನ್ ಜೆ ಜುದಾ ಎಂಬ ಘೋಷಣೆಗಳನ್ನು ಕೂಗಿದರು. ಇದೆಲ್ಲವನ್ನೂ ದೇವರ ಹೆಸರಿನಲ್ಲಿ ಮಾಡಲಾಯಿತು ಎಂದು ಹಂತಕ ಹೇಳಿದ್ದಾನೆ. ಈ ವೀಡಿಯೊಗಳನ್ನು ವೀಕ್ಷಿಸಲು ನನಗೆ ಧೈರ್ಯವಿಲ್ಲ. ನಾನು ಆಶ್ಚರ್ಯಚಕಿತಳಾಗಿದ್ದೇನೆ....' ಎಂದು ಬರೆದಿದ್ದಾರೆ.

   ಬಾಯಾರಿದ ಅಳಿಲಿಗೆ ನೀರು ಕುಡಿಸಿದ ಮಹಿಳೆ | *Viral | OneIndia Kannda
   'ಭಾರತದಲ್ಲಿ ಹಿಂದೂಗಳು ಸುರಕ್ಷಿತವಾಗಿಲ್ಲ'

   'ಭಾರತದಲ್ಲಿ ಹಿಂದೂಗಳು ಸುರಕ್ಷಿತವಾಗಿಲ್ಲ'

   ಬಾಂಗ್ಲಾದೇಶ ಮೂಲದ ಲೇಖಕಿ ತಸ್ಲೀಮಾ ನಸ್ರೀನ್, "ರಿಯಾಜ್ ಮತ್ತು ಗೌಸ್ ಅವರು ಉದಯಪುರದಲ್ಲಿ ಟೈಲರ್ ಆಗಿದ್ದ ಕನ್ಹಯ್ಯಾಲಾಲ್ ಅವರನ್ನು ಬರ್ಬರವಾಗಿ ಹತ್ಯೆ ಮಾಡಿದ್ದಾರೆ. ಹತ್ಯೆಯ ವಿಡಿಯೊವನ್ನು ಸಾಮಾಜಿಕ ಮಾಧ್ಯಮದಲ್ಲಿ ಅಪ್ಲೋಡ್ ಮಾಡಿದ್ದಾರೆ. ತಾನು ಕೊಲೆ ಮಾಡಿದ್ದೇನೆ ಮತ್ತು ತನ್ನ ಪ್ರವಾದಿಗಾಗಿ ಏನು ಬೇಕಾದರೂ ಮಾಡುತ್ತೇನೆ ಎಂದು ಹಂತಕ ನಗುತ್ತಾ ಹೇಳಿದ್ದಾನೆ. ಮೂಲಭೂತವಾದಿಗಳು ಎಷ್ಟು ಅಪಾಯಕಾರಿ ಎಂದರೆ ಭಾರತದಲ್ಲಿ ಹಿಂದೂಗಳೂ ಸುರಕ್ಷಿತವಾಗಿಲ್ಲ' ಎಂದು ಆತಂಕ ವ್ಯಕ್ತಪಡಿಸಿದ್ದಾರೆ.

   ವಿವೇಕ್ ರಂಜನ್ ಅಗ್ನಿಹೋತ್ರಿ ಟ್ವೀಟ್

   ವಿವೇಕ್ ರಂಜನ್ ಅಗ್ನಿಹೋತ್ರಿ ಟ್ವೀಟ್

   ದಿ ಕಾಶ್ಮೀರ್ ಫೈಲ್ಸ್‌ನ ನಿರ್ದೇಶಕ ವಿವೇಕ್ ರಂಜನ್ ಅಗ್ನಿಹೋತ್ರಿ ಕೂಡ ಉದಯಪುರ ಘಟನೆಯ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಅವರು ಟ್ವೀಟ್ ನಲ್ಲಿ, 'ನಿಜವಾದ ಹಿಂದೂ ಆಗುವುದು ಅಥವಾ ಹಿಂದೂ ಜಾಗದಲ್ಲಿ ಬದುಕುವುದು ಅಸಾಧ್ಯವಾಗುತ್ತಿದೆ. ಬದುಕಲು, ಒಂದೋ ನಗರ ನಕ್ಸಲ್ ಆಗಬೇಕು ಅಥವಾ ಅನಾಮಧೇಯರಾಗಬೇಕು ಅಥವಾ ಕೊಲ್ಲಬೇಕು. ರಲಿವ್, ಗಲಿವ್, ಚಲಿವ್.' ಎಂದು ಬರೆದಿದ್ದಾರೆ.

   ಟ್ವೀಟ್‌ಗೆ ಜನರ ಪ್ರತಿಕ್ರಿಯೆ

   ಟ್ವೀಟ್‌ಗೆ ಜನರ ಪ್ರತಿಕ್ರಿಯೆ

   ಅಷ್ಟೇ ಅಲ್ಲ, ಬಾಲಿವುಡ್ ಹಿರಿಯ ನಟ ಅನುಪಮ್ ಖೇರ್ ಕೂಡ ಈ ಘಟನೆಗೆ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಈ ಹತ್ಯೆಯ ಬಗ್ಗೆ ಅವರು ತಮ್ಮ ಅಸಮಾಧಾನವನ್ನು ಕೇವಲ ಮೂರು ಪದಗಳಲ್ಲಿ ವ್ಯಕ್ತಪಡಿಸಿದ್ದಾರೆ. "ಭಯವಾಯಿತು... ದುಃಖವಾಯಿತು... ಕೋಪಬಂತು" ಎಂದು ಟ್ವೀಟ್ ಮಾಡಿದ್ದಾರೆ. ಅವರ ಈ ಟ್ವೀಟ್‌ಗೆ ಜನರ ಪ್ರತಿಕ್ರಿಯೆಗಳೂ ಬರಲಾರಂಭಿಸಿವೆ.

   ವಿಡಿಯೋ ಮೂಲಕ ಆರೋಪಿ ಪತ್ತೆ

   ವಿಡಿಯೋ ಮೂಲಕ ಆರೋಪಿ ಪತ್ತೆ

   ರಾಜಸ್ಥಾನದ ಉದಯಪುರ ಜಿಲ್ಲೆಯಲ್ಲಿ ಟೇಲರ್ ಕನ್ಹಯ್ಯಾ ಲಾಲ್ ಹತ್ಯೆ ಪ್ರಕರಣದಲ್ಲಿ ಇಬ್ಬರು ಆರೋಪಿಗಳನ್ನು (ಗೌಸ್ ಮೊಹಮ್ಮದ್ ಮತ್ತು ರಿಯಾಜ್) ಬಂಧಿಸಲಾಗಿದೆ. ಪೊಲೀಸರ ಕೈಗೆ ಸಿಕ್ಕಿಬಿದ್ದ ಆರೋಪಿಗಳಿಬ್ಬರೂ ಉದಯಪುರದ ಸೂರಜ್ಪೋಲ್ ನಿವಾಸಿಗಳು. ಗೌಸ್ ಮೊಹಮ್ಮದ್ ಮತ್ತು ರಿಯಾಜ್ ಬಲವಂತವಾಗಿ ಟೇಲರ್ ಕನ್ಹಯ್ಯಾಲಾಲ್ ಅವರ ಅಂಗಡಿಗೆ ನುಗ್ಗಿ ಹರಿತವಾದ ಆಯುಧಗಳಿಂದ ಕತ್ತು ಸೀಳಿದ್ದಾರೆ. ಅಷ್ಟೇ ಅಲ್ಲ, ಈ ನಿರ್ದಯ ಹತ್ಯೆ ಮಾಡಿದ ಬಳಿಕ ವಿಡಿಯೋ ಮಾಡಿ ತನ್ನ ಚಿತ್ರವನ್ನೂ ಕ್ಲಿಕ್ಕಿಸಿದ್ದಾನೆ. ನೂಪುರ್ ಶರ್ಮಾ ಅವರನ್ನು ಬೆಂಬಲಿಸಿದ ನಂತರ ಟೇಲರ್ ಕನ್ಹಯ್ಯ ಅವರನ್ನು ಬರ್ಬರವಾಗಿ ಹತ್ಯೆ ಮಾಡಲಾಗಿದೆ ಎಂದು ಹೇಳಲಾಗುತ್ತಿದೆ.

   English summary
   Kanhaiya Lal was brutally murdered in Udaipur district of Rajasthan on Tuesday (June 28). Bollywood celebrities have also expressed their outrage over the incident.
   ತಾಜಾ ಸುದ್ದಿ ತಕ್ಷಣ ಪಡೆಯಿರಿ
   Enable
   x
   Notification Settings X
   Time Settings
   Done
   Clear Notification X
   Do you want to clear all the notifications from your inbox?
   Settings X