ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಉದಯಪುರ: ಕನ್ಹಯ್ಯಾ ಲಾಲ್‌ಗೆ ನೀಡಿದ್ದ ಭದ್ರತೆ ವಾಪಸ್ ಪಡೆದ ಬಳಿಕ ಕೊಲೆ

|
Google Oneindia Kannada News

ಉದಯಪುರ ಜುಲೈ 02: ರಾಜಸ್ಥಾನದ ಉದಯಪುರದಲ್ಲಿ ಜೂನ್ 28 ರಂದು ಇಬ್ಬರು ಮುಸ್ಲಿಂ ವ್ಯಕ್ತಿಗಳಿಂದ ಕನ್ಹಯ್ಯಾ ಲಾಲ್ (ಹಿಂದೂ ಟೈಲರ್) ಬರ್ಬರವಾಗಿ ಹತ್ಯೆಗೀಡಾದರು. ಮುಸ್ಲಿಂ ಪುರುಷರಾದ ಮೊಹಮ್ಮದ್ ರಿಯಾಜ್ ಮತ್ತು ಗೌಸ್ ಮೊಹಮ್ಮದ್ ಇಬ್ಬರೂ ಸಾಮಾಜಿಕ ಮಾಧ್ಯಮದಲ್ಲಿ ಈ ವೀಡಿಯೊವನ್ನು ಬಿಡುಗಡೆ ಮಾಡಿದ್ದಾರೆ ಮತ್ತು ತಮ್ಮ ಅಪರಾಧವನ್ನು ಒಪ್ಪಿಕೊಂಡಿದ್ದಾರೆ. ಇದೀಗ ಮತ್ತೊಂದು ದೊಡ್ಡ ಮಾಹಿತಿ ಈ ಪ್ರಕರಣದಲ್ಲಿ ಬೆಳಕಿಗೆ ಬಂದಿದ್ದು, ಜೂನ್ 16 ರಂದು ಬೆದರಿಕೆ ದೂರಿನ ನಂತರ ಪೊಲೀಸರು ಕನ್ಹಯ್ಯಾ ಲಾಲ್‌ಗೆ ರಕ್ಷಣೆ ನೀಡಿದ್ದರು. ಆದರೆ ಮೂರು ದಿನಗಳಲ್ಲಿ ಅದನ್ನು ವಾಪಸ್ ತೆಗೆದುಕೊಳ್ಳಲಾಗಿತ್ತು ಎಂದು ಟೈಲರ್ ಕನ್ಹಯ್ಯಾ ಲಾಲ್ ಕುಟುಂಬ ಆರೋಪಿಸಿದೆ. ಕನ್ಹಯ್ಯಾ ಲಾಲ್ ಅವರು ಉದಯಪುರದ ಭೂತ್ ಮಹಲ್‌ನಲ್ಲಿ ಸುಮಾರು ಎರಡು ದಶಕಗಳಿಂದ ಟೈಲರಿಂಗ್ ಅಂಗಡಿಯನ್ನು ಹೊಂದಿದ್ದರು. ಯಾವಾಗ ಬೆದರಿಕೆಗಳು ಶುರುವಾದವು ಎಂದು ಕನ್ಹಯ್ಯಾ ಲಾಲ್ ಕುಟುಂಬ ತಿಳಿಸಿದೆ.

ಜೂನ್ 9 ರಂದು ಅಮಾನತುಗೊಂಡಿರುವ ಭಾರತೀಯ ಜನತಾ ಪಕ್ಷದ (ಬಿಜೆಪಿ) ವಕ್ತಾರ ನೂಪುರ್ ಶರ್ಮಾ ಅವರನ್ನು ಬೆಂಬಲಿಸಿ ಕನ್ಹಯ್ಯಾ ಲಾಲ್ ಫೇಸ್‌ಬುಕ್ ಪೋಸ್ಟ್ ಬರೆದಿದ್ದರು. ಕನ್ಹಯ್ಯಾ ಲಾಲ್ ಅವರ ಕುಟುಂಬದ ಪ್ರಕಾರ, ಕನ್ಹಯ್ಯಾ ಲಾಲ್ ಅವರಿಗೆ ಜೂನ್ 11 ರಂದು ಧಾರ್ಮಿಕ ಭಾವನೆಗಳಿಗೆ ಧಕ್ಕೆ ತಂದಿದ್ದಕ್ಕಾಗಿ ನೆರೆಯ ಅಂಗಡಿಯವರಾದ ನಾಜಿಮ್ ಅವರು ಧನ್ಮಂಡಿ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ದಾಖಲಿಸಿದ್ದಾರೆ ಎಂದು ತಿಳಿಸಿದ್ದರು. ಅದರ ನಂತರ ಕನ್ಹಯ್ಯಾ ಲಾಲ್ ಅವರನ್ನು ಅದೇ ದಿನ ಬಂಧಿಸಲಾಯಿತು ಮತ್ತು ಮರುದಿನ ಜಾಮೀನಿನ ಮೇಲೆ ಬಿಡುಗಡೆ ಮಾಡಲಾಯಿತು. ಜೊತೆಗೆ ಕನ್ಹಯ್ಯಾ ಲಾಲ್ ಅವರ ಅಂಗಡಿಯಲ್ಲಿ 3 ದಿನಗಳ ಕಾಲ ಇಬ್ಬರು ಪೊಲೀಸ್ ಪೇದೆಗಳನ್ನು ನಿಯೋಜಿಸಲಾಗಿತ್ತು.

ಇಬ್ಬರು ಪೊಲೀಸ್ ಪೇದೆಗಳ ನಿಯೋಜನೆ

ಇಬ್ಬರು ಪೊಲೀಸ್ ಪೇದೆಗಳ ನಿಯೋಜನೆ

ಹಿಂದೂಸ್ತಾನ್ ಟೈಮ್ಸ್‌ನಲ್ಲಿ ಪ್ರಕಟವಾದ ವರದಿಯ ಪ್ರಕಾರ, ಕನ್ಹಯ್ಯಾ ಲಾಲ್ ಅವರು ಜಾಮೀನಿನ ಮೇಲೆ ಬಿಡುಗಡೆಯಾದಾಗಿನಿಂದ ಅಪರಿಚಿತರಿಂದ ಬೆದರಿಕೆಗಳನ್ನು ಸ್ವೀಕರಿಸಲು ಪ್ರಾರಂಭಿಸಿದರು ಎಂದು ಕುಟುಂಬ ತಿಳಿಸಿದೆ. ಪದೇ ಪದೇ ಅಂಗಡಿಯನ್ನು ಮುಚ್ಚಲು ಬೆದರಿಕೆ ಕರೆಗಳು ಬರುತ್ತಿದ್ದವು. ಇದರಿಂದ ಹೆದರಿದ ಕನ್ಹಯ್ಯಾ ಲಾಲ್ ಜೂನ್ 15 ರಂದು ಸ್ಥಳೀಯ ಉದ್ಯಮಿಗಳೊಂದಿಗೆ ಧನ್ಮಂಡಿ ಪೊಲೀಸ್ ಠಾಣೆಗೆ ದೂರು ನೀಡಿದ್ದರು. ಅವರು ಜೂನ್ 15 ರಂದು ತಾತ್ಕಾಲಿಕವಾಗಿ ಅಂಗಡಿಯನ್ನು ಮುಚ್ಚಿದರು. ಮರುದಿನ ಕನ್ಹಯ್ಯಾ ಲಾಲ್ ಅವರ ಅಂಗಡಿಯ ಹೊರಗೆ ಇಬ್ಬರು ಪೊಲೀಸ್ ಪೇದೆಗಳನ್ನು ನಿಯೋಜಿಸಲಾಗಿದೆ ಎಂದು ಪ್ರತ್ಯಕ್ಷದರ್ಶಿಗಳು ಮತ್ತು ಭೂತ್ ಮಹಲ್ ವ್ಯಾಪಾರ ಸಮುದಾಯದ ಸದಸ್ಯರು ಹೇಳಿದ್ದಾರೆ. ಜೂನ್ 18 ರಂದು ಲಾಲ್ ಅಂಗಡಿಯನ್ನು ಮುಚ್ಚಿ ಹೋಗಿದ್ದರು.

ಕನ್ಹಯ್ಯಾ ಲಾಲ್ ಗೆ ಬೆದರಿಕೆ ಕರೆ

ಕನ್ಹಯ್ಯಾ ಲಾಲ್ ಗೆ ಬೆದರಿಕೆ ಕರೆ

ಕನ್ಹಯ್ಯಾ ಲಾಲ್ ಅವರ 20 ವರ್ಷದ ಮಗ ಯಶ್, "ಭದ್ರತೆಯನ್ನು ಹೆಚ್ಚಿಸುವಂತೆ ನನ್ನ ತಂದೆ ಕನ್ಹಯ್ಯಾ ಲಾಲ್ ಮನವಿ ಮಾಡಿದಾಗ, ಭದ್ರತಾ ಸಿಬ್ಬಂದಿಯನ್ನು ಅನಿರ್ದಿಷ್ಟವಾಗಿ ಬಿಡಲು ಸಾಧ್ಯವಿಲ್ಲ ಎಂದು ಸ್ಥಳೀಯ ಪೊಲೀಸ್ ಅಧಿಕಾರಿಗಳು ಹೇಳಿದರು. ಭದ್ರತೆ ನೀಡುವ ಬದಲು, ಅಂಗಡಿ ಮುಚ್ಚುವಂತೆ ಅವರು ನಮಗೆ ಹೇಳಿದರು" ಎಂದು ದೂರಿದ್ದಾರೆ. ಯಶ್ ಅವರ ತಂದೆ ಪೊಲೀಸರಿಗೆ ಜೀವ ಬೆದರಿಕೆಯ ಬಗ್ಗೆ ಹೇಳಿದಾಗ, ಪೊಲೀಸರು ಅವರಿಗೆ ತಮ್ಮದೇ ಆದ ಸುರಕ್ಷತೆ ಮಾಡಿಕೊಳ್ಳಬೇಕು ಎಂದು ಹೇಳಿದರು ಎಂದು ಆರೋಪಿಸಲಾಗಿದೆ.


ಲಾಲ್ ಅವರ ಸಹೋದ್ಯೋಗಿ ಮತ್ತು ಜೂನ್ 28 ರಂದು ಅವರ ಭೀಕರ ಹತ್ಯೆಗೆ ಪ್ರತ್ಯಕ್ಷದರ್ಶಿಯಾಗಿದ್ದ ರಾಜ್‌ಕುಮಾರ್ ಶರ್ಮಾ, "ಎರಡು ದಿನ ಪೊಲೀಸ್ ಪೇದೆಗಳು ಅಂಗಡಿಯ ಹೊರಗೆ ನಿಂತಿದ್ದರು ಆದರೆ ಮೂರನೇ ದಿನ ಇಬ್ಬರು ಪೊಲೀಸರು ಇರಲಿಲ್ಲ" ಎಂದು ಹೇಳಿದ್ದಾರೆ.

ಕೆಲ ಬಾರಿ ಅಂಗಡಿ ಮುಚ್ಚಿದ್ದರಿಂದ ಭದ್ರತೆ ವಾಪಸ್

ಕೆಲ ಬಾರಿ ಅಂಗಡಿ ಮುಚ್ಚಿದ್ದರಿಂದ ಭದ್ರತೆ ವಾಪಸ್

ಧನ್ಮಂಡಿ ಪೊಲೀಸ್ ಠಾಣೆಯ ಮಾಜಿ ಠಾಣಾಧಿಕಾರಿ ಗೋವಿಂದ್ ಸಿಂಗ್ ಮತ್ತು ಈ ಪ್ರಕರಣದ ಮಾಜಿ ತನಿಖಾಧಿಕಾರಿ ಭನ್ವರ್‌ಲಾಲ್ ಪನೇರಿ ಇಬ್ಬರನ್ನೂ ಈಗ ಅಮಾನತುಗೊಳಿಸಲಾಗಿದೆ. ಈ ವಿಷಯದ ಬಗ್ಗೆ ಪ್ರತಿಕ್ರಿಯಿಸಲು ಇಬ್ಬರೂ ನಿರಾಕರಿಸಿದ್ದಾರೆ. ಆದರೆ ಭದ್ರತೆ ನೀಡಿದ ನಂತರವೂ ಕನ್ಹಯ್ಯಾ ಲಾಲ್ ತನ್ನ ಅಂಗಡಿಯನ್ನು ತೆರೆಯದ ಕಾರಣ ಈ ಘಟನೆ ನಡೆದಿದೆ ಎಂದು ಸ್ಥಳೀಯ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. "ಕನ್ಹಯ್ಯಾ ಲಾಲ್ ಅವರ ಅಂಗಡಿಯನ್ನು ಮುಚ್ಚಿರುವುದರಿಂದ ಮತ್ತು ಅಂಗಡಿಯ ಮೇಲೆ ಯಾವುದೇ ದಾಳಿ ನಡೆದಿಲ್ಲದ ಕಾರಣ, ಭದ್ರತಾ ಕಾರ್ಯಕ್ಕಾಗಿ ಪೊಲೀಸರನ್ನು ಅಲ್ಲಿ ನಿಲ್ಲಿಸಲಿಲ್ಲ" ಎಂದು ಉದಯಪುರ ಪೊಲೀಸ್ ವರಿಷ್ಠಾಧಿಕಾರಿ ಮನೋಜ್ ಕುಮಾರ್ ಚೌಧರಿ ಹೇಳಿದರು.

ಪೊಲೀಸರು ತೀವ್ರ ಟೀಕೆಗೆ ಗುರಿ

ಪೊಲೀಸರು ತೀವ್ರ ಟೀಕೆಗೆ ಗುರಿ

ರಾಜಸ್ಥಾನದ ಟೈಲರ್ ಕನ್ಹಯ್ಯಾ ಲಾಲ್ ಅವರ ಭೀಕರ ಹತ್ಯೆಯ ಹಿನ್ನೆಲೆಯಲ್ಲಿ ಉದಯಪುರದ ಇನ್ಸ್‌ಪೆಕ್ಟರ್ ಜನರಲ್ ಮತ್ತು ಪೊಲೀಸ್ ಸೂಪರಿಂಟೆಂಡೆಂಟ್ ಸೇರಿದಂತೆ ಭಾರತೀಯ ಪೊಲೀಸ್ ಸೇವೆಯ (ಐಪಿಎಸ್) 32 ಅಧಿಕಾರಿಗಳನ್ನು ವರ್ಗಾವಣೆ ಮಾಡಲಾಗಿದೆ.


ಪ್ರವಾದಿ ಮುಹಮ್ಮದ್ ಅವರ ವಿರುದ್ಧ ಅವಹೇಳನಕಾರಿ ಹೇಳಿಕೆ ನೀಡಿದ ಬಿಜೆಪಿ ವಕ್ತಾರರಾಗಿದ್ದ ನೂಪುರ್ ಶರ್ಮಾ ವಿರುದ್ಧ ಕ್ರಮಕ್ಕೆ ಆಗ್ರಹಿಸಿ ಮುಸ್ಲೀಂ ರಾಷ್ಟ್ರಗಳು ಸೇರಿದಂತೆ ದೇಶದ ಹಲವು ರಾಜ್ಯಗಳಲ್ಲಿ ಪ್ರತಿಭಟನೆ ತೀವ್ರಗೊಂಡಿತ್ತು. ಪ್ರತಿಭಟನೆ ಹಿಂಸಾಚಾರಕ್ಕೆ ತಿರುಗಿದರೂ ಬಿಜೆಪಿ ನೂಪುರ್ ಶರ್ಮಾ ವಿರುದ್ಧ ಯಾವುದೇ ಕಾನೂನು ಕ್ರಮ ಕೈಗೊಂಡಿಲ್ಲ. ಇದರಿಂದ ರಾಜ್ಯದ ಹಲವೆಡೆ ಈ ವಿಚಾರ ಬೂದಿಮುಚ್ಚಿದ ಕೆಂಡದಂತಿದೆ. ಇದರ ನಡುವೆ ನೂಪುರ್ ಶರ್ಮಾ ಅವರನ್ನು ಬೆಂಬಲಿಸುವ ಸಾಮಾಜಿಕ ಮಾಧ್ಯಮದ ಪೋಸ್ಟ್‌ನಲ್ಲಿ ಬೆದರಿಕೆಯ ಕುರಿತು ದೂರು ನೀಡಿದ ನಂತರ 48 ವರ್ಷದ ಟೈಲರ್ ಕನ್ಹಯ್ಯಾ ಲಾಲ್ ಅವರಿಗೆ ಭದ್ರತೆಯನ್ನು ಒದಗಿಸದಿದ್ದಕ್ಕಾಗಿ ಉದಯಪುರ ಪೊಲೀಸರು ತೀವ್ರ ಟೀಕೆಗೆ ಗುರಿಯಾಗಿದ್ದಾರೆ.

Recommended Video

HD Devegowdaರ ಸಾವು ಬಯಸಿ ನಾಲಗೆ ಹರಿಬಿಟ್ಟ KN Rajanna | Oneindia Kannada

English summary
Udaipur Tailor Murder: Taylor's family has alleged that Kanhaiya Lal was murdered after withdrawing the security provided to him.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X