ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಉದಯ್‌ಪುರ: ಬಿಜೆಪಿ ಕಾರ್ಯಕ್ರಮಗಳಲ್ಲಿ ಕಾಣಿಸಿಕೊಂಡ ಕನ್ಹಯ್ಯಾ ಹಂತಕರು

|
Google Oneindia Kannada News

ಜೈಪುರ ಜು.2: ದೇಶವನ್ನೇ ಬೆಚ್ಚಿಬೀಳಿಸಿದ ಉದಯಪುರದ ಕನ್ಹಯ್ಯಾ ಲಾಲ್ ಬರ್ಬರ ಹತ್ಯೆ ಪ್ರಕರಣಕ್ಕೆ ಭಾರಿ ಟ್ವಿಸ್ಟ್‌ ಸಿಕ್ಕಿದೆ. ಕನ್ನಯ್ಯ ಲಾಲ್ ನನ್ನ ಹತ್ಯೆ ಮಾಡಿದವರು ಬಿಜೆಪಿ ಪಕ್ಷಕ್ಕೆ ನಿಕಟವಾಗಿದ್ದವರು ಮತ್ತು ಆರ್ ಎಸ್ ಎಸ್ ಮುಸ್ಲಿಂ ಮಂಚ್ ಜೊತೆಗಿದ್ದವರು ಎಂಬ ಆರೋಪಗಳು ಈಗ ದಟ್ಟವಾಗಿವೆ. ಬಿಜೆಪಿ ನಾಯಕರ ಜೊತೆಗೆ ಹತ್ಯೆ ಮಾಡಿದವರ ಫೋಟೋಗಳು ವೈರಲ್ ಆಗಿದ್ದು ಈ ಬಗ್ಗೆ ಇಂಡಿಯಾ ಟುಡೇ ವರದಿ ಮಾಡಿದೆ.

ಇಂಡಿಯಾ ಟುಡೆಯ ತನಿಖಾ ವರದಿಗಾರರು ಪ್ರಕಟಿಸಿದ ಚಿತ್ರಗಳಲ್ಲಿ ಹಂತಕರು ರಾಜಸ್ಥಾನದ ಬಿಜೆಪಿಯ ಅಲ್ಪಸಂಖ್ಯಾತ ಮೋರ್ಚಾದ ಸದಸ್ಯ ಇರ್ಷಾದ್ ಚೈನ್‌ವಾಲಾ ಅವರು 2019ರಲ್ಲಿ ಸೌದಿ ಅರೇಬಿಯಾದಲ್ಲಿ ತೀರ್ಥಯಾತ್ರೆಯಿಂದ ಹಿಂದಿರುಗಿದ ನಂತರ ಅವರನ್ನು ಸ್ವಾಗತಿಸುತ್ತಿರುವುದು ಕಂಡುಬಂದಿದೆ. ಸ್ಥಳೀಯ ಬಿಜೆಪಿ ಘಟಕದೊಂದಿಗೆ ಹಂತಕರ ಸಂಬಂಧವು ಒಂದು ದಶಕಕ್ಕೂ ಹೆಚ್ಚು ಹಿಂದಿನದು. ಇಂಡಿಯಾ ಟುಡೇ ಪ್ರಕಟಿಸಿದ ವರದಿ ಮೂಲಕ ಹಂತಕ ರಿಯಾಜ್ ಉದಯಪುರದಲ್ಲಿ ಬಿಜೆಪಿ ಕಾರ್ಯಕ್ರಮಗಳಿಗೆ ಹಾಜರಾಗುತ್ತಿದ್ದರು ಎಂದು ತಿಳಿದುಬಂದಿದೆ.

ಖಾಸಗಿ ಸಂಭಾಷಣೆಗಳಲ್ಲಿ ಬಿಜೆಪಿಯ ರಾಜಕೀಯ ಸಿದ್ಧಾಂತದ ಮೇಲೆ ದಾಳಿ ಮಾಡಲು ಆ ವ್ಯಕ್ತಿ ಯಾವುದೇ ಮಾತುಗಳನ್ನು ಆಡಿಲ್ಲ ಎಂದು ತಿಳಿದುಬಂದಿದೆ. ವೈರಲ್ ಫೋಟೋ ತನ್ನದೇ ಎಂದು ಹಂತಕ ಕೂಡ ಒಪ್ಪಿಕೊಂಡಿದ್ದಾನೆ. ಹಂತಕ ರಿಯಾಜ್ ಆಗಾಗ್ಗೆ ಬಿಜೆಪಿ ಕಾರ್ಯಕ್ರಮಗಳಲ್ಲಿ ಆಹ್ವಾನಿಸದೆ ಕಾಣಿಸಿಕೊಳ್ಳುತ್ತಿದ್ದರು. ಈ ಹಿಂದೆ ಅವರು ಪಕ್ಷದೊಂದಿಗೆ ಕೆಲಸ ಮಾಡುಲು ಬಯಸಿದ್ದರು ಎಂದು ತಿಳಿದು ಬಂದಿದೆ.

ಬಿಜೆಪಿ ಕಾರ್ಯಕ್ರಮಗಳಲ್ಲಿ ಹಂತಕರು ಭಾಗಿ

ಬಿಜೆಪಿ ಕಾರ್ಯಕ್ರಮಗಳಲ್ಲಿ ಹಂತಕರು ಭಾಗಿ

ಆದರೆ ಖಾಸಗಿಯಾಗಿ ರಿಯಾಜ್ ಬಿಜೆಪಿಯ ಕಟು ಟೀಕಾಕಾರರಾಗಿದ್ದರು. ಅವರು ಸ್ನೇಹಿತರೊಂದಿಗೆ ಖಾಸಗಿ ಸಂಭಾಷಣೆಗಳಲ್ಲಿ ಪಕ್ಷವನ್ನು ಕಟುವಾಗಿ ವಿರೋಧಿಸುತ್ತಿದ್ದರು. ಆದರೂ ರಿಯಾಜ್ ಅತ್ತಾರಿ, ಮೊಹಮ್ಮದ್ ತಾಹಿರ್ ಎಂಬ ವ್ಯಕ್ತಿಯ ಮೂಲಕ ಬಿಜೆಪಿ ಕಾರ್ಯಕ್ರಮಗಳಿಗೆ ಪ್ರವೇಶಿಸಿ ಪಕ್ಷದ ಕಾರ್ಯಕರ್ತರಾಗಿದ್ದರು ಎನ್ನಲಾಗುತ್ತಿದೆ. ಟೇಲರ್ ಹತ್ಯೆಯ ಇಬ್ಬರು ಹಂತಕರ ಪೈಕಿ ರಿಯಾಜ್ ಅತ್ತಾರಿ ಹತ್ಯೆಯ ಫೋಟೋಗಳಲ್ಲಿ ಕಾಣಿಸಿಕೊಂಡಿದ್ದಾರೆ. ಆದರೆ ಇಂಡಿಯಾ ಟುಡೇ ತನಿಖಾ ತಂಡ ಸವೀನಾ ತಲುಪಿದಾಗ ತಾಹಿರ್ ಎಲ್ಲಿಯೂ ಪತ್ತೆಯಾಗಿರಲಿಲ್ಲ. ಅಲ್ಲಿ ಬಾಡಿಗೆ ಮನೆ ಖಾಲಿ ಮಾಡಿದ್ದಾನೆ ಎಂದು ನೆರೆಹೊರೆಯವರು ತಿಳಿಸಿದ್ದಾರೆ.ತಾಹಿರ್ ಅವರ ಮೊಬೈಲ್ ಫೋನ್ ಕೂಡ ಸ್ವಿಚ್ ಆಫ್ ಆಗಿತ್ತು.

ಮುಂಬೈ ದಾಳಿಗೂ ಹಂತಕರಿಗೂ ಲಿಂಕ್

ಮುಂಬೈ ದಾಳಿಗೂ ಹಂತಕರಿಗೂ ಲಿಂಕ್

ಉದಯಪುರ ಟೈಲರ್, ಕನ್ಹಯ್ಯಾಲಾಲ್ ತೇಲಿ ಅವರ ಮೇಲೆ ಮಾರಣಾಂತಿಕ ದಾಳಿಯ ದಿನದಂದು ಇಬ್ಬರು ಹಂತಕರು ಬಳಸಿದ ಮೋಟಾರ್-ಬೈಕ್ ಅವರ ಮೂಲಭೂತ ಪ್ರಚೋದನೆಯ ಬಗ್ಗೆ ಆತಂಕಕಾರಿ ಸುಳಿವುಗಳನ್ನು ನೀಡಿದೆ. ಹತ್ಯೆ ಬಳಿಕ ಪರಾರಿಗಾಗಿ ಬಳಸಲಾದ ಬೈಕ್ ಮತ್ತು ಅದರ ನಂಬರ್ ( RJ 27 AS 2611) ಬೆಚ್ಚಿ ಬೀಳಿಸುವ ಮಾಹಿತಿ ನೀಡಿದೆ. '2611' ಇದು ನವೆಂಬರ್ 26, 2008ರ ಮುಂಬೈ ಭಯೋತ್ಪಾದನಾ ದಾಳಿಯ ದಿನಾಂಕವನ್ನು ಉಲ್ಲೇಖಿಸುತ್ತದೆ. 2611 ಸಂಖ್ಯೆಗೆ ಡಿಮ್ಯಾಂಡ್ ಡ್ರಾಫ್ಟ್ ಮೂಲಕ ವಾಹನ ಮಾಲೀಕರಿಂದ 1000 ರೂಪಾಯಿಗಳನ್ನು ತೆಗೆದುಕೊಳ್ಳಲಾಗಿದೆ ಎಂದು ಉದಯಪುರ ಪ್ರಾದೇಶಿಕ ಸಾರಿಗೆ ಪ್ರಾಧಿಕಾರ ಪ್ರಭು ಲಾಲ್ ಬಮಾನಿಯಾ ತಿಳಿಸಿದ್ದಾರೆ. 2013ರ ಮಾರ್ಚ್ 15ರಂದು ಬೈಕ್ ನೋಂದಣಿ ಮಾಡಲಾಗಿತ್ತು ಎಂದು ತಿಳಿಸಿದ್ದಾರೆ. ಮಾತ್ರವಲ್ಲದೆ ಹತ್ಯೆ ಬಳಿಕ ಇಬ್ಬರೂ ಒಂದೇ ನಂಬರಿನ ಬೈಕಿನಲ್ಲಿ ಸ್ಥಳದಿಂದ ಪರಾರಿಯಾಗಿದ್ದರು ಎಂದು ಪೊಲೀಸ್ ತನಿಖೆಯಿಂದ ಬಯಲಾಗಿದೆ. 2611 ನಂಬರ್ ಪ್ಲೇಟ್ ಹೊಂದಿರುವ ಬೈಕ್ ಅನ್ನು ರಿಯಾಜ್ ಹೆಸರಿನಲ್ಲಿ ನೋಂದಾಯಿಸಲಾಗಿದೆ ಮತ್ತು 2013 ರಲ್ಲಿ ಖರೀದಿಸಲಾಗಿದೆ ಎಂದು ತಿಳಿದು ಬಂದಿದೆ.

10-15 ದಿನಗಳಿಂದ ಕೊಲೆ ಬೆದರಿಕೆ

10-15 ದಿನಗಳಿಂದ ಕೊಲೆ ಬೆದರಿಕೆ

ಕನ್ಹಯ್ಯಾ ಲಾಲ್ ಟೈಲರ್ ಅವರನ್ನು ಹಾಡಹಗಲೇ ಕತ್ತು ಸೀಳಿ ಬರ್ಬರವಾಗಿ ಹತ್ಯೆ ಮಾಡಲಾಗಿದೆ. ಈ ಪ್ರಕರಣದಲ್ಲಿ ಇಬ್ಬರನ್ನು ಬಂಧಿಸಲಾಗಿದ್ದು, ಜುಲೈ 13ರವರೆಗೆ ಕಸ್ಟಡಿಗೆ ನೀಡಲಾಗಿದೆ. ಕನ್ಹಯ್ಯ ಲಾಲ್ ಅವರ ಪತ್ನಿ ಯಶೋದಾ ಅವರ ಪ್ರಕಾರ, ಅವರಿಗೆ 10-15 ದಿನಗಳಿಂದ ಕೊಲೆ ಬೆದರಿಕೆಗಳು ಬರುತ್ತಿತ್ತವು. ಕೊಲೆ ಮಾಡುವುದಾಗಿ ಫೋನ್ ನಲ್ಲಿ ಹೇಳಲಾಗಿತ್ತು. ಅಂಗಡಿಗೆ ಬಂದ ಮೇಲೂ ಜನರು ಬೆದರಿಕೆ ಹಾಕುತ್ತಿದ್ದರು.

ನೂಪುರ್ ಶರ್ಮಾ ಬೆಂಬಲಿಸಿದ್ದಕ್ಕೆ ಕೊಲೆ

ನೂಪುರ್ ಶರ್ಮಾ ಬೆಂಬಲಿಸಿದ್ದಕ್ಕೆ ಕೊಲೆ

ರಾಜಸ್ಥಾನದ ಉದಯಪುರ ಜಿಲ್ಲೆಯಲ್ಲಿ ಮಂಗಳವಾರ (ಜೂ. 28) ದರ್ಜಿ ಕನ್ಹಯ್ಯಾ ಲಾಲ್ ಅವರನ್ನು ಬರ್ಬರವಾಗಿ ಹತ್ಯೆ ಮಾಡಲಾಗಿದೆ. ಈ ಘಟನೆ ನಡೆದ ಬಳಿಕ ಇಲ್ಲಿ ಪರಿಸ್ಥಿತಿ ತುಂಬಾ ಉದ್ವಿಗ್ನವಾಗಿದೆ. ಈ ಪರಿಸ್ಥಿತಿಯಿಂದಾಗಿ ರಾಜಸ್ಥಾನ ಸರ್ಕಾರವು ಉದಯಪುರ ಸೇರಿದಂತೆ ಇಡೀ ರಾಜ್ಯದಲ್ಲಿ ಒಂದು ತಿಂಗಳ ಕಾಲ ಸೆಕ್ಷನ್ 144 ವಿಧಿಸಿದೆ. ಅಲ್ಲದೆ, 24 ಗಂಟೆಗಳ ಕಾಲ ಇಂಟರ್ನೆಟ್ ಸೇವೆಯನ್ನು ಸ್ಥಗಿತಗೊಳಿಸಲಾಗಿತ್ತು. ಗೌಸ್ ಮೊಹಮ್ಮದ್ ಮತ್ತು ರಿಯಾಜ್ ಬಲವಂತವಾಗಿ ಟೇಲರ್ ಕನ್ಹಯ್ಯಾಲಾಲ್ ಅವರ ಅಂಗಡಿಗೆ ನುಗ್ಗಿ ಹರಿತವಾದ ಆಯುಧಗಳಿಂದ ಕತ್ತು ಸೀಳಿದ್ದಾರೆ. ಅಷ್ಟೇ ಅಲ್ಲ, ಈ ನಿರ್ದಯ ಹತ್ಯೆ ಮಾಡಿದ ಬಳಿಕ ವಿಡಿಯೋ ಮಾಡಿ ತನ್ನ ಚಿತ್ರವನ್ನೂ ಕ್ಲಿಕ್ಕಿಸಿದ್ದಾನೆ. ನೂಪುರ್ ಶರ್ಮಾ ಅವರನ್ನು ಬೆಂಬಲಿಸಿದ ನಂತರ ಟೇಲರ್ ಕನ್ಹಯ್ಯ ಅವರನ್ನು ಬರ್ಬರವಾಗಿ ಹತ್ಯೆ ಮಾಡಲಾಗಿದೆ ಎಂದು ಹೇಳಲಾಗುತ್ತಿದೆ.


ಈ ಘಟನೆಯಿಂದ ಆಶ್ಚರ್ಯ ಆಗಿದ್ದು, ಅರ್ಥ ಆಗದೆ ಹೋಗಿದ್ದು ಏನಂದರೆ, ರಾಜಸ್ಥಾನ ಕಾಂಗ್ರೆಸ್ ಸರ್ಕಾರ ಮತ್ತು ಅಲ್ಲಿನ ಪೊಲೀಸ್ ಇದರ ಬಗ್ಗೆ ಇಲ್ಲಿಯವರೆಗೂ ತುಟಿ ಬಿಚ್ಚದೆ ಹೋಗಿದ್ದು. ತಮ್ಮ ಮೇಲೆ ಕೆಟ್ಟ ಹೆಸರು ತರಲು ಒಂದು ವಿರೋಧ ಪಕ್ಷ ಹವಣಿಸಿದ್ದರೆ, ಅದನ್ನು ದಿಟ್ಟವಾಗಿ ಮತ್ತು ಬಹಿರಂಗವಾಗಿ ಹೇಳುವ ಧೈರ್ಯವೂ ಇಲ್ಲವಾಗಿ ಹೋಯಿತೇ? ಇದರ ಸುತ್ತ ಇರಬಹುದಾದ ಲಾರ್ಜರ್ ಕಾನ್ಸ್ಪಿರೆಸಿಯನ್ನ ಕಾಂಗ್ರೆಸ್ ಸರ್ಕಾರ ಹೊರಗೆಳೆಯುತ್ತದೆ ಎಂದು ನಿರೀಕ್ಷಿಸಲು ಸಾಧ್ಯವೇ?

Recommended Video

Virat Kohli ಹಾಗು Shubman Gill ತಮಾಷೆಯ ವೀಡಿಯೋ | OneIndia Kannada

English summary
Udaipur case: The murder case of Kannayya Lal Barbar of Udaipur, which shook the country, has got a huge twist. Allegations are now rife that the killers of Kannaiya Lal were close to the BJP party and were associated with the RSS Muslim Manch.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X