ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ರಾಜಸ್ಥಾನದ ಟ್ರಕ್ ಮಾಲೀಕರ ಹೆಸರಿಗೆ ಈಗ ಅತಿ ಹೆಚ್ಚು ದಂಡದ ದಾಖಲೆ!

|
Google Oneindia Kannada News

ಜೈಪುರ್ (ರಾಜಸ್ಥಾನ), ಸೆಪ್ಟೆಂಬರ್ 10: ಮೋಟಾರ್ ವಾಹನ ಕಾಯ್ದೆಗೆ ತಿದ್ದುಪಡಿ ತಂದ ಮೇಲೆ ಈಗ ಹಾಕಲಾಗುತ್ತಿರುವ ದಂಡದ ಪ್ರಮಾಣದಲ್ಲಿ ದಿನದಿನಕ್ಕೂ ಹೊಸ ದಾಖಲೆ ಆಗುತ್ತಿದೆ. ದಂಡ ಹಾಕಿಸಿಕೊಂಡವರು ಮಾಧ್ಯಮಗಳ ಹೆಡ್ ಲೈನ್ ಆಗುತ್ತಿದ್ದಾರೆ. ಅದಕ್ಕೆ ಹೊಸ ಸೇರ್ಪಡೆ ಆಗಿದ್ದು, ಸಂಚಾರ ನಿಯಮ ಉಲ್ಲಂಘನೆ ಮಾಡಿದ್ದಕ್ಕಾಗಿ ರಾಜಸ್ಥಾನದ ಟ್ರಕ್ ಮಾಲೀಕರಿಗೆ ದೊಡ್ಡ ಮೊತ್ತದ ದಂಡ ಹಾಕಲಾಗಿದೆ.

ದೇಶದಲ್ಲೇ ಅತಿ ಹೆಚ್ಚು ದಂಡ ಬಿದ್ದ ದಾಖಲೆ ಒಡಿಶಾ ಟ್ರಕ್ ಡ್ರೈವರ್ ಗೆ!ದೇಶದಲ್ಲೇ ಅತಿ ಹೆಚ್ಚು ದಂಡ ಬಿದ್ದ ದಾಖಲೆ ಒಡಿಶಾ ಟ್ರಕ್ ಡ್ರೈವರ್ ಗೆ!

ದೊಡ್ಡ ಮೊತ್ತ ಅಂದರೆ, 1 ಲಕ್ಷ ರುಪಾಯಿಗೂ ಹೆಚ್ಚು. ಟ್ರಕ್ ಮಾಲೀಕ ಭಗವಾನ್ ರಾಮ್ ಗೆ ಸಂಚಾರ ನಿಯಮ ಉಲ್ಲಂಘಿಸಿದ ಆರೋಪದಲ್ಲಿ ಹೊಸ ನಿಯಮಾವಳಿಯ ಅನುಸಾರ 1,41,700 ರುಪಾಯಿ ದಂಡ ವಿಧಿಸಲಾಗಿದೆ. ದಂಡ ಹಾಕಿದ ಚಲನ್ ನ ಫೋಟೋವನ್ನು ಹಾಕಿ, ಎಎನ್ ಐ ಸುದ್ದಿ ಸಂಸ್ಥೆ ಟ್ವೀಟ್ ಕೂಡ ಮಾಡಿದೆ.

Truck Owner Fined More Than 1 Lakh In Rajasthan

ಕಳೆದ ಸೋಮವಾರವಷ್ಟೇ ಒಡಿಶಾದಲ್ಲಿ ಟ್ರಕ್ ಚಾಲಕರೊಬ್ಬರಿಗೆ 80,000 ರುಪಾಯಿಗೂ ಅಧಿಕ ದಂಡ ವಿಧಿಸಿ, ಆ ನಂತರ ಬಹಳ ಹೊತ್ತು ಚೌಕಾಸಿ ಮಾಡಿದ ನಂತರ ಎಪ್ಪತ್ತು ಸಾವಿರ ರುಪಾಯಿ ವಸೂಲಿ ಮಾಡಲಾಗಿತ್ತು. ಇದೀಗ ದೇಶದಾದ್ಯಂತ ಹೊಸ ಕಾನೂನಿಗೆ ಭಾರೀ ವಿರೋಧ ವ್ಯಕ್ತವಾಗಿದೆ. ಈಗಾಗಲೇ ಗುಜರಾತ್ ಸರಕಾರ ದಂಡದ ಪ್ರಮಾಣ ಇಳಿಸುವುದಾಗಿ ಘೋಷಣೆ ಕೂಡ ಮಾಡಿದೆ.

English summary
Truck owner fined 1,41,700 rupees for traffic violation in Rajasthan. Here is the complete details.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X