ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ದೇಶದಲ್ಲೇ ಮೊದಲ ಬಾರಿಗೆ ಈ ನಗರದಲ್ಲಿ ಮನೆ ಬಾಗಿಲಿಗೆ ಕೊರೊನಾ ಲಸಿಕೆ

|
Google Oneindia Kannada News

ಜೈಪುರ, ಜೂ.13: ದೇಶದ ಈ ಒಂದು ನಗರವು ಸೋಮವಾರದಿಂದ ಮನೆ ಬಾಗಿಲಿಗೆ ತೆರಳಿ ಲಸಿಕೆ ನೀಡುವ ಕಾರ್ಯಕ್ರಮವನ್ನು ಆರಂಭಿಸಿದೆ. ರಾಜಸ್ಥಾನದ ಬಿಕಾನೆರ್ ನಗರದ ಜನರಲ್ಲಿ ರೋಗನಿರೋಧಕ ಶಕ್ತಿ ಹೆಚ್ಚಳ ಮಾಡುವ ಉದ್ದೇಶದಿಂದ ಮನೆ-ಮನೆ-ಲಸಿಕೆ ಅಭಿಯಾನವನ್ನು ಪ್ರಾರಂಭ ಮಾಡಲಿದೆ. ಇಂತಹ ಕ್ರಮವನ್ನು ಪ್ರಾರಂಭಿಸುವ ದೇಶದ ಮೊದಲ ನಗರ ಇದಾಗಲಿದೆ.

ವರದಿಗಳ ಪ್ರಕಾರ, ಸೋಮವಾರದಿಂದ 45 ವರ್ಷಕ್ಕಿಂತ ಮೇಲ್ಪಟ್ಟವರಿಗೆ ಈ ಮನೆ ಮನೆ ಲಸಿಕೆ ಅಭಿಯಾನ ಆರಂಭವಾಗಲಿದೆ. ಫಲಾನುಭವಿಗಳು ಇದಕ್ಕೂ ಮೊದಲು ಲಸಿಕೆಗಾಗಿ ನೋಂದಣಿ ಮಾಡಬೇಕಾಗಿದೆ. ಫಲಾನುಭವಿಗಳು ತಮ್ಮ ಹೆಸರು ಮತ್ತು ವಿಳಾಸಗಳನ್ನು ಜಿಲ್ಲಾಡಳಿತ ನೀಡಿರುವ ವಾಟ್ಸಾಪ್ ಸಹಾಯವಾಣಿ ಸಂಖ್ಯೆಗೆ ಕಳುಹಿಸಬೇಕಾಗಿದೆ.

ದೆಹಲಿಯಲ್ಲಿ ಮನೆ-ಮನೆಗೆ ತೆರಳಿ ಕೊರೊನಾ ಲಸಿಕೆ ಅಭಿಯಾನ: ಕೇಜ್ರಿವಾಲ್‌ ಘೋಷಣೆದೆಹಲಿಯಲ್ಲಿ ಮನೆ-ಮನೆಗೆ ತೆರಳಿ ಕೊರೊನಾ ಲಸಿಕೆ ಅಭಿಯಾನ: ಕೇಜ್ರಿವಾಲ್‌ ಘೋಷಣೆ

ಈ ಮನೆ ಮನೆ ಲಸಿಕೆ ಅಭಿಯಾನಕ್ಕಾಗಿ ಎರಡು ಆಂಬುಲೆನ್ಸ್ ಮತ್ತು ಮೂರು ತಂಡಗಳನ್ನು ಈಗಾಗಲೇ ಮಾಡಲಾಗಿದೆ. ಇನ್ನು ಲಸಿಕೆಗಳನ್ನು ವ್ಯರ್ಥ ಮಾಡುವುದನ್ನು ತಪ್ಪಿಸಲು, ಲಸಿಕೆಗಾಗಿ ಕನಿಷ್ಠ 10 ಜನರು ನೋಂದಾಯಿಸಿದ ಬಳಿಕ ಮಾತ್ರ ವ್ಯಾನ್‌ ಮೂಲಕ ಮನೆ ಬಾಗಿಲಿಗೆ ತೆರಳಿ ಲಸಿಕೆ ನೀಡಲು ಆಡಳಿತ ನಿರ್ಧರಿಸಿದೆ. ಆಡಳಿತವು 45 ವರ್ಷಕ್ಕಿಂತ ಮೇಲ್ಪಟ್ಟ 75 ಪ್ರತಿಶತದಷ್ಟು ಜನರಿಗೆ ಲಸಿಕೆ ನೀಡುವ ಗುರಿ ಹೊಂದಿದೆ.

 THIS City in India to Begin Door-to-door Covid Vaccination Drive

ರಾಜಸ್ಥಾನದಲ್ಲಿ ಶನಿವಾರದ 16 ಪ್ರಕರಣಗಳು ಸೇರಿ ಕೊರೊನಾ ಸಾವಿನ ಸಂಖ್ಯೆ 8,749 ಕ್ಕೆ ಏರಿಕೆಯಾಗಿದೆ. ಶನಿವಾರ 368 ಹೊಸ ಪ್ರಕರಣಗಳು ದಾಖಲಾಗಿದ್ದು ಒಟ್ಟು ಸೋಂಕು ಪ್ರಕರಣ 9,48,024 ಕ್ಕೆ ಏರಿಕೆಯಾಗಿದೆ. ಒಟ್ಟು 9,32,161 ಜನರು ಸೋಂಕಿನಿಂದ ಚೇತರಿಸಿಕೊಂಡಿದ್ದಾರೆ. ಪ್ರಸ್ತುತ 8,400 ಸಕ್ರಿಯ ಪ್ರಕರಣಗಳಿವೆ.

ಇನ್ನು ಈ ಹಿಂದೆ ದೆಹಲಿಯಲ್ಲಿ ಮನೆ ಮನೆಗೆ ತೆರಳಿ 45 ವರ್ಷಕ್ಕಿಂತ ಮೇಲ್ಪಟ್ಟವರಿಗೆ ಲಸಿಕೆ ಹಾಕುವ ಪ್ರಸ್ತಾಪವನ್ನು ಮುಖ್ಯಮಂತ್ರಿ ಅರಂವಿದ್‌ ಕೇಜ್ರಿವಾಲ್‌ ಮಾಡಿದ್ದರು.

Recommended Video

Renukacharya ಅವರು ತಹಶೀಲ್ದಾರ್ ಅವರಿಗೆ ಉತ್ತರ ಕೊಟ್ಟಿದ್ದು ಹೀಗೆ | Oneindia Kannada

(ಒನ್‌ಇಂಡಿಯಾ ಸುದ್ದಿ)

English summary
Bikaner town of Rajasthan in India to Begin Door-to-door Vaccination Drive From Monday, this town will be the first in the country to start such an initiative.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X