• search
 • Live TV
ಜೈಪುರ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಐಪಿಎಲ್‌ಗೆ ಭದ್ರತೆ ಒದಗಿಸಲು ಹಿಂದಿನ ಸರ್ಕಾರಕ್ಕೆ ಧೈರ್ಯವೇ ಇರಲಿಲ್ಲ: ಮೋದಿ

|
   ಅವರಿಗೆ ಧೈರ್ಯ ಇರಲಿಲ್ಲ ಅಂದ್ರು ಮೋದಿ..! | Oneindia Kannada

   ಕರೌಲಿ, ಮೇ 3: ಹಿಂದಿನ ಯುಪಿಎ ಸರ್ಕಾರದ ಆಡಳಿತವನ್ನು ಟೀಕಿಸುತ್ತಿರುವ ಪ್ರಧಾನಿ ನರೇಂದ್ರ ಮೋದಿ ಅವರು, ಕಾಂಗ್ರೆಸ್ ವಿರುದ್ಧದ ವಾಗ್ದಾಳಿಗೆ ಐಪಿಎಲ್ ಕ್ರಿಕೆಟ್ ಟೂರ್ನಿಯನ್ನು ಬಳಸಿಕೊಂಡಿದ್ದಾರೆ.

   ಕಳೆದ ಚುನಾವಣೆಗಳಲ್ಲಿ ಅಧಿಕಾರದಲ್ಲಿದ್ದ ಯುಪಿಎ ಸರ್ಕಾರ ಏಕಕಾಲದಲ್ಲಿ ಐಪಿಎಲ್ ಟೂರ್ನಿಯನ್ನು ನಿಭಾಯಿಸಲು ಸಾಧ್ಯವಾಗುವುದಿಲ್ಲ ಎಂದಿತ್ತು. ಆದರೆ, ತಮಗೆ ಅದು ಸಾಧ್ಯವಾಯಿತು ಎಂದು ಮೋದಿ ಹೇಳಿಕೊಂಡಿದ್ದಾರೆ.

   ಮೋದಿ ಸರ್ಕಾರಕ್ಕೆ ಮತ್ತೆ ಹಿನ್ನಡೆ, ನಿರುದ್ಯೋಗ ಪ್ರಮಾಣ ಏರಿಕೆ

   2009ರಲ್ಲಿ ಲೋಕಸಭೆ ಚುನಾವಣೆ ಮತ್ತು ಐಪಿಎಲ್ ಏಕಕಾಲಕ್ಕೆ ಆಯೋಜನೆಯಾಗಿದ್ದವು. ಆಗ ಚುನಾವಣೆಗಾಗಿ ಭದ್ರತೆ ನಿಯೋಜಿಸುವ ಅಗತ್ಯವಿದ್ದರಿಂದ ಐಪಿಎಲ್ ಟೂರ್ನಿಗೆ ಭದ್ರತೆ ಒದಗಿಸಲು ಕಷ್ಟ ಎಂಬ ಕಾರಣಕ್ಕೆ ಟೂರ್ನಿಯನ್ನು ಸಂಪೂರ್ಣವಾಗಿ ದಕ್ಷಿಣ ಆಫ್ರಿಕಾಕ್ಕೆ ಸ್ಥಳಾಂತರಿಸಲಾಗಿತ್ತು. 2014ರಲ್ಲಿಯೂ ಐಪಿಎಲ್ ಮತ್ತು ಚುನಾವಣೆ ಒಂದೇ ಸಮಯಕ್ಕೆ ಬಂದಿತ್ತು. ಐಪಿಎಲ್ ಉದ್ಘಾಟನಾ ಸಮಾರಂಭ ಮತ್ತು ಕೆಲವು ಪಂದ್ಯಗಳನ್ನು ಯುಎಇಯಲ್ಲಿ ನಡೆಸಲಾಗಿತ್ತು.

   ಆದರೆ, 2019ರ ಲೋಕಸಭೆ ಚುನಾವಣೆ ಮತ್ತು ಐಪಿಎಲ್ ಟೂರ್ನಿ ಒಟ್ಟಿಗೆ ಬಂದಿದ್ದರೂ ಈ ಬಾರಿಯ ಟೂರ್ನಿಯನ್ನು ದೇಶದಲ್ಲಿಯೇ ನಡೆಸಲಾಗಿದೆ. ಇದನ್ನು ದಾಳವಾಗಿಟ್ಟುಕೊಂಡಿರುವ ಪ್ರಧಾನಿ ಮೋದಿ, ಎರಡು ಬಾರಿಯೂ ಐಪಿಎಲ್‌ಗೆ ಭದ್ರತೆಯನ್ನು ಒದಗಿಸಲು ಕಾಂಗ್ರೆಸ್ ವಿಫಲವಾಗಿತ್ತು ಎಂದು ಟೀಕಿಸಿದ್ದಾರೆ.

   ಆ ಸರ್ಕಾರಕ್ಕೆ ಧೈರ್ಯವೇ ಇರಲಿಲ್ಲ

   ಆ ಸರ್ಕಾರಕ್ಕೆ ಧೈರ್ಯವೇ ಇರಲಿಲ್ಲ

   ರಾಜಸ್ಥಾನದ ಕರೌಲಿಯಲ್ಲಿ ಚುನಾವಣಾ ಪ್ರಚಾರ ನಡೆಸಿದ ಪ್ರಧಾನಿ ನರೇಂದ್ರ ಮೋದಿ, 'ಯುವಜನರಿಗೆ ಐಪಿಎಲ್‌ನಲ್ಲಿ ಅಪಾರ ಆಸಕ್ತಿ ಇದೆ. ಆದರೆ, ಎರಡು ಸಂದರ್ಭಗಳಲ್ಲಿ ಭಾರತದಲ್ಲಿ ಟೂರ್ನಿಯನ್ನು ನಡೆಸಲು ಸಾಧ್ಯವಾಗಿರಲಿಲ್ಲ. ದಕ್ಷಿಣ ಆಫ್ರಿಕಾದಲ್ಲಿ ಆಯೋಜಿಸಲಾಗಿತ್ತು. ಇದು 2009 ಮತ್ತು 2014ರಲ್ಲಿ ನಡೆದಿತ್ತು. ಕೇಂದ್ರದಲ್ಲಿದ್ದ ಸರ್ಕಾರ ಭಯೋತ್ಪಾದಕರ ಬಗ್ಗೆ ತುಂಬಾ ಹೆದರಿತ್ತು. ಆ ಸರ್ಕಾರಕ್ಕೆ ಧೈರ್ಯವೇ ಇರಲಿಲ್ಲ' ಎಂದು ಲೇವಡಿ ಮಾಡಿದರು.

   ಈಗಲೂ ಚುನಾವಣೆ ನಡೆಯುತ್ತಿದೆ

   ಈಗಲೂ ಚುನಾವಣೆ ನಡೆಯುತ್ತಿದೆ

   '2009 ಮತ್ತು 2014ರಲ್ಲಿ ಚುನಾವಣೆ ಇದೆ ಎಂದು ಅವರು ಹೇಳಿದ್ದರು. ಪೊಲೀಸರು ತುಂಬಾ ಬಿಜಿಯಾಗಿರುತ್ತಾರೆ, ಹೀಗಾಗಿ ಐಪಿಎಲ್‌ ಆಯೋಜನೆ ಸಾಧ್ಯವಿಲ್ಲ ಎಂದಿತ್ತು. ಈಗಲೂ ಚುನಾವಣೆಗಳು ನಡೆಯುತ್ತಿವೆ. ಅದರ ನಡುವೆ ನವರಾತ್ರಿ ರಾಮನವಮಿ ಮತ್ತು ಹನುಮಾನ್ ಜಯಂತಿಗಳೂ ಇದ್ದವು. ರಂಜಾನ್ ಕೂಡ ಶೀಘ್ರದಲ್ಲಿಯೇ ಆರಂಭವಾಗಲಿದೆ. ಆದರೂ ದೇಶದಲ್ಲಿ ಐಪಿಎಲ್ ನಡೆಯುತ್ತಿದೆ' ಎಂದು ಹೇಳಿದರು.

   ಪ್ರಧಾನಿ ಮೋದಿ 'ನ್ಯೂಕ್ಲಿಯರ್ ಬಟನ್' ಹೇಳಿಕೆಗೆ ಚು.ಆಯೋಗ ಕ್ಲೀನ್ ಚಿಟ್

   ದಕ್ಷಿಣ ಆಫ್ರಿಕಾದಲ್ಲಿ ಟೂರ್ನಿ

   ದಕ್ಷಿಣ ಆಫ್ರಿಕಾದಲ್ಲಿ ಟೂರ್ನಿ

   2009ರಲ್ಲಿ ಮೊದಲ ಬಾರಿಗೆ ಐಪಿಎಲ್ ಟೂರ್ನಿಯನ್ನು ದಕ್ಷಿಣ ಆಫ್ರಿಕಾಕ್ಕೆ ಸ್ಥಳಾಂತರಿಸಲಾಗಿತ್ತು. ಚುನಾವಣೆ ಮತ್ತು ಕ್ರಿಕೆಟ್ ಟೂರ್ನಿಗೆ ಏಕಕಾಲದಲ್ಲಿ ಭದ್ರತೆ ಒದಗಿಸಲು ಸಾಲುವಷ್ಟು ಭದ್ರತಾ ಪಡೆಗಳು ದೇಶದಲ್ಲಿ ಇಲ್ಲ ಎಂದು ಚುನಾವಣಾ ಆಯೋಗ ಹೇಳಿತ್ತು. ಹೀಗಾಗಿ ಭದ್ರತಾ ಕಾರಣಗಳಿಂದ ದೇಶದಿಂದ ಹೊರಗೆ ಐಪಿಎಲ್ ನಡೆಸಲಾಗಿತ್ತು.

   ಯುಎಇಯಲ್ಲಿ ಕೆಲವು ಪಂದ್ಯ

   ಯುಎಇಯಲ್ಲಿ ಕೆಲವು ಪಂದ್ಯ

   2014ರಲ್ಲಿಯೂ ಲೋಕಸಭೆ ಚುನಾವಣೆ ಮತ್ತು ಐಪಿಎಲ್ ಏಕಕಾಲಕ್ಕೆ ಎದುರಾಗಿದ್ದವು. ಹೀಗಾಗಿ ಮೊದಲ ಕೆಲವು ಪಂದ್ಯಗಳನ್ನು ಯುಎಇಯಲ್ಲಿ ನಡೆಸಲಾಗಿತ್ತು. ಚುನಾವಣೆ ಬಳಿಕ ಮರಳಿ ಭಾರತದಲ್ಲಿ ಟೂರ್ನಿಯನ್ನು ಮುಂದುವರಿಸಲಾಗಿತ್ತು. ಈ ಬಾರಿ ಈಗಾಗಲೇ ನಾಲ್ಕು ಹಂತದ ಚುನಾವಣೆ ನಡೆದಿದ್ದು, 12ನೇ ಆವೃತ್ತಿಯ ಐಪಿಎಲ್ ಅಂತಿಮ ಹಂತದತ್ತ ತಲುಪುತ್ತಿದೆ. ಮತದಾನ ನಡೆದ ದಿನಗಳಲ್ಲಿಯೂ ಪಂದ್ಯಗಳು ನಿರಾತಂಕವಾಗಿ ನಡೆದಿದ್ದವು. ಇದು ತಮ್ಮ ಹೆಗ್ಗಳಿಕೆ ಎಂದು ಮೋದಿ ಹೇಳಿದ್ದಾರೆ.

   ನನ್ನ ಹತ್ಯೆಗೆ ವಿರೋಧಪಕ್ಷಗಳ ಕನಸು: ಮೋದಿ ಗಂಭೀರ ಆರೋಪ

   ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

   English summary
   Lok Sabha Elections 2019: Prime Minister Narendra Modi in Rajasthan's Karauli criticised UPA government for no able to provide security to IPL tournament in 2009 and 2014 during General Elections.
   ತಾಜಾ ಸುದ್ದಿ ತಕ್ಷಣ ಪಡೆಯಿರಿ
   Enable
   x
   Notification Settings X
   Time Settings
   Done
   Clear Notification X
   Do you want to clear all the notifications from your inbox?
   Settings X
   We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more