ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

"ಮಂದಿರ,ಗೋವು ಕಾಂಗ್ರೆಸ್ಸಿಗೆ ಚುನಾವಣೆ ಸರಕು,ಬಿಜೆಪಿಗೆ ಅವಿಭಾಜ್ಯ ಸಂಸ್ಕೃತಿ"

|
Google Oneindia Kannada News

Recommended Video

Rajasthan Assembly Elections 2018 : ಮಂದಿರ,ಗೋವು ಕಾಂಗ್ರೆಸ್ಸಿಗೆ ಚುನಾವಣೆ ಸರಕು,ಬಿಜೆಪಿಗೆ ಅವಿಭಾಜ್ಯ ಸಂಸ್ಕೃತಿ

ಜೈಪುರ, ಡಿಸೆಂಬರ್ 03: "ದೇವಾಲಯ ಮತ್ತು ಗೋವು ಕಾಂಗ್ರೆಸ್ಸಿಗರಿಗೆ ಚುನಾವಣೆಯ ಸರಕಿರಬಹುದು. ಆದರೆ ಬಿಜೆಪಿಗೆ ಅದು ಅವಿಭಾಜ್ಯ ಸಂಸ್ಕೃತಿ" ಎಂದು ಗೃಹಸಚಿವ ರಾಜನಾಥ್ ಸಿಂಗ್ ಹೇಳಿದ್ದಾರೆ.

ರಾಜಸ್ಥಾನ ವಿಧಾನಸಭೆ ಚುನಾವಣೆಯ ಹಿನ್ನೆಲೆಯಲ್ಲಿ ಜೈಪುರದಲ್ಲಿ ನಡೆದ ಸುದ್ಧಿಗೋಷ್ಠಿಯೊಂದರಲ್ಲಿ ಅವರು ಭಾನುವಾರ ಮಾತನಾಡುತ್ತಿದ್ದರು.

ರಾಜಸ್ಥಾನ : ಸಾಮಾಜಿಕ ಜಾಲತಾಣದಲ್ಲಿ ಕಾಂಗ್ರೆಸ್‌ v/s ಬಿಜೆಪಿ ಸಮರರಾಜಸ್ಥಾನ : ಸಾಮಾಜಿಕ ಜಾಲತಾಣದಲ್ಲಿ ಕಾಂಗ್ರೆಸ್‌ v/s ಬಿಜೆಪಿ ಸಮರ

"ಕಾಂಗ್ರೆಸ್ ಮುಖಂಡರು ಚುನಾವಣೆಯ ದಿನಾಂಕ ಘೋಷಣೆಯಾದ ಮೇಲೆ ದೇವಾಲಯಕ್ಕೆ ತೆರಳಿ, ಪ್ರಾರ್ಥನೆ ಸಲ್ಲಿಸಲು ಆರಂಭಿಸಿದ್ದಾರೆ. ಇದಕ್ಕೂ ಮುನ್ನ ಅವರು ದೇವಾಲಯಕ್ಕೆ ಹೋಗಿ ಪೂಜಿಸಿರಲಿಲ್ಲ. ಕಾಂಗ್ರೆಸ್ಸಿಗೆ ದೇವಾಲಯ ಮತ್ತು ಗೋವು ಎಂಬುದು ಒಂದು ಚುನಾವಣೆಯ ಸರಕಷ್ಟೇ ಆಗಿರಬಹುದು. ಆದರೆ ಬಿಜೆಪಿಗೆ ಹಾಗಲ್ಲ. ಅದು ನಮ್ಮ ಸಾಂಸ್ಕೃತಿಕ ಬದುಕಿನ ಅವಿಭಾಜ್ಯ ಅಂಗ" ಎಂದು ಸಿಂಗ್ ಹೇಳಿದರು.

Temple, cows are election stunt for Congress, but integral to BJP: Rajnath Singh

ಕಾಂಗ್ರೆಸ್ 55 ವರ್ಷಗಳ ಕಾಲ ಈ ದೇಶವನ್ನು ಆಳಿದ್ದರಿಂದಲೇ ದೇಶ ಬಡದೇಶವಾಗಿದೆ ಎಂದು ಆರೋಪಿಸಿದ ಅವರು, ಇದೇ ಸಂದರ್ಭದಲ್ಲಿ ಭಯೋತ್ಪಾದನೆ ನಿರ್ಮೂಲನೆ ಬಗ್ಗೆ ಪಾಕಿಸ್ತಾನ ಮೌನವಾಗಿರುವುದನ್ನು ಖಂಡಿಸಿದರು.

ಮದುಮಗನೇ ಇಲ್ಲದ ಮೆರವಣಿಗೆಯಂತಾಗಿದೆ ಕಾಂಗ್ರೆಸ್ ಎಂದ ರಾಜ್ ನಾಥ್ಮದುಮಗನೇ ಇಲ್ಲದ ಮೆರವಣಿಗೆಯಂತಾಗಿದೆ ಕಾಂಗ್ರೆಸ್ ಎಂದ ರಾಜ್ ನಾಥ್

"ಪಾಕಿಸ್ತಾನಕ್ಕೆ ಒಂಟಿಯಾಗಿ ಭಯೋತ್ಪಾದನೆಯನ್ನು ಹತ್ತಿಕ್ಕುವುದಕ್ಕೆ ಸಾಧ್ಯವಿಲ್ಲ ಎಂದರೆ, ಭಾರತವು ನೆರವು ನೀಡಲು ಸಿದ್ಧ" ಎಂದು ಸಹ ಅವರು ಹೇಳಿದರು.

ಮೋದಿಗೆ ಹಿಂದುತ್ವದ ಮೂಲಭೂತ ತತ್ವವೇ ಗೊತ್ತಿಲ್ಲ ಎಂದ ರಾಹುಲ್ ಗಾಂಧಿಮೋದಿಗೆ ಹಿಂದುತ್ವದ ಮೂಲಭೂತ ತತ್ವವೇ ಗೊತ್ತಿಲ್ಲ ಎಂದ ರಾಹುಲ್ ಗಾಂಧಿ

ರಾಜಸ್ಥಾನದಲ್ಲಿ ಡಿ.7 ರಂದು ಮತದಾನ ನಡೆಯಲಿದ್ದು, ಡಿ. 11 ರಂದು ಫಲಿತಾಂಶ ಹೊರಬೀಳಲಿದೆ. ರಾಜಸ್ಥಾನ 200 ವಿಧಾನಸಭಾ ಕ್ಷೇತ್ರಗಳನ್ನು ಹೊಂದಿದೆ.

English summary
Home Minister Rajnath Singh today claimed Congress leaders start offering prayers at temples when elections are near whereas for the BJP it is an integral part of its culture.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X