ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ರಾಜಸ್ಥಾನದಲ್ಲಿ ಬಿಸಿಲನ್ನೇ ಹೊದ್ದ ಜನತೆ, ಗರಿಷ್ಠ ಮಟ್ಟ ತಲುಪಿದ ತಾಪಮಾನ

|
Google Oneindia Kannada News

ಜೈಪುರ, ಜೂನ್ 1: ರಾಜಸ್ಥಾನದ ಜನ ಬಿಸಿಲ ಬೇಗೆಯಿಂದ ಬೇಯುತ್ತಿದ್ದಾರೆ, ಪ್ರಾಣಿ, ಪಕ್ಷಿಗಳು ಕೂಡ ಕಣ್ಮರೆಯಾಗುತ್ತಿವೆ. ಇದೀಗ ಗರಿಷ್ಠ ತಾಪಮಾನ 50 ಡಿಗ್ರಿ ಸೆಲ್ಸಿಯಸ್ ಹತ್ತಿರ ತಲುಪಿದ್ದು, ಹೀಗೆ ಮುಂದುವರೆದರೆ ರಾಜಸ್ತಾನದ ಜನತೆ ರಾಜ್ಯವನ್ನೇ ಬಿಟ್ಟು ಬೇರೆಗೆ ಹೋಗುವ ಸಂದರ್ಭ ಬಂದರೂ ಬರಬಹುದು.

ಪ್ರತಿ ವರ್ಷವೂ ಮಾರ್ಚ್‌ನಿಂದ ಏಪ್ರಿಲ್ ವೇಳೆಗೆ ಕುಡಿಯಲು ನೀರಿಲ್ಲದೆ ಕಿಲೋಮೀಟರ್‌ಗಳಟ್ಟಲೆ ನಡೆದು ಹೋಗಿ ಟ್ಯಾಂಕರ್‌ನಿಂದ ಒಂದು ಕೊಡ ನೀರನ್ನು ಹೊತ್ತು ತರಬೇಕಾದ ಪರಿಸ್ಥಿತಿ ನಿರ್ಮಾಣವಾಗುತ್ತಿತ್ತು.

ಕರ್ನಾಟಕದ 5 ಜಿಲ್ಲೆಗಳಿಗೆ ಬಿಸಿ ಗಾಳಿ ಭೀತಿ, ಬಿಸಿಲಿನಿಂದ ರಕ್ಷಣೆ ಹೇಗೆ? ಕರ್ನಾಟಕದ 5 ಜಿಲ್ಲೆಗಳಿಗೆ ಬಿಸಿ ಗಾಳಿ ಭೀತಿ, ಬಿಸಿಲಿನಿಂದ ರಕ್ಷಣೆ ಹೇಗೆ?

ಒಂದೊಮ್ಮೆ ನೀರನ್ನು ಮನೆ ಬಾಗಿಲಿಗೇ ತಂದುಕೊಟ್ಟರೂ ಕೂಡ ಮನೆಯ ಹೊರಗೆ ಕಾಲಿಡದಂತಹ ಪರಿಸ್ಥಿತಿಯನ್ನು ಅಲ್ಲಿನ ಜನರು ಎದುರಿಸುತ್ತಿದ್ದಾರೆ. ಮೊದಲೇ ಮರಳಗಾಡು ಪ್ರದೇಶ ಸಾಮಾನ್ಯ ದಿನಗಳಲ್ಲೇ ಸೆಕೆ ಹೆಚ್ಚು ಇನ್ನು ಬೇಸಿಗೆಯೆಂದರೆ ಕೇಳಬೇಕಾ...

ಜೂನ್ 1 ರಂದು ಭಾರತದ ಅತಿ ಹೆಚ್ಚು ತಾಪಮಾನವಿರುವ ನಗರಗಳು
ಶ್ರೀಗಂಗಾನಗರ, ರಾಜಸ್ಥಾನ-49.6 ಡಿಗ್ರಿ ಸೆಲ್ಸಿಯಸ್
ಚುರು- ರಾಜಸ್ಥಾನ-48.5 ಡಿಗ್ರಿ ಸೆಲ್ಸಿಯಸ್
ಬಾಂದಾ-ಉತ್ತರಪ್ರದೇಶ-48.4 ಡಿಗ್ರಿ ಸೆಲ್ಸಿಯಸ್
ಜಬಲ್‌ಪುರ-ಮಧ್ಯಪ್ರದೇಶ-46.8 ಡಿಗ್ರಿ ಸೆಲ್ಸಿಯಸ್
ರೇವಾ-ಮಧ್ಯಪ್ರದೇಶ-46.8 ಡಿಗ್ರಿ ಸೆಲ್ಸಿಯಸ್
ವರ್ದಾ-ಮಹಾರಾಷ್ಟ್ರ-46.7 ಡಿಗ್ರಿ ಸೆಲ್ಸಿಯಸ್
ಬಿಕಾನೇರ್-ರಾಜಸ್ಥಾನ-46.6 ಡಿಗ್ರಿ ಸೆಲ್ಸಿಯಸ್
ಸುಲ್ತಾನ್‌ಗಂಜ್-ಜಾರ್ಖಂಡ್-46.6 ಡಿಗ್ರಿ ಸೆಲ್ಸಿಯಸ್
ಜೈಸಲ್ಮೇರ್-ರಾಜಸ್ಥಾನ-46.5 ಡಿಗ್ರಿ ಸೆಲ್ಸಿಯಸ್
ನಾಗಪುರ-ಮಹಾರಾಷ್ಟ್ರ-46.5 ಡಿಗ್ರಿ ಸೆಲ್ಸಿಯಸ್ ಉಷ್ಣಾಂಶ ದಾಖಲಾಗಿದೆ.

ರಾಜಸ್ಥಾನದಲ್ಲಿ ಗರಿಷ್ಠ ತಾಪಮಾನ 49.6 ಡಿಗ್ರಿ ಸೆಲ್ಸಿಯಸ್‌ಗೆ ಏರಿಕೆ

ರಾಜಸ್ಥಾನದಲ್ಲಿ ಗರಿಷ್ಠ ತಾಪಮಾನ 49.6 ಡಿಗ್ರಿ ಸೆಲ್ಸಿಯಸ್‌ಗೆ ಏರಿಕೆ

ರಾಜಸ್ಥಾನದಲ್ಲಿ ಗರಿಷ್ಠ ತಾಪಮಾನ 49.6 ಡಿಗ್ರಿ ಸೆಲ್ಸಿಯಸ್ ತಲುಪಿದೆ. ಈ ಬೇಸಿಗೆಯಲ್ಲಿ ದೇಶದಲ್ಲಿ ಅತಿ ಹೆಚ್ಚು ತಾಪಮಾನ ಹೊಂದಿರುವ ಪ್ರದೇಶ ಇದಾಗಿದೆ. ರಾಜಸ್ಥಾನದ ಕೆಲವೆಡೆ ಬಿಸಿ ಗಾಳಿಯೂ ವಿಪರೀತವಾಗಿದೆ. ಕಳೆದ ಒಂದೆರೆಡು ತಿಂಗಳಿನಿಂದಲೂ ಅಲ್ಲಿ ಒಣಹವೆ ಮುಂದುವರೆದಿದೆ. ಮುಂದಿನ ಒಂದು ವಾರದವರೆಗೂ ಈ ಬಿಸಿಲಿನಿಂದ ತಪ್ಪಿಸಿಕೊಳ್ಳಲು ಸಾಧ್ಯವೇ ಇಲ್ಲ.

ರಾಜಸ್ಥಾನದ ಕೆಲವೆಡೆ ಮಳೆ

ರಾಜಸ್ಥಾನದ ಕೆಲವೆಡೆ ಮಳೆ

ಶುಕ್ರವಾರ ಕೋಟಾ, ಬುಂಡಿ, ಫಲೋಡಿ, ಬಾರ್ಮರ್ ಪ್ರದೇಶದಲ್ಲಿ ಮಳೆಯಾಗಿದೆ. ಆದರೆ ಮುಂಗಾರು ಪೂರ್ವ ಮಳೆಯು ಕೆಲವೇ ನಿಮಿಷಗಳು ಬಂದು ಹೋಗಿಬಿಡುತ್ತವೆ. ಮತ್ತದೇ ಬಿಸಿಲು, ತಾಪಮಾನ ಮುಂದುವರೆಯುತ್ತದೆ. ಆದರೆ ಈ ಮಳೆಯಿಂದಾಗಿ ಹವಾಮಾನದಲ್ಲಿ ಹೆಚ್ಚಿನ ಬದಲಾವಣೆಯನ್ನು ಅಲ್ಲಿನ ಜನತೆ ಕಾದು ನೋಡುತ್ತಿದೆ.

ರಾಜಸ್ಥಾನದಲ್ಲಿ ತಾಪಮಾನ

ರಾಜಸ್ಥಾನದಲ್ಲಿ ತಾಪಮಾನ

ರಾಜಸ್ಥಾನದಲ್ಲಿ ತಾಪಮಾನ ಕಡಿಮೆಯಾಗುವಂತೆ ಕಾಣುತ್ತಿಲ್ಲರಾಜಸ್ಥಾನದಲ್ಲಿ ತಾಪಮಾನವನ್ನು ಕಡಿಮೆ ಮಾಡುವಂತಹ ಯಾವುದೇ ಲಕ್ಷಣಗಳು ಗೋಚರಿಸುತ್ತಿಲ್ಲ. ಕೆಲವು ಕಡೆ ಮುಂದಿನ 24 ಗಂಟೆಯೊಳಗೆ ಮಳೆಯಾಗುವ ಮುನ್ಸೂಚನೆಯನ್ನು ಸ್ಕೈಮೆಟ್ ವೆದರ್ ನೀಡಿದೆ. ಆದರೂ ಇನ್ನು ಮುಂದಿನ 8-10ದಿನಗಳ ಕಾಲ ತಾಪಮಾನ ಇದೇ ರೀತಿ ಮುಂದುವರೆಯಲಿದೆ.

75 ವರ್ಷದ ಬಳಿಕ ಅಧಿಕ ಉಷ್ಣಾಂಶ

75 ವರ್ಷದ ಬಳಿಕ ಅಧಿಕ ಉಷ್ಣಾಂಶ

ರಾಜಸ್ಥಾನದ ಶ್ರೀಗಂಗಾನಗರದಲ್ಲಿ ದೇಶದಲ್ಲೇ ಈ ಬಾರಿ ಬೇಸಿಗೆಯ ಅಧಿಕ ಉಷ್ಣಾಂಶ ದಾಖಲಾಗಿದೆ. ಕಳೆದ 75 ವರ್ಷಗಳಿಂದ ದಾಖಲಾಗದ ತಾಪಮಾನ ಈ ವರ್ಷ ದಾಖಲಾಗಿದೆ. 1944ರಲ್ಲಿ 49.4 ಡಿಗ್ರಿ ಸೆಲ್ಸಿಯಸ್ ದಾಖಲಾಗಿತ್ತು. ಆದರೆ ಶ್ರೀಗಂಗಾನಗರದಲ್ಲಿ ಶುಕ್ರವಾರ 49.6 ಡಿಗ್ರಿ ಸೆಲ್ಸಿಯಸ್ ಗರಿಷ್ಠ ಉಷ್ಣಾಂಶ ದಾಖಲಾಗಿದೆ.

English summary
IMD issued highest ‘red-colour’ warning as it recorded the season’s highest temperature of 49.6 degrees Celsius in Sri Ganganagar in Rajasthan, The city broke a 75-year record for the month of May.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X