ಕ್ರಿಕೆಟ್ ಆಡುತ್ತಿದ್ದ ಬಾಲಕನಿಗೆ ಕೇಳಿತ್ತು ಆಕೆಯ ಕಿರುಚಾಟ, ಮುಂದೇನಾಯ್ತು?
ಜೈಪುರ, ಜುಲೈ 6: ಕ್ರಿಕೆಟ್ ಆಡುತ್ತಿದ್ದ ಬಾಲಕ ಅಪ್ರಾಪ್ತೆಯ ಮೇಲೆ ನಡೆಯುತ್ತಿದ್ದ ಅತ್ಯಾಚಾರವನ್ನು ತಡೆದ ಘಟನೆ ಜೈಪುರದಲ್ಲಿ ನಡೆದಿದ್ದು, ಬಾಲಕ ಎಲ್ಲರ ಪ್ರೀತಿಗೆ ಪಾತ್ರನಾಗಿದ್ದಾನೆ.
ಜೈಪುರ ಇತ್ತೀಚೆಗೆ ಅಪ್ರಾಪ್ತೆ ಮೇಲೆ ನಡೆದ ಅತ್ಯಾಚಾರದ ಬಳಿಕ ಸ್ವಲ್ಪ ಚೇತರಿಸಿಕೊಳ್ಳುತ್ತಿದೆ. ಹದಿಮೂರು ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಸತತ ಐದು ದಿನಗಳಿಂದ ಇಂಟರ್ನೆಟ್ ಕೂಡ ಬಂದ್ ಮಾಡಲಾಗಿದೆ.
ನೇಣುಬಿಗಿದ ಸ್ಥಿತಿಯಲ್ಲಿ ಯುವತಿಯ ಮೃತ ದೇಹ ಪತ್ತೆ
ಬಾಲಕ ಕ್ರಿಕೆಟ್ ಆಡುತ್ತಿದ್ದಾಗ ಬಾಲಕಿ ಕೂಗಿಕೊಳ್ಳುವುದು ಕೇಳಿಸಿದೆ. ಧ್ವನಿ ಬಂದ ಕಡೆಗೆ ಓಡಿ ಹೋಗಿ ನೋಡಿದ್ದಾನೆ. ಆಗ ಬಾಲಕಿ ಮೇಲೆ ಲೈಂಗಿಕ ದೌರ್ಜನ್ಯ ಮಾಡುತ್ತಿದ್ದಿದ್ದು ಕಂಡು ಬಂದು ಸ್ನೇಹಿತರನ್ನು ಕರೆದು ಆತನಿಂದ ಬಾಲಕಿಯನ್ನು ಬಿಡಿಸಿ, ಆರೋಪಿಯನ್ನಯ ಪೊಲೀಸರ ಕೈಗೆ ಒಪ್ಪಿಸಿದ್ದಾರೆ.
ಮನಿಷ್, ಅಮಿತ್, ರೋಹಿತ್, ಬಾದಲ್ಗೆ ಪೊಲೀಸರು ನಗದು ಬಹುಮಾನ ನೀಡಿದ್ದಾರೆ.
ಯುವತಿ ಮೇಲೆ 6 ವರ್ಷ ಅತ್ಯಾಚಾರವೆಸಗಿದ್ದ ಪಾಪಿ ಕೊನೆಗೂ ಅರೆಸ್ಟ್
ಮಕ್ಕಳು ದೇಶದ ನಾಗರಿಕನಾಗಿ ಏನನ್ನು ಮಾಡಬೇಕೋ ಆ ಕೆಲಸ ಮಾಡಿದ್ದಾರೆ. ಅಲ್ಲಿ ಅಪ್ರಾಪ್ತೆ ಮೇಲೆ ಅತ್ಯಾಚಾರ ನಡೆದ ಬಳಿಕ ಗುಂಪು ಜನರು ಬಂದು ಕಾರಿನ ಗಾಜುಗಳನ್ನು ಪುಡಿ ಪುಡಿ ಮಾಡಿದ್ದರು. ಸಾಕಷ್ಟು ಮನೆಯ ಕಿಟಕಿ ಗಾಜುಗಳನ್ನು ಒಡೆದಿದ್ದರು ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.