• search
  • Live TV
ಜೈಪುರ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಪಾಕಿಸ್ತಾನ ಪರ ಬೇಹುಗಾರಿಕೆ ನಡೆಸಿದ ಗ್ಯಾಸ್ ಏಜೆನ್ಸಿ ಮಾಲೀಕ ಅರೆಸ್ಟ್!

|
Google Oneindia Kannada News

ಜೈಪುರ್, ಸೆಪ್ಟೆಂಬರ್ 16: ರಾಜಸ್ಥಾನದ ಝುಂಝುನ್ ಜಿಲ್ಲೆಯಲ್ಲಿ ಎಲ್ ಪಿಜಿ ಸಿಲಿಂಡರ್ ಏಜೆನ್ಸಿ ಮತ್ತು ವಿತರಣೆ ಘಟಕದ ಮಾಲೀಕನನ್ನು ಪೊಲೀಸರು ಬಂಧಿಸಿದ್ದಾರೆ. ಭಾರತೀಯ ಸೇನಾ ಚಟುವಟಿಕೆಗಳಿಗೆ ಸಂಬಂಧಿಸಿದ ಮಾಹಿತಿಯನ್ನು ಪಾಕಿಸ್ತಾನಕ್ಕೆ ನೀಡುತ್ತಿದ್ದ ಆರೋಪದ ಹಿನ್ನೆಲೆ ಬಂಧಿಸಿ ವಿಚಾರಣೆ ನಡೆಸಲಾಗುತ್ತಿದೆ.

ಕೇಂದ್ರ ಗುಪ್ತಚರ ಇಲಾಖೆ, ಸೇನಾ ಗುಪ್ತಚರ ಇಲಾಖೆ ಹಾಗೂ ರಾಜಸ್ಥಾನ ಪೊಲೀಸರು ಜಂಟಿ ಕಾರ್ಯಾಚರಣೆ ನಡೆಸಿ ಝಂಝುನ್ ಜಿಲ್ಲೆ ನರ್ಹರ್ ಗ್ರಾಮದ 30 ವರ್ಷದ ಆರೋಪಿ ಸಂದೀಪ್ ಕುಮಾರ್ ಎಂಬಾತನನ್ನು ಬಂಧಿಸಿದ್ದಾರೆ.

ಉಪಗ್ರಹದ ಚಿತ್ರ: ಪಾಕ್ ಗಡಿಯಲ್ಲಿ ನಿಂತ ಸಾವಿರಾರು ಅಫ್ಘನ್ನರು!ಉಪಗ್ರಹದ ಚಿತ್ರ: ಪಾಕ್ ಗಡಿಯಲ್ಲಿ ನಿಂತ ಸಾವಿರಾರು ಅಫ್ಘನ್ನರು!

ಸೇನಾ ಆವರಣಗಳಿಗೆ ಎಲ್‌ಪಿಜಿ ಸಿಲಿಂಡರ್‌ಗಳನ್ನು ವಿತರಿಸುವ ಸಂದರ್ಭದಲ್ಲಿ ಆರೋಪಿಯು ಭಾರತೀಯ ಸೇನೆಗೆ ಸಂಬಂಧಿಸಿದ ಕಾರ್ಯತಂತ್ರದ ಮಾಹಿತಿ ಮತ್ತು ಛಾಯಾಚಿತ್ರಗಳನ್ನು ಸೋರಿಕೆ ಮಾಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಪಾಕಿಸ್ತಾನದ ನಿರ್ವಾಹಕರು ನರಹರ್ ಸೇನಾ ನೆಲೆಯ ಸೂಕ್ಷ್ಮ ಮಾಹಿತಿ ಮತ್ತು ಛಾಯಾಚಿತ್ರಗಳನ್ನು ಸೋರಿಕೆ ಮಾಡಲು ಆರೋಪಿಗೆ ಹಣದ ಆಮಿಷವೊಡ್ಡಿದ್ದರು ಎಂದು ತಿಳಿದು ಬಂದಿದೆ.

ಸಪ್ಟೆಂಬರ್ 12ರಂದೇ ಆರೋಪಿ ವಶ:

ಪಾಕಿಸ್ತಾನದಕ್ಕೆ ಭಾರತೀಯ ಸೇನಾ ಚಟುವಟಿಕೆಗಳ ಬಗ್ಗೆ ಮಾಹಿತಿ ನೀಡುತ್ತಿದ್ದ ಆರೋಪಿ ಸಂದೀಪ್ ಕುಮಾರ್ ನನ್ನು ಕಳೆದ ಸೆಪ್ಟೆಂಬರ್ 12ರಂದೇ ಪೊಲೀಸರು ವಶಕ್ಕೆ ಪಡೆದುಕೊಂಡಿದ್ದರು ಎಂದು ಗುಪ್ತಚರ ಇಲಾಖೆಯ ಡಿಜಿಪಿ ಉಮೇಶ್ ಮಿಶ್ರಾ ಹೇಳಿದ್ದಾರೆ. ಕಳೆದ ಜುಲೈ ತಿಂಗಳಿನಲ್ಲಿ ಭಾರತೀಯ ಸೇನೆಗೆ ಸಂಬಂಧಿಸಿದ ಅತ್ಯಂತ ಸೂಕ್ಷ್ಮವಾದ ಮಾಹಿತಿಯನ್ನು ಪಾಕಿಸ್ತಾನದ ನಿರ್ವಾಹಕರಿಗೆ ರವಾನಿಸಿರುವ ಸಾಧ್ಯತೆಗಳಿವೆ. ಸುದೀರ್ಘ ವಿಚಾರಣೆ ನಂತರದಲ್ಲಿ ಗುರುವಾರ ಆರೋಪಿಗಳನ್ನು ಬಂಧಿಸಲಾಗಿದೆ ಎಂದು ಅವರು ತಿಳಿಸಿದ್ದಾರೆ.

English summary
Spying for Pakistan: Gas agency owner arrested in Rajasthan.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X