ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ರಾಜಸ್ಥಾನ, ಸಚಿನ್ ಪೈಲಟ್ ಸಂಚಿಗೆ ಬೇಸ್ತು ಬಿದ್ದ ಗೆಹ್ಲೋಟ್: ಭಾರೀ ಸಂಕಷ್ಟದಲ್ಲಿ ಕಾಂಗ್ರೆಸ್?

|
Google Oneindia Kannada News

ಜೈಪುರ, ಜುಲೈ 11: ಕೊರೊನಾ ಹಾವಳಿಯ ನಡುವೆಯೂ, ರಾಜಸ್ಥಾನದಲ್ಲಿ ರಾಜಕೀಯ ಚಟುವಟಿಕೆಗಳು ಗರಿಗೆದಲಾರಂಭಿಸಿದೆ. ಬಿಜೆಪಿ, ತಮ್ಮ ಸರಕಾರವನ್ನು ಉರುಳಿಸಲು ಸಂಚು ನಡೆಸುತ್ತಿದೆ ಎಂದು ಸಿಎಂ ಅಶೋಕ್ ಗೆಹ್ಲೋಟ್ ಆರೋಪಿಸಿದ್ದಾರೆ.

Recommended Video

Who is Vikas Dubey ? | ಯಾರು ಈ ವಿಕಾಸ್ ದೂಬೆ ? | Oneindia Kannada

ಸರಕಾರ ಅಸ್ಥಿರಗೊಳಿಸಲು ಬಿಜೆಪಿ ಪ್ರಯತ್ನಿಸುತ್ತಿದೆ ಎಂದು ಈ ಸಂಬಂಧ, ಎಸ್ಓಜಿ (ಸ್ಪೆಷಲ್ ಆಪರೇಶನ್ ಗ್ರೂಪ್) ಪ್ರಕರಣ ದಾಖಲಿಸಿಕೊಂಡಿರುವುದರಿಂದ, ಜೈಪುರದಲ್ಲಿ ರಾಜಕೀಯ ವಿದ್ಯಮಾನಗಳು ಹೊಸ ರೂಪ ಪಡೆಯುತ್ತಿದೆ.

ಪತಂಜಲಿ ಕೊರೊನಾ ಔಷಧಿಗೆ ಅನುಮತಿ ನಿರಾಕರಿಸಿದ ರಾಜಸ್ಥಾನಪತಂಜಲಿ ಕೊರೊನಾ ಔಷಧಿಗೆ ಅನುಮತಿ ನಿರಾಕರಿಸಿದ ರಾಜಸ್ಥಾನ

ಬಿಜೆಪಿಯು, ಕಾಂಗ್ರೆಸ್ ಶಾಸಕರನ್ನು ಸಂಪರ್ಕಿಸುತ್ತಿದೆ, ಇದರ ಹಿಂದೆ ಉಪಮುಖ್ಯಮಂತ್ರಿ ಸ್ಥಾನದಲ್ಲಿರುವ ಸಚಿನ್ ಪೈಲಟ್ ಅವರ ಛಾಯೆಯಿದೆ ಎನ್ನುವ ಆರೋಪ ಕೇಳಿ ಬರುತ್ತಿರುವುದು, ಕಾಂಗ್ರೆಸ್ ಪಾಳಯದಲ್ಲಿ ಸಂಚಲನ ಮೂಡಿಸಿದೆ.

ಇಬ್ಬರು, ಕಾಂಗ್ರೆಸ್ ಶಾಸಕರಿಗೆ ಕೋಟಿ ಕೋಟಿ ಆಮಿಷವೊಡ್ಡಿದೆ ಎನ್ನುವ ಬಲವಾದ ಮಾತು ಕೇಳಿಬರುತ್ತಿರುವುದರಿಂದ, ಎಸ್ಓಜಿ, ಮುಂದೆ, ಅಲ್ಲಿನ ಸಿಎಂ, ಡಿಸಿಎಂ ಹೇಳಿಕೆಯನ್ನು ನೀಡಬೇಕಿದೆ. ಸಿಎಂ ಮತ್ತು ಡಿಸಿಎಂ ನಡುವಿನ ಸಂಬಂಧ ಅಷ್ಟಕಷ್ಟೇ..

ಸಿಎಂ ಗೆಹ್ಲೋಟ್ ಮತ್ತು ಡಿಸಿಎಂ ಸಚಿನ್ ಪೈಲಟ್ ನಡುವಿನ ಭಿನ್ನಮತ

ಸಿಎಂ ಗೆಹ್ಲೋಟ್ ಮತ್ತು ಡಿಸಿಎಂ ಸಚಿನ್ ಪೈಲಟ್ ನಡುವಿನ ಭಿನ್ನಮತ

ರಾಜಸ್ಥಾನದಲ್ಲಿ, ಕಾಂಗ್ರೆಸ್ ಮತ್ತು ಬಿಜೆಪಿ ನಡುವೆ ಪೈಪೋಟಿ ಎನ್ನುವುದಕ್ಕಿಂದ, ಸಿಎಂ ಗೆಹ್ಲೋಟ್ ಮತ್ತು ಡಿಸಿಎಂ ಸಚಿನ್ ಪೈಲಟ್ ನಡುವಿನ ಭಿನ್ನಮತವೇ ಪಕ್ಷಕ್ಕೆ ಮುಳುವಾಗುತ್ತಿದೆ ಎನ್ನುವುದು ಸೂಕ್ತ. ರಾಜ್ಯದ ಈ ಇಬ್ಬರು ಪ್ರಭಾವೀ ಮುಖಂಡರು ತಮ್ಮದೇ ಆದ ಬಣಗಳನ್ನು ಹೊಂದಿವೆ. ಇದು ದಿನದಿಂದ ದಿನಕ್ಕೆ ಪಕ್ಷಕ್ಕೆ ಹಿನ್ನಡೆಯಾಗುತ್ತಾ ಸಾಗುತ್ತಿದೆ.

ರಾಹುಲ್ ಗಾಂಧಿ ಆಪ್ತವಲಯದಲ್ಲಿ ಕಾಣಿಸಿಕೊಳ್ಳುತ್ತಿದ್ದ ಪೈಲಟ್

ರಾಹುಲ್ ಗಾಂಧಿ ಆಪ್ತವಲಯದಲ್ಲಿ ಕಾಣಿಸಿಕೊಳ್ಳುತ್ತಿದ್ದ ಪೈಲಟ್

ಯಾವಾಗ, ಸಿಎಂ ಸ್ಥಾನಕ್ಕೆ ತನ್ನನ್ನು ಆಯ್ಕೆ ಮಾಡಲಿಲ್ಲವೋ, ಸಚಿನ್ ಪೈಲಟ್, ಅಲ್ಲಿಂದಲೇ ಗೆಹ್ಲೋಟ್ ವಿರುದ್ದ ಪಕ್ಷದ ಆಂತರಿಕ ವಲಯದಲ್ಲಿ ಅಸಮಾಧಾನ ವ್ಯಕ್ತ ಪಡಿಸುತ್ತಲೇ ಇದ್ದರು. ರಾಹುಲ್ ಗಾಂಧಿ ಆಪ್ತವಲಯದಲ್ಲಿ ಕಾಣಿಸಿಕೊಳ್ಳುತ್ತಿದ್ದ ಪೈಲಟ್, ದೆಹಲಿ ರಾಜಕೀಯದಲ್ಲೂ ಅಷ್ಟಾಗಿ ತಮ್ಮನ್ನು ತೊಡಗಿಸಿಕೊಂಡಿಲ್ಲ.

ಬಿಜೆಪಿ ಕೋಟ್ ಕೋಟಿ ಆಫರ್

ಬಿಜೆಪಿ ಕೋಟ್ ಕೋಟಿ ಆಫರ್

ಪೊಲೀಸ್ ಅಧಿಕಾರಿಗಳು ಮುಖ್ಯಸ್ಥರಾಗಿರುವ ಎಸ್ಓಜಿ ಕಮಿಟಿ, ಗೆಹ್ಲೋಟ್, ಪೈಲಟ್ ಮತ್ತು ಸರಕಾರದ ಮುಖ್ಯ ಸಚೇತಕರಿಗೆ ನೊಟೀಸ್ ಜಾರಿ ಮಾಡಿದ್ದು, ಈ ಮೂವರು ತಮ್ಮ ಹೇಳಿಕೆಯನ್ನು ದಾಖಲಿಸಬೇಕಿದೆ. ಸರಕಾರ ಉರುಳಿಸುವ ಪ್ರಯತ್ನ ನಡೆಯುತ್ತಿದೆ ಎಂದು ಇಲ್ಲಿ ಕೇಸ್ ದಾಖಲಾಗಿದೆ.

ಮುಖ್ಯಮಂತ್ರಿ ಸ್ಥಾನಕ್ಕೇರಲು ಯಾರಿಗೆ ಇಷ್ಟವಿರಲ್ಲ ಹೇಳಿ

ಮುಖ್ಯಮಂತ್ರಿ ಸ್ಥಾನಕ್ಕೇರಲು ಯಾರಿಗೆ ಇಷ್ಟವಿರಲ್ಲ ಹೇಳಿ

"ಮುಖ್ಯಮಂತ್ರಿ ಸ್ಥಾನಕ್ಕೇರಲು ಯಾರಿಗೆ ಇಷ್ಟವಿರಲ್ಲ ಹೇಳಿ" ಎಂದು ಸಿಎಂ ಗೆಹ್ಲೋಟ್, ಡಿಸಿಎಂ ಪೈಲಟ್ ವಿರುದ್ದ ಅಸಮಾಧಾನ ಹೊರಹಾಕಿದ್ದಾರೆ. ಇಬ್ಬರು ಶಾಸಕರಿಗೆ ಬಿಜೆಪಿ 25 ಕೋಟಿಯ ಆಫರ್ ನೀಡಿದೆ ಎನ್ನುವ ಆರೋಪ ಕೇಳಿಬಂದಿದ್ದು, ಇದರ ಹಿಂದೆ ಸಚಿನ್ ಪೈಲಟ್ ಇದ್ದಾರೆ ಎನ್ನುವ ಮಾತು ಚಾಲ್ತಿಯಲ್ಲಿದೆ.

English summary
Police Notices To Ashok Gehlot, Sachin Pilot Over Claims Of "Toppling" Rajasthan Government,
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X