ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಸಚಿನ್ ಪೈಲೆಟ್ ನೀಡಿದ '35 ಕೋಟಿ ಆಫರ್' ಬಿಚ್ಚಿಟ್ಟ ಕಾಂಗ್ರೆಸ್ ಶಾಸಕ

|
Google Oneindia Kannada News

ಜೈಪುರ, ಜುಲೈ 20: ರಾಜಸ್ಥಾನದಲ್ಲಿ ಅಶೋಕ್ ಗೆಹ್ಲೋಟ್ ಸರ್ಕಾವರನ್ನು ಉರುಳಿಸಲು ಬಿಜೆಪಿ ಪಕ್ಷ ಕುದುರೆ ವ್ಯಾಪಾರ ಮಾಡಿತ್ತು ಎಂಬ ಆರೋಪ ಜೋರಾಗಿ ಸದ್ದು ಮಾಡಿತ್ತು.

Recommended Video

Leopard enters home and takes away pet dog | Oneindia kannada

ಇದೀಗ, ಕಾಂಗ್ರೆಸ್ ಬಂಡಾಯ ಶಾಸಕ ಸಚಿನ್ ಪೈಲೆಟ್ ನನಗೆ ಬಿಜೆಪಿ ಬೆಂಬಲಿಸಲು 35 ಕೋಟಿ ಆಫರ್ ನೀಡಿದ್ದರು ಎಂದು ಕಾಂಗ್ರೆಸ್ ಶಾಸಕ ಗಿರಿರಾಜ್ ಸಿಂಗ್ ಮಾಲಿಂಗ ಆರೋಪಿಸಿದ್ದಾರೆ.

ಬಿಜೆಪಿ ಲೆಕ್ಕಾಚಾರ ಉಲ್ಟಾ; ಪ್ರಿಯಾಂಕಾ ಜೊತೆ ಸಚಿನ್ ಮಾತುಕತೆ!ಬಿಜೆಪಿ ಲೆಕ್ಕಾಚಾರ ಉಲ್ಟಾ; ಪ್ರಿಯಾಂಕಾ ಜೊತೆ ಸಚಿನ್ ಮಾತುಕತೆ!

'ಬಾರಿ ವಿಧಾನಸಭೆ' ಕ್ಷೇತ್ರದಿಂದ ಶಾಸಕನಾಗಿ ಆಯ್ಕೆಯಾಗಿರುವ ಗಿರಿರಾಜ್ ಸಿಂಗ್ ಮಾಲಿಂಗ, ಸಚಿನ್ ಪೈಲೆಟ್ ನೀಡಿದ್ದ ಆಫರ್ ಬಗ್ಗೆ ಸಿಎಂ ಅಶೋಕ್ ಗೆಹ್ಲೋಟ್ ಬಳಿ ಈ ಮೊದಲೇ ಹೇಳಿದ್ದೇನೆ ಎಂದು ಜೈಪುರದಲ್ಲಿ ತಿಳಿಸಿದ್ದಾರೆ.

Sachin Pilot offered me 35 crore to join BJP says congress MLA Giriraj Singh Malinga

''ಸಚಿನ್ ಪೈಲೆಟ್ ನನಗೆ ಆಫರ್ ನೀಡಿದ್ದರು. ಬಿಜೆಪಿ ಪಕ್ಷಕ್ಕೆ ಬೆಂಬಲಿಸುವಂತೆ ಕೇಳಿದರು. ನಾನು ಅದಕ್ಕೆ ನಿರಾಕರಿಸಿದೆ. ಇದು ತಪ್ಪು. ಹಣಕ್ಕಾಗಿ ನಾನು ಇಂತಹ ಕೆಲಸ ಮಾಡಲ್ಲ'' ಎಂದು ಮಾಧ್ಯಮಗಳಿಗೆ ತಿಳಿಸಿದ್ದಾರೆ.

'ನಾನು (2008ರಲ್ಲಿ ಬಹುಜನ ಸಮಾಜವಾದಿ ಪಕ್ಷ) ಬಿಎಸ್‌ಪಿ ತೊರೆಯುವಾಗ ಹೇಳಿದ್ದೆ, ಟಿಕೆಟ್ ಬೇಕು ಅಂದ್ರೆ ಒಬ್ಬರಿಗೆ ಹಣ ನೀಡಬೇಕು ಅಂತ. ಕಾಂಗ್ರೆಸ್ ಮತ್ತು ಬಿಜೆಪಿಯಲ್ಲಿ ಅಂತಹ ಸಂಸ್ಕೃತಿ ಇಲ್ಲ ಎಂದು ಹೇಳಿದ್ದೆ. ಆದರೆ, ಸಚಿನ್ ಪೈಲೆಟ್ ನನಗೆ ಆಫರ್ ನೀಡಿದರು. 35 ಕೋಟಿಗೂ ಅಧಿಕ ಹಣ ಸಿಗುತ್ತದೆ, ನಿನಗೆ ಏನೂ ಬೇಕೋ ಅದು ಸಿಗುತ್ತೆ ಎಂದರು. ಆದರೆ, ನಾನು ಅದಕ್ಕೆ ಒಪ್ಪಿಕೊಂಡಿಲ್ಲ' ಎಂದು ಮಾಹಿತಿ ನೀಡಿದ್ದಾರೆ.

ಅಂದ್ಹಾಗೆ, ಈ ಘಟನೆ ನಡೆದಿರುವುದು ಡಿಸೆಂಬರ್ ತಿಂಗಳಲ್ಲಿ. ರಾಜ್ಯಸಭೆ ಚುನಾವಣೆಯಲ್ಲಿ ಬಿಜೆಪಿಗೆ ಅಡ್ಡ ಮತದಾನ ಮಾಡಲು ಸಚಿನ್ ಪೈಲೆಟ್ ಹೇಳಿದ್ದರು. ಅದಕ್ಕಾಗಿ ಈ ಆಫರ್ ಮಾಡಿದ್ದರು ಎಂದು ಮಾಲಿಂಗ ತಿಳಿಸಿದ್ದಾರೆ. ಕಳೆದ ಸೆಪ್ಟೆಂಬರ್ ತಿಂಗಳಿನಲ್ಲಿ ಐದು ಜನ ಬಿಎಸ್‌ಪಿ ಶಾಸಕರೊಂದಿಗೆ ಗಿರಿರಾಜ್ ಸಿಂಗ್ ಮಾಲಿಂಗ ಕಾಂಗ್ರೆಸ್ ಪಕ್ಷ ಸೇರ್ಪಡೆಯಾಗಿದ್ದರು.

English summary
Sachin Pilot offered me 35 crore to join BJP, but I refused: Rajasthan Congress MLA Giriraj Singh Malinga.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X