• search
  • Live TV
ಜೈಪುರ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಬಿಜೆಪಿ ಲೆಕ್ಕಾಚಾರ ಉಲ್ಟಾ; ಪ್ರಿಯಾಂಕಾ ಜೊತೆ ಸಚಿನ್ ಮಾತುಕತೆ!

|

ಜೈಪುರ, ಜುಲೈ 20 : ರಾಜಸ್ಥಾನ ಕಾಂಗ್ರೆಸ್ ಬಂಡಾಯ ನಾಯಕ ಸಚಿನ್ ಪೈಲಟ್ ಕಾಂಗ್ರೆಸ್ ನಾಯಕರ ಜೊತೆ ಇನ್ನೂ ಸಂಪರ್ಕದಲ್ಲಿದ್ದಾರೆ. ಗೆಹ್ಲೋಟ್ ಸರ್ಕಾರ ಪತನಗೊಳ್ಳಲಿದೆ ಎಂಬ ಬಿಜೆಪಿಯ ಲೆಕ್ಕಾಚಾರ ಉಲ್ಟಾ ಆಗುವ ನಿರೀಕ್ಷೆ ಇದೆ.

ಸಚಿನ್ ಪೈಲೆಟ್ ಅವರನ್ನು ಉಪಮುಖ್ಯಮಂತ್ರಿ, ಪಿಸಿಸಿ ಅಧ್ಯಕ್ಷ ಸ್ಥಾನದಿಂದ ವಜಾಗೊಳಿಸಿದ ಮೇಲೆಯೂ ಕಾಂಗ್ರೆಸ್ ಪಕ್ಷದ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ವಾದ್ರಾ ಜೊತೆ ಸಂಪರ್ಕದಲ್ಲಿದ್ದಾರೆ. ಪೈಲೆಟ್ ಅನರ್ಹತೆ ಕುರಿತು ವಿಚಾರಣೆ ಹೈಕೋರ್ಟ್‌ನಲ್ಲಿ ನಡೆಯುತ್ತಿದೆ.

ಸಚಿನ್ ಪೈಲೆಟ್ ಅನರ್ಹತೆ; ಸ್ಪೀಕರ್ ವ್ಯಾಪ್ತಿ ಬಗ್ಗೆ ಮತ್ತೆ ಚರ್ಚೆ

ಭಾನುವಾರ ಸಚಿನ್ ಪೈಲೆಟ್ ಪ್ರಿಯಾಂಕಾ ವಾದ್ರಾ ಜೊತೆ ದೂರವಾಣಿ ಮೂಲಕ ಮಾತುಕತೆ ನಡೆಸಿದ್ದಾರೆ. ಬಿಜೆಪಿ ಸೇರುವುದಿಲ್ಲ ಎಂದು ಸಚಿನ್ ಪೈಲೆಟ್ ಈಗಾಗಲೇ ಹಲವು ಬಾರಿ ಸ್ಪಷ್ಟನೆ ನೀಡಿದ್ದಾರೆ. ಅವರ ಆಪ್ತ ಶಾಸಕರು ಕೂಡಾ ಈ ಕುರಿತು ಹೇಳಿಕೆ ಕೊಟ್ಟಿದ್ದಾರೆ.

''ನಾನು ಬಿಜೆಪಿ ಸೇರಲ್ಲ'' ಎಂದ ಸಚಿನ್ ಪೈಲಟ್, ಮುಂದೇನು?

ಈ ವಾರದಲ್ಲಿ ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್ ವಿಶೇಷ ವಿಧಾನಸಭೆ ಅಧಿವೇಶನ ಕರೆಯುವ ನಿರೀಕ್ಷೆ ಇದೆ. ಒಂದು ವೇಳೆ ಶಾಸಕರ ಬಲವಿಲ್ಲದೇ ಸರ್ಕಾರ ಪತನಗೊಂಡರೆ ಸರ್ಕಾರ ರಚನೆ ಕುರಿತು ಚಿಂತನೆ ನಡೆಸಲು ರಾಜ್ಯದ ಪ್ರತಿಪಕ್ಷ ಬಿಜೆಪಿ ಆಲೋಚನೆ ನಡೆಸಿದೆ.

ಗೆಹ್ಲೋಟ್ ಜೇಬಲ್ಲಿ ಮ್ಯಾಜಿಕ್ ನಂಬರ್; ಕಾಂಗ್ರೆಸ್ ಸರ್ಕಾರ ಸುಭದ್ರ!

ಸಚಿನ್ ಪೈಲೆಟ್ ಜೊತೆಗೆ 19 ಬಂಡಾಯ ಶಾಸಕರು ಸೇರಿದಂತೆ 21 ಶಾಸಕರು ಇದ್ದಾರೆ ಎಂಬುದು ಬಿಜೆಪಿ ಲೆಕ್ಕಾಚಾರ. ಬಿಜೆಪಿಯ 72, ಬಂಡಾಯ ಎದ್ದಿರು 21, ಮೈತ್ರಿಕೂಟ ಆರ್‌ಎಲ್‌ಪಿಯ ಶಾಸಕರು ಸೇರಿ ಬಿಜೆಪಿ ಬಲ 96 ಆಗಲಿದೆ.

ಈ ಲೆಕ್ಕಾಚಾರ ಸರಿ ಆಗಬೇಕಾದರೆ ಸಚಿನ್ ಪೈಲೆಟ್ ಸೇರಿದಂತೆ 19 ಶಾಸಕರ ಅನರ್ಹತೆ ಬಗ್ಗೆ ಹೈಕೋರ್ಟ್‌ನಲ್ಲಿ ಹಾಕಿರುವ ಅರ್ಜಿಯ ತೀರ್ಪು ಬರಬೇಕು. ಒಂದು ವೇಳೆ 19 ಶಾಸಕರು ಅನರ್ಹಗೊಂಡರೆ ವಿಧಾನಸಭೆಯ ಬಲ ಕುಸಿಯಲಿದೆ.

ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್ ತಮ್ಮ ಬಳಿ 104 ಶಾಸಕರು ಇದ್ದಾರೆ ಎಂದು ಹೇಳಿದ್ದಾರೆ. ಮಂಗಳವಾರ ಸಂಜೆ ತನಕ ಸ್ಪೀಕರ್ ನೀಡಿರುವ ಅನರ್ಹತೆ ನೋಟಿಸ್ ಬಗ್ಗೆ ಕ್ರಮ ಕೈಗೊಳ್ಳಬಾರದು ಎಂದು ನ್ಯಾಯಾಲಯ ಹೇಳಿದೆ.

English summary
Reports said that Sachin Pilot is still in touch with Priyanka Gandhi. Pilot is said to have telephoned Priyanka over the weekend. Sachin Pilot moved high court challenging the disqualification notice issued to him.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X