• search
  • Live TV
ಜೈಪುರ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಥಾರ್ ಮರುಭೂಮಿಯಲ್ಲಿ 172 ಸಾವಿರ ವರ್ಷ ಹಳೆಯ ನದಿ ಪುರಾವೆ ಪತ್ತೆ

|

ಜೈಪುರ, ಅಕ್ಟೋಬರ್ 22: ರಾಜಸ್ಥಾನದ ಮರುಭೂಮಿಯಲ್ಲಿ 172 ಸಾವಿರ ವರ್ಷಗಳ ಹಿಂದಿನ ನದಿ ಪುರಾವೆ ಪತ್ತೆಯಾಗಿದೆ.

ಬಿಕಾನೇರ್ ಬಳಿ ಇರುವ ಥಾರ್ ಮರುಭೂಮಿಯಲ್ಲಿ ನದಿ ಪುರಾವೆ ಪತ್ತೆಯಾಗಿದ್ದು, ಈ ಪ್ರದೇಶ ಪ್ರಸ್ತುತ ಹರಿಯುತ್ತಿರುವ ನದಿಯಿಂದ ಸುಮಾರು 200 ಕಿಲೋಮೀಟರ್ ದೂರದಲ್ಲಿದೆ.

ನಲ್ ಹಳ್ಳಿಯ ಬಳಿ ಕಲ್ಲು ಗಣಿಗಾರಿಕೆಯಿಂದ ಬಹಿರಂಗಗೊಂಡಿದ್ದ ನದಿಮರಳು ಮತ್ತು ಜಲ್ಲಿಕಲ್ಲುಗಳ ಆಳವಾದ ನಿಕ್ಷೇಪವನ್ನು ತಂಡ ಅಧ್ಯಯನ ಮಾಡಿದೆ.

ಈ ಅಧ್ಯಯನದಿಂದ ನದಿಗಳು, ತೊರೆಗಳು ಎಲ್ಲಿ ಹರಿಯುತ್ತವೆ ಎಂಬುದನ್ನು ಗುರುತಿಸಬಹುದು. ಆದರೆ ಯಾವಾಗ ಎಂದು ನಮಗೆ ಹೇಳಲು ಸಾಧ್ಯವಿಲ್ಲ ಎಂದು ಅನ್ನಾ ವಿಶ್ವವಿದ್ಯಾಲಯ ಪ್ರೊ. ಹೇಮಾ ಹೇಳಿದ್ದಾರೆ. ಉಪಗ್ರಹಗಳು ತೆಗೆದಿರುವ ಚಿತ್ರದಲ್ಲಿ ಈ ಕುರಿತು ಮಾಹಿತಿ ಲಭ್ಯವಾಗಿದೆ.

ಘಗ್ಗರ್ -ಹಕ್ರಾ ನದಿಯ ಒಣಗಿದ ಹಾದಿಯನ್ನು ಈ ಪುರಾವೆಗಳು ತೋರಿಸುತ್ತಿವೆ ಎಂದು ಸಂಶೋಧಕರು ಮಾಹಿತಿ ನೀಡಿದ್ದಾರೆ. ಜರ್ಮನಿಯ ದಿ ಮ್ಯಾಕ್ಸ್ ಪ್ಲಾಂಕ್ ವಿಶ್ವವಿದ್ಯಾಲಯದ ವಿಜ್ಞಾನ ಹಾಗೂ ಮನುಷ್ಯ ಇತಿಹಾಸ ವಿಭಾಗ, ತಮಿಳುನಾಡಿನ ಅನ್ನಾ ವಿಶ್ವವಿದ್ಯಾಲಯ ಹಾಗೂ ಕೊಲ್ಕತ್ತದ ಐಐಎಸ್‌ಇಆರ್ ಸಂಶೋಧಕರು ನಡೆಸಿದ ಅಧ್ಯಯನದಲ್ಲಿ ನದಿಯ ಪುರಾವೆಗಳು ಪತ್ತೆಯಾಗಿವೆ. ಶಿಲಾಯುಗ ಕಾಲದ ಜನರು ಈ ನದಿಯನ್ನೇ ಆಧರಿಸಿ ಬದುಕುತ್ತಿದ್ದರು ಎಂದು ಕೂಡ ಊಹೆ ಮಾಡಲಾಗಿದೆ.

English summary
Researchers have found the evidence of a “lost” river that ran through the central Thar Desert, near Bikaner, as early as 172 thousand years ago, and may have been a life-line to human populations enabling them to inhabit the region.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X