ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕರಡಿಗೆ ಬೆದರಿ ಓಡಿದ ಹುಲಿಗಳು: ವೈರಲ್ ವಿಡಿಯೋ

|
Google Oneindia Kannada News

Recommended Video

ಕರಡಿಗೆ ಬೆದರಿದ ಹುಲಿಗಳು | Tiger | Bear | Oneindia kannada

ಜೈಪುರ, ಜನವರಿ 21: ಕಾಡಿನ ಪ್ರಾಣಿಗಳಲ್ಲಿ ಹುಲಿ ಮತ್ತು ಕರಡಿ ನಡುವೆ ಶಕ್ತಿಶಾಲಿ ಯಾವುದು? ಆನೆಗಳ ಮೇಲೆಯೂ ದಾಳಿ ಮಾಡುವಷ್ಟು ಧೈರ್ಯವುಳ್ಳ ಹುಲಿಯೇ ಶಕ್ತಿಶಾಲಿ ಎಂದು ಮುಲಾಜಿಲ್ಲದೆ ಹೇಳಬಹುದು. ಗಾತ್ರದಲ್ಲಿ ದೈತ್ಯನಾಗಿದ್ದರೂ ಕರಡಿಗಳು ಬೇಟೆಯಾಡುವ ಪ್ರಾಣಿಗಳಾದ ಹುಲಿ, ಸಿಂಹ, ಚಿರತೆಗಳಿಗೆ ಶರಣಾಗುತ್ತವೆ. ಅದನ್ನು ಸಾಬೀತುಪಡಿಸುವ ಅನೇಕ ವಿಡಿಯೋಗಳಿವೆ.

ಸಾಮಾನ್ಯ ಕಪ್ಪು ಕರಡಿಯೊಂದು ಎರಡು ಹುಲಿಗಳನ್ನು ಬೆದರಿಸಿ ಓಡಿಸುವ ದೃಶ್ಯ ವಿಡಿಯೋದಲ್ಲಿ ಸೆರೆಯಾಗಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.

ವೈರಲ್ ಪೋಸ್ಟ್; ಕಾಡಿನ ರಾಜ ಸಿಂಹದ ದಯನೀಯ ಸ್ಥಿತಿ ವೈರಲ್ ಪೋಸ್ಟ್; ಕಾಡಿನ ರಾಜ ಸಿಂಹದ ದಯನೀಯ ಸ್ಥಿತಿ

ದಾಳಿಗೆ ಸಿದ್ಧವಾಗಿದ್ದ ಎರಡು ಹುಲಿಗಳಿದ್ದರೂ ಒಂಟಿ ಕರಡಿ ಯಾವುದೇ ಸಂಘರ್ಷಗಳು, ದಾಳಿಗಳು ನಡೆಯದೆಯೇ ಹಿಮ್ಮೆಟ್ಟಿಸಿದೆ. ಬಲಶಾಲಿ ಹುಲಿಗಳು ಕರಡಿ ಮೇಲೆ ದಾಳಿ ಮಾಡದೆ, ಅದರ ಪ್ರತಿರೋಧಕ್ಕೆ ಬೆದರಿ ಬೆನ್ನು ಹಾಕಿ ಓಡುತ್ತವೆ. ನಿಸರ್ಗದ ಈ ಅಪರೂಪದ ಅದ್ಭುತ ಘಟನೆಗಳು ಅಪರೂಪವಾಗಿ ಕಣ್ಣಿಗೆ ಬೀಳುತ್ತವೆ. ಈ ವಿಡಿಯೋವನ್ನು ಜಾರ್ಖಂಡ್‌ನ ರಾಜ್ಯಸಭಾ ಸದಸ್ಯ ಪರಿಮಳ್ ನಥ್ವಾನಿ ಹಂಚಿಕೊಂಡಿದ್ದಾರೆ.

ತಿರಗಿಬಿದ್ದ ಬೇಟೆ!

ತಿರಗಿಬಿದ್ದ ಬೇಟೆ!

ರಾಜಸ್ಥಾನದ ರಣತಂಬೂರು ರಾಷ್ಟ್ರೀಯ ಉದ್ಯಾನದಲ್ಲಿ ಕರಡಿ ಮತ್ತು ಹುಲಿಗಳ ಮುಖಾಮುಖಿಯ 1 ನಿಮಿಷ 21 ಸೆಕೆಂಡುಗಳ ವಿಡಿಯೋವನ್ನು ಸೆರೆಹಿಡಿಯಲಾಗಿದೆ. ಇದರಲ್ಲಿ ಕರಡಿಯನ್ನು ಬೇಟೆಯಾಡಲು ಅದರ ಹಿಂದೆ ಆಗುವ ಹುಲಿ, ದಾಳಿಗೆ ತಯಾರಿ ನಡೆಸಿತ್ತು. ಆದರೆ ತಪ್ಪಿಸಿಕೊಳ್ಳಲು ದಾರಿ ಕಾಣದ ಕರಡಿ ಏಕಾಏಕಿ ತಿರುಗಿಬಿದ್ದಿತು. ಈ ಅನಿರೀಕ್ಷಿತ ದಾಳಿಯಿಂದ ಕಂಗಾಲಾದ ಹುಲಿ ಓಡಲು ಆರಂಭಿಸಿತು.

ಕರಡಿಯ ಧೈರ್ಯಕ್ಕೆ ಬೆದರಿದ ಹುಲಿ

ಕರಡಿಯ ಧೈರ್ಯಕ್ಕೆ ಬೆದರಿದ ಹುಲಿ

ಧೈರ್ಯ ತಂದುಕೊಂಡ ಕರಡಿ, ಹುಲಿಯನ್ನು ತುಸು ದೂರ ಬೆನ್ನಟ್ಟಿತು. ಅಲ್ಲಿ ಮತ್ತೊಂದು ಹುಲಿ ಕುಳಿತಿದ್ದರೂ ಅದು ದಾಳಿ ಮಾಡುವ ಧೈರ್ಯ ಮಾಡಲಿಲ್ಲ. ಕರಡಿ ಮುಂದಿನ ಕಾಲುಗಳನ್ನು ಮೇಲೆತ್ತಿ ನಿಂತು ತನ್ನ ಎತ್ತರದ ಮೂಲಕ ಹುಲಿಗಳನ್ನು ಬೆದರಿಸಲು ಪ್ರಯತ್ನಿಸಿತು. ಮಲಗಿದ್ದ ಒಂದು ಹುಲಿ ಅಲ್ಲಿಂದ ಫೇರಿ ಕಿತ್ತರೆ, ದಾಳಿಗೆ ಮೊದಲು ಪ್ರಯತ್ನಿಸಿದ್ದ ಹುಲಿ, ಓಡದಿದ್ದರೂ ಮತ್ತೆ ದಾಳಿಗೆ ಮುಂದಾಗಲಿಲ್ಲ. ಬಳಿಕ ಕರಡಿ ಅಲ್ಲಿಂದ ತನ್ನ ದಾರಿಯಲ್ಲಿ ಮುಂದೆ ಸಾಗುವುದು ವಿಡಿಯೋದಲ್ಲಿ ದಾಖಲಾಗಿದೆ.

ನೀರು ಉಳಿಸಲು ಸಾವಿರಾರು ಒಂಟೆಗಳ ಹತ್ಯೆ: ಆಸ್ಟ್ರೇಲಿಯಾದ ಆಘಾತಕಾರಿ ನಿರ್ಧಾರನೀರು ಉಳಿಸಲು ಸಾವಿರಾರು ಒಂಟೆಗಳ ಹತ್ಯೆ: ಆಸ್ಟ್ರೇಲಿಯಾದ ಆಘಾತಕಾರಿ ನಿರ್ಧಾರ

ವಿಡಿಯೋ ಹಂಚಿಕೊಂಡ ಸಂಸದ

ವಿಡಿಯೋ ಹಂಚಿಕೊಂಡ ಸಂಸದ

'ರಾಜಸ್ಥಾನದ ರಣತಂಬೂರ್ ಪಾರ್ಕ್‌ನಲ್ಲಿ ಹುಲಿ ಮತ್ತು ಕರಡಿಯ ಅನಿರೀಕ್ಷಿತ ಸಂಘರ್ಷವನ್ನು ಈ ವಿಡಿಯೋ ಸೆರೆ ಹಿಡಿದಿದೆ. ಪರಿವೇ ಇಲ್ಲದ ಕರಡಿ ಮೇಲೆ ಹುಲಿ ಆಕ್ರಮಣ ಎಸಗಲು ಮುಂದಾದಂತಿದೆ. ಆದರೆ ಹುಲಿಯತ್ತ ಎಗರಿ ನಿಲ್ಲುವ ಕರಡಿ, ಅದನ್ನು ಹೆದರಿಸಿ ಓಡಿಸುತ್ತದೆ' ಎಂದು ರಾಜ್ಯಸಭಾ ಸಂಸದ ಪರಿಮಳ್ ನಥ್ವಾನಿ ಬರೆದಿದ್ದಾರೆ.

ದಣಿದು ಮನೆ ಬಾಗಿಲಿಗೆ ಬಂದ ಈ ಪ್ರಾಣಿಗೆ ನೀರು ಕುಡಿಸಿದ ಜನದಣಿದು ಮನೆ ಬಾಗಿಲಿಗೆ ಬಂದ ಈ ಪ್ರಾಣಿಗೆ ನೀರು ಕುಡಿಸಿದ ಜನ

ನೆಟ್ಟಿಗರ ಅಭಿಪ್ರಾಯವೇನು?

ಈ ವಿಡಿಯೋ ನೆಟ್ಟಿಗರಲ್ಲಿ ಕುತೂಹಲ ಮತ್ತು ಅಚ್ಚರಿ ಕೆರಳಿಸಿದೆ. ಸಾವಿರಾರು ಜನರು ಅದನ್ನು ವೀಕ್ಷಿಸಿ ಹಂಚಿಕೊಂಡಿದ್ದಾರೆ. ಎರಡು ಹುಲಿಗಳಿದ್ದರೂ ಅವುಗಳನ್ನು ಬೆದರಿಸಿದ ಕರಡಿಯ ಧೈರ್ಯವನ್ನು ಮೆಚ್ಚಬೇಕು. ಇದು ನಂಬಲಸಾಧ್ಯ ಘಟನೆ ಎಂದು ಅನೇಕರು ಶ್ಲಾಘಿಸಿದ್ದಾರೆ. ಈ ಹುಲಿಗಳು ಇನ್ನೂ ಎಳೆಯ ಪ್ರಾಣಿಗಳು ಎನಿಸುತ್ತದೆ ಎಂದು ಸಹ ಅಭಿಪ್ರಾಯಪಟ್ಟಿದ್ದಾರೆ. ಕಪ್ಪು ಕರಡಿಗಳಿಗೆ ಕೆಚ್ಚು ಇರುವುದಿಲ್ಲ ಎಂದಲ್ಲ. ತಮ್ಮ ಮೇಲೆ ಎರಗುವ ಹುಲಿಗಳನ್ನು ಕರಡಿಗಳು ಕೊಂದೂ ಹಾಕಬಹುದು ಎಂದು ಜಿಮ್ ಕಾರ್ಬೆಟ್ ಹೇಳಿಕೆಯನ್ನು ಕೆಲವರು ನೆನಪಿಸಿಕೊಂಡಿದ್ದಾರೆ.

English summary
A video of a sloth bear scared two tigers which tried to dominate it. The incident was captured at Ranthambore National Park in Rajasthan.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X