ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕಾಂಗ್ರೆಸ್ ಜೊತೆ ಚರ್ಚೆ ಬೇಕಿದ್ದರೆ ಬಿಜೆಪಿ ಸಖ್ಯ ಬಿಡಿ: ಸುರ್ಜೇವಾಲಾ

|
Google Oneindia Kannada News

ಜೈಸಲ್ಮೇರ್, ಆಗಸ್ಟ್ 04: ಕಾಂಗ್ರೆಸ್ ಜೊತೆ ಚರ್ಚೆ ಬೇಕಿದ್ದರೆ, ಬಿಜೆಪಿ ಸಖ್ಯ ತೊರೆಯಬೇಕು ಎಂದು ಕಾಂಗ್ರೆಸ್ ವಕ್ತಾರ ರಣದೀಪ್ ಸುರ್ಜೇವಾಲಾ ಕಿಡಿಕಾರಿದ್ದಾರೆ.

Recommended Video

Bengaluru Commissioner Kamal Pant Quarantine | Oneindia Kannada

ರಾಜಸ್ಥಾನ ರಾಜಕೀಯ ಬಿಕ್ಕಿಟ್ಟನ ವಿಚಾರಕ್ಕೆ ಸಂಬಂಧಿಸಿದಂತೆ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಅತೃಪ್ತ ಶಾಸಕರು ಕಾಂಗ್ರೆಸ್ ಜೊತೆ ಚರ್ಚೆ ನಡೆಸಬೇಕು ಎಂದರೆ, ಮೊದಲು ಅವರು ಬಿಜೆಪಿ ಸಖ್ಯ ಬಿಡಬೇಕು.

ರಾಜಸ್ಥಾನ ಕಾಂಗ್ರೆಸ್‌ ಶಾಸಕರು ಜೈಸಲ್ಮೇರ್‌ಗೆ ಸ್ಥಳಾಂತರ!ರಾಜಸ್ಥಾನ ಕಾಂಗ್ರೆಸ್‌ ಶಾಸಕರು ಜೈಸಲ್ಮೇರ್‌ಗೆ ಸ್ಥಳಾಂತರ!

ಮೊದಲು ಅವರು ಇಲ್ಲಿಗೆ ಬರಬೇಕು. ಆಗ ಮಾತ್ರ ಅವರೊಂದಿಗೆ ಚರ್ಚೆ ನಡೆಸುತ್ತೇವೆ. ಇಲ್ಲವಾದಲ್ಲಿ ಅವರಿಗೆ ಪಕ್ಷದ ಬಾಗಿಲು ಮುಚ್ಚಲಾಗುತ್ತದೆ ಎಂದು ಹೇಳಿದ್ದಾರೆ.

Randeep Surjewala Says Rebel MLAs Should Give Up BJPs Hospitality

ಹರ್ಯಾಣದ ಮಾನೇಸರ್ ನಲ್ಲಿ ಕಾಂಗ್ರೆಸ್ ಶಾಸಕರಿಗೆ ಬಿಜೆಪಿ ಕುಮ್ಮಕ್ಕಿನ ಮೇರೆಗೆ ಪೊಲೀಸ್ ಭದ್ರತೆ ನೀಡಲಾಗಿದೆ ಎಂದೂ ಸುರ್ಜೇವಾಲ ಕಿಡಿಕಾರಿದರು. ಇನ್ನು ಬಾಲಿವುಡ್ ನಟ ಸುಶಾಂತ್ ಸಿಂಗ್ ರಜಪೂತ್ ಸಾವಿನ ಕುರಿತು ಮಾತನಾಡಿದ ಅವರು, ಸುಶಾಂತ್ ಪ್ರಕರಣದಲ್ಲಿ ಬಿಹಾರ ಪೊಲೀಸರು ಮಧ್ಯ ಪ್ರವೇಶಿಸಿರುವ ಸರಿಯಲ್ಲ.

ಇದು ಮುಂಬೈ ಪೊಲೀಸರ ವ್ಯಾಪ್ತಿಯ ಪ್ರಕರಣವಾಗಿದ್ದು, ಅವರೇ ತನಿಖೆ ನಡೆಸಲಿದ್ದಾರೆ. ಇಂತಹ ಪರಿಸ್ಥಿತಿಗಳಿಂದ ಅರಾಜಕತೆ ಸೃಷ್ಟಿಯಾಗುತ್ತದೆ ಎಂದು ಸುರ್ಜೇವಾಲ ಹೇಳಿದರು.

ಗುರುಗ್ರಾಮದಲ್ಲಿ ಸಾಮೂಹಿಕ ಅತ್ಯಾಚಾರ ಪ್ರಕರಣಗಳು ಹೆಚ್ಚಾಗುತ್ತಿವೆ. ಆದರೆ ಪೊಲೀಸರು ಮಾತ್ರ ಅವರ ಸಹಾಯಕ್ಕೆ ಬರುತ್ತಿಲ್ಲ. 19 ಮಂದಿ ಶಾಸಕರ ಭದ್ರತೆಗಾಗಿ ಸಾವಿರ ಪೊಲೀಸರನ್ನು ನಿಯೋಜಿಸಲಾಗಿದೆ.

English summary
AICC spokesperson Randeep Surjewala on Tuesday said that dissident MLAs should give up the hospitality of the BJP and the security of Haryana police if they want to hold a dialogue with the party.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X