ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ರಾಜ್ಯಸಭಾ ಚುನಾವಣೆ: ಶಾಸಕರನ್ನು ರೆಸಾರ್ಟ್‌ಗೆ ಕೊಂಡೊಯ್ದ ಕಾಂಗ್ರೆಸ್‌?

|
Google Oneindia Kannada News

ಜೈಪುರ, ಜೂ. 2: ಜೂನ್ 10 ರಂದು ನಡೆಯಲಿರುವ ರಾಜ್ಯಸಭಾ ಚುನಾವಣೆಗೆ ಮುನ್ನ ಶಾಸಕರು ಪಕ್ಷ ತ್ಯಜಿಸಿ ಬೇರೆಡೆಗೆ ಹೋಗುತ್ತಾರೆ ಎಂಬ ಭಯದ ಮೇಲೆ ರಾಜಸ್ಥಾನ ಕಾಂಗ್ರೆಸ್ ತನ್ನ ಶಾಸಕರನ್ನು ಉದಯಪುರದ ರೆಸಾರ್ಟ್‌ಗೆ ಸ್ಥಳಾಂತರಿಸುವ ಸಾಧ್ಯತೆಯಿದೆ. ಇದೇ ಪಟ್ಟಣದಲ್ಲಿ ಕಾಂಗ್ರೆಸ್ ಪಕ್ಷ ಇತ್ತೀಚೆಗೆ ಚಿಂತನಾ ಶಿಬಿರ ನಡೆಸಿ ಚುನಾವಣಾ ತಂತ್ರಗಾರಿಕೆಗಳನ್ನು ಚರ್ಚಿಸಿತ್ತು.

ಮಾಧ್ಯಮ ಉದ್ಯಮಿ ಮತ್ತು ಎಸ್ಸೆಲ್ ಗ್ರೂಪ್ ಮುಖ್ಯಸ್ಥ ಬಿಜೆಪಿ ಬೆಂಬಲಿತ ಸುಭಾಷ್ ಚಂದ್ರ ಅವರು ರಾಜಸ್ಥಾನದಿಂದ ರಾಜ್ಯಸಭೆಗೆ ಸ್ವತಂತ್ರ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಸಿದ್ದಾರೆ, ಇದು ಕಾಂಗ್ರೆಸ್‌ನ ಮೂರನೇ ಸ್ಥಾನವನ್ನು ಗೆಲ್ಲುವ ಅವಕಾಶವನ್ನು ಕಸಿದುಕೊಳ್ಳಬಹುದಾಗಿದೆ. ಮತ್ತು ನಾಲ್ಕನೇ ಸ್ಥಾನದ ಸ್ಪರ್ಧೆಯನ್ನು ಸೃಷ್ಟಿಸಬಹುದಾಗಿದೆ. ಇಬ್ಬರು ಅಭ್ಯರ್ಥಿಗಳಿಗೆ ಮತ ಹಾಕಿದ ನಂತರ ಮೂರನೇ ಅಭ್ಯರ್ಥಿಯನ್ನು ಆಯ್ಕೆ ಮಾಡಲು ಕಾಂಗ್ರೆಸ್‌ಗೆ ಇನ್ನೂ 15 ಮತಗಳ ಅಗತ್ಯವಿದೆ. ಬಿಜೆಪಿ ಒಬ್ಬ ಅಭ್ಯರ್ಥಿಯನ್ನು ಆಯ್ಕೆ ಮಾಡಬಹುದು ಮತ್ತು ಎರಡನೇ ಅಭ್ಯರ್ಥಿಗೆ 11 ಮತಗಳು ಬೇಕಾಗುತ್ತವೆ.

ಪ್ರವಾದಿ ಬಗ್ಗೆ ಆಕ್ಷೇಪಾರ್ಹ ಹೇಳಿಕೆ: ಬಿಜೆಪಿ ವಕ್ತಾರೆ ನೂಪುರ್ ಶರ್ಮಾ ವಿರುದ್ಧ ಮತ್ತೊಂದು ಎಫ್‌ಐಆರ್ಪ್ರವಾದಿ ಬಗ್ಗೆ ಆಕ್ಷೇಪಾರ್ಹ ಹೇಳಿಕೆ: ಬಿಜೆಪಿ ವಕ್ತಾರೆ ನೂಪುರ್ ಶರ್ಮಾ ವಿರುದ್ಧ ಮತ್ತೊಂದು ಎಫ್‌ಐಆರ್

ಕಾಂಗ್ರೆಸ್ 12 ಸ್ವತಂತ್ರರ ಬೆಂಬಲ

ಕಾಂಗ್ರೆಸ್ 12 ಸ್ವತಂತ್ರರ ಬೆಂಬಲ

ರಾಜಸ್ಥಾನ ವಿಧಾನಸಭೆಯಲ್ಲಿ 13 ಸ್ವತಂತ್ರರು ಮತ್ತು 8 ಸಣ್ಣ ಪಕ್ಷಗಳ ಶಾಸಕರಿದ್ದಾರೆ. ಕಾಂಗ್ರೆಸ್ 12 ಸ್ವತಂತ್ರರ ಬೆಂಬಲವನ್ನು ಈಗಾಗಲೇ ಹೊಂದಿದೆ. ರಾಜಸ್ತಾನ ರಾಜ್ಯ ರಾಜಧಾನಿ ಜೈಪುರದ ಕೆಲವು ಶಾಸಕರು ಈಗಾಗಲೇ ಉದಯಪುರದಲ್ಲಿದ್ದಾರೆ ಎಂದು ಮೂಲಗಳು ತಿಳಿಸಿವೆ. ನಿಜವಾದ ದೊಡ್ಡ ಪ್ರಮಾಣದ ನಾಟಕವು ಗುರುವಾರ ನಡೆಯಲಿದೆ ಎಂದು ಮೂಲಗಳು ತಿಳಿಸಿವೆ. ಕಾಂಗ್ರೆಸ್‌ಗೆ ನಿರ್ಣಾಯಕವಾಗಿ ತನ್ನ ಮೂವರು ಅಭ್ಯರ್ಥಿಗಳು ರಾಜ್ಯಸಭೆಗೆ ಚುನಾಯಿತರಾಗುವುದನ್ನು ಖಚಿತಪಡಿಸಿಕೊಳ್ಳಲು ಸ್ವತಂತ್ರರು ಮತ್ತು ಇತರರ ಬೆಂಬಲದ ಅಗತ್ಯವಿದೆ.

ಸೋನಿಯಾ ಅನುಮತಿ ಇದ್ದಿದ್ದಲ್ಲಿ 2ನೇ ಅಭ್ಯರ್ಥಿ ಕಣದಲ್ಲಿ ಯಾಕೆ: ಏನಿದು ರಾಜಕೀಯ ಮೇಲಾಟ?ಸೋನಿಯಾ ಅನುಮತಿ ಇದ್ದಿದ್ದಲ್ಲಿ 2ನೇ ಅಭ್ಯರ್ಥಿ ಕಣದಲ್ಲಿ ಯಾಕೆ: ಏನಿದು ರಾಜಕೀಯ ಮೇಲಾಟ?

ಸುಭಾಷ್‌ಚಂದ್ರ ಅವರ ಪ್ರವೇಶ

ಸುಭಾಷ್‌ಚಂದ್ರ ಅವರ ಪ್ರವೇಶ

ಕಾಂಗ್ರೆಸ್ ರಾಜಸ್ಥಾನದಿಂದ ಮುಕುಲ್ ವಾಸ್ನಿಕ್, ರಣದೀಪ್ ಸಿಂಗ್ ಸುರ್ಜೆವಾಲಾ ಮತ್ತು ಪ್ರಮೋದ್ ತಿವಾರಿ ಅವರನ್ನು ಕಣಕ್ಕಿಳಿಸಿದೆ. ಆದರೆ ಎಸ್ಸೆಲ್ ಗ್ರೂಪ್ ಮುಖ್ಯಸ್ಥ ಸುಭಾಷ್‌ಚಂದ್ರ ಅವರ ಪ್ರವೇಶ ಕಣದಲ್ಲಿ ರಣೋತ್ಸಾಹ ಹೆಚ್ಚಿಸಿದೆ. ಸುಭಾಷ್‌ ಅವರು ರಾಜಸ್ಥಾನದಿಂದ 4 ರಾಜ್ಯಸಭಾ ಸ್ಥಾನಗಳಿಗೆ ಐದನೇ ಅಭ್ಯರ್ಥಿಯಾಗಿದ್ದಾರೆ. ಬಿಜೆಪಿಯ ಅಭ್ಯರ್ಥಿ ಘನಶ್ಯಾಮ್ ತಿವಾರಿ ಆಗಿದ್ದಾರೆ. ಚಂದ್ರು ಅವರ ಪ್ರವೇಶದಿಂದ ರಾಜ್ಯಸಭಾ ನಾಲ್ಕನೇ ಸ್ಥಾನಕ್ಕೆ ಈಗ ಸ್ಪರ್ಧೆ ಏರ್ಪಟ್ಟಿದೆ. ಚಂದ್ರು ಅವರನ್ನು ಕಣಕ್ಕಿಳಿಸಲು ಕಾಂಗ್ರೆಸ್ ಅಭ್ಯರ್ಥಿಗಳು ತಮ್ಮ ಸಂಖ್ಯೆಯನ್ನು ಇಳಿಸಬೇಕಾಗಿದೆ ಎಂದು ಮೂಲಗಳು ತಿಳಿಸಿವೆ.

26 ಮತಗಳು ಉಳಿಯುವಿಕೆ

26 ಮತಗಳು ಉಳಿಯುವಿಕೆ

200 ಸದಸ್ಯ ಬಲದ ರಾಜಸ್ಥಾನ ವಿಧಾನಸಭೆಯಲ್ಲಿ ಕಾಂಗ್ರೆಸ್ 108 ಶಾಸಕರನ್ನು ಹೊಂದಿದೆ. ಪ್ರತಿ ರಾಜ್ಯಸಭಾ ಅಭ್ಯರ್ಥಿ ಗೆಲುವಿಗೆ 41 ಮತಗಳ ಅಗತ್ಯವಿದೆ. ಕಾಂಗ್ರೆಸ್ ಸುಲಭವಾಗಿ 2 ಅಭ್ಯರ್ಥಿಗಳನ್ನು ಆಯ್ಕೆ ಮಾಡಬಹುದು, ಆದರೆ ನಂತರ 26 ಮತಗಳು ಉಳಿಯುತ್ತವೆ ಮತ್ತು ಅವರ ಮೂರನೇ ಅಭ್ಯರ್ಥಿಯನ್ನು ಆಯ್ಕೆ ಮಾಡಲು ಇನ್ನೂ 15 ಮತಗಳು ಬೇಕಾಗುತ್ತವೆ. ಬಿಜೆಪಿ 71 ಶಾಸಕರನ್ನು ಹೊಂದಿದೆ. ಮತ್ತು ಒಬ್ಬ ಅಭ್ಯರ್ಥಿಯನ್ನು ಆಯ್ಕೆ ಮಾಡಿದ ನಂತರ ಅದು 30 ಮತಗಳನ್ನು ಉಳಿಸಿಕೊಂಡಿದೆ. ಆದರೆ ಚಂದ್ರ ರನ್ನು ರಾಜ್ಯಸಭೆಗೆ ಕಳುಹಿಸಲು ಇನ್ನೂ 11 ಮತಗಳ ಅಗತ್ಯವಿದೆ.

ಬಿಟಿಪಿಯಿಂದ 2, ಸಿಪಿಐ(ಎಂ)ನಿಂದ 2, ಆರ್‌ಎಲ್‌ಡಿಯಿಂದ 1

ಬಿಟಿಪಿಯಿಂದ 2, ಸಿಪಿಐ(ಎಂ)ನಿಂದ 2, ಆರ್‌ಎಲ್‌ಡಿಯಿಂದ 1

ಬಿಜೆಪಿ ಮತ್ತು ಕಾಂಗ್ರೆಸ್ ಎರಡೂ ಪಕ್ಷಗಳು ಸಣ್ಣ ಪಕ್ಷಗಳು ಮತ್ತು ಸ್ವತಂತ್ರ ಅಭ್ಯರ್ಥಿಗಳಿಗೆ ಗಾಳ ಹಾಕಲು ನೋಡುತ್ತಿವೆ. ಬಿಟಿಪಿಯಿಂದ 2, ಸಿಪಿಐ(ಎಂ)ನಿಂದ 2, ಆರ್‌ಎಲ್‌ಡಿಯಿಂದ 1 ಮತ್ತು ಆರ್‌ಎಲ್‌ಪಿಯಿಂದ 3, 13 ಸ್ವತಂತ್ರ ಅಭ್ಯರ್ಥಿಗಳಿದ್ದಾರೆ.

English summary
The Rajasthan Congress is likely to relocate its MLAs to the resort in Udaipur for fear of leaving the party before the Rajya Sabha elections on June 10.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X