• search
  • Live TV
ಜೈಪುರ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ರಾಜಸ್ಥಾನ: ಹುತಾತ್ಮರಾದ ಸಹೋದರನ ಪ್ರತಿಮೆಗೆ ರಾಖಿ ಕಟ್ಟಿದ ಮಹಿಳೆ

|
Google Oneindia Kannada News

ರಾಜಸ್ಥಾನದಲ್ಲಿ ಮಹಿಳೆಯೊಬ್ಬರು ತನ್ನ ಸಹೋದರನಿಗೆ ರಾಖಿ ಕಟ್ಟುತ್ತಿರುವ ಚಿತ್ರ ವೈರಲ್ ಆಗಿದೆ. ಈ ದೃಶ್ಯದ ಕಥೆ ಕೇಳುದರೆ ಕಣ್ಣಂಚಿನಲ್ಲಿ ನೀರು ತುಂಬಿಕೊಳ್ಳುತ್ತವೆ. ದೇಶಕ್ಕಾಗಿ ಪ್ರಾಣ ನೀಡಿದ ಯೋಧರ ಕುಟುಂಬಗಳು ಕಣ್ಣೆದುರು ಹಾದು ಹೋಗುತ್ತವೆ. ಅಷ್ಟಕ್ಕೂ ಈ ಮಹಿಳೆ ರಾಖಿ ಕಟ್ಟುತ್ತಿರುವುದು ಹುತಾತ್ಮರಾದ ಸಹೋದರನ ಪ್ರತಿಮೆಗೆ.

ವೇದಾಂತ್ ಬಿರ್ಲಾ ಅವರು ಲಿಂಕ್ಡ್‌ಇನ್‌ನಲ್ಲಿ ಹಂಚಿಕೊಂಡ ಪೋಸ್ಟ್‌ನಲ್ಲಿ ಸಹೋದರಿಯೊಬ್ಬರು ತನ್ನ ಸಹೋದರನ ಕೈಗೆ ರಾಖಿ ಕಟ್ಟುತ್ತಿರುವ ಹೃದಯ ವಿದ್ರಾವಕ ಚಿತ್ರವನ್ನು ತೋರಿಸುತ್ತದೆ. ಆದರೆ ಸಹೋದರ ಪ್ರತಿಕ್ರಿಯಿಸುವುದಿಲ್ಲ. ರಾಜಸ್ಥಾನದಲ್ಲಿ ತೆಗೆದ ಈ ಫೋಟೋ ಜಮ್ಮು ಮತ್ತು ಕಾಶ್ಮೀರದಲ್ಲಿ ಶತ್ರುಗಳ ವಿರುದ್ಧ ಹೋರಾಡುವಾಗ ತನ್ನ ಪ್ರಾಣವನ್ನು ಅರ್ಪಿಸಿದ ಶಹೀದ್ ಗಣಪತ್ ರಾಮ್ ಕಡ್ವಾಸ್ ಅವರ ಪ್ರತಿಮೆಯನ್ನು ಹೊಂದಿದೆ. ಇದರಲ್ಲಿ ಅಪರಿಚಿತ ಮಹಿಳೆ ಪ್ರತಿಮೆಗೆ ರಾಖಿ ಕಟ್ಟಿ 'ರಕ್ಷಾ' ಸಾರವನ್ನು ಗೌರವಿಸುವುದನ್ನು ಕಾಣಬಹುದು.

"ಇದು ಭಾರತವನ್ನು ನಂಬಲಾಗದಂತಾಗಿಸಿದೆ. ಇದು ದುಃಖ ಮತ್ತು ಹೆಮ್ಮೆಯ ಕ್ಷಣ. ಸಹೋದರನನ್ನು ಕಳೆದುಕೊಂಡ ದುಃಖದಲ್ಲಿ ಮಹಿಳೆ ಇದ್ದಾಳೆ. ಇದರೊಂದಿಗೆ ದೇಶಕ್ಕಾಗಿ ಅವರು ಸರ್ವೋಚ್ಚ ತ್ಯಾಗ ಮಾಡಿದ ಹೆಮ್ಮೆ. ರಕ್ಷಾ ಬಂಧನದಂದು ಅವಳು ಭಾವನಾತ್ಮಕ ಅಶಾಂತಿಯನ್ನು ಅನುಭವಿಸುತ್ತಿರುವ ಗಳಿಗೆ ಇದು. ಅವಳು ತನ್ನ ಸಹೋದರನಿಗೆ ರಾಖಿ ಕಟ್ಟಲು ಸಾಧ್ಯವಾಗುವುದಿಲ್ಲ. ಆದ್ದರಿಂದ ಅವಳು ಅದನ್ನು ಅವನ ಪ್ರತಿಮೆಗೆ ಕಟ್ಟುತ್ತಾಳೆ. ಶಹೀದ್ ಗಣಪತ್ ರಾಮ್ ಕಡ್ವಾಸ್ರಾ ಅವರು ರಾಜಸ್ಥಾನದ ಜೋಧ್‌ಪುರದ ಓಸಿಯಾನ್‌ನ ಖುಡಿಯಾಲಾ ಗ್ರಾಮದವರು. ಅವರು ಜಾಟ್ ರೆಜಿಮೆಂಟ್‌ನಿಂದ ಬಂದವರು. ಅವರು 24.9.2017 ರಂದು ಜಮ್ಮು ಮತ್ತು ಕಾಶ್ಮೀರದಲ್ಲಿ ಶತ್ರುಗಳೊಂದಿಗೆ ಹೋರಾಡಿ ಹುತಾತ್ಮರಾದರು," ಎಂದು ಶೀರ್ಷಿಕೆ ವಿವರಿಸಿದರು.

ಪೋಸ್ಟ್‌ಗೆ 3 ಸಾವಿರ ಪ್ರತಿಕ್ರಿಯೆಗಳು ಮತ್ತು ಟನ್‌ಗಳಷ್ಟು ಕಾಮೆಂಟ್‌ಗಳು ಬಂದಿವೆ. ಪೋಸ್ಟ್ ಅನೇಕರ ಹೃದಯವನ್ನು ಮುಟ್ಟಿದೆ. ದೇಶವನ್ನು ಉಳಿಸುವ ಸಲುವಾಗಿ ತಮ್ಮ ಪ್ರಾಣವನ್ನು ಪಣಕ್ಕಿಟ್ಟ ಸೇನಾ ಸಿಬ್ಬಂದಿಗೆ ಹಲವಾರು ನೆಟಿಜನ್‌ಗಳು ಕಾಮೆಂಟ್‌ಗಳಲ್ಲಿ ಧನ್ಯವಾದ ಅರ್ಪಿಸಿದ್ದಾರೆ.

English summary
A woman ties a rakhi to the statue of her martyred brother in Rajasthan. A scene that melted the minds of the viewers.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X