• search
  • Live TV
ಜೈಪುರ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಒಂದಲ್ಲ, ಎರಡಲ್ಲ ಬರೋಬ್ಬರಿ 31 ಬಾರಿ ಕೊರೊನಾ; ವೈದ್ಯರಿಗೇ ಸವಾಲಾದ ಮಹಿಳೆ

|

ಜೈಪುರ, ಜನವರಿ 22: ಒಮ್ಮೆ ಕೊರೊನಾ ಸೋಂಕು ತಗುಲಿದರೆ, ಅದರಿಂದ ಹೊರಬರುವುದೇ ಸವಾಲಾಗಿರುವಾಗ ರಾಜಸ್ಥಾನದ ಈ ಮಹಿಳೆಗೆ ಒಂದಲ್ಲ, ಎರಡಲ್ಲ ಬರೋಬ್ಬರಿ 31 ಬಾರಿಯೂ ಕೊರೊನಾ ಪಾಸಿಟಿವ್ ವರದಿ ಬಂದಿದೆ. ಐದು ತಿಂಗಳ ಹಿಂದೆ ಮಹಿಳೆಗೆ ಕೊರೊನಾ ಸೊಂಕು ಕಾಣಿಸಿಕೊಂಡಿದ್ದು, ಆಗಿನಿಂದಲೂ ಈಕೆಗೆ ಕೊರೊನಾ ವರದಿ ಪಾಸಿಟಿವ್ ಎಂದೇ ಬರುತ್ತಿರುವುದು ವೈದ್ಯರಿಗೆ ಸವಾಲಾಗಿದೆ.

ರಾಜಸ್ಥಾನದ ಭಾರತಪುರ ಜಿಲ್ಲೆಯ ಶಾರದಾ ಎಂಬ ಮಹಿಳೆಗೆ ಐದು ತಿಂಗಳ ಹಿಂದೆ ಕೊರೊನಾ ಸೋಂಕು ತಗುಲಿತ್ತು. ಆಗನಿಂದಲೂ 31 ಬಾರಿ ಪರೀಕ್ಷೆ ನಡೆಸಿದ್ದು, ಎಲ್ಲಾ ವರದಿಗಳಲ್ಲೂ ಪಾಸಿಟಿವ್ ಬಂದಿದೆ. ಜಿಲ್ಲೆಯ ಆರ್ ಬಿಎಂ ಆಸ್ಪತ್ರೆಯಲ್ಲಿ ವೈದ್ಯರು ತಪಾಸಣೆ ಮುಂದುವರೆಸಿದ್ದು, ಜಿಲ್ಲೆಯಲ್ಲೇ ಈ ಪ್ರಕರಣ ಸವಾಲಾಗಿ ಪರಿಣಮಿಸಿದೆ. ಮುಂದೆ ಓದಿ...

 ಕಳೆದ ಆಗಸ್ಟ್‌ ನಲ್ಲಿ ಕಾಣಿಸಿಕೊಂಡಿದ್ದ ಸೋಂಕು

ಕಳೆದ ಆಗಸ್ಟ್‌ ನಲ್ಲಿ ಕಾಣಿಸಿಕೊಂಡಿದ್ದ ಸೋಂಕು

2020ರ ಆಗಸ್ಟ್ 28ರಂದು ಶಾರದಾ ಅವರಿಗೆ ಮೊದಲು ಪರೀಕ್ಷೆ ನಡೆಸಿದ್ದು, ಆಗ ಅವರಲ್ಲಿ ಕೊರೊನಾ ಸೋಂಕು ಇರುವುದು ದೃಢಪಟ್ಟಿತ್ತು. ನಂತರ ಅವರನ್ನು ಆರ್ ಬಿಎಂ ಆಸ್ಪತ್ರೆಗೆ ದಾಖಲಿಸಲಾಗಿತ್ತು. ರೋಗಿಯ ದೈಹಿಕ ಹಾಗೂ ಮಾನಸಿಕ ಸ್ಥಿತಿಗತಿ ಪರಿಶೀಲಿಸಿ ಅಲ್ಲಿಯೇ ಕೆಲವು ದಿನ ಇಟ್ಟುಕೊಂಡಿದ್ದರು. ನಂತರ ಆಕೆ ಇದ್ದ ಅಪ್ನಾ ಘರ್ ಆಶ್ರಮದಲ್ಲೇ ಕ್ವಾರಂಟೈನ್ ನಲ್ಲಿರಲು ಸೂಚಿಸಲಾಗಿತ್ತು.

12000 ಜನರಿಗೆ ಲಸಿಕೆ ಹಾಕಿಸಿಕೊಂಡ ಮೇಲೂ ಕೊರೊನಾ ಪಾಸಿಟಿವ್!

 31 ಬಾರಿ ನಡೆದಿರುವ ಪರೀಕ್ಷೆ

31 ಬಾರಿ ನಡೆದಿರುವ ಪರೀಕ್ಷೆ

ಆಗಸ್ಟ್ ನಿಂದ ಇದುವರೆಗೂ ಮಹಿಳೆಗೆ 31 ಬಾರಿ ಕೊರೊನಾ ಪರೀಕ್ಷೆ ನಡೆಸಿದ್ದು, 31 ಬಾರಿಯೂ ಕೊರೊನಾ ಪಾಸಿಟಿವ್ ಇರುವುದಾಗಿಯೇ ವರದಿ ತೋರಿಸಿದೆ. ಆಯುರ್ವೇದ, ಹೋಮಿಯೋಪಥಿ, ಅಲೋಪಥಿ ಔಷಧಿಗಳನ್ನು ಕೂಡ ನೀಡಲಾಗಿದೆ. ಆದರೂ ವರದಿಯಲ್ಲಿ ಯಾವುದೇ ವ್ಯತ್ಯಾಸವಾಗಿಲ್ಲ.

 ವೈದ್ಯರಿಗೇ ಅಚ್ಚರಿ ತಂದ ಪ್ರಕರಣ

ವೈದ್ಯರಿಗೇ ಅಚ್ಚರಿ ತಂದ ಪ್ರಕರಣ

ಆದರೆ ಮಹಿಳೆಯಲ್ಲಿ ಯಾವುದೇ ರೀತಿಯ ಅಸ್ವಸ್ಥತೆ ಕಂಡುಬಂದಿಲ್ಲದಿರುವ ಕುರಿತು ವೈದ್ಯರು ಅಚ್ಚರಿ ವ್ಯಕ್ತಪಡಿಸಿದ್ದಾರೆ. ಮಹಿಳೆಯ ಆರೋಗ್ಯದಲ್ಲಿ ಯಾವುದೇ ಬದಲಾವಣೆಯಾಗದ ಕಾರಣ ಆಶ್ರಮದ ಉಸ್ತುವಾರಿ ಭಾರದ್ವಾಜ್ ಅವರು ಮಹಿಳೆಯನ್ನು ಹೆಚ್ಚಿನ ಚಿಕಿತ್ಸೆಗೆ ಎಸ್ಎಂಎಸ್ ಆಸ್ಪತ್ರೆಗೆ ವರ್ಗಾಯಿಸುವಂತೆ ಕೋರಿಕೊಂಡಿದ್ದಾರೆ.

ಲಸಿಕೆ ಪಡೆದ 5 ದಿನಗಳ ನಂತರ ವೈದ್ಯಕೀಯ ಸಿಬ್ಬಂದಿ ಸಾವು: ಕಾರಣ ಬಯಲು

 ಜಿಲ್ಲಾಡಳಿತಕ್ಕೆ ಸವಾಲಾದ ಪ್ರಕರಣ

ಜಿಲ್ಲಾಡಳಿತಕ್ಕೆ ಸವಾಲಾದ ಪ್ರಕರಣ

ಸಾಲು ಸಾಲು ವರದಿಗಳು ಪಾಸಿಟಿವ್ ಎಂದೇ ಬಂದಿರುವುದರಿಂದ ಆಕೆಯಿಂದ ಬೇರೆಯವರಿಗೆ ಸೋಂಕು ಹರಡದಿರಲೆಂದು ಐಸೊಲೇಷನ್ ನಲ್ಲಿಯೇ ಇರಿಸಲಾಗಿದೆ. ವೈದ್ಯರು ಕೂಡ ಕೊರೊನಾ ವರದಿ ನೆಗೆಟಿವ್ ಬಂದ ನಂತರವೇ ಹೊರಗೆ ಹೋಗಲು ಸೂಚಿಸಿದ್ದಾರೆ.

ಪ್ರಸ್ತುತ ಭಾರತಪುರ ಜಿಲ್ಲೆಯ ಆಸ್ಪತ್ರೆಯಲ್ಲಿ ಕೊರೊನಾ ಪಾಸಿಟಿವ್ ಇರುವ ಯಾವುದೇ ರೋಗಿಗಳು ಇಲ್ಲ. ಆದರೆ ಶಾರದಾ ಅವರ ಪ್ರಕರಣ ಜಿಲ್ಲಾಡಳಿತಕ್ಕೆ ತಲೆನೋವಾಗಿದೆ. ಸಹಜ ಪ್ರಕರಣಗಳಲ್ಲಿ ಕೊರೊನಾ ಸೋಂಕು ಕಾಣಿಸಿಕೊಂಡವರನ್ನು ಹತ್ತರಿಂದ ಹದಿನಾಲ್ಕು ದಿನಗಳ ಕಾಲ ಕ್ವಾರಂಟೈನ್ ಲ್ಲಿಟ್ಟು, ಆನಂತರ ಅವರನ್ನು ಪರೀಕ್ಷಿಸಿ ಬಿಡುಗಡೆ ಮಾಡಲಾಗುತ್ತದೆ. ಆದರೆ ಈ ಪ್ರಕರಣವೇ ಭಿನ್ನವಾಗಿದೆ.

English summary
A woman in Rajasthan’s Bharatpur district who infected with the coronavirus five months ago has tested coronavirus positive for 31 times
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X