ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಹೋಮ್‌ ವರ್ಕ್ ಮಾಡಿಲ್ಲವೆಂದು ವಿದ್ಯಾರ್ಥಿಯನ್ನು ಥಳಿಸಿ ಕೊಂದ ಶಿಕ್ಷಕ

|
Google Oneindia Kannada News

ಜೈಪುರ, ಅಕ್ಟೋಬರ್‌ 21: ಏಳನೇ ತರಗತಿಯ ವಿದ್ಯಾರ್ಥಿಯೋರ್ವ ಹೋಮ್‌ ವರ್ಕ್ ಮಾಡಿಲ್ಲವೆಂದು ಶಿಕ್ಷಕ ಆತನನ್ನು ಥಳಿಸಿ ಕೊಂದಿರುವ ಘಟನೆ ರಾಜಸ್ಥಾನದ ಚುರು ಜಿಲ್ಲೆಯಲ್ಲಿ ನಡೆದಿದೆ. ಬಾಲಕನನ್ನು ಶಿಕ್ಷಕ ಥಳಿಸಿ ಕೊಂದಿರುವುದು ಮಾತ್ರವಲ್ಲದೇ ಆತ ಸತ್ತಂತೆ ನಟಿಸುತ್ತಿದ್ದಾನೆ ಎಂದು ಹೇಳಿದ್ದಾರೆ.

ಈ ಬಗ್ಗೆ ಮಾಹಿತಿ ನೀಡಿರುವ ಪೊಲೀಸರು ರಾಜಸ್ಥಾನದ ಚುರು ಜಿಲ್ಲೆಯ ಖಾಸಗಿ ಶಾಲೆಯೊಂದರಲ್ಲಿ ಈ ಘಟನೆ ನಡೆದಿದೆ. ಏಳನೇ ತರಗತಿಯ ವಿದ್ಯಾರ್ಥಿ ಹೋಮ್‌ ವರ್ಕ್ ಮಾಡಿಲ್ಲ ಎಂಬ ಕಾರಣಕ್ಕೆ ಶಾಲೆಯ ಶಿಕ್ಷಕ ಥಳಿಸಿ ಕೊಲೆ ಮಾಡಿದ್ದಾರೆ ಎಂದು ತಿಳಿಸಿದ್ದಾರೆ. ಹಾಗೆಯೇ ಆರೋಪಿಯ ಬಂಧನ ಮಾಡಲಾಗಿದೆ ಎಂದು ಕೂಡಾ ಪೊಲೀಸರು ಮಾಹಿತಿ ನೀಡಿದ್ದಾರೆ.

ಮುಂಬೈ: ಪುತ್ರರಿಬ್ಬರ ಮೇಲೆ ಗುಂಡು ಹಾರಿಸಿದ ಮಾಜಿ ಪೋಲೀಸ್‌- ಓರ್ವ ಮೃತ್ಯುಮುಂಬೈ: ಪುತ್ರರಿಬ್ಬರ ಮೇಲೆ ಗುಂಡು ಹಾರಿಸಿದ ಮಾಜಿ ಪೋಲೀಸ್‌- ಓರ್ವ ಮೃತ್ಯು

ಬಂಧಿತ ಆರೋಪಿ ಶಿಕ್ಷಕನನ್ನು ಮನೋಜ್‌ ಕುಮಾರ್‌ (35) ಎಂದು ಗುರುತಿಸಲಾಗಿದೆ. ಇನ್ನು ಮೃತ ವಿದ್ಯಾರ್ಥಿಯನ್ನು 13 ವರ್ಷದ ಬಾಲಕ ಗಣೇಶ್‌ ಎಂದು ಗುರುತಿಸಲಾಗಿದೆ. ಬಾಲಕ ಗಣೇಶ್‌ ಖಾಸಗಿ ಶಾಲೆಯಲ್ಲಿ ಏಳನೆ ತರಗತಿ ವ್ಯಾಸಂಗ ಮಾಡುತ್ತಿದ್ದ. 13 ವರ್ಷದ ಏಳನೇ ತರಗತಿಯ ಬಾಲಕ ಗಣೇಶ್‌ ಹೋಮ್‌ ವರ್ಕ್ ಮಾಡಿಲ್ಲ ಎಂದು ಶಿಕ್ಷಕ ಮನೋಜ್‌ ಕುಮಾರ್‌ ಕೋಲಿನಿಂದ ಬಾಲಕನಿಗೆ ಥಳಿಸಿದ್ದಾರೆ ಎಂದು ಆರೋಪ ಮಾಡಲಾಗಿದೆ.

Rajasthan teacher beats student to death

ಇನ್ನು ಈ ಬಗ್ಗೆ ಮಾಹಿತಿ ನೀಡಿರುವ ಸಲಸಾರ್‌ ಪೊಲೀಸ್‌ ಠಾಣೆಯ ಠಾಣಾಧಿಕಾರಿ ಸಂದೀಪ್‌ ವಿಷ್ಣೋಯ್‌, "ವಿದ್ಯಾರ್ಥಿಯು ತನ್ನ ಹೋಮ್‌ ವರ್ಕ್ ಮಾಡಿಲ್ಲ ಎಂದು ಶಿಕ್ಷಕರು ಆತನ ಮೇಲೆ ತೀವ್ರವಾಗಿ ಥಳಿಸಿದ್ದಾರೆ," ಎಂದು ತಿಳಿಸಿದ್ದಾರೆ. "ವಿದ್ಯಾರ್ಥಿಯು ಪ್ರಜ್ಞಾಹೀನ ಸ್ಥಿತಿಯಲ್ಲಿ ಬಿದ್ದಿದ್ದ, ಆತನನ್ನು ಆಸ್ಪತ್ರೆಗೆ ಕರೆದೊಯ್ಯಲಾಗಿದೆ. ವೈದ್ಯರು ಬಾಲಕ ಮೃತ ಪಟ್ಟಿದ್ದಾನೆ ಎಂದು ದೃಢಪಡಿಸಿದ್ದಾರೆ," ಎಂದು ಕೂಡಾ ಠಾಣಾಧಿಕಾರಿ ಸಂದೀಪ್‌ ವಿಷ್ಣೋಯ್‌ ಹೇಳಿದ್ದಾರೆ.

ಈ ಘಟನೆಯ ಬಗ್ಗೆ ಶಿಕ್ಷಣ ಸಚಿವ ಗೋವಿಂದ ಸಿಂಗ್‌ ದೋಟಸ್ರಾ ಸಂತಾಪ ವ್ಯಕ್ತಪಡಿಸಿದ್ದಾರೆ. ಹಾಗೆಯೇ ಈ ಶಾಲೆಯ ಮಾನ್ಯತೆಯನ್ನು ಸ್ಥಗಿತ ಮಡುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ. "ಬಾಲಕನನ್ನು ಶಿಕ್ಷಕ ಥಳಿಸಿ ಕೊಂದ ಪ್ರಕರಣಕ್ಕೆ ಸಂಬಂಧಿಸಿ ಪೊಲೀಸರು ತನಿಖೆ ಆರಂಭ ಮಾಡಿದ್ದಾರೆ. ತನಿಖೆ ಮುಗಿಯುವವರೆಗೂ ಶಾಲೆಯ ಮಾನ್ಯತೆಯನ್ನು ರದ್ದು ಮಾಡುವಂತೆ ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ," ಎಂದು ಶಿಕ್ಷಣ ಸಚಿವ ಗೋವಿಂದ ಸಿಂಗ್‌ ದೋಟಸ್ರಾ ಟ್ವೀಟ್‌ ಮಾಡಿದ್ದಾರೆ.

ಉತ್ತರ ಪ್ರದೇಶದಲ್ಲಿ ಕಾನ್ಸ್ ಟೇಬಲ್ ರನ್ನೇ ಹೊಡೆದು ಕೊಂದ ಗೂಂಡಾಗಳು!ಉತ್ತರ ಪ್ರದೇಶದಲ್ಲಿ ಕಾನ್ಸ್ ಟೇಬಲ್ ರನ್ನೇ ಹೊಡೆದು ಕೊಂದ ಗೂಂಡಾಗಳು!

ಕಾರಣವಿಲ್ಲದೆ ಥಳಿಸುತ್ತಿದ್ದ ಶಿಕ್ಷಕ

ಸಲಸಾರ್‌ ಪೊಲೀಸ್‌ ಠಾಣೆಯ ಠಾಣಾಧಿಕಾರಿ ಸಂದೀಪ್‌ ವಿಷ್ಣೋಯ್‌, "ಕೋಲಾಸರ್‌ ನಿವಾಸಿ ಓಮ್‌ ಪ್ರಕಾಶ್‌ ಎಂಬವರ ಪುತ್ರ ಗಣೇಶ್‌ ಖಾಸಗಿ ಶಾಲೆಯಲ್ಲಿ ಏಳನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿದ್ದ. ಕಳೆದ ಹದಿನೈದು ದಿನಗಳಿಂದ ತನಗೆ ಈ ಶಿಕ್ಷಕ ಯಾವುದೇ ಕಾರಣವಿಲ್ಲದಿದ್ದರೂ ಥಳಿಸುತ್ತಿದ್ದಾರೆ ಎಂದು ಹಲವಾರು ಬಾರಿ ವಿದ್ಯಾರ್ಥಿಯು ಮನೆಯಲ್ಲಿ ತಿಳಿಸಿದ್ದ ಎಂದು ತಂದೆ ಹೇಳಿದ್ದಾರೆ," ಎಂದು ಮಾಹಿತಿ ನೀಡಿದ್ದಾರೆ.

ಬುಧವಾರ ಬೆಳಿಗ್ಗೆ 9:15 ಗಂಟೆಗೆ ಈ ಘಟನೆ ಬೆಳಕಿಗೆ ಬಂದಿದೆ. ಶಿಕ್ಷಕ ವಿದ್ಯಾರ್ಥಿಗೆ ಥಳಿಸಿದ ಕಾರಣದಿಂದಾಗಿ ವಿದ್ಯಾರ್ಥಿಯು ಪ್ರಜ್ಞೆ ತಪ್ಪಿ ಬಿದ್ದಿದ್ದು, ಈ ಕಾರಣದಿಂದಾಗಿ ತಂದೆ ಓಮ್‌ ಪ್ರಕಾಶ್‌ಗೆ ಶಿಕ್ಷಕ ಕರೆ ಮಾಡಿ ತಿಳಿಸಿದ್ದಾರೆ. "ನಿಮ್ಮ ಮಗ ಹೋಮ್‌ ವರ್ಕ್ ಮಾಡಿಲ್ಲ, ಆದ್ದರಿಂದ ಆತನಿಗೆ ಥಳಿಸಿದ್ದೇನೆ, ಆತ ಪ್ರಜ್ಞೆ ತಪ್ಪಿ ಬಿದ್ದಿದ್ದಾನೆ" ಎಂದು ಶಿಕ್ಷಕ ಬಾಲಕನ ತಂದೆ ಗಣೇಶ್‌ಗೆ ಹೇಳಿದ್ದಾರೆ ಎಂದು ವರದಿಯಾಗಿದೆ.

ಈ ಸಂದರ್ಭದಲ್ಲಿ ಗಣೇಶ್‌ ಹೊಲದಲ್ಲಿ ಕೆಲಸ ಮಾಡುತ್ತಿದ್ದು, "ನೀವು ನನ್ನ ಮಗನನ್ನು ಕೊಂದಿದ್ದೀರಾ," ಎಂದು ಪ್ರಶ್ನೆ ಮಾಡಿದ್ದಾರೆ. ಆದರೆ ಇದಕ್ಕೆ ಪ್ರತಿಕ್ರಿಯೆ ನೀಡಿದ ಶಿಕ್ಷಕ, "ನಿಮ್ಮ ಮಗ ಹೋಮ್‌ ವರ್ಕ್ ಮಾಡಿಲ್ಲ ಎಂದು ಥಳಿಸಿದೆ, ಆತ ಈಗ ಸತ್ತಂತೆ ನಟನೆ ಮಾಡುತ್ತಿದ್ದಾನೆ," ಎಂದಿದ್ದಾರೆ ಎಂದು ಬಾಲಕನ ತಂದೆ ಹೇಳಿದ್ದಾರೆ. ಶಿಕ್ಷಕನು ಬಾಲಕನಿಗೆ ಕಾಲಿನಿಂದ ತುಳಿದಿದ್ದಾನೆ ಎಂದು ವರದಿಯಾಗಿದೆ.

(ಒನ್‌ಇಂಡಿಯಾ ಸುದ್ದಿ)

English summary
Rajasthan teacher beats student to death tells his father he's 'acting dead'.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X