• search
  • Live TV
ಜೈಪುರ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ರಾಜಸ್ಥಾನ ದೋಣಿ ದುರಂತದಲ್ಲಿ 11 ಮಂದಿ ಸಾವು, ಮೂವರು ನಾಪತ್ತೆ

|

ಜೈಪುರ್, ಸಪ್ಟೆಂಬರ್.16: ರಾಜಸ್ಥಾನದ ಕೋಟಾ ಜಿಲ್ಲೆಯ ಚಂಬಲ್ ನದಿಯಲ್ಲಿ ದೋಣಿ ದುರಂತವೊಂದು ಸಂಭವಿಸಿದೆ. ಈ ಘಟನೆಯಲ್ಲಿ ದೇವಸ್ಥಾನಕ್ಕೆ ತೆರಳುತ್ತಿದ್ದ 11 ಮಂದಿ ಭಕ್ತಾದಿಗಳು ಪ್ರಾಣ ಬಿಟ್ಟಿದ್ದು, ಮೂವರು ನಾಪತ್ತೆಯಾಗಿದ್ದಾರೆ ಎಂದು ಜಿಲ್ಲಾ ಮ್ಯಾಜಿಸ್ಟ್ರೇಟರ್ ಉಜ್ವಲ್ ರಾಥೋರ್ ತಿಳಿಸಿದ್ದಾರೆ.

ಚಂಬಲ್ ನದಿಯಲ್ಲಿ ದೋಣಿ ದುರಂತದಲ್ಲಿ ಸಾವನ್ನಪ್ಪಿದವರ ಮೃತದೇಹವನ್ನು ಈಗಾಗಲೇ ಹೊರ ತೆಗೆಯಲಾಗಿದ್ದು, ನಾಪತ್ತೆಯಾಗಿರುವ ಮೂವರು ಭಕ್ತಾಧಿಗಳ ಮೃತದೇಹವನ್ನು ತೆಗೆಯಲು ರಕ್ಷಣಾ ಕಾರ್ಯಾಚರಣೆ ನಡೆಸಲಾಗುತ್ತಿದೆ ಎಂದು ಉಜ್ವಲ್ ರಾಥೋರ್ ಮಾಹಿತಿ ನೀಡಿದ್ದಾರೆ.

ನಿಗೂಢ ದೋಣಿ ದುರಂತ: ದಡದ ಬಳಿ ಬಂದಿದ್ದ ಅಂಬಿಗ ನದಿ ಮಧ್ಯೆ ಹೋಗಿದ್ದೇಕೆ?

ರಾಜಸ್ಥಾನ ಕೋಟಾ ಜಿಲ್ಲೆಯೇ ಖಾತೋಲಿ ಪೊಲೀಸ್ ಠಾಣಾ ವ್ಯಾಪ್ತಿಯ ಧಿಬ್ರಿ ಚಂಬಲ್ ನಲ್ಲಿ ಸಂಭವಿಸಿದ ಅನಿರೀಕ್ಷಿತ ದೋಣಿ ದುರಂತಕ್ಕೆ ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್ ತೀವ್ರ ಸಂತಾಪ ಸೂಚಿಸಿದ್ದಾರೆ.

ಮೃತರ ಕುಟುಂಬಕ್ಕೆ ತಲಾ 1 ಲಕ್ಷ:

ಇನ್ನು, ದೋಣಿ ದುರಂತದಲ್ಲಿ ಮೃತಪಟ್ಟವರ ಕುಟುಂಬಕ್ಕೆ ರಾಜಸ್ಥಾನ ಸರ್ಕಾರದಿಂದ ತಲಾ 1 ಲಕ್ಷ ರೂಪಾಯಿ ಪರಿಹಾರ ನೀಡುವುದಾಗಿ ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್ ಘೋಷಿಸಿದ್ದಾರೆ.

English summary
Rajasthan's Boat Capsizes: 11 People Die, Three Missing
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X